ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ:
21-05-2020
ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ
454, 457 ಐಪಿಸಿ :-
ದಿನಾಂಕ. 20-05-2020 ರಂದು. 10.00 ಗಂಟೆಯ ಸುಮಾರಿಗೆ ಬೀದರ ಅಂಬೇಡ್ಕರ ಕಾಲೋನಿಯಲ್ಲಿ ಒಂದು ಮನೆಯು ಕಳ್ಳತನ ಆದ
ಬಗ್ಗೆ ಮಾಹಿತಿ ಬಂದ ಮೇರೆಗೆ ಅಂಬೇಡ್ಕರ ಕಾಲೋನಿಗೆ ಭೇಟ್ಟಿ ನೀಡಿ ಪರಿಸೀಲಿಸಿ ನೋಡಿದಾಗ ಕಳ್ಳತನದ
ಆದ ಬಗ್ಗೆ ಕಂಡು ಬಂದಿದರಿಂದ ಫಿರ್ಯಾದಿ ಶ್ರೀಮತಿ ಶಾಂತಮ್ಮಾ ಗಂಡ ದಿ. ಮಾರುತಿ ವಯ- 36 ವರ್ಷ ಜಾ/ ಕಬ್ಬಲಗೇರ ಉ- ಜಿಲ್ಲಾ
ಆಸ್ಪತ್ರೆಯಲ್ಲಿ ಆಯಾಮ್ಮಾ ಕೆಲಸ ಸಾ/ ಅಂಬೇಡ್ಕರ ಕಾಲೋನಿ ಬೀದರ ರವರು ತಮ್ಮ ಮೌಖಿಕ ಹೇಳಿಕೆ
ನೀಡಿದೇನೆಂದರೆ. ತಾನು ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ದಿನಾಂಕ.04-05-2020 ರಂದು ತಮ್ಮ ಮನೆಗೆ ಸಾಯಂಕಾಲ. 5 ಗಂಟೆಗೆ ಬೀಗ ಹಾಕಿಕೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ದಿನಾಂಕ. 19-05-2020 ರಂದು ರಾತ್ರಿ 2300 ಗಂಟೆಗೆ ಜಿಲ್ಲಾ ಆಸ್ಪತ್ರೆಯಿಂದ
ಗುಣಮುಖವಾಗಿ ಬಿಡುಗಡೆ ಹೊಂದಿ ತಮ್ಮ ಮನೆ ಅಂಬೇಡ್ಕರ ಕಾಲೊನಿಗೆ ರಾತ್ರಿ 12 ಗಂಟೆಯ ಸುಮಾರಿಗೆ ಬಂದು ತನ್ನ ಮನೆ
ಮೇನ್ ಗೇಟ ತೆಗೆದು ಒಳಗೆ ಹೋಗಿ ಬಾಗಿಲ ತೆರೆಯಲು ಹೋದಾಗ ತನ್ನ ಬಾಗಿಲಿಗೆ ಹಾಕಿದ ಬೀಗವನ್ನು
ಮುರಿದಿದ್ದು ಇತ್ತು. ಒಳಗೆ ಹೋಗಿ ನೋಡಲಾಗಿ ಮನೆಯಲ್ಲಿರುವ ಅಲಮಲಾರಿಯ ಬೀಗ ಸಹ ಮುರಿದಿದ್ದು
ಇತ್ತು ಅಲಮಾರಿಯ ಲಾಕರದಲ್ಲಿಟ್ಟ ಬಂಗಾರದ ಒಡವೆಗಳು ನೋಡಿದಾಗ ಅವುಗಳು ಇರಲಿಲ್ಲಾ ಮತ್ತು ಹೋರಗೆ
ನಮ್ಮ ತಾಯಿಯನ್ನು ಒಂದು ಸ್ಟೀಲ್ ಡಬ್ಬಿಯಲ್ಲಿಟ್ಟ ಬಂಗಾರದ ಒಡವೆ ಹಾಗೂ ಬೆಳ್ಳಿಯ ಚೈನ್ ಸಹ
ಕಾಣಲಿಲ್ಲಾ ನನ್ನ ಅಲಮಾರಿಯಲ್ಲಿ ಇದ್ದ ಬಂಗಾರದ ಒಡೆವೆಗಳಾದ 1) ಪೆಂಡೆಂಟ್ ಸರ್ ಒಂದು ಬಂಗಾರದು 7 ಗ್ರಾಂ ಅ.ಕಿ. 28000/-ರೂ 2) ಹೂವ್ವಾ ಮತ್ತು ಜೋಮಕಾ ಬಂಗಾರದು 7 ಗ್ರಾಂ. ಅ.ಕಿ. 28000/-ರೂ , 3) ಬೆರಳ್ಳಿನ ಉಂಗರ 4 ಗ್ರಾಂ ಬಂಗಾರದು ಅ.ಕಿ. 16000/-ರೂ , 4) ನಗದು ಹಣ. 55000/-ರೂ ಹಾಗೂ ಅವಳ ತಾಯಿಯ
ಡಬ್ಬಿಯಲ್ಲಿಟ್ಟ ಬಂಗಾರದ ಒಡವೆಗಳು 1) ಮಂಗಳಸೂತ್ರ 1 ತೊಲೆ ಅ.ಕಿ. 40000/-ರೂ 2) ಗುಂಡಿನ ಸರ್ 1 ತೊಲೆ ಅ.ಕಿ. 40000/-ರೂ 3) ಹೂವ್ವಾ ಮತ್ತು ಜೊಮಕಾ 8 ಗ್ರಾಂ ಅ.ಕಿ. 32000/-ರೂ 4) ಬೆಳ್ಳಿ ಚೈನ್ 30 ತೊಲೆ ಅ.ಕಿ. 15000/-ರೂ ಹೀಗೆ ಒಟ್ಟು. 2,54000/-ರೂ ಬೆಲೆ ಬಾಳವು ಬಂಗಾರದ ಒಡವೆಗಳು
ಮತ್ತು ಬೆಳ್ಳಿ ಒಡವೆ ಹಾಗೂ ನಗದು ಹಣ ದಿನಾಂಕ. 04-05-2020 ರಂದು ಸಾಯಂಕಾಲ 5 ಗಂಟೆಯಿಂದ ದಿನಾಂಕ. 19-05-2020 ರಂದು ರಾತ್ರಿ 23.45 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ
ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಮನ್ನಾಎಖೇಳ್ಳಿ ಪೋಲಿಸ್ ಠಾಣೆ ಅಪರಾಧ ಸಂಖ್ಯೆ 03/2020
ಕಲಂ
174 ಸಿಆರ್.ಪಿ.ಸಿ :-
ದಿನಾಂಕಃ 20-05-2020 ರಂದು
1700 ಗಂಟೆಗೆ ಬೀದರ ಸರಕಾರಿ ಆಸ್ಪತ್ರೆಯಿಂದ ದೂರವಾಣಿ ಮೂಲಕ ಒಂದು ಎಂ ಎಲ್ ಸಿ ಇದೆ ಅಂತಾ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಹಾಜರಿದ್ದ ಫಿರ್ಯಾದಿ ಶ್ರೀಮತಿ ಮಹೇಮೂನ ಬೀ ಗಂಡ ಹಸನಖಾನ ಬಿರಾದಾರ ವಯಃ50 ವರ್ಷ ಜಾತಿಃಮುಸ್ಲಿಂ ಉಃಮನೆಕೆಲಸ ಸಾಃತಾಳಮಡಗಿ ಗ್ರಾಮ ಇವರು ತನ್ನ ಫಿರ್ಯಾದು ಹೇಳಿಕೆ ನೀಡಿದರ ಸಾರಾಂಶವೆನೆಂದರೆ ಫಿರ್ಯಾಧಿಗೆ 6 ಜನ ಮಕ್ಕಳಿದ್ದು 5 ಗಂಡು 1 ಹೆಣ್ಣು ಮಗಳು ಇರುತ್ತಾಳೆ ಹಿಗಿರುವಾಗ ದಿನಾಂಕಃ20-05-2020 ರಂದು ತಾಳಮಡಗಿ ಗ್ರಾಮದ ಮನೆಯ ಮುಂದೆ ನಳದ ನೀರು ಬಂದಿದ್ದರಿಂದ ಮನೆಯಲ್ಲಿ ನೀರು ತುಂಬುವ ಸಲುವಾಗಿ ಇವರ ಕೊನೆಯ ಮಗನಾದ ಶಾಜೀದಖಾನ ತಂದೆ ಹಸನಖಾನ ವಯಃ15 ವರ್ಷ ಇತನು ನಳಕ್ಕೆ ಕೈ ಪೈಪ ಹಚ್ಚಿ ಕರೆಂಟ ಹಚ್ಚಿ ಮೋಟಾರ ಚಾಲು ಮಾಡಿರುತ್ತಾನೆ ಮನೆಯಲ್ಲಿ ನೀರು ತುಂಬಿಕೊಂಡ ನಂತರ ಅಂದಾಜು ಸಮಯ 1400 ಗಂಟೆಯ ಸುಮಾರಿಗೆ ಬೋರ್ಡಗೆ ಇರುವ ಬಟನ ಬಂದ ಮಾಡಿ ನಂತರ ಮೊಟಾರದ ಸ್ವಿಚ್ಚ ಕಿತ್ತುವಾಗ ಒಮ್ಮೆಲೆ ಕರೆಂಟ ಹಿಡಿದು ಬಿಸಾಡಿದಾಗ ಕಲ್ಲಿನ ಮೇಲೆ ಬಿದ್ದು ಆತನ ಬಲಗಡೆ ಹುಬ್ಬಿನ ಮೇಲೆ ರಕ್ತಗಾಯವಾಗಿದ್ದು ಚಿಕಿತ್ಸೆ ಕುರಿತು ಮನ್ನಾಏಖೇಳ್ಳಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕ ಮಾಡಿದ್ದು ನಂತರ ವೈದ್ಯರ ಸಲಹೆ ಮೇರೆಗೆ ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರಿಕ್ಷಿಸಿ ಮೃತ
ಪಟ್ಟಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment