ದಿನಂಪ್ರತಿ ಅಪರಾಧಗಳ
ಮಾಹಿತಿ ದಿನಾಂಕ: 08-05-2020
ಮೆಹಕರ ಪೊಲೀಸ್
ಠಾಣೆ ಅಪರಾಧ ಸಂಖ್ಯೆ 36/2020 ಕಲಂ 32, 34 ಕೆ.ಇ. ಕಾಯ್ದೆ :-
ದಿನಾಂಕ: 07-05-2020 ರಂದು 1000 ಪಿಎಸ್ಐ
ರವರು ಗಂಟೆಗೆ ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ
ಬಂದಿದೇನೆಂದ್ದರೆ, ಬಸವನ ವಾಡಿ ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರಾಯಿ ಮಾರಾಟ ಮಾಡಲು ಒಯುತ್ತಿದ್ದಾರೆ ಅಂತ ಖಚಿತ
ಬಾತ್ಮಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ
ಬಸವನವಾಡಿ ಕ್ರಾಸ ಹತ್ತಿರ ರೋಡಿಗೆ 1100 ಗಂಟೆಗೆ
ಹೋಗಿ ನೋಡಿದಾಗ ಬಸವನ ವಾಡಿ ಹತ್ತಿರ ಒಂದು ಮೋಟಾರ
ಸೈಕಲ್ ಮೇಲೆ ಮಧ್ಯದಲ್ಲಿ ಒಂದು ಬಿಳಿಯ ಪ್ಲಾಸ್ಟಿಕ ಚೀಲ ಇಟ್ಟುಕೊಂಡು ಇಬ್ಬರೂ ಬರುತ್ತಿದ್ದು, ಅವರಿಗೆ ಕೈಮಾಡಲು ಅವರು ಮೋಟಾರ ಸೈಕಲ ನಿಲ್ಲಿಸಿದ್ದು ಅವರ
ಹೆಸರು ಮತ್ತು ವಿಳಾಸ ವಿಚಾರಿಸಿದಾಗ 1. ತುಳಸಿರಾಮ
ತಂದೆ ಕಂಟೆಪ್ಪ ಬಿರಾದಾರ 60 ವರ್ಷ ಜಾ:
ಕೋಳಿ ಉ: ಕೂಲಿ ಕೆಲಸ ಸಾ: ಕಾಸರ ತೂಗಾಂವ ವಾಡಿ ಅಂತ ಹೇಳಿದ್ದು, ಹಿಂದೆ ಕುಳಿತವನ ಹೆಸರು ವಿಚಾರಿಸಲು ಭಗವಾನ ತಂದೆ
ಬಾಲಾಜಿ ವಾಂಜರಖೇಡೆ 26 ವರ್ಷ ಜಾ: ಮರಾಠಾ ಉ: ಟ್ರಾಕ್ಟರ ಚಾಲಕ ಸಾ; ಕಾಸರ
ತೂಗಾಂವ ವಾಡಿ ಅಂತ ಹೇಳಿದ್ದು,
ಅವರ ಮೋಟಾರ ಸೈಕಲ ನಂ ಕೆಎ 38 ಕೆ 9641 ಮತ್ತು ಅವರ
ಹತ್ತಿರವಿದ್ದ 90 ಎಮ್.ಎಲ್. ಸಾಮಥ್ರ್ಯವುಳ್ಳ 50 ಪ್ಲಾಸ್ಟಿಕ
ಬಾಟಲಗಳಿದ್ದು, ಅದರ ಅ:ಕಿ; 1516/- ರೂ ನೇದನ್ನು
ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 20/2020 ಕಲಂ 271 ಐಪಿಸಿ
ಹಾಗು ಕಲಂ 7 ಕೋಟ್ಪಾ
ಸಿಗರೇಟ್ ಆಂಡ್ ಅದರ್ ಟೋಬೋಕೋ ಪ್ರೋಡ್ಯಾಕ್ಸ ಎಕ್ಟ 2003 :-
ದಿನಾಂಕ 07/05/2020 ರಂದು 1415 ಗಂಟೆ
ಸುಮಾರಿಗೆ ಬೀದರನಿಂದ ಔರಾದ ಕಡೆಗೆ ಅಶೋಕ್ ಲಿಲ್ಯಾಂಡ್ ಗೂಡ್ಸ್ ಪಿಕಪ್ ವಾಹನ ನಂ. ಕೆಎ-38/ಎ-2877
ನೇದ್ದರಲ್ಲಿ ಪಾನಮಸಾಲ (ಗುಟಕಾ) ಸಾಗಣಿಕೆ ಮಾಡುತ್ತಿದ್ದಾರೆ. ಅಂತಾ ಪಿಎಸ್ಐ ರವರಿಗೆ ಖಚಿತ
ಬಾತ್ಮಿ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಮರಖಲ್ ಗ್ರಾಮದ ಭಗತಸಿಂಗ್ ಚೌಕ್ ಹತ್ತಿರ
ಬೀದರ ಕಡೆಯಿಂದ ಬರುತ್ತಿದ್ದ ಅಶೋಕ್ ಲಿಲ್ಯಾಂಡ್ ಗೂಡ್ಸ್ ಪಿಕಪ್ ವಾಹನ ನಂ. ಕೆಎ-38/ಎ-2877 ನೇದರ ಮೇಲೆ
1430 ಗಂಟೆಗೆ ದಾಳಿ ಮಾಡಿ ಸ್ಥಳಕ್ಕೆ
ಡಾ|| ಸಂತೋಷ ಕಾಳೆ ಡಿ.ಓ. ಜಿಲ್ಲಾ ಅಂಕೀತ ಅಧಿಕಾರಿಗಳು ಆಹಾರ ಸುರಕ್ಷತೆ ಮತ್ತು
ಗುಣಮಟ್ಟ ಪ್ರಾಧಿಕಾರ ಬೀದರ ರವರಿಗೆ ಫೋನ್ ಮಾಡಿ ಬರಮಾಡಿಕೊಂಡು. ಆರೋಪಿತರಾದ 1)
ಅಬ್ದುಲ್
ಖಯುಮ ತಂದೆ ಎಮ್ ಡಿ ಖುಷರ್ಿದ ಪಂಜಾರ ಸಾ|| ಸಿಂಧೆಗಲ್ಲಿ
ಔರಾದ (ಬಾ) ಹಾಗು 2) ಗ್ಯಾನೋಬಾ ತಂದೆ ನಾರಾಯಾಣರಾವ ಸಂಗನಾಳೆ ಸಾ||
ಔರಾದ (ಬಾ)
ರವರನ್ನ ದಸ್ತಗಿರಿ ಮಾಡಿಕೊಂಡು ವಾಹನದಲ್ಲಿ ಸಾಗಾಣಿಕೆ ಮಾಡುತ್ತಿದ್ದ ಮುದ್ದೆಮಾಲು ಒಟ್ಟು 10 ರಟ್ಟಿನ
ಕಾಟನ್ಗಳಲ್ಲಿನ ವಿ-1 ತಂಬಾಕು ಅ. ಕೀ. 60,000/- ರೂ ದಷ್ಟು
ಹಾಗು 10 ಗೋಣಿ ಚೀಲ ವಿಮಲ್ ಪಾನ ಮಸಾಲಾಚ ಅ. ಕೀ. 2,40,000/-
ರೂ ದಷ್ಟು
ಬೆಲೆಯುಳ್ಳದನ್ನು ಹಾಗು ಅಶೋಕ್ ಲಿಲ್ಯಾಂಡ್ ಗೂಡ್ಸ್ ಪಿಕಪ್ ವಾಹನ ನಂ. ಕೆಎ-38/ಎ-2877 ಅ. ಕೀ,
4,00,000/- ರೂ ದಷ್ಟು ಬೇಲೆಯುಳ್ಳದ್ದು ಜಪ್ತಿ ಮಾಡಿಕೊಂಡು ಲಾಕಡೌನ ಅವಧಿಯಲ್ಲಿ ಸದರಿ ವಿಮಲ್
ಪಾನ ಮಸಾಲ ಮತ್ತು ತಂಬಾಕುಗಳನ್ನು ತಿಂದು ಉಗಳಿದಲ್ಲಿ ಕರೋನ ಸಾಂಕ್ರಮಿಕ ರೋಗ ಹರಡುವ ಸಾಧ್ಯತೆ
ಇರುತ್ತದೆ. ಎಂದು ಸರಕಾರ ಸಾಗಾಣಿಗೆ ನಿಷೇಧ ಇದ್ದರು ಇವರು ಅದರ ಉಲಂಘನೆ ಮಾಡಿದ್ದರಿಂದ ಆರೋಪಿತರಿಗೆ ದಸ್ತಗಿರಿ ಮಾಡಿಕೊಂಡು ಕಲಂ 271 ಐಪಿಸಿ
ಹಾಗು ಕಲಂ 7 ಕೋಪ್ಟಾ, ಸಿಗರೇಟ್
ಆಂಡ್ ಅದರ್ ಟೋಬೋಕೋ ಪ್ರೋಡ್ಯಾಕ್ಸ ಎಕ್ಟ 2003 ಅಡಿಯಲ್ಲಿ
ಪ್ರಕಣದ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂಖ್ಯೆ 41/2020 ಕಲಂ 87 ಕೆಪಿ
ಕಾಯ್ದೆ ;-
ದಿನಾಂಕ 07-05-2020 ರಂದು 1430 ಗಂಟೆಗ
ಪಿಎಸ್ಐ ರವರು ಔರಾದ(ಬಿ) ಪೊಲೀಸ ಠಾಣೆಯಲ್ಲಿದ್ದಾಗ ತಹಸಿಲ್ ತಾಂಡಾದ ಆಚೆಗೆ ಔರಾದ ಶೀವಾರದಲ್ಲಿ
ಹೋಗುವ ರೋಡಿನ ಪಕ್ಕದಲ್ಲಿ ಕೆಲವು ಜನರು ಸೇರಿ
ಅಕ್ರಮ ಚಟುವಟಿಕೆಯಲ್ಲಿ ತೊಡಗಿರುತ್ತಾರೆ ಎಂದು ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ
ನೋಡಿದಾಗ ಬೇವಿನ ಮರದ ಕೆಳಗೆ 6 ಜನರು
ಗೊಲಾಗಿ ಕುಳಿತು ಇಸ್ಪೇಟ ಎಲೆಗಳಿಂದ ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಅನ್ನುವ ಜೂಜಾಟ
ಆಡುತ್ತಿದ್ದನ್ನು ನೋಡಿ ಖಚೀತ ಪಡಿಸಿಕೊಂಡು ಸದರಿ ದಾಳಿ ಮಾಡಿ ಹಿಡಿದುಕೊಂಡು ಹೆಸರು ವಿಳಾಸ ವಿಚಾರಿಸಿ ಅಂಗ ಪರೀಶಿಲಿಸಿ ನೋಡಲು 1) ಓಂಕಾರ ತಂದೆ
ಗಂಗಾಧರ ಢೋಂಪರೆ ವಯ 24 ವರ್ಷ ಇತನ ಹತ್ತಿರ ನಗದು ಹಣ 960/-ರೂ. 2)
ವಿಠಲ ತಂದೆ
ಶಿವಾಜಿರಾವ ಸುಸಲಾದೆ ವಯ 30 ವರ್ಷ ಇತನ
ಹತ್ತಿರ ನಗದು ಹಣ 790/-ರೂ. 3) ರಾಜು ತಂದೆ
ಮಾನಸಿಂಗ ಚೌಹಾಣ ವಯ 28 ಇತನ ಹತ್ತಿರ ನಗದು ಹಣ 650/-ರೂ 4)
ಸಿದ್ದಲಿಂಗ
ತಂದೆ ಬಸವರಾಜ ಮಡ್ಡೆ ವಯ 30 ವರ್ಷ ಹತ್ತಿರ ನಗದು ಹಣ 1350/-ರೂ 5)
ವಿಕಾಸ ತಂದೆ
ಸುಭಾಷ ಗಾಯಕವಾಡ ವಯ 30 ವರ್ಷ ಇತನ ಹತ್ತಿರ ನಗದು ಹಣ 320/-ರೂ ಇದ್ದವು 6)
ಪ್ರಮೋದ
ತಂದೆ ಲಕ್ಷ್ಮೀಣ ಪಾಟೀಲ್ ವಯ 23 ವರ್ಷ ಇತನ
ಹತ್ತಿರ ನಗದು ಹಣ 840/-ರೂ ಇದ್ದವು ನಂತರ ಎಲ್ಲರ ಮಧ್ಯ ಇರುವ ಸ್ಥಳ
ಪರೀಶೀಲಿಸಿ ನೋಡಲು ನಗದು ಹಣ 2340/-ರೂ, ಹಾಗೂ 52 ಇಸ್ಪೇಟ
ಎಲೆಗಳು ಇದ್ದು ಹೀಗೆ ಒಟ್ಟು ನಗದು ಹಣ 7250/-ರೂ ಹಾಗೂ 52 ಇಸ್ಪೇಟ
ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಮನ್ನಾಏಖೇಳ್ಳಿ
ಪೊಲೀಸ್ ಠಾಣೆ ಅಪರಾಧ ಸಂಖ್ಯೆ 36/2020 ಕಲಂ 32, 34 ಕೆ.ಇ. ಕಾಯ್ದೆ;-
ದಿನಾಂಕ 07/05/2020 ರಂದು 1300 ಗಂಟೆಗೆ ಶ್ರೀಮತಿ ಸುನೀತಾ ಪಿಎಸ್ ಐ (ಕಾಸು) ರವರಿಗೆ ಬನ್ನಳ್ಳಿ ಗ್ರಾಮದ ವಾಲ್ಮೀಕಿ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಮೇಲೆ ಚೀಲದಲ್ಲಿ ವಿಸ್ಕಿ ಬಾಟಲಗಳು ಇಟ್ಟು ಸಾರ್ವಜನಿಕರಿಂದ ಹಣ ಪಡೆದು
ಮಾರಾಟ ಮಾಡುತ್ತೀದ್ದಾನೆ. ಅಂತಾ ಖಚಿತ ಬಾತ್ಮೀ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಬನ್ನಳ್ಳಿ ಗ್ರಾಮಕ್ಕೆ ಹೋಗಿ ನೋಡಿದಾಗ ತೀಪ್ಪಣ್ಣಾ ತುಕಾರಾಮ ಇವರ ಮನೆಯ
ಮುಂದೆ ಸಾರ್ವಜನೀಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ತನ್ನ ಬಳಿ ಇದ್ದ
ಬೀಳಿ ಖಾಲಿ ಚಿಲದಿಂದ ವಿಸ್ಕಿ ಬಾಟಲಗಳನ್ನು ತೆಗೆದು ಸಾರ್ವಜನೀಕರಿಂದ ಹಣ ಪಡೆದು
ಮಾರಾಟಾ ಮಾಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ವಿಸ್ಕಿ ಮಾರಾಟಾ ಮಾಡುತ್ತಿದ್ದ ವ್ಯಕ್ತಿ ಸಮವಸ್ತ್ರದಲ್ಲಿದ್ದ ಪೊಲೀಸರಿಗೆ ನೋಡಿ ಆ ವ್ಯಕ್ತಿ ಹಾಗು ಖರೀದಿ ಮಾಡುತ್ತಿದ್ದ ಸಾರ್ವಜನಿಕರು ಓಡಿ ಹೊದರು
ಅಲ್ಲಿಯೇ ಬಿಟ್ಟು ಹೊದ ಚಿಲದಲ್ಲಿ 1) ಓರಿಜನಲ್ ಚಾಯಸ್ಸ 180 ಎಮ್ ಎಲ್
ಕಾಗದ ಪುಟದಿಂದ ತೈಯಾರಿಸಿದ 13 ವಿಸ್ಕಿ ಬಾಟಲಗಳು ಇದ್ದು ಅವುಗಳ ಕಿಮ್ಮತ್ತು 785=00 ರೂಪಾಯಿ ಹಾಗು 2) ಯು.ಎಸ್ ವಿಸ್ಕಿ 90 ಎಮ್ ಎಲ್ ವುಳ್ಳ 15 ಬಾಟಲಗಳು ಇದ್ದು ಇವುಗಳ ಕಿಮ್ಮತ್ತು 460=00 ರೂ ಹೀಗೆ
ಒಟ್ಟು 1245=00 ರೂ ಬೇಲೆ
ಬಾಳುವ ವಿಸ್ಕಿ ಇದ್ದು ವಿಸ್ಕಿ ಬಾಟಲಗಳನ್ನು ಮಾರಾಟಾ ಮಾಡುತ್ತಿದ್ದ ಓಡಿ ಹೊದ
ವ್ಯಕ್ತಿಯ ಹೆಸರು ಮತ್ತು ವಿಳಾಸ ತೀಳಿದುಕೋಳ್ಳಲ್ಲು ಸದರಿಯವನ ಹೇಸರು ಧೂಳಪ್ಪಾ ತಂದೆ ತುಕಾರಾಮ ಖಾನಾಪುರೆ ವಯ:30 ವರ್ಷ ಜಾ:ಕಬ್ಬಲಿಗ ಉ: ಕೂಲಿ ಕೇಲಸ ಸಾ: ಬನ್ನಳ್ಳಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
No comments:
Post a Comment