ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 04-08-2020
ಬೀದರ
ನೂತನ
ನಗರ
ಪೊಲೀಸ್
ಠಾಣೆ
ಯು.ಡಿ.ಆರ್ ನಂ. 14/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಮೋಗಲಮ್ಮ ಗಂಡ ಲಕ್ಷ್ಮಣ ಕೊರವಾ ವಯ: 50 ವರ್ಷ, ಜಾತಿ: ಕೊರೆರ, ಸಾ: ಪ್ರತಾಪ ನಗರ ಬೀದರ ರವರ ಮಗನಾದ ಮಲ್ಲಿಕಾರ್ಜನ ತಂದೆ
ಲಕ್ಷ್ಮಣ ವಯ: 24 ವರ್ಷ, ಜಾತಿ: ಕೋರೆರ, ಸಾ: ಪ್ರತಾಪನಗರ ಇತನು ದಿನಾಂಕ 01-08-2020 ರಂದು 2030 ಗಂಟೆಯಿಂದ ದಿನಾಂಕ 03-08-2020 ರಂದು 1600 ಗಂಟೆಯ ಮದ್ಯದ ಅವಧಿಯಲ್ಲಿ ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದು ನೀರಿನಲ್ಲಿ ಮುಳಗಿ ಮೃತ್ತಪಟ್ಟಿದ್ದು ಈ ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ
ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕುಶನೂರ ಪೊಲೀಸ ಠಾಣೆ
ಅಪರಾಧ ಸಂ. 61/2020, ಕಲಂ. 279, 304(ಎ) ಐಪಿಸಿ :-
ದಿನಾಂಕ 03-08-2020
ರಂದು ಫಿರ್ಯಾದಿ ವನಿತಾ ಗಂಡ ದಯಾನಂದ ಚಾಂದೂರೆ ವಯ: 22 ವರ್ಷ, ಜಾತಿ: ಮರಾಠಾ, ಸಾ:
ಕೌರ್, ತಾ:
ಭಾಲ್ಕಿ ರವರ ಗಂಡ ತಾನು ಕೆಲಸ ಮಾಡುವ ಮಾಲಿಕರ ಹತ್ತಿರ ಮೋಟಾರ ಸೈಕಲ ಕೆಎ-39/ಕೆ-2252
ನೇದನ್ನು ತಂದಿದ್ದು ಅದರ ಮೇಲೆ ಕುಳಿತು ಇಬ್ಬರು ಗೌಂಡಗಾಂವಕ್ಕೆ ಹೋಗುವಾಗ ಕುಶನೂರ ಹತ್ತಿರ ಹೋದಾಗ ಗಾಡಿಯಲ್ಲಿ ಪೆಟ್ರೊಲ್ ಇಲ್ಲಾ ಮುಗಿದಿದೆ ಹಾಕಿಕೊಂಡು ಬರುತ್ತೇನೆ ಅಂತ ಹೇಳಿ
ಬಸ್ ನಿಲ್ದಾಣ ಹತ್ತಿರ ಬಸವೇಶ್ವರ ಚೌಕ್ನಲ್ಲಿ ಫಿರ್ಯಾದಿಗೆ ನಿಲ್ಲಿಸಿ ಗಂಡ ಮೋಟಾರ ಸೈಕಲ್ ಮೇಲೆ ಹೋಗಿ ಬಂದಾಗ ಅವರಿಗೆ ನೋಡಲು ಅವರು ಸರಾಯಿ ಕುಡಿದು ಬಂದಿದ್ದು, ನೀವು
ಸರಾಯಿ ಕುಡಿದಿದ್ದು ನಾನು ನಿಮ್ಮ ಮೋಟಾರ ಸೈಕಲ್ ಮೇಲೆ ಬರುವುದಿಲ್ಲ ಅಂತ ಅಂದಾಗ ಅಲ್ಲೇ ಗೌಂಡಗಾಂವ ಗ್ರಾಮದ ಒಬ್ಬ ಹುಡುಗ ಬರುತ್ತಿದ್ದ ಆತನ ವಾಹನದ ಮೇಲೆ ನೀನು ಕುಳಿತುಕೊಂಡು ಬಾ ಅಂತ ಅವರ ವಾಹನದ ಮೇಲೆ ಕೂಡಿಸಿ ಕಳುಹಿಸಿದ್ದು ಗಂಡ ಹಿಂದೆ ಬರುತ್ತಿದ್ದು ಕೊರೆಕಲ್ ಗ್ರಾಮದ ಹತ್ತಿರ ಗಂಡ ತಾನು ಚಲಾಯಿಸುತ್ತಿದ್ದ ಮೋಟಾರ ಸೈಕಲನ್ನು ಅತೀವೇಗದಿಂದ ಚಲಾಯಿಸಿ ಒಮ್ಮೆಲೆ ಶಿವಾಜಿ ಚೌಕ್ ಹತ್ತಿರ ಹಿಡಿತ ತಪ್ಪಿ ರೋಡಿನ ಮೇಲೆ ಬಿದ್ದಿರುತ್ತಾನೆ, ನಂತರ ಫಿರ್ಯಾದಿಯು ತನ್ನ ಗಂಡನ ಹತ್ತಿರ ಹೋಗಿ ನೋಡಲು ಆತನಿಗೆ ತಲೆಯ ಹಿಂದೆ ಭಾರಿ ಪಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ
ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂ. 60/2020, ಕಲಂ. 279,
337, 338 ಐಪಿಸಿ :-
ದಿನಾಂಕ 03-08-2020 ರಂದು ಫಿರ್ಯಾದಿ ಲೋಕು ತಂದೆ ವಾಲು ಪವಾರ ವಯ: 71 ವರ್ಷ, ಜಾತಿ: ಲಂಬಾಣಿ, ಸಾ: ಅಂತರ ಭಾರತಿ ತಾಂಡಾ, ತಾ: ಹುಲಸೂರ ರವರ ಮೊಮ್ಮಗಲಾದ ಸುನೀತಾ ಇವಳ ಮಗಳಾದ ಅಂಕಿತಾ ಇವಳಿಗೆ ಆರಾಮ ಇಲ್ಲದ ಕಾರಣ ಅಂಕಿತಾ ಇವಳಿಗೆ ಫಿರ್ಯಾದಿಯವರ ಅಳಿಯ ಪ್ರಕಾಶ ಇವರು ಮೋಟಾರ ಸೈಕಲ್ ಮೇಲೆ ಸುನೀತಾ, ಅಂಕಿತಾ ಹಾಗು ಫಿರ್ಯಾದಿಯವರ ಹೆಂಡತಿ ದೇವಿಬಾಯಿ ಇವರೆಲ್ಲಿರಿಗೆ ನಂಬರ ಇಲ್ಲದ ಮೋಟಾರ ಸೈಕಲ್ ಮೇಲೆ ಕೂಡಿಸಿಕೊಂಡು ಹುಲಸೂರ ಸರಕಾರಿ ಆಸ್ಪತ್ರೆಗೆ ಹೋಗಿರುತ್ತಾರೆ ಹಾಗು ಫಿರ್ಯಾದಿಯು ತನ್ನ ಮಗಳಾದ ಸವಿತಾ ಇಬ್ಬರು ತನ್ನ ಟಿ.ವಿ.ಎಸ್ ಮೋಟಾರ ಸೈಕಲ್ ಮೇಲೆ ಪ್ರಕಾಶ ಈತನ ಮೋಟಾರ ಸೈಕಲ್ ಹಿಂದೆ ಹೋಗುತ್ತಿರುವಾಗ ಭಾಲ್ಕಿ ನಿಲಂಗಾ ರಸ್ತೆಯ ಬಸಪ್ಪಾ ಆದೆಪ್ಪಾ ಇವರ ಹೊಲದ ಹತ್ತಿರ ಭಾಲ್ಕಿ ಕಡೆಯಿಂದ ಒಂದು ಟಾಟಾ ಗೂಡ್ಸ ವಾಹನ ಸಂ. ಕೆಎ-01/ಎಎ-4429
ನೇದರ ಚಾಲಕನಾದ ಆರೋಪಿ ಮಹಾದೇವ ತಂದೆ ಹಣಮಂತ ಸನಕೆ ವಯ: 39 ವರ್ಷ, ಜಾತಿ: ಲಿಂಗಾಯತ, ಸಾ: ಮೇಹಕರ ಇತನು ತನ್ನ ವಾಹನವನ್ನು ಅತೀವೇಗದಿಂದ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಅಳಿಯ ಪ್ರಕಾಶ ಈತನು ಚಲಾಯಿಸುತ್ತಿರುವ ಮೋಟಾರ ಸೈಕಲಿಗೆ ಹಿಂದಿನಿಂದ ಡಿಕ್ಕಿ ಮಾಡಿದ್ದರಿಂದ ಪ್ರಕಾಶ ಇವನಿಗೆ ಬಲಗಾಲ ಮೊಳಕಾಲ ಕೆಳಗೆ ರಕ್ತಗಾಯವಾಗಿರುತ್ತದೆ, ಫಿರ್ಯಾದಿಯ ಹೆಂಡತಿ ದೇವಿಬಾಯಿ ಇವಳಿಗೆ ತಲೆಯ ಹಿಂದೆ ಭಾರಿ ರಕ್ತಗಾಯ, ಬಲಗಡೆ ಹಣೆಗೆ, ಬಲಗೈ ಮೊಳಕೈ ಕೆಳಗೆ, ಬಲ ಭುಜಕ್ಕೆ ರಕ್ತಗಾಯ ಮತ್ತು ಭಾರಿ ಗುಪ್ತಗಾಯವಾಗಿರುತ್ತ, ಮೊಮ್ಮಗಳಾದ ಸುನೀತಾ ಇವಳಿಗೆ ಬಲಗಾಲ ತೊಡಗೆ ಮತ್ತು ಸೊಂಟಕ್ಕೆ ಭಾರಿ ಗುಪ್ತಗಾಯ ಮತ್ತು ಬಲಗಾಲಿಗೆ ತರಚಿದ ಗಾಯವಾಗಿರುತ್ತದೆ, ಅಂಕಿತಾ ಇವಳಿಗೆ ಎಡಗಣ್ಣಿನ ಮೇಲೆ ರಕ್ತಗಾಯ, ಎರಡು ಕಾಲುಗಳಿಗೆ ತರಚಿದ ರಕ್ತಗಾಯ, ಬಲಗೈ ಮೊಳಕೈಗೆ ರಕ್ತಗಾಯವಾಗಿದ್ದು ಇರುತ್ತದೆ, ನಂತರ ಫಿರ್ಯಾದಿ ಮತ್ತು ಸವಿತಾ ಹಾಗು ಆರೋಪಿ ಮಹಾದೇವ ಕೂಡಿಕೊಂಡು ಗಾಯಗೊಂಡ ಎಲ್ಲರಿಗೂ ಒಂದು ಖಾಸಗಿ ವಾಹನದಲ್ಲಿ ಹುಲಸೂರ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕುರಿತು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ
ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ
ಪೊಲೀಸ
ಠಾಣೆ ಅಪರಾಧ ಸಂ. 107/2020, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 03-08-2020 ರಂದು ಫಿರ್ಯಾದಿ ಯಮುನಾ ಗಂಡ ಸಂಜು ರಾಠೋಡ, ವಯ: 30 ವರ್ಷ, ಜಾತಿ: ಲಮಾಣಿ, ಸಾ: ಮದರಗಿ ಗುಡಿ ತಾಂಡಾ ರವರು ತನ್ನ ಗಂಡ ಸಂಜು ತಂದೆ ಶಂಕರ ರಾಠೋಡ ವಯ: 35 ವರ್ಷ ಇಬ್ಬರೂ ತಮ್ಮ ಮೋಟರ ಸೈಕಲ ನಂ. KA-32/EU-7853 ನೇದರ ಮೇಲೆ ತಮ್ಮ ತಾಂಡಾದಿಂದ ಚಿಟಗುಪ್ಪಾಕ್ಕೆ ಹೋಗುವಾಗ ಚಿಟಗುಪ್ಪಾ ಮುಸ್ತರಿ ರೋಡ ಅಬ್ದುಲ ಹಫೀಜ ಮಜಕುರಿ ರವರ ಹೊಲದ ಹತ್ತಿರ ಎದುರಿನಿಂದ ಬಂದ ಕಾರ ನಂ. MH-20/BC-2877 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಮೋಟರ ಸೈಕಲಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಕಾರನ್ನು ಸಹ ರಸ್ತೆ ಪಕ್ಕದ ತಗ್ಗಿನಲ್ಲಿ ಹಾಕಿ ತನ್ನ ಕಾರನ್ನು ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಗೆ ಎರಡೂ ಕಾಲುಗಳಿಗೆ ತರಚಿದಗಾಯ, ಮೋಳಕಾಲುಗಳಿಗೆ ಗುಪ್ತಗಾಯ ಹಾಗು ಎಡಗೈಗೆ ತರಚಿದ ರಕ್ತಗಾಯವಾಗಿದ್ದು, ಗಂಡ ಸಂಜು ರವರಿಗೆ ಕಾಲುಗಳಿಗೆ ಹಾಗು ಮುಂಗೈಗಳಿಗೆ ತರಚಿದ ರಕ್ತಗಾಯ, ತಲೆಗೆ, ಎದೆಗೆ ಭಾರಿ ಗುಪ್ತಗಾಯವಾಗಿ ಬೇಹೋಷಾಗಿರುತ್ತಾರೆ, ನಂತರ ಗಾಯಗೊಂಡ ಇಬ್ಬರಿಗೂ ಪಕ್ಕದ ಹೊಲದ ಅಬ್ದುಲ್ ಹಫೀಜ ರವರು ಆಟೋದಲ್ಲಿ ಚಿಕಿತ್ಸೆ ಕುರಿತು ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ತಂದು ದಾಖಲು
ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 113/2020, ಕಲಂ. 3
& 7 ಇ.ಸಿ ಕಾಯ್ದೆ :-
ದಿನಾಂಕ 03-08-2020 ರಂದು ಹುಮನಾಬಾದ
ಎಪಿಎಂಸಿ ಮಾಕೆರ್ಟದಲ್ಲಿರುವ ಅಂಗಡಿ ಸಂ. 25 ಶರಿಕಾರ ಟ್ರೇಡರ್ಸದಲ್ಲಿ ಸರಕಾರದಿಂದ
ಸಾರ್ವಜನಿಕರಿಗೆ ವಿತರಿಸುವ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿರುತ್ತಾರೆಂದು ಫಿರ್ಯಾದಿ ವೆಂಕಟ್ರಾವ ಆಹಾರ ನೀರಿಕ್ಷಕರು
ಹುಮನಾಬಾದ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಫಿರ್ಯಾದಿಯವರು ಪೊಲೀಸ್ ಅಧಿಕಾರಿ ಹಾಗು ಸಿಬ್ಬಂದಿಯವರೊಂದಿಗೆ
ಪಂಚರ ಸಮಕ್ಷಮ ಸದರಿ ಅಂಗಡಿಯ ಮೇಲೆ ದಾಳಿ ಮಾಡಿ ಒಟ್ಟು 8 ಕ್ವಿಂಟಲ್ ಪಿ.ಡಿ.ಎಸ್
ಅಕ್ಕಿ ಜಪ್ತಿ ಮಾಡಿಕೊಂಡು ಆರೋಪಿತನಾದ ಎಂ.ಡಿ ಆಸೀಫ್ ತಂದೆ ಎಂ.ಡಿ ಸಿದ್ದೀಕ ಶೇರಿಕಾರ ವಯ: 30 ವರ್ಷ, ಜಾತಿ: ಮುಸ್ಲಿಂ, ಸಾ: ಕಪ್ಪರಗಾಂವ ಇತನಿಗೆ ತಾಬೆಗೆ
ತೆಗೆದುಕೊಂಡು ನೀಡಿದ ದೂರಿನ ಸಾರಾಂಶದ ಮೇರೆಗೆ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
No comments:
Post a Comment