ದಿನಂಪ್ರತಿ ಅಪರಾಧಗಳ
ಮಾಹಿತಿ ದಿನಾಂಕ : 17-07-2020
ಹುಮನಾಬಾದ ಪೊಲೀಸ್ ಠಾಣೆ ಅಪರಾಧ
ಸಂಖ್ಯೆ 32 (3) ಕೆ.ಇ ಕಾಯ್ದೆ :-
ದಿನಾಂಕ 16/07/2020
ರಂದು ಸಾಯಂಕಾಲ 1730 ಗಂಟೆಗೆ ಪಿಎಸ್ಐ ರವರು ಪೊಲೀಸ್ ಠಾಣೆಯಲ್ಲಿದ್ದಾಗ
ಮೋಬೈಲ್ ಮುಖಾಂತರ ಖಚಿತ ಬಾತ್ಮಿ
ಬಂದಿದ್ದೇನೆಂದರೆ,
ಹುಮನಾಬಾದ
ಪಟ್ಟಣದ ಧೇರ್ ಮೈದಾನ ಹಿಂದುಗಡೆ ಇರುವ ಎಮಾರೆಡ್ಡಿ ಎಂಬುವವನು ತನ್ನ
ಹೇಮರೆಡ್ಡಿ ಮಲ್ಲಮ್ಮಾ ಖಾನಾವಳಿ ಹೊಟೇಲನಲ್ಲಿ ತನ್ನ ಹತ್ತಿರ ಸರಕಾರದಿಂದ ಯಾವುದೇ
ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನುವು
ಮಾಡಿಕೊಟ್ಟಿರುತ್ತಾನೆ ಅಂತ ಬಾತ್ಮಿ ಬಂದ ಮೇರೆಗೆ ಹುಮನಾಬಾದ ಪಟ್ಟಣದ ಥೇರ್ ಮೈದಾನ ಹಿಂದುಗಡೆ ಎಮಾರೆಡ್ಡಿ
ಇವನ ಖಾನಾವಳಿ ಹತ್ತಿರ
ಹೋಗಿ ನೋಡಿದಾಗ
ಟೇಬಲ್ ಮೇಲೆ ಸರಾಯಿ ಖಾಲಿ ಪ್ಯಾಕೇಟಗಳು, ಪ್ಲಾಸ್ಟಿಕ್ ಗ್ಲಾಸಗಳು ಮತ್ತು ನೀರಿನ ಬಾಟಲ ಇದ್ದವು.
ಅಲ್ಲೆ ಹಾಜರಿದ್ದ ವ್ಯಕ್ತಿಗೆ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು
ಏಮಾರೆಡ್ಡಿ ತಂದೆ ರಾಮರೆಡ್ಡಿ ಮುಡಬಿ ವಯಃ 50ವರ್ಷ ಜಾತಿಃರೆಡ್ಡಿ ಉ. ಹೋಟೆಲ, ಕೆಲಸ
ಸಾಃ ವಾಂಜ್ರಿ ಅಂತ ತಿಳಿಸಿ ಸದರಿ ಹೊಟೇಲ್ (ಖಾನಾವಳಿ) ತನ್ನದೆ ಇರುತ್ತದೆ ಅಂತ ತಿಳಿಸಿದನು.
ಅವನಿಗೆ ಸರಾಯಿ ಬಾಟಲಿ ಬಗ್ಗೆ ವಿಚಾರಿಸಿದಾಗ ಅವನು ತಿಳಿಸಿದ್ದೇನೆಂದರೆ, ತನ್ನ
ಹೊಟೇನಲ್ಲಿ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನುವು ಮಾಡಿ ಕೊಟ್ಟಿರುವುದು ಒಪ್ಪಿಕೊಂಡನು.
ಅವನಿಗೆ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನುವು ಕುರಿತು ಸರಕಾರದಿಂದ ಪರವಾನಿಗೆ ತೋರಿಸಲು
ಹೇಳಿದಾಗ ಅವನು ತನ್ನ ಹತ್ತಿರ ಯಾವುದೇ ಪರವಾನಿಗೆ ಇರುವುದಿಲ್ಲಾ ಅಂತ ತಿಳಿಸಿದನು. ಮತ್ತು ಓಡಿ
ಹೋದವರ ವಿಳಾಸ ವಿಚಾರಿಸಿದಾಗ ಅವರ ಹೆಸರು ಮತ್ತು ವಿಳಾಸ ಗೊತ್ತಿರುವುದಿಲ್ಲಾ ಅಂತ ತಿಳಿಸಿದನು.
ನಂತರ ಟೇಬಲ್ ಮೇಲಿನ 1] 180 ಎಮ್ಎಲ್ನ ಒಂದು ಓಲ್ಡ ತವೇರನ್ ಸರಾಯಿ ಟೇಟ್ರಾ ಪ್ಯಾಕೇಟ
ಕಿಮ್ಮತ 74/- ರೂಪಾಯಿ 2] 180 ಎಮ್.ಎಲ್ ಎರಡು ಓಲ್ಡ ತವೇರನ್ ಸರಾಯಿ ಟೇಟ್ರಾ ಪ್ಯಾಕೇಟ
(ಖಾಲಿ ಇರುವದು) ಮತ್ತು ಒಡೆದ ಓಲ್ಡ್ ತವೇರನ್ ವಿಸ್ಕಿ ಟೇಟ್ರಾ ಪ್ಯಾಕೇಟದಲ್ಲಿ ಸ್ವಲ್ಪ ಸರಾಯಿ
ಇರುವದು ಹೀಗೆ ಒಟ್ಟು 74/- ರೂಪಾಯಿ ಬೆಲೆ ಬಾಳುವ ಸರಾಯಿ ಬಾಟಲಿಗಳು ಜಪ್ತಿ ಮಾಡಿಕೊಂಡು
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
No comments:
Post a Comment