Police Bhavan Kalaburagi

Police Bhavan Kalaburagi

Tuesday, June 23, 2020

BIDAR DISTRICT DAILY CRIME UPDATE 23-06-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 23-06-2020

ಹುಲಸೂರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 11/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಗಂಗಮ್ಮಾ ಗಂಡ ಬಸಪ್ಪಾ ತಾಂಬೋಳೆ ವಯ: 65 ವರ್ಷ, ಜಾತಿ: ಲಿಂಗಾಯತ, ಸಾ: ಗಡಿ ಗೌಡಗಾಂವ ರವರ ಮಗನಾದ ಉಮೇಶ @ ಓಂಕಾರ ತಂದೆ ಬಸಪ್ಪಾ ತಾಂಬೋಳೆ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಗಡಿ ಗೌಡಗಾಂವ ಈತನು ಒಕ್ಕಲುತನಕ್ಕಾಗಿ ಬ್ಯಾಂಕಿನಲ್ಲಿ ಅಂದಾಜು 80,000/- ಸಾವಿರ ರೂಪಾಯಿಗಳು ಸಾಲ ಮಾಡಿಕೊಂಡಿದ್ದು, ಸದರಿ ಸಾಲ ತಿರಿಸಲಾಗದೆ ಸಾಲದ ಚಿಂತೆಯಲ್ಲಿ ದಿನಾಂಕ 21-06-2020 ರಂದು 2300 ಗಂಟೆಯಿಂದ ದಿನಾಂಕ 22-06-2020 ರಂದು ನಸುಕಿನ ಜಾವ 0530 ಗಂಟೆಯ ಅವಧಿಯಲ್ಲಿ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ಅವನ ಸಾವಿನಲ್ಲಿ ಯಾರ ಮೇಲೂ ಯಾವುದೇ ರೀತಿಯ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 12/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಮಾರುತಿ ತಂದೆ ವೀರಣ್ಣಾ ಕಟ್ಟಿಮನಿ ವಯ: 38 ವರ್ಷ, ಜಾತಿ: ಎಸ್.ಸಿ ದಲಿತ, ಸಾ: ಕರಾಹರಿ, ತಾ: ಆಳಂದ, ಜಿಲ್ಲೆ: ಕಲಬುಗಿ, ಸದ್ಯ: ಹಿರೇಮಠ ಕಾಲೋನಿ ಬಸವಕಲ್ಯಾಣ ರವರ ಹೆಂಡತಿ ತ್ರೀಶೂಲಾ ಇವಳು ಗುಜರಾತ ರಾಜ್ಯದ ವಾಪಿಯಲ್ಲಿರುವ ತನ್ನ ತಾಯಿ ತಂದೆ ಹತ್ತಿರ ಹೊಗಬೇಕೆಂಬ ಆಸೆ ಇದ್ದಿತ್ತು ಆದರೆ ಕರೋನಾ ಸೊಂಕಿನ ಭೀತಿಯಲ್ಲಿ ಅವಳ ತಾಯಿ ತಂದೆ ಗುಜರಾತಿಗೆ ಬರಬೇಡ ಎಂದಿದಕ್ಕೆ ಬೇಜಾರು ಮಾಡಿಕೊಂಡು ದಿನಾಂಕ 22-06-2020 ರಂದು ಮನೆಯಲ್ಲಿ ಯಾರು ಇಲ್ಲದನ್ನು ನೋಡಿ ಸೀರೆಯಿಂದ ಮನೆಯ ಛತ್ತಿಗೆ ಇದ್ದ ಒಂದು ಕಬ್ಬಿಣದ ಕೊಂಡಿಗೆ ತನ್ನ ಕುತ್ತಿಗೆಗೆ ಅದೆ ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ, ನ್ನ ಹೆಂಡತಿಯ ಸಾವಿನ ಬಗ್ಗೆ ಯಾರ ಮೇಲು ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 42/2020, ಕಲಂ. 379 ಐಪಿಸಿ :-
ದಿನಾಂಕ 15-03-2020 ರಂದು ಅಂಬೇಡ್ಕರ ವೃತ್ತದ ಹತ್ತಿರ ಇರುವ ಸಾಯಿ ಜ್ಯೋತಿ ಅಂಗಡಿಯ ಮುಂದೆ ಫಿರ್ಯಾದಿ ಪವನ ಗೊಂಡಾ ತಂದೆ ಮಲ್ಲಿಕಾರ್ಜುನ ಮೇತ್ರೆ ವಯ: 22 ವರ್ಷ, ಸಾ: ಸೋಲಪುರ ಗ್ರಾಮ, ತಾ: & ಜಿ: ಬೀದರ ರವರು ತನ್ನ ದ್ವೀಚಕ್ರ ವಾಹನ ಸಂ. ಕೆಎ-38/ಎಸ-8938 .ಕಿ 20,000/- ರೂ. ನೇದನ್ನು ನಿಲ್ಲಿಸಿ ನಂತರ ಬಂದು ನೋಡಲು ಸದರಿ ದ್ವೀಚಕ್ರ ವಾಹನ ಇರಲಿಲ್ಲ, ಸದರಿ ವಾಹನವನ್ನು ಎಲ್ಲಾ ಕಡೆ ಹುಡುಕಾಡಿದರೂ  ವಾಹನ ಸಿಗಲಿಲ್ಲಾ, ಸದರಿ ವಾಹನವನ್ನು ಯಾರೋ ಅಪರಿಚಿತ ಕಳ್ಳರು ತನ್ನ ದ್ವೀಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 22-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 86/2020, ಕಲಂ. 379 ಐಪಿಸಿ :-
ದಿನಾಂಕ 10-06-2020 ರಂದು 2030 ಗಂಟೆಯ ಸುಮಾರಿಗೆ ಫಿರ್ಯಾದಿ ರವೀಂದ್ರ ತಂದೆ ಸಿದ್ದಣ್ಣಾ ಸಿರಮುಂಡಿ ವಯ: 43 ವರ್ಷ, ಸಾ: ದಸ್ತಗಿರ ಮೊಹಲ್ಲಾ ಭವಾನಿ ರೋಡ ಚಿಟಗುಪ್ಪಾ ರವರು ತಮ್ಮ ಮನೆಯ ಮುಂದೆ ನಿಲ್ಲಿಸಿ ತನ್ನ ಟಿ.ವಿ.ಎಸ್ ಸ್ಟಾರ್ ಸಿಟಿ 110 ಸಿಸಿ ಮೋಟಾರ್ ಸೈಕಲ್ ನಂ. ಕೆಎ-39/ಕೆ-3731 ಅ.ಕಿ 30,000/- ರೂ. ನೇದನ್ನು ನಿಲ್ಲಿಸಿ ದಿನಾಂಕ 11-06-2020 ರಂದು 0600 ಗಂಟೆಗೆ ಎದ್ದು ನೋಡಲು ಮನೆಯ ಮುಂದೆ ನಿಲ್ಲಿಸಿದ ಸದರಿ ವಾಹನ ಇರಲಿಲ್ಲ, ಸದರಿ ವಾಹನವನ್ನು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಮೋಟಾರ ಸೈಕಲನ್ನು ಎಲ್ಲಾ ಕಡೆ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 22-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 50/2020, ಕಲಂ. 363 ಐಪಿಸಿ :-
ದಿನಾಂಕ 07-06-2020 ರಂದು ರಾತ್ರಿ ಫಿರ್ಯಾದಿ ಶ್ರೀದೇವಿ ಗಂಡ ಸಂಭಾಜಿ ಕಾಂಬಳೆ ಸಾ: ಮೀರ್ಜಾಪೂರ ರವರು ತನ್ನ ಗಂಡ ಹಾಗೂ ಎಲ್ಲಾ ಮಕ್ಕಳು ಸೇರಿಕೊಂಡು ಊಟ ಮಾಡಿಕೊಂಡು ಎಲ್ಲರೂ ಮನೆಯ ಪಡಸಾಲೆಯಲ್ಲಿ ಮಲಗಿಕೊಂಡಿದ್ದು, ನಂತರ 2300 ಗಂಟೆಗೆ ಮತ್ತು 1200 ನಿದ್ದೆಯಿಂದ ಎಚ್ಚರವಾಗಿ ಎದ್ದು ನೋಡಲು ಎಲ್ಲಾ ಮಕ್ಕಳು ಮಲಗಿಕೊಂಡಿದ್ದು ಇರುತ್ತದೆ, ನಂತರ ದಿನಾಂಕ 08-06-2020 ರಂದು ನಸುಕಿನ ಜಾವ ಮನೆಯ ಕೆಲಸ ಮಾಡಲು 0400 ಗಂಟೆಗೆ ಎದ್ದಾಗ ಮಲಗಿಕೊಂಡ ತನ್ನ ಮಕ್ಕಳಿಗೆ ನೋಡಲು ಅವರಲ್ಲಿ ಮಗಳಾದ ಪ್ರೇಮಾ ಮಲಗಿದ ಸ್ಥಳದಲ್ಲಿ ಇರಲಿಲ್ಲಾ, ಫಿರ್ಯಾದಿಯು ಕೂಡಲೆ ತನ್ನ ಗಂಡ ಮತ್ತು ಮಕ್ಕಳಿಗೆ ಎಬ್ಬಿಸಿ ಪ್ರೇಮಾ ಇಲ್ಲಾ ಅಂತಾ ಹೇಳಿ ಎಲ್ಲರೂ ಹುಡುಕಾಡಿದರು ಪ್ರೇಮಾ ಮನೆಯಲ್ಲಿ ಇರಲಿಲ್ಲಾ ಹಾಗೂ ಅಕ್ಕ ಪಕ್ಕ ಹುಡುಕಾಡಿದರು ಮಗಳು ಇರಲಿಲ್ಲಾ, ಪ್ರೇಮಾ ಇವಳಿಗೆ ತಮ್ಮೂರ ನಿತ್ಯಾನಂದ ತಂದೆ ರಾಮ ಕಾಂಬಳೆ ಇತನು ಪ್ರೇಮಾ ಇವಳಿಗೆ ಫುಸಲಾಯಿಸಿ, ಎನೋ ಆಸೆ ತೊರಿಸಿ ತಮ್ಮ ಮನೆಯಿಂದ ಅಪಹರಿಸಿಕೊಂಡು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ದಿನಾಂಕ 22-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 43/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 22-06-2020 ರಂದು ಮುಲ್ತಾನಿ ಕಾಲೋನಿಯ ಆಜಾದ ಚೌಕ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಕು.ಸಂಗೀತಾ ಪಿಎಸ್ಐ (ಕಾ.ಸೂ) ಮಾರ್ಕೆಟ ಪೊಲೀಸ್ ಠಾಣೆ ಬೀದರ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ವರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮುಲ್ತಾನಿ ಕಾಲೋನಿ ಹತ್ತಿರ ಹೋಗಿ ಮರೆಯಾಗಿ ನೋಡಲು ಅಲ್ಲಿ ಆರೋಪಿ ಶೇಖ್ ಫಿರೋಜ ತಂದೆ ಶೇಖ್ ಮನಸೂರ್ ವಯ: 39 ವರ್ಷ, ಸಾ: ಮುಲ್ತಾನಿ ಕಾಲೋನಿ ಬೀದರ ಇತನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವಾಗ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಆರೋಪಿಯನ್ನು ದಸ್ತಗಿರಿ ಮಾಡಿ ಸದರಿ ಆರೋಪಿತನಿಂದ 1) ನಗದು ಹಣ 2150/- ರೂ., 2) ಮೂರು ಮಟಕಾ ಚೀಟಿಗಳು ಹಾಗೂ 3) ಒಂದು ಬಾಲ ಪೆನ್ನು .ಕಿ 10/- ರೂ., ಹೀಗೆ ಒಟ್ಟು 2160/-ರೂಪಾಯಿ ಬೆಲೆಬಾಳುವದನ್ನು ಪಂಚರ ಸಮಕ್ಷಮ ಜಪ್ತಿ ಮಾಡಿ, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 26/2020, ಕಲಂ. 498(ಎ), 504, 506 ಐಪಿಸಿ :- 
ಫಿರ್ಯಾದಿ ಅನೀತಾ ಗಂಡ ಬಾಬು ಬಾವಿದೊಡ್ಡಿ ಸಾ: ಚಾಂಗಲೇರಾ ರವರ ಮದುವೆಯು ದಿನಾಂಕ 28-12-2016 ರಂದು ಚಾಂಗಲೇರಾ ಗ್ರಾಮದ ಬಾಬು ತಂದೆ ಅರ್ಜುನ ಭಾವಿದೊಡ್ಡಿ ರವರ ಜೋತೆಯಲ್ಲಿ ಭೈರನಳ್ಳಿ ಗ್ರಾಮದ ಬೌದ್ಧ ಮಂದಿರದಲ್ಲಿ ತಮ್ಮ ಸಂಪ್ರಾದಾಯದಂತೆ ಮದುವೆಯಾಗಿರುತ್ತದೆ, ಮದುವೆಯಾದ ಮೇಲೆ ಗಂಡ ಬಾಬು ಇತನು 2 ವರ್ಷ ಸರಿಯಾಗಿ ಸಂಸಾರ ಮಾಡಿ ನಂತರದ ದಿನಗಳಲ್ಲಿ ಗಂಡ ದಿನಾಲು ಸರಾಯಿ ಕುಡಿದು ಬಂದು ನೀನು ನನಗೆ ಸರಿಯಾಗಿ ನೋಡುಕೊಳ್ಳುವುದಿಲ್ಲಾ, ಊಟಕ್ಕೆ ಕೊಡುವುದಿಲ್ಲಾ, ನೀನು ನೋಡಲು ಸರಿಯಾಗಿಲ್ಲಾ ಅಂತಾ ಅವಾಚ್ಯವಾಗಿ ಬೈದು ಮಾನಸಿಕ ದೈಹಿಕ ಹಿಂಸೆ ಕೊಡುತ್ತಿದ್ದನು, ಅತ್ತೆ ರಂಗಮ್ಮಾ ಮತ್ತು ಮಾವ ಅರ್ಜುನ ಇಬ್ಬರು ಸೇರಿ ಗಂಡನಿಗೆ ನೀನು ನಿನ್ನ ಹೆಂಡತಿಗೆ ಬೈಬೇಡ ಅವಳ ಜೋತೆ ಸಂಸಾರ ಚೆನ್ನಾಗಿ ಮಾಡು ಅಂತಾ ಆಗಾಗ ಹೇಳಿದರು ಸಹ ಗಂಡ ಅವರ ಮಾತು ಕೇಳದೆ ಫಿರ್ಯಾದಿಗೆ ನೀನು ನಮ್ಮ ಮನೆಯಲ್ಲಿ ಇರಬೇಡ ನಿನ್ನ ತವರು ಮನೆಗೆ ಹೋಗು ಅಂತಾ ದಿನಾಲು ಅವಾಚ್ಯವಾಗಿ ಬೈದು ಮಾನಸಿಕ ಕಿರುಕುಳ ಕೊಟ್ಟಿರುತ್ತಾನೆ, ಹೀಗಿರುವಾಗ ದಿನಾಂಕ 10-02-2020 ರಂದು ಗಂಡ ಬಾಬು ಇತನು ಫಿರ್ಯಾದಿಗೆ ನೀನು ನಿನ್ನ ತವರು ಮನೆಗೆ ಹೋಗು ಇಲ್ಲದಿದ್ದರೆ ನೀನಗೆ ಸೀಮೆಎಣ್ಣೆ ಹಾಕಿ ಸುಟ್ಟು ಹಾಕುತ್ತೆನೆಂದು ಜೀವದ ಬೇದರಿಕೆ ಹಾಕಿರುತ್ತಾನೆ, ಆಗ ಅತ್ತೆ ಮಾವ ಮತ್ತು ನಾದನಿ ಜಗದೇವಿ ರವರೆಲ್ಲರೂ ಸೇರಿ ಜಗಳ ಬಿಡಿಸಿರುತ್ತಾರೆ, ಆಗ ಗಂಡ ನೀನು ಮನೆ ಬಿಟ್ಟು ಹೋಗದಿದ್ದರೆ ನಾನೆ ಮನೆಯಲ್ಲಿ ಇರುವುದಿಲ್ಲಾ ಅಂತಾ ಹೇಳಿ ಮನೆಯಿಂದ ಹೋಗಿದ್ದು ಇರುತ್ತದೆ ಮತ್ತು ಅವನು ಮನೆಗೆ ಮರಳಿ ಬಂದಿರುವುದಿಲ್ಲಾ, ಅವನು ತಾಂಡೂರನಲ್ಲಿ ಕೂಲಿ ಕೆಲಸ ಮಾಡಿಕೊಂಡಿರುತ್ತಾನೆ ಅಂತಾ ವಿಷಯ ಗೊತ್ತಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 22-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 55/2020, ಕಲಂ. 498() ಜೊತೆ 34 ಐಪಿಸಿ :-
ಆರೋಪಿ ನಾಗನಾಥ ತಂದೆ ಸಿವರಾಜ ಹಳ್ಳಿಖೆಡ ವಯ: 30 ವರ್ಷ, ಜಾ: ಲಿಂಗಾಯತ, ಸಾ: ಡೋಣಗಾಂವ(ಎಂ) ಗ್ರಾಮ ಇತನು ಫಿರ್ಯಾದಿಗೆ ದಿನಾಂಕ 22-12-2013 ರಿಂದ ಇಲ್ಲಿಯವರೆಗೆ ನಿನ್ನ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತ ಅತ್ಯಾಚಾರ ಮಾಡುತ್ತಿದ್ದಾನೆ ತ್ತು ದಿನಾಲು ಕಿರಕಿರಿ ಮಾಡುತ್ತಾನೆ, ಅತ್ತೆ ಮಾವ ಇಬ್ಬರು ಇದಕ್ಕೆ ಬೆಂಬ ನೀಡಿರುತ್ತಾರೆ, ಅದಕ್ಕೆ ಫಿರ್ಯಾದಿಯು ತನ್ನ ತವರು ಮನೆಯಿಂದ 1,25,000/- ಹಣ ತಂದು ಕೊಟ್ಟಿದ್ದು, ಸದರಿ ಹಣ ವಾಪಸ ಕೊಡಲಿಕ್ಕೆ ತಯಾರ ಇಲ್ಲ, ಆದರೂ ಇನ್ನು ನೀನು ತವರು ಮನೆಯಿಂದ ವ್ಯಾಪಾರ ಮಾಡಲು ಹಣ ತೆಗೆದುಕೊಂಡು ಬಾ ಅಂತ ಫಿರ್ಯಾದಿಗೆ ಸದರಿ ಆರೋಪಿತರು ಕಿರಕುಳ ನೀಡುತ್ತಿದ್ದಾರೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಮೇರೆಗೆ ದಿನಾಂಕ 22-06-2020 ರಂದು ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂ. 47/2020, ಕಲಂ. 20(ಬಿ) (2) ಎನ್.ಡಿ.ಪಿ.ಎಸ್ ಕಾಯ್ದೆ :-
ದಿನಾಂಕ 22-06-2020 ರಂದು ಜಂಬಗಿ ಗ್ರಾಮದ ಸರ್ವೆ ನಂ. 110 ನೇದರಲ್ಲಿ ದಿಗಂಬರ ತಂದೆ ವಿನಾಯಕರಾವ ಭಾಲ್ಕೆ ಇವರ ಹೋಲದಲ್ಲ್ಲಿ ಕಾನೂನು ಬಾಹೀರವಾಗಿ ಗಾಂಜಾವನ್ನು ಅನಧಿಕೃತವಾಗಿ ಹಾಗೂ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡಲು ಇಟ್ಟುಕೊಂಡ ಬಗ್ಗೆ ಡಾ. ದೇವರಾಜ ಡಿ.ಎಸ್.ಪಿ ಭಾಲ್ಕಿ ರವರಿಗೆ ಖಚಿತ ಬಾತ್ಮಿ ಬಂದ ಮೇರಗೆ ಡಿಎಸ್ಪಿ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಪಂತ್ರಾಂಕಿತ ಅಧಿಕಾರಿಯಾದ ತಾಲೂಕಾ ವೈದ್ಯಾಧಿಕಾರಿ ಡಾ. ಮಹೇಶ ಔರಾದ (ಬಿ) ಹಾಗೂ ತೂಕ ಮಾಡುವ ವ್ಯಕ್ತಿ ವಿಠಲರಾವ ತಂದೆ ಬಸಪ್ಪಾ ಚಟ್ನಾಳಕರ ಸಾ: ಸಂತಪುರ ಇವರ ಜೋತೆ ತೂಕ ಮಾಡುವ ಎಲೆಕ್ಟ್ರಾನಿಕ ಯಂತ್ರ, ಮತ್ತು ಫೋಟೋ ಗ್ರಾಫರ್ ಗುಣವಂತ ತಂದೆ ದೇವಬಾ ಸುಸಲಾದೆ ಸಾ: ಔರಾದ (ಬಿ) ಹಾಗೂ ಪೊಲೀಸ ಸಿಬ್ಬಂದಿಯವರೊಡನೆ ಜಂಬಗಿ ಗ್ರಾಮದ ವಲ್ಲೆಪುರ ರೋಡಿನ ಹತ್ತಿರ ಇರುವ ಪಶು ಆಸ್ಪತ್ರೆಯ ಹತ್ತಿರ ಹೋಗಿ ಹೋಲದಲ್ಲಿ ಹಾಲಿನ ಡೈರಿ ಫಾರ್ಮ ತಗಡದ ಶೇಡ್ ಹಿಂದೆ ಮರೆಯಾಗಿ ನಿಂತು ನೋಡಲು ಹೊಲದ ಕಟ್ಟೆಯ ಮೇಲೆ ಒಂದು ತಗಡದ ಶೆಡ್ಡಿನ ಹಿಂದೆ ಒಬ್ಬ ವ್ಯಕ್ತಿಯು ಇನ್ನೂ ಇಬ್ಬರು ವ್ಯಕ್ತಿಗಳ ಜೋತೆ ಮಾತಾಡುತ್ತಾ ನಿಂತಿದ್ದು  ಪೊಲೀಸರನ್ನು ನೋಡಿ ಒಬ್ಬ ವ್ಯಕ್ತಿಯು ಓಡುವಾಗ ವ್ಯಕ್ತಿಗೆ ಪೊಲೀಸ ಸಿಬ್ಬಂದಿಯವರು ಹಿಡಿದಾಗ ವ್ಯಕ್ತಿಯು ಗಾಬರಿಗೊಳ್ಳುವಾಗ ಏನಾಗಿದೆ ಹೋಲದಲ್ಲಿ  ಗಾಂಜಾ ಇದೆ ಅಂತಾ ನಮಗೆ ಖಚಿತ ಮಾಹಿತಿ ಇದೆ ಅಂತಾ ವಿಚಾರಿಸಿದಾಗ ಆತನು ಏನು ತಿಳಿಸಿರುವುದಿಲ್ಲಾ, ನಂತರ ಪೊಲೀಸ್ ಇಲಾಖೆಯ ಶ್ವಾನವನ್ನು ಚೆಕ್ ಮಾಡಲು ಬಿಟ್ಟಾಗ ಸದರಿ ಶ್ವಾನವು ಹುಡುಕುತ್ತಾ ಒಂದು ಸಾಗುವಾನಿ ಮರದ ಕೆಳಗೆ ಶ್ವಾನವು ಹೋಗಿ ವಾಸನೆ ನೋಡಿ ಕಾಲು ಕೆದರಿದಾಗ ಆಗ ವ್ಯಕ್ತಿಗೆ ವಿಚಾರಿದ್ದು ಇದು ಯಾರ ಹೋಲ ಇದೆ ? ಸ್ಥಳದಲ್ಲಿ ಏನಿದೆ ? ಅಂತಾ ವಿಚಾರಿಸಲು ಆತನು ಗಾಬರಿಗೊಂಡು ಹೋಲ ನಮ್ಮದು ಇದೇ ಇಲ್ಲಿ ನಾನು ಗಾಂಜಾದ ಪಾಕೇಟಗಳನ್ನು ಬಚ್ಚಿಟ್ಟಿರುತ್ತೆನೆ ಅಂತಾ ತಿಳಿಸಿದ್ದು, ಡಿ.ಎಸ್.ಪಿ ರವರು ಸಿಬ್ಬಂದಿಯವರ ಸಾಹಾಯದಿಂದ ನೇಲವನ್ನು ಅಗೆದು ನೋಡಲು ಗಾಂಜಾದ 14 ಪಾಕೇಟಗಳು ಸಿಕ್ಕಿದ್ದು, ನಂತರ ದಾಳಿ ಮಾಡಿದ ವೇಳೆ ಸಿಕ್ಕ ವ್ಯಕ್ತಿಗೆ ಹೆಸರು ವಿಚಾರಿಸಲು ತನ್ನ  ಹೆಸರು ದಿಗಂಬರ ತಂದೆ ವಿನಾಯಕರಾವ ಭಾಲ್ಕೆ ವಯ : 34 ವರ್ಷ, ಜಾತಿ: ಮರಾಠಾ, ಸಾ: ಜಂಬಗಿ ಎಂದು ತಿಳಿಸಿದ್ದು ನಂತರ ಆತನ ಅಂಗ ಶೋಧನೆ ಮಾಡಿ ಆತನ ಹತ್ತಿರ   ಎಮ್. 6ಪ್ರೋ ಮೋಬೈಲ್ .ಎಂ.. ನಂ. 1) 9646669048783739, 2) 96469048783747 ಇದ್ದು .ಕಿ 7,000/- ರೂಪಾಯಿ, ಇನ್ನೊಂದು ನೋಕಿಯಾ ಮೋಬೈಲ ಕಪ್ಪು ಬಣ್ಣದ್ದು .ಕಿ 400/- ಮತ್ತು ನಗದು ಹಣ 250/- ರೂ. ಸಿಕ್ಕಿದ್ದು ನೇದವುಗಳನ್ನು ಜಪ್ತಿ ಮಾಡಿಕೊಂಡು, ನಂತರ ಆರೋಪಿ ದಿಗಂಬರ ಇತನಿಗೆ ಗಾಂಜಾವನ್ನು ಯಾರು ತಂದು ಕೊಟ್ಟಿರುತ್ತಾರೆ ಅಂತಾ ಕೆಳಿದಕ್ಕೆ ಆತನು ಹೈದ್ರಾಬಾದಿನಿಂದ ಒಬ್ಬ ವ್ಯಕ್ತಿ ಪರಿಚಯವಾಗಿ ನಮ್ಮ ಹೋಲದವೆರೆಗೆ ಖಾಸಗಿ ವಾಹನದಲ್ಲಿ ಗಾಂಜಾ ತಂದು ಕೊಟ್ಟು ಪಡೆದುಕೊಂಡು ಹೋಗಿರುತ್ತಾನೆ ಆತನ ಹೆಸರು ವಿಳಾಸ ಗೊತ್ತಿರುವುದಿಲ್ಲಾ ಅಂತಾ ತಿಳಿಸಿದ್ದು, ನಂತರ ಸದರಿ ಗಾಂಜಾವನ್ನು ತೂಕ ಮಾಡಿ ನೋಡಲು ಒಟ್ಟು ಎಲ್ಲಾ ಪಾಕೇಟಗಳ ಸಮೇತ ಒಟ್ಟು ತೂಕ 36 ಕಿಲೊ 500 ಗ್ರಾಂ ಗಾಂಜಾ ಇರುತ್ತದೆ, ಅದರ .ಕಿ 4,01,500/- ರೂ., ಸದರಿ ಗಾಂಜಾವನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 51/2020, ಕಲಂ. 41(1)(ಡಿ), 102 ಸಿ.ಆರ್.ಪಿ.ಸಿ :-
ದಿನಾಂಕ 22-06-2020 ರಂದು ತಡೊಳಾ ಶಿವಾರದಲ್ಲಿರುವ ಹೊಲ ಸರ್ವೇ ನಂ. 205/2 ನೇದ್ದು ರಬ್ಬಾನಿ ತಂದೆ ಜಿಲಾನಿಸಾಬ ಶಾಯಿವಾಲೆ ಸಾ: ತಡೊಳಾ ಇತನ ಹೊಲದಲ್ಲಿ ಒಂದು ಶೇಡ್ ಮಾಡಿ ಅದರಲ್ಲಿ ಅಕ್ರಮವಾಗಿ ತಂಬಾಕು ಚೀಲಗಳನ್ನು ಸಂಗ್ರಹಣೆ ಮಾಡಿರುತ್ತಾರೆ, ತಂಬಾಕು ಎಲ್ಲಿಂದ ತಂದಿರುತ್ತಾರೆ? ಯಾರು ತಂದಿರುತ್ತಾರೊ, ಮಾಲಿನ ಮಾಲಿಕತ್ವದ ಬಗ್ಗೆ ಸಂಶಯವಿರುತ್ತದೆ ವಸೀಮ ಪಟೇಲ್ ಪಿಎಸ್ಐ (ಕಾ&ಸು) ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಂಗ್ಲಾ ರೋಡ ಮುಖಾಂತರ ತಡೊಳಾ ಶಿವಾರದ ಹೊಲ ಸರ್ವೇ ನಂ. 205/2 ನೇದ್ದು ರಬ್ಬಾಜಿ ತಂದೆ ಜಿಲಾನಿಸಾಬ ಶಾಯಿವಾಲೆ ಇತನ ಹೊಲದ ಹತ್ತಿರ ತಲುಪಿ ಒಂದು ತಗಡದ ಶೇಡ್ ಹತ್ತಿರ ಹೋದಾಗ ಶೇಡನ ಬಾಗಿಲು ಮುಂದಕ್ಕೆ ಮಾಡಿದ್ದು ಇರುತ್ತದೆ, ಶೇಡನ ಬಾಗಿಲನ್ನು ಪಂಚರ ಸಮಕ್ಷಮ ತರೆದು ಒಳಗೆ ಹೋಗಿ ಪರಿಶೀಲಿಸಲು ಶೇಡ್ದಲ್ಲಿ ಬಿಳಿ ಪ್ಲಾಸ್ಟೀಕ ಚೀಲಗಳು ಇದ್ದು ಚೀಲಗಳು ಎಣಿಸಿ ನೋಡಲು ಒಟ್ಟು 60 ಚೀಲಗಳು ಇದ್ದು ಪ್ರತಿಯೊಂದು ಚೀಲದಲ್ಲಿ ತಂಬಾಕು ತುಂಬಿದ್ದು ಇರುತ್ತದೆ, ನಂತರ ಶೇಡನಲ್ಲಿದ್ದ ತಂಬಾಕು ಮಾಲಿಕನ ಬಗ್ಗೆ ಶೇಡ್ಡಿನ ಅಕ್ಕ ಪಕ್ಕ ನೋಡಲು ಯಾರು ಇರಲಿಲ್ಲಾ, ತಂಬಾಕಿನ ಮಾಲಿಕತ್ವದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ, ನಂತರ ಶೇಡ್ನಲ್ಲಿದ್ದ ಒಂದು ಚೀಲದಲ್ಲಿ 23 ಕೆ.ಜಿ ತಂಬಾಕು ಇದ್ದು 1 ಕೆಜಿ ಬೆಲೆ ಅ.ಕಿ 400/- ರೂಪಾಯಿ, ಒಂದು ಪ್ಲಾಸ್ಟೀಕ ಚೀಲದಲ್ಲಿದ್ದ ತಂಬಾಕಿನ ಅ.ಕಿ 9,200/- ರೂಪಾಯಿ ಇರುತ್ತದೆ, ಹೀಗೆ ಒಟ್ಟು 60 ಚೀಲಗಳಲ್ಲಿ 1380 ಕೆ.ಜಿ ತಂಬಾಕು ಅ.ಕಿ 5,52,000/- ರೂಪಾಯಿ ಆಗುತ್ತದೆ, ನಂತರ ಸದರಿ ತಂಬಾಕನ್ನು ತಾಬೆಗೆ ತೆಗೆದುಕೊಂಡು ಹೊಲದ ಮಾಲಿಕ ರಬ್ಬಾನಿ ತಂದೆ ಜಿಲಾನಿಸಾಬ ಶಾಯಿವಾಲೆ ಸಾ: ತೊಡೊಳಾ ಇತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 139/2020, ಕಲಂ. 447 ಐಪಿಸಿ ಮತ್ತು 192() ಕರ್ನಾಟಕ ಕಂದಾಯ ಕಾಯ್ದೆ :-
ದಿನಾಂಕ 20-06-2020 ರಂದು ವಾರ್ಡ ನಂ. 11 ಪುರಸಭೆಯ ಬಸವನಗರದ ವಾಟರಮ್ಯಾನ ಅರುಣ ತಂದೆ ಪುಂಡಲಿಕ ಮೋರೆ ರವರು ಕಛೇರಿಗೆ ಬಂದು ದಿನಾಂಕ 19-06-2020 ರಾತ್ರಿ ಬಸವನಗರದಲ್ಲಿರುವ ಸರಕಾರಿ ಜಾಗೆಯಲ್ಲಿ ಓಂಕಾರ ತಂದೆ ವಿಠಲ ಮೋರೆ ಸಾ: ಅಶೋಕನಗರ ಭಾಲ್ಕಿ ರವರು ಅನಧೀಕೃತವಾಗಿ ತಗಡಿನ ಶೆಡ್ಡು ಹೊಡೆದು ಸರಕಾರಿ ಜಾಗ ಕಬ್ಜಾ ಮಾಡಿರುತ್ತಾರೆ ಅಂತ ತಿಳಿಸಿದ್ದರಿಂದ ದಿನಾಂಕ 22-06-2020 ರಂದು ಫಿರ್ಯಾದಿ ವಹಿದಪಾಶಾ ತಂದೆ ಸಲಿಂಸಾಬ ತಿಡಗುಂದಿ ವಯ: 45 ವರ್ಷ, ಜಾತಿ: ಮುಸ್ಲಿಂ, : ಆರೋಗ್ಯ ನೀರಿಕ್ಷಕರು, ಸಾ: ಹೊಸುರು, ತಾ: ಅಫಜಪುರ, ಜಿ: ಕಲಬುರ್ಗಿ ರವರು ಮತ್ತು ತಹಶಿಲ್ದಾರ ಭಾಲ್ಕಿ, ಸಂಗಮೇಶ್ವರ ತಂದೆ ಅಶೋಕ ಬಿರಾದಾರ ಆರೋಗ್ಯ ನಿರೀಕ್ಷಕರು ಪುರಸಭೆ ಭಾಲ್ಕಿ, ವಿಶ್ವನಾಥ ತಂದೆ ಬಂಡೆಪ್ಪಾ ಪ್ಯಾಗೆ ದಫೆದಾರ ಪುರಸಭೆ ಭಾಲ್ಕಿ, ಸ್ವಾಮಿದಾಸ ಸಮುದಾಯ ಸಂಘಟಕರು ಪುರಸಭೆ ಭಾಲ್ಕಿ ಎಲ್ಲರೂ ಕೂಡಿ ಭಾಲ್ಕಿ ಪುರಸಭೆ ವ್ಯಾಪ್ತಿಯ ಬಸವನಗರಕ್ಕೆ  ಭೆಟ್ಟಿ ಕೊಟ್ಟು ಪರಿಶಿಲಸಿ ನೊಡಲಾಗಿ ಬಸವನಗರ ವಾರ್ಡ ನಂ 11 ಬಸವನಗರ ದಕ್ಷಿಣ ಭಾಗದಲ್ಲಿರುವ ಸರಕಾರಿ ಜಾಗದಲ್ಲಿ 30 ಅಡಿ ಉದ್ದ ಮತ್ತು 30 ಅಡಿ ಅಗಲದ ಒಂದು ತಗಡದ ಶೆಡ್ಡನು ಹೊಡೆದು ಓಂಕಾರೆ ತಂದೆ ವಿಠಲರಾವ ಮೋರೆ ಇವರು ಸರಕಾರಿ ಜಾಗದಲ್ಲಿ ಅಕ್ರಮ ಪ್ರವೇಶ ಮಾಡಿ ಸರಕಾರಿ ಜಾಗ ಕಬಳಿಸಿ ವಾಸ ಮಾಡುತ್ತಿರುವದು ಕಂಡು ಬಂದಿರುತ್ತದೆ, ಸದರಿ ಜಾಗವನ್ನು ಪಂಚರ ಸಮಕ್ಷಮ ತೆರವು ಗೊಳಿಸಿ 9 ತಗಡ 9 ಕಟ್ಟಿಗೆಯ ಕಂಬ ಪಂಚರ ಸಮಕ್ಷಮ ವಶಪಡಿಸಿಕೊಂಡಿದ್ದು ಇರುತ್ತದೆ ಅಂತ ಕೊಟ್ಟ ದೂರಿನ ಮೇರೆಗೆ ಆರೋಪಿ ಓಂಕಾರ ಇತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: