ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 03-05-2020
ಹುಮನಾಬಾದ
ಪೊಲೀಸ್ ಠಾಣೆ ಅಪರಾಧ ಸಂಖ್ಯೆ 57/2020 ಕಲಂ 379 ಐಪಿಸಿ :-
ದಿನಾಂಕ 02/05/2020 ರಂದು 2000 ಗಂಟೆಗೆ ಫಿರ್ಯಾದಿ ಅಶೋಕ ತಂದೆ ರೇವಪ್ಪಾ
ಬಿರಾದಾರ ಕಿರಿಯ ಇಂಜಿನಿಯರ ವಿಭಾಗಿಯ ಕಛೇರಿ ಜೇಸ್ಕಾಂ ಹುಮನಾಬಾದ ರವರು ಠಾಣೆಗೆ ಹಾಜರಾಗಿ ಲಿಖಿತ
ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಜೇಸ್ಕಾಂದ
ಟಿ.ಸಿ (ಪರಿವರ್ತಕ) ಗಳು ರಿಪೇರಿ ಕುರಿತು ಖಾಸಗಿ ಕಂಪನಿಯಾದ ಹುಮನಾಬಾದ ಇಂಡಸ್ಟ್ರೀಯಲ ಏರಿಯಾದಲ್ಲಿರುವ
ಸನ್ಮತಿ ರಿಪೇರಿಂಗ ಕಂಪನಿಯವರಿಗೆ ಗುತ್ತಿಗೆ ಕೊಟ್ಟಿದ್ದು ಇರುತ್ತದೆ ಆ ಕಂಪನಿಯಲ್ಲಿ ಹಣಮಂತ
ಹೇರಾಪೂರ ಅಂತಾ ಮ್ಯಾನೇಜರ ಇರುತ್ತಾರೆ. ಈಗ ಕೆಲವು ದಿವಗಳ ಹಿಂದೆ ನಮ್ಮ ಜೇಸ್ಕಾಂದಿಂದ ಟಿ.ಸಿ
ಗಳು ರಿಪೇರಿ ಕುರಿತು ಕೊಟ್ಟಿದ್ದು
ಫಿಯರ್ಾದಿರವರು ದಿನಾಂಕ 30/04/2020 ರಂದು ರಿಪೇರಿ ಸೆಂಟರಗೆ ಹೋಗಿ ನೋಡಲು ಎಲ್ಲ
ಟಿ.ಸಿ ಗಳು ಇದ್ದವು, ದಿನಾಂಕ 02/05/2020 ರಂದು ಮುಂಜಾನೆ 1100 ಗಂಟೆಗೆ ಫಿಯರ್ಾದಿಯ ಹಾಗು
ದಶರಥ ಸಹಾಯಕ ಸ್ಟೋರ ಕೀಪರ ಇಬ್ಬರು ಸೇರಿ ರಿಪೇರಿ ಸೆಂಟರಗೆ ಹೋಗಿ ನೋಡಲು ಇವರು
ಕೊಟ್ಟ ಟಿ.ಸಿ ಗಳ ಪೈಕಿ ಎರಡು 25 ಕೆ.ವಿ.ಎ., ಟಿ.ಸಿ ಇರಲಿಲ್ಲ ಯಾರೋ
ಅಪರಿಚಿತ ಕಳ್ಳರು ಹುಮನಾಬಾದ ಇಂಡಸ್ಟ್ರೀಯಲ ಏರಿಯಾದಲ್ಲಿರುವ ಸನ್ಮತಿ ರಿಪೇರಿಂಗ ಕಂಪನಿಯ
ಶೆಡ್ಡದಲ್ಲಿ ಇದ್ದ 25 ಕೆ.ವಿ.ಎ. ಯ ಎರಡು ಟಿ.ಸಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ 25 ಕೆ.ವಿ.ಎ ಯ ಎರಡು ಟಿ.ಸಿಯ
ಅಂದಾಜು ಕಿಮ್ಮತ್ತ 1,17,400/- ರೂಪಾಯಿ ಇರುತ್ತದೆ. ಕಾರಣ ದಿನಾಂಕ 30/04/2020 ರಿಂದ ದಿನಾಂಕ 02/05/2020 ರಂದು ಮಧ್ಯಾಹ್ನ 1100 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ
ಕಳ್ಳರು ಹುಮನಾಬಾದ ಇಂಡಸ್ಟ್ರೀಯಲ ಏರಿಯಾದಲ್ಲಿರುವ ಸನ್ಮತಿ ರಿಪೇರಿಂಗ ಕಂಪನಿಯ ಶೆಡ್ಡದಲ್ಲಿಯ 25 ಕೆ.ವಿ.ಎ ಯ ಎರಡು ಟಿ.ಸಿ
ಕಳವು ಮಾಡಿಕೊಂಡು ಹೋಗಿರುತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೋಳ್ಳಲಾಗಿದೆ.
ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 32, 34 ಕರ್ನಾಟಕ ಅಬಕಾರಿ ಕಾಯ್ದೆ:-
ದಿನಾಂಕ 02/05/2020 ರಂದು 1500 ಗಂಟೆಗೆ ಪಿಎಸ್ಐ ರವರು
ಠಾಣೆಯಲ್ಲಿರುವಾಗ ಗೌರ ತಾಂಡಾ ಕ್ರಾಸ್ ಹತ್ತಿರ
ಒಬ್ಬ ವ್ಯಕ್ತಿ ಕಳ್ಳಭಟ್ಟಿ ಸಾರಾಯಿ ತನ್ನ ಅಧಿನದಲ್ಲಿಟ್ಟುಕೊಂಡು ಮಾರಾಟ ಮಾಡಲು ಸಾಗಾಟ
ಮಾಡುತಿದ್ದಾನೆಂದು ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಬೇಲೂರ ಮಾರ್ಗವಾಗಿ ಗೌರ
ತಾಂಡಾ ಕ್ರಾಸ್ ಹತ್ತಿರ ಹೋಗಿ ನೋಡಿದಾಗ
ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ಬಿಳಿ ಪ್ಲಾಸ್ಟಿಕ್ ಡಬ್ಬಿ ಇಟ್ಟುಕೊಂಡು
ನಿಂತಿರುವುದನ್ನು ನೋಡಿ ಅವನ ಮೇಲೆ ದಾಳಿ ಮಾಡಿ
ಹಿಡಿದುಕೊಂಡು ಆತನ ಹೆಸರು ಮತ್ತು ವಿಳಾಸ ವಿಚಾರಿಸಲು ತಿಳಿಸಿದ್ದೆನೆಂದರೆ, ಮೋಹನ ತಂದೆ ಲಕ್ಷ್ಮಣ ಪವಾರ ವಯ 42 ವರ್ಷ, ಜಾತಿ ಲಂಬಾಣಿ, ಉ: ಕೂಲಿ ಕೆಲಸ ಸಾ: ಗೌರ
ತಾಂಡಾ ಅಂತ ತಿಳಿಸಿರುತ್ತಾನೆ. ಮುಂದುವರೆದು ನಾನು ಮೋಹನ ಈತನಿಗೆ ನಿನ್ನ ಹತ್ತಿರವಿರುವ
ಪ್ಲಾಸ್ಟಿಕ ಡಬ್ಬಿಯಲ್ಲಿ ಎನು ಇದೆ ಅಂತ ವಿಚಾರಿಸಲಾಗಿ ಪ್ಲಾಸ್ಟಿಕ್ ಡಬ್ಬಿಯಲ್ಲಿ ಕಳ್ಳಭಟ್ಟಿ
ಸಾರಾಯಿ ಇರುವುದಾಗಿ ತಿಳಿಸಿರುತ್ತಾನೆ. ಸರಕಾರದ
ಪರವಾನಿಗೆ ಇಲ್ಲದೆ, ಅನಧಿಕೃತವಾಗಿ ನನ್ನ ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಸಾಗಾಟ
ಮಾಡುತ್ತಿರುವುದಾಗ ತಿಳಿಸಿರುತ್ತಾನೆ. ಅವನ
ಹತ್ತಿರವಿದ್ದ ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿನ ಅಂದಾಜು 5 ಲೀಟರ ಕಳ್ಳಭಟ್ಟಿ ಸಾರಾಯಿ
ಅಂದಾಜು ಕಿಮ್ಮತ್ತು 500/- ರೂಪಾಯಿಗಳು ಬೆಲೆ ಉಳ್ಳದು
ಪಂಚರ ಸಮಕ್ಷಮ ಜಪ್ತಿ ಹಾಗು ಆರೋಪಿತನಿಗೆ
ದಸ್ತಗಿರಿ ಮಾಡಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 110/2020 ಕಲಂ 87 ಕೆಪಿ ಕಾಯ್ದೆ :-
ದಿನಾಂಕ 02/05/2020 ರಂದು 16:00 ಗಂಟೆಗೆ ಪಿಎಸ್ಐ
ರವಠಾಣೆಯಲ್ಲಿದ್ದಾಗ ಭಾಲ್ಕಿಯ ಭೀಮನಗರದಲ್ಲಿ ಖೂಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತುಕೊಂಡು ಪರೆಲ ಎಂಬ ನಸೀಬಿನ ಇಸ್ಪೀಟ ಜೂಜಾಟ
ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಸಿಬ್ಬಂದಿ ಮತ್ತು ಪಂಚರೊಂದಿಗೆ ಹೋಗಿ ಸದರಿಯವರ ಮೇಲೆ
ದಾಳಿ ಮಾಡಿ ಹಿಡಿದು ಒಬ್ಬೋಬ್ಬರ ಹೆಸರು ಮತ್ತು ವಿಳಾಸ ವಿಚಾರಿಸಲು ತಮ್ಮ ಹೆಸರು 1] ಶರಣಪ್ಪಾ ತಂದೆ ತುಳಸಿರಾಮ
ಭಾವಿಕಟ್ಟಿ,
ವಯ-53 ವರ್ಷ, 2] ಮೊಹ್ಮದ ಗೋರೆ ತಂದೆ ಮಹೆಬೂಬಸಾಬ ಗೋರೆ, ವಯ: 32 ವರ್ಷ 3] ರಾಹುಲ ತಂದೆ ಚಂದ್ರಪ್ಪಾ ಮದನ, ವಯ: 28 ವರ್ಷ, 4] ಪ್ರದೀಪ ತಂದೆ ಪ್ರಕಾಶ ಸಿಂಧನಕೇರೆ, ವಯ: 26 ವರ್ಷ 5] ವಿಶಾಲ ತಂದೆ ರಾಜಕುಮಾರ ಮೇತ್ರೆ, ವಯ: 20 ವರ್ಷ 6] ಮಾರುತಿ ತಂದೆ ಶಿವರಾಮ ಸಿಂಗೆ, ವಯ-45 ವರ್ಷ, ಇಸ್ಪೆಟ ಜೂಜಾಟದಲ್ಲಿ ತೋಡಗಿಸಿದ ಒಟ್ಟು ನಗದು ಹಣ
3110 ರೂ ಹಾಗು 52 ಇಸ್ಪೇಟ ಎಲೆಗಳು ಜಪ್ತಿ
ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
No comments:
Post a Comment