Police Bhavan Kalaburagi

Police Bhavan Kalaburagi

Saturday, April 11, 2020

BIDAR DISTRICT DAILY CRIME UPDATE 11-04-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 11-04-2020

ಮಾರ್ಕೇಟ ಪೊಲೀಸ ಠಾಣೆ ಬೀದರ ಅಪರಾಧ ಸಂಖ್ಯೆ 20/2020 ಕಲಂ 379 ಐಪಿಸಿ :-

 ದಿನಾಂಕ 10-04-2020 ರಂದು 1900 ಗಂಟೆಗೆ ಫಿರ್ಯಾದಿ ಶ್ರೀ ಸೈಯದ ಅಹ್ಮದ ತಂದೆ ಸೈಯದ ಮುನಿರೋದ್ದಿನ ವಯ 22 ವರ್ಷ ಜಾತಿ ಮುಸ್ಲಿಂ   ಸಾ:ಮೇರಾಜ ಕಾಲೋನಿ ಮಜಹರ ಚೌಕ ಹತ್ತಿರ ಬೀದರ ರವರು ಠಾಣೆಗೆ ಹಾಜರಾಗಿ ತನ್ನ ಮೌಖಿಕ ಹೇಳಿಕೆ ನೀಡಿದರ ಸಾರಂಶವೆನಂದರೆ, ಇವರ ಭಾವ ಶೇಕ ಮೊಯಿನ ತಂದೆ ಶೇಕ ಅಬ್ದುಲ್ಲಾ ವಯ 40 ವರ್ಷ ಜಾತಿ ಮುಸ್ಲಿಂ ಉ;ಮೇಕಾನಿಕ ಕೆಲಸ ಸಾ:ಮಹ್ಮದ ನಗರ ಈದಿ ಬಜಾರ ಹೈದ್ರಾಬಾದ ಇವರ ಹತ್ತಿರ ಒಂದು ಹೊಂಡಾ ಶೈನ್ ದ್ವಿಚಕ್ರವಾಹನ.ನಂ.ಟಿ.ಎಸ್-07-ಎಫ್.ಟಿ-1232 ಇದರ ಅ.ಕಿ.25000/-ರೂ ಇರುತ್ತದೆ.   ಹೀಗಿರುವಾಗ ದಿನಾಂಕ 09-03-2020 ರಂದು ಸಾಯಂಕಾಲ 1600 ಗಂಟೆಯ ಸುಮಾರಿಗೆ ಫಿಯರ್ಾದಿಯು ತನ್ನ ದ್ವಿಚಕ್ರವಾಹನದ ಮೇಲೆ ಬೀದರ ತಹಸೀಲ್ ಕಛೇರಿಗೆ ಹೋಗಿ ಈ ದ್ವಿಚಕ್ರವಾಹನವನ್ನು ತಹಸೀಲ ಕಛೇರಿ ಮುಂದೆ ಮೇನ್ ಗೇಟ ಹತ್ತಿರ ನಿಲ್ಲಿಸಿ ತಹಸೀಲ್ ಕಛೇರಿ ಒಳಗೆ ಹೋಗಿ ಮರಳಿ 1615 ಗಂಟೆಯ ಸುಮಾರಿಗೆ ಬಂದು ನೊಡಿದಾಗ ದ್ವಿಚಕ್ರವಾಹನ ಇರಲಿಲ್ಲಾ.  ಎಲ್ಲಾ ಎಲ್ಲಾ ಕಡೆಗೆ ಹುಡುಕಾಡಿದರು ಸಿಗಲಿಲ್ಲ  ದ್ವಿಚಕ್ರವಾಹನವನ್ನು ದಿನಾಂಕ 09-03-2020 ರಂದು ಸಾಯಂಕಾಲ 1600 ಗಂಟೆಯಿಂದ 1615 ಗಂಟೆಯ ಅವಧಿಯಲ್ಲಿ ಯಾರೂ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವ ಕಲ್ಯಾಣ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 23/2020 ಕಲಂ 15(ಎ), 32(3) ಕೆ.ಇ. ಕಾಯ್ದೆ :-

 ದಿನಾಂಕ  10-04-2020 ರಂದು ಮದ್ಯಾನ್ಹ  0800 ಗಂಟೆಯಿಂದ  1400  ಗಂಟೆಯವರೆಗೆ ಮನ್ನಳ್ಳಿ ಬಾರ್ಡರ ಚೆಕ್ ಪೊಸ್ಟ ಉಸ್ತುವಾರಿ ಕರ್ತವ್ಯ   ಮಾಡಿ ಮರಳಿ ಠಾಣೆ ಪೆಟ್ರೊಲಿಂಗ ಮಾಡುತ್ತಾ ಹಳ್ಳಿ ಉಮಾಪೂರ ಗ್ರಾಮಗಳಿಗೆ ಭೇಟ್ಟಿಕೊಟ್ಟು ಗ್ರಾಮದಲ್ಲಿ ಪೆಟ್ರೊಲಿಂಗ ಕರ್ತವ್ಯ ನಿರ್ವಹಿಸಿ 1420 ಗಂಟೆಗೆ ಉಮಾಪೂರ ಗ್ರಾಮದಲ್ಲಿ ಇದ್ದಾಗ   ಕೊಂಗಿವಾಡಿ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಅನಧಿಕೃತವಾಗಿ ಸರಾಯಿವುಳ್ಳ ಬಾಟಲಗಳನ್ನು ಮಾರಾಟ ಮಾಡುವ ಕುರಿತು ಮಾಹಿತಿ ಬಂದಿದರ ಮೇರೆಗೆ ಬಸ್ಸ ನಿಲ್ದಾಣದ ಕಡೆಗೆ ಹೋಗಿ ನೋಡಿದಾಗ ಒಂದು ಚೀಲದಲ್ಲಿ ಸರಾಯಿ ಇಟ್ಟಿಕೊಂಡು ಅನಧಿಕೃತವಾಗಿ ಸರಾಯಿವುಳ್ಳ ಬಾಟಲಗಳನ್ನು ಮಾರಾಟ ಮಾಡುವ ಕುರಿತು ತನ್ನ ಹತ್ತಿರ ಸರಾಯಿವುಳ್ಳ ಬಾಟಲಿಗಳನ್ನು ಇಟ್ಟುಕೊಂಡು ಕುಳಿತಿದ್ದಾನೆ ಮತ್ತು ಅದೆ ಸ್ಥಳದಲ್ಲಿ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನುವು ಮಾಡಿಕೋಡುತ್ತಿದ್ದಾಗ ದಾಳಿ ಮಾಡಿ ಅನೀಲ ತಂದೆ ಮನೋಹರ ಪವಾರ ವಯ 26 ವರ್ಷ ಜಾತಿ ಲಮಾಣಿ ಉದ್ಯೋಗ ಕೂಲಿ ಕೆಲಸ ಸಾ: ಕೊಂಗೆವಾಡಿ ತಾಂಡಾ ತಾ: ಬಸವಕಲ್ಯಾಣ ಅಂತಾ ತಿಳಿಸಿದ್ದು  ಅನಧೀಕೃತವಾಗಿ ಸರಾಯಿವುಳ್ಳ ಬಾಟಲಿಗಳನ್ನು ಇಟ್ಟಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನುವು ಮಾಡಿಕೊಡುತ್ತಿದ್ದೇನೆ ಅಂತಾ ತಿಳಿಸಿದನು. ಕಾಟೂನನ್ನು ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು ಇದರಲ್ಲಿ 1] ಯು ಎಸ್ ವಿಷ್ಕಿ 90 ಎಂ ಎಲ್ 10 ಬಾಟಲಗಳು ಒಂದರ ಬೆಲೆ 30 ರೂಪಾಯಿ 10 ಬೆಲೆ 300 ರೂಪಾಯಿ ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.  

No comments: