ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 15-06-2020
ಸಿ.ಇ.ಎನ್ ಕ್ರೈಂ ಪೊಲೀಸ ಠಾಣೆ ಬೀದರ ಅಪರಾಧ ಸಂ.
07/2020, ಕಲಂ. ಕಲಂ. 66(ಸಿ), 66(ಡಿ) ಐ.ಟಿ ಕಾಯ್ದೆ ಮತ್ತು 419 ಐಪಿಸಿ :-
ದಿನಾಂಕ 10-06-2020 ರಂದು ಫಿರ್ಯಾದಿ ಜಗನ್ನಾಥ ತಂದೆ ದೇವೇಂದ್ರಪ್ಪಾ ಚಿಂಚೋಳೆ ಸಾ: ಅಲ್ಲಮಪ್ರಭು ನಗರ ಬೀದರ ರವರಿಗೆ ಆರೋಪಿ 9389624984 ನೇದ್ದನ್ನು ಉಪಯೋಗಿಸುತ್ತಿರುವ ವ್ಯಕ್ತಿ
ಶಾಕೀರ ಮಹಮ್ಮ ಎಂಬುವವನು ತಾನು ಆರ್ಮಿಯವನು ತನ್ನ ಕಾರು ಮಾರಾಟಕ್ಕಿದೆ ಅಂತಾ ಸುಳ್ಳು ಹೇಳಿ ಫಿರ್ಯಾದಿಗೆ ನಂಬಿಸಿ ಫಿರ್ಯಾದಿಯಿಂದ ಒಟ್ಟು 89650/- ರೂಪಾಯಿ ತನ್ನ ಪೇ-ಟಿಎಮ್ ಮತ್ತು ಫೊನ್-ಪೇ ಖಾತೆಗೆ ಹಾಕಿಸಿಕೊಂಡು ಮೋಸ ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರು ಅರ್ಜಿ ಸಾರಾಂಶದ ಮೇರೆಗೆ ದಿನಾಂಕ 14-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ.
71/2020, ಕಲಂ. 379 ಐಪಿಸಿ
:-
ದಿನಾಂಕ 23-05-2020 ರಂದು 1900 ಗಂಟೆಗೆ ಫಿರ್ಯಾದಿ
ರಫೀಕ ಅಹ್ಮದ ತಂದೆ ನಜೀರ ಅಹ್ಮದ ವಯ: 47 ವರ್ಷ, ಜಾತಿ: ಮುಸ್ಲಿಂ, ಸಾ:
ಮನ್ನಾಏಖೇಳ್ಳಿ, ಸದ್ಯ: ಕುಸುಮ ಗಲ್ಲಿ ಬೀದರ ರವರು ತಾನು ಬಾಡಿಗೆಯಿಂದ
ವಾಸವಿರುವ ಕುಸುಮಗಲ್ಲಿಯ
ಮನೆಯ ಮುಂದೆ ತನ್ನ ಬಜಾಜ ಡಿಸ್ಕವರ್-125 ಮೋಟರ ಸೈಕಲ್ ನಂ. ಕೆಎ-39/ಕೆ-9012 ಅ.ಕಿ 25,000/- ನೇದನ್ನು ನಿಲ್ಲಿಸಿ ತಾನು ಮನೆಯಲ್ಲಿ ಹೋಗಿ ಊಟ ಮಾಡಿಕೊಂಡು ಮನೆಯಲ್ಲಿ ಮಲಗಿಕೊಂಡು ನಂತರ ದಿನಾಂಕ 24-05-2020 ರಂದು 0500 ಗಂಟೆ ನಸುಕಿನ ಜಾವ ಮೂತ್ರ ವಿಸರ್ಜನೆಗಾಗಿ ಮನೆಯಿಂದ ಹೊರಗೆ ಬಂದು ನೋಡಲು ತನ್ನ ದ್ವಿಚಕ್ರ ವಾಹನ ಮನೆಯ ಮುಂದೆ ಇರಲಿಲ್ಲ,
ನಂತರ ಫಿರ್ಯಾದಿಯು ತನ್ನ ವಾಹನವನ್ನು ಎಲ್ಲಾ ಕಡೆಗೆ ಹುಡುಕಾಡಿದರೂ ಸಹ ಪತ್ತೆಯಾಗಿರುವಿದಿಲ್ಲ, ಸದರಿ ವಾಹನವನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ
ದಿನಾಂಕ 14-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 47/2020, ಕಲಂ. 279,
338 ಐಪಿಸಿ :-
ದಿನಾಂಕ 14-06-2020 ರಂದು ಫಿರ್ಯಾದಿ ದಾವೀದ ತಂದೆ ಮಾರುತಿ ನೂಸೇನೋರ ವಯ: 25 ವರ್ಷ, ಸಾ: ಲೇಬರ ಕಾಲೋನಿ ಬೀದರ ರವರ ಭಾವನಾದ ಸುಂದರರಾಜ ತಂದೆ ಭೀಮಶ್ಯಾ ವಯ:
30 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಚಾಂಗಲೇರಾ ರವರು ಫಿರ್ಯಾದಿಯವರ ತಾಯಿ ಶೇಶಮ್ಮಾ ಗಂಡ ಮಾರುತಿ ನೂಸೆನೋರ ವಯ: 60 ವರ್ಷ, ಸಾ: ಲೇಬರ ಕಾಲೋನಿ ಬೀದರ ಇವರಿಗೆ ತನ್ನ ಮೋಟಾರ ಸೈಕಲ ನಂ. ಕೆಎ-38/ಎಸ್-5722 ನೇದರ ಹಿಂದೆ ಕೂಡಿಸಿಕೊಂಡು ಚಾಂಗಲೇರಾ ಗ್ರಾಮದ ಕಡೆಯಿಂದ ಮನ್ನಾಎಖೆ್ಖೕಳ್ಳಿ ಕಡೆ ಬರುತ್ತಿರುವಾಗ ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಮೀನಕೇರಾ ಗ್ರಾಮದ ವಾಲ್ಮೀಕಿ ಮಂದಿರದ ಹತ್ತಿರ ಮೋಟಾರ ಸೈಕಲ ನಿಯಂತ್ರಣ ತಪ್ಪಿ ಸ್ಕೀಡಾಗಿದ್ದರಿಂದ ಹಿಂದೆ ಕುಳಿತ ಫಿರ್ಯಾದಿಯವರ ತಾಯಿ ಶೇಶಮ್ಮಾ ಇವರು ಮೋಟಾರ ಸೈಕಲ ಮೇಲಿಂದ ಕೆಳಗೆ ಬಿದ್ದುದ್ದರಿಂದ ಅವರ ತಲೆಗೆ ಭಾರಿ ಗುಪ್ತಗಾಯ, ಹಣೆಗೆ, ಬಲಗೈಗೆ ತರಚಿದ ಗಾಯವಾಗಿ ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ, ಕೂಡಲೇ ಅವರಿಗೆ ಚಿಕಿತ್ಸೆ ಕುರಿತು ಮನ್ನಾಎಖೆ್ಖೕಳ್ಳಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂ. 40/2020, ಕಲಂ. 295 ಐಪಿಸಿ :-
ದಿನಾಂಕ 14-06-2020 ರಂದು ಆರೋಪಿ ಅನೀಲ ತಂದೆ
ಪ್ರಭು ಗಾಯಕವಾಡ ವಯ:
25 ವರ್ಷ, ಜಾತಿ: ಮಾದಿಗ ಸಾ: ಹುಸಲೂರ ಇತನು ಸಾಹಿತ್ಯ ಸಾಮ್ರಾಟ ಅಣ್ಣಾ ಭಾವು ಸಾಠೆ ರವರ ಬ್ಯಾನರ ಹರಿದು ಅಪಮಾನ
ಮಾಡಿರುತ್ತಾನೆಂದು ಫಿರ್ಯಾದಿ ದತ್ತು @ ಶಾಸ್ತ್ರಿ ತಂದೆ ರಾಜಪ್ಪಾ ಆಲಗೂಡಕರ, ಸಾ: ಹುಲಸೂರ ರವರು
ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment