ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 05-04-2020
ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 30/2020 ಕಲಂ
379 ಐಪಿಸಿ :-
ದಿನಾಂಕ:
04/04/2020 ರಂದು 1000
ಗಂಟೆಗೆ ಫಿರ್ಯಾದಿ ಶ್ರೀಮತಿ ಸುನೀತಾ ಗಂಡ ಶಿವಪುತ್ರ ಹಡಪದ ವಯಸ್ಸು: 48ವರ್ಷ
ಜಾತಿ: ಹಡಪದ ಉ: ಒಕ್ಕಲುತನ ಸಾ: ಖಡಕವಾಡಿ ಮಂಠಾಳ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು
ಸಲ್ಲಿಸಿದರ ಸಾರಂಶವೆನೆಂದರೆ, ಮಂಠಾಳ
ಗ್ರಾಮ ಶಿವಾರದಲ್ಲಿ ಫಿರ್ಯಾದಿ ರವರ ಹೊಲದಲ್ಲಿ ಉಳುಮೆ ಮಾಡಿಕೊಂಡಿದ್ದುದ್ದಲ್ಲದೇ ನಾಲ್ಕು
ಮೇಕೆ(ಆಡುಗಳು) ಸಾಕಿದ್ದು, ಸದರಿ
ಮೇಕೆಗಳನ್ನು ತಗಡದ ಶೇಡ್ನ ಪಕ್ಕದಲ್ಲಿ
ಕಟ್ಟಿರುತ್ತಾರೆ ಹೀಗಿರುವಾಗ ದಿನಾಂಕ: 31/03/2020
ರಂದು ಎಂದಿನಂತೆ ಹೊಲದಲ್ಲಿ ಮೇಕೆಗಳನ್ನು ಮೇಯಿಸಿ ಅವುಗಳನ್ನು ರಾತ್ರಿ 9-30
ಗಂಟೆ ಸುಮಾರಿಗೆ ಹೊಲದಲ್ಲಿಯ ತಗಡದ ಶೇಡ್ನ ಪಕ್ಕದಲ್ಲಿ ಕಟ್ಟಿ ಮನೆಗೆ ಹೊಗಿರುತಾರೆ ಮತ್ತು
ದಿನಾಂಕ: 01/04/2020 ರಂದು ಬೆಳಿಗ್ಗೆ 7-00
ಗಂಟೆ ಸುಮಾರಿಗೆ ಎಂದಿನಂತೆ ಹೊಲಕ್ಕೆ ಹೋಗಿ
ಮೇಕೆಗಳನ್ನು ನೋಡಲಾಗಿ ರಾತ್ರಿ ಕಟ್ಟಿ ಹಾಕಿದ
ನಾಲ್ಕು ಮೇಕೆಗಳಲ್ಲಿ ಎರಡು ಮೇಕೆಗಳು ಇದ್ದಿರುವುದಿಲ್ಲಾ. ಅಕ್ಕ ಪಕ್ಕದ ಹೊಲದಲ್ಲೇಲ್ಲಾ
ಹುಡುಕಾಡಲಾಗಿ ಎಲ್ಲಿಯೂ ಕಂಡು ಬಂದಿರುವುದಿಲ್ಲಾ. ಯಾರೋ ಕಳ್ಳರು ಮೇಕೆಗಳು ಕಳುವು ಮಾಡುವ
ಉದ್ದೇಶದಿಂದ ಹೊಲದಲ್ಲಿ ಕಟ್ಟಿದ್ದ ಒಂದು ಗಂಡು
ಮತ್ತು ಒಂದು ಹೆಣ್ಣು ಮೇಕೆಗಳು(ಆಡುಗಳು) ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ನೀಡಿದ
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
No comments:
Post a Comment