ದಿನಂಪ್ರತಿ
ಅಪರಾಧಗಳ ಮಾಹಿತಿ ದಿನಾಂಕ: 06-07-2020
ಮನ್ನಳ್ಳಿ
ಪೊಲೀಸ್ ಠಾಣೆ ಅಪರಾಧ ಸಂಖ್ಯೆ 33/2020 ಕಲಂ 420, 471 ಐಪಿಸಿ :-
ಪೊಲೀಸ ಆಧೀಕ್ಷಕರು ಬೀದರ ರವರ ಜ್ಞಾಪನ ಪತ್ರ
ಸಂ/ಅಪರಾಧ-1/ಇತರೆ/ಬೀ/2020/492 ದಿನಾಂಕ 10-06-2020 ನೇದನ್ನು ಸ್ವೀಕೃತ ಮಾಡಿಕೊಂಡಿದ್ದು ಅದರ ಉಲ್ಲೇಖಿತ
ಪತ್ರದಲ್ಲಿನ ವಿವರವೆನೆಂದರೆ,
ಸದಸ್ಯ ಕಾರ್ಯದರ್ಶಿಗಳು ಹಾಗೂ ಮುಖ್ಯ ಆಡಳಿತ ಅಧಿಕಾರಿಗಳು ಆರೋಗ್ಯ ಮತ್ತು
ಕುಟುಂಬ ಕಲ್ಯಾಣ ಸೇವೆಗಳು-ನಿರ್ದೇಶನಾಲಯ ಅನಂದರಾವ ವೃತ್ತ ಬೆಂಗಳೂರು ರವರು ಆರೋಗ್ಯ
ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಶೂಶ್ರುಕರ ನೇಮಕಾತಿ ಕುರಿತು ಈ ಕೇಳಕಂಡ 4 ಅಭ್ಯರ್ಥಿಗಳು ಅಂಗವಿಕಲ ಮಿಸಲಾತಿ ಅಡಿಯಲ್ಲಿ ಅಯ್ಕೆಯಾಗಿದ್ದು, ಅಯ್ಕೆಯಾದ ಅಭ್ಯರ್ಥಿಗಳು ಅಂಗವಿಕಲತೆಯ ಬಗ್ಗೆ ಸುಳ್ಳು ವೈದ್ಯಕೀಯ ಮಂಡಳಿ
ವರದಿಯನ್ನು ನೀಡಿದ್ದು/ಸಲ್ಲಿಸಿದ್ದು ವರದಿಯನ್ನು ನೀಡಿರುವವರ ಹಾಗೂ ಸಲ್ಲಿಸಿದವರ ವಿರುಧ್ದ
ತನಿಖೆ ನಡೆಸಿ 4 ಜನರಲ್ಲಿನ ( ಜಗಪ್ಪಾ ತಂದೆ ಜಟ್ಟೆಪ್ಪಾ ಶಿವಗೊಂಡನೋರ
ಸಾ: ಯಾಕತಪೂರ) ಈತನ ವಿರುದ್ದ ಕಾನೂನು ರೀತ್ಯ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೋರಿರುತ್ತಾರೆ, ಕಾರಣ ಮನ್ನಳ್ಳಿ ಪೊಲೀಸ ಠಾಣೆ ಅಪರಾಧ ಸಂಖ್ಯೆ 33/2020 ಕಲಂ 420,471,ಐಪಿಸಿ ನೇದರ ಪ್ರಕಾರ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment