ದಿನಂಪ್ರತಿ
ಅಪರಾಧಗಳ ಮಾಹಿತಿ ದಿನಾಂಕ: 03-04-2020
ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 57/2020 ಕಲಂ 457,
380 ಐಪಿಸಿ :-
ದಿನಾಂಕ 02/04/2020 ರಂದು 1800 ಗಂಟೆಗೆ ಫಿರ್ಯಾದಿ ಶ್ರೀ ಚಂದ್ರಶೇಖರ
ತಂದೆ ಅಮೃತರಾವ ಮಾಳಗೆ ವಯ 51 ವರ್ಷ ಜಾತಿ: ಲಿಂಗಾಯತ ಉದ್ಯೋಗ:
ಚಿಟ್ಟಾ ಡಿ.ಇ.ಓ ಸಾ: ರಾಮಪೂರೆ ಬ್ಯಾಂಕ ಕಾಲೋನಿ ಬೀದರ ರವರು ಠಾಣೆಗೆ ಹಾಜರಾತಿ ಒಂದು ಲಿಖಿತ
ಫಿರ್ಯಾದು ಸಲ್ಲಿಸಿದ್ದು ಸಾರಾಂಶವೇನೆಂದರೆ, ಚಿಟ್ಟಾ ಗ್ರಾಮದಲ್ಲಿ ಇರುವ ಎಮ್.ಎಸ್.ಐ.ಎಲ್.
ಸಿ.ಎಲ್ 11 ಸಿ ರಲ್ಲಿ ಕಳೆದ ಎರಡುವರೆ ವರ್ಷಗಳಿಂದ ಡಿ.ಇ.ಓ ಅಂತ ಕೆಲಸ
ಮಾಡಿಕೊಂಡಿರುತ್ತೇನೆ. ಮಾನ್ಯ ಜಿಲ್ಲಾಧಿಕಾರಿಗಳು ಬೀದರ ರವರ ಆದೇಶದಂತೆ ಕೋರೊನಾ ವೈರಸ್ಸ
ಹರಡುವದನ್ನು ತಡೆಗಟ್ಟುವ ಕುರಿತು ಲಾಕಡೌನ ಆದೇಶದ ಮೇರೆಗೆ ದಿನಾಂಕ 23-03-2020 ರಂದು ರಾತ್ರಿ 10.00 ಗಂಟೆಗೆ
ನಾನು ಹಾಗೂ ನನ್ನ ಜೊತೆಯಲ್ಲಿ ಸಹಾಯಕರೆಂದು ಕರ್ತವ್ಯ ನಿರ್ವಹಿಸುವ ಮಹಾರುದ್ರಪ್ಪಾ ತಂದೆ ಕಮಲಾಕರ ಸಾ: ಕುಂಬಾರವಾಡಾ ಬೀದರ
ಹಾಗೂ ಶಿವಕುಮಾರ ತಂದೆ ನಿರಂಜಪ್ಪಾ ಉದಗೀರೆ ಸಾ: ನೇಲವಾಳ ಕೂಡಿಕೊಂಡು ಮದ್ಯದ ಅಂಗಡಿಯನ್ನು
ಮುಚ್ಚಿ ಬೀಗ ಹಾಕಿ ಅಬಕಾರಿ ಇಲಾಖೆಯವರು ಸದರಿ ಅಂಗಡಿಗೆ ಶೀಲ್ ಮುದ್ರೆ ಹಾಕಿರುತ್ತಾರೆ. ದಿನಾಂಕ 01-04-2020 ರಂದು ರಾತ್ರಿ 8.00 ಗಂಟೆಗೆ
ಫಿಯರ್ಾಧಿಯು ತನ್ನ ಸಹಾಯಕರಿಬ್ಬರೂ ಕೂಡಿ ಚಿಟ್ಟಾ ಗ್ರಾಮಕ್ಕೆ ಹೋಗಿ ಮದ್ಯದ ಅಂಗಡಿಯ ಬೀಗ ವಗೈರಾ ನೋಡಿ
ಬಂದಿರುತ್ತೇವೆ. ದಿನಾಂಕ 02-04-2020 ರಂದು
ಮುಂಜಾನೆ 9.00 ಗಂಟೆ ಸುಮಾರಿಗೆ ಮದ್ಯದ ಅಂಗಡಿ
ಪಕ್ಕದಲ್ಲಿ ಇರುವ ಆಕಾಶ ತಂದೆ ಪುಂಡಲಿಕ ಇವರು ನನಗೆ ಫೋನ ಮುಖಾಂತರ ತಿಳಿಸಿದೇನೆಂದರೆ, ನಿಮ್ಮ
ಮದ್ಯದ ಅಂಗಡಿಯ ಬೀಗ ಮುರಿದಿದ್ದು, ಕಳವಾದ ಬಗ್ಗೆ ಸಂಶಯ ಇರುತ್ತದೆ ಅಂತ
ತಿಳಿಸಿದ ಮೇರೆಗೆ ಹೋಗಿ ನೋಡಿದಾಗ ಯಾರೋ ಕಳ್ಳರು
ಮದ್ಯದ ಅಂಗಡಿಯ ಕೀಲಿ ಮುರಿದ್ದು ಕಳವು ಮಾಡಿರುತ್ತಾರೆ ವಿವಿದ ಕಂಪನಿಯ ಮದ್ಯದ ಬಾಟಲಗಳು ಒಟ್ಟು ಕಿಮ್ಮತ ರೂ. 1,69,032=41 ರೂ ಹಾಗೂ ವಿನ್ಕೋರ್ ನಿಕ್ಸಡೊರ ಕಂಪನಿಯ ಬಿಲ್ಲಿಂಗ್ ಮೊನಿಟರ್, ಬಿಲ್ಲಿಂಗ್
ಸಿಪಿಯು ಹಾಗೂ ಹಿಕ್ ವಿಜನ ಕಂಪನಿಯ ಸಿ.ಸಿ ಕ್ಯಾಮರಾ ಮಾನಿಟರ್ ಹಾಗೂ ಡಿ.ವಿ.ಆರ್ ಮತ್ತು ಇದರ
ಸಾಮಗ್ರಿಗಳು ಅಂದಾಜು ಕಿಮ್ಮತ ರೂ. 1,34,233=00 ರೂ ಹೀಗ ಒಟ್ಟು ರೂ. 3,03,266=00 ರೂ ಬೆಲೆಯದ್ದು ದಿನಾಂಕ 01-04-2020 ರಂದು ರಾತ್ರಿ 8.00 ಗಂಟೆಯಿಂದ
ದಿನಾಂಕ 02-04-2020 ರಂದು ಬೆಳ್ಳಗೆ 8.00 ಗಂಟೆ ಮದ್ಯದ ಅವಧಿಯಲ್ಲಿ ಯಾರೋ
ಅಪರಿಚಿತ ಕಳ್ಳರು ನಮ್ಮ ಎಮ್.ಎಸ್.ಐ.ಎಲ್ ಸಿ.ಎಲ್ 11 ಸಿ ಮದ್ಯದ ಅಂಗಡಿಯ ಬೀಗ ಒಡೆದು
ಅಂಗಡಿಯಲ್ಲಿದ ವಸ್ತುಗಳು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 30/2020 ಕಲಂ 498(ಎ) ,
304 (ಬಿ) 302 ಜೋತೆ 34 ಐಪಿಸಿ :-
ದಿನಾಂಕ: 02-04-2020 ರಂದು 1600
ಗಂಟೆಗೆ
ಶ್ರೀ. ಭಿಮರಾವ ತಂದೆ ರೂಪಲಾ ರಾಠೋಡ ವಯ: 50 ವರ್ಷ, ಜಾ: ಲಮಾಣಿ ಸಾ: ಚಿಕರ್ಿ ರವರು ಠಾಣೆಗೆ
ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ ಫಿಯರ್ಾದಿ ಮಗಳಾದ ಪ್ರೀಯಂಕಾ @ ವನಿತಾ ಇವಳಿಗೆ ತೊರಣಾವಾಡಿ ಗ್ರಾಮದ
ಧೋಂಡಿಬಾ ತಂದೆ ವೆಂಕಟ ಪವಾರ ಇತನಿಗೆ ಮದುವೆ ಮಾಡಿ ಕೊಟ್ಟಿರುತ್ತಾಋಎ ಮದುವೆಯಲ್ಲಿ ರೂ. 150000=00 ವರದಕ್ಷಣೆ ಮತ್ತು 15 ಗ್ರಾಮ
ಬಂಗಾರ ಕೊಟ್ಟು ಸಂಪ್ರಾದಾಯ ಪ್ರಕಾರ ಮದುವೆ ಮಾಡಿಕೊಟ್ಟಿರುತ್ತಾರೆ ಫಿಯಾದಿಯ ಮಗಳಿಗೆ ಎರಡು
ವರ್ಷದ ವರೆಗೆ ಚೆನ್ನಾಗಿ ನೊಡಿಕೊಂಡಿದ್ದು
ನಂತರ ಮಗಳ ಗಂಡನ ತಾಯಿ ತಂದೆ ಅಜ್ಜ
ಅಜ್ಜಿ ಮತ್ತು ಗಂಡನ ತಮ್ಮ ಎಲ್ಲರು ಸೇರಿ ಮಗಳಿಗೆ
ನೀನು ತಂದೆ ತಾಯಿಯವರಕಡೆಯಿಂದ ಬಂಗಾರ ಮತ್ತು
ಮೊಟಾರ ಸೈಕಲ ತಾ ಅಂತಾ ಮೇಲಿಂದ ಮೇಲೆ ತ್ರಾಸ
ಕೊಡುತ್ತ ಇದ್ದರು. ನಾವು ಸಾಕಸ್ಟು ಸಲ ಬುದ್ದ್ದಿಮಾತು ಹೆಳಿದ್ದು ಇರುತ್ತದೆ. ಹೀಗಿರುವಾಗ ದಿನಾಂಕ 02-04-2020
ರಂದು
ಮುಂಜಾನೆ 10:00 ಗಂಟೆ ಸೂಮಾರಿಗೆ ಮನೆಯವರು ಎಲ್ಲರು
ಅಂದರೆ ಮಗಳ ಗಂಡ ಮತ್ತು ಗಂಡನ ತಾಯಿ
ತಂದೆ ಅಜ್ಜ ಅಜ್ಜಿ ಮತ್ತು ಗಂಡನ ತಮ್ಮ ಎಲ್ಲರರೂ ಕೂಡಿ ನನ್ನ ಮಗಳ ಕೊಲೆ ಮಾಡಿರುತ್ತಾರೆ. ಅಂತ
ಕೊಟ್ಟ ಅಜರ್ಿ ಸಾರಾಂಶದ ಮೆಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕ್ರಮ ಕೈಗೊಂಡಿದ್ದು ಇರುತ್ತದೆ.
ಮೇಹಕರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 27/2020 ಕಲಂ
32, 34 ಕೆ.ಇ. ಕಾಯ್ದೆ :-
ದಿನಾಂಕ: 02-04-2020 ರಂದು 0700 ಗಂಟೆಗೆ
ಪಿಎಸ್ಐ
ರವರ ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದೇನೆಂದ್ದರೆ, ಅಳವಾಯಿ ಗ್ರಾಮದ ಹರಿವಾಡಿ ರೋಡಿಗೆ ಗಲ್ಲಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರಾಯಿ ಮಾರಾಟ
ಮಾಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಅಳವಾಯಿ ಗ್ರಾಮಕ್ಕೆ ಹೋಗಿ ನೋಡಿದಾಗ ರೋಡಿನ
ಬದಿಯಲ್ಲಿ ಮೂರು ಪೇಪರ ಕಾಟೂನಗಳಲ್ಲಿ ಸಾರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತ ನಿಂತ್ತಿದ್ದ ಒಬ್ಬ ವ್ಯಕ್ತಿ ಸಾರಾಯಿ ಮಾರಾಟ ಮಾಡುತ್ತಿರುವುದನ್ನು ಖಚಿತ
ಪಡಿಸಿಕೊಂಡು ದಾಳಿ
ಮಾಡಿ ಅವನನ್ನು ಹಿಡಿದುಕೊಂಡು ಆ ವ್ಯಕ್ತಿಗೆ ಓಡಿ ಹೋಗದಂತೆ ಎಚ್ಚರಿಸಿ ಆ ವ್ಯಕ್ತಿಯ ಹೆಸರು ಮತ್ತು ವಿಳಾಸ ವಿಚಾರಿಸಿದಾಗ ಅವನು
ತನ್ನ ಹೆಸರು ಹಣಮಂತ ತಂದೆ ಕೇಶವ ಕೊಟಮಾಲೆ ಸಾ: ಅಳವಾಯಿ ಅಂತ ಹೇಳಿರುತಾನೆ. ನಂತರ ನಾನು ಸಾರಾಯಿ ಮಾರಾಟದ ಬಗ್ಗೆ ಸಂಬಂಧಿಸಿದ ಪ್ರಾಧಿಕಾರದ
ಅನುಮತಿ ಮತ್ತು ಪರವಾನಿಗೆ ಕೇಳಿದಾಗ ಸದರಿಯವನು ನನ್ನ ಬಳಿ ಯಾವುದೇ ಪರವಾನಿಗೆ ಇರುವುದಿಲ್ಲ
ಅನಧಿಕೃತವಾಗಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾನೆ. ನಂತರ ಆರೋಪಿ ಹತ್ತಿರ ಇದ್ದ ಮೂರು ಪೇಪರ ಕಾಟೂನಗಳನ್ನು ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು
ಅದರಲ್ಲಿ ಪ್ರತಿಯೊಂದು ಕಾಟೂನದಲ್ಲಿ 90
ಎಮ್.ಎಲ್. ಸಾಮರ್ಥ್ಯವುಳ್ಳ ಒಟ್ಟ್ಟು 90 ಯು.ಎಸ.
ವಿಸ್ಕಿ ಪ್ಲಾಸ್ಟಿಕ ಬಾಟಲಗಳು ಇದ್ದವು. ಹೀಗೆ
ಮೂರು ಕಾಟೂನಗಳಲ್ಲಿನ ಸಾರಾಯಿ ಬಾಟಲುಗಳು ಸೇರಿ ಒಟ್ಟು
90 ಎಮ್.ಎಲ್. ಸಾಮಥ್ರ್ಯವುಳ್ಳ 270 ಯು.ಎಸ. ವಿಸ್ಕಿ ಪ್ಲಾಸ್ಟಿಕ ಸಾರಾಯಿ ಬಾಟಲಗಳು ಅ:ಕಿ 8100/- ನೇದ್ದವುಗಳನ್ನು ಜಪ್ತಿ ಮಾಡಿಕೊಂಡು
ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment