ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 12-08-2020
ಕಮಲನಗರ
ಪೊಲೀಸ್ ಠಾಣೆ ಅಪರಾಧ ಸಂಖ್ಯೆ 69/2020 ಕಲಂ 32, 34 ಕೆ.ಇ. ಕಾಯ್ದೆ :-
ದಿ:
11/08/2020 ರಂದು 1500 ಗಂಟೆಗೆ ಬಾತ್ಮಿ ಬಂದಿದ್ದೆನೆಂದರೆ ಚಾಂಡೇಶ್ವರ ಗ್ರಾಮದಲ್ಲಿ
ಖೇಡ ರೋಡಿಗೆ ಒಬ್ಬ ವ್ಯಕ್ತಿ ತನ್ನ ಹತ್ತಿರ ಸರಕಾರದಿಂದ ಯಾವುದೆ ಪರವಾನಿಗೆ ಇಲ್ಲದೆ ಸರಾಯಿ
ಮಾರಾಟ ಮಾಡಲು ನಿಂತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ
ಸಿಬ್ಬಂದಿಯೊಂದಿಗೆ
ಹೋಗಿ ದಾಳಿ ಮಾಡಿ ಸದರಿ ವ್ಯಕ್ತಿ ಸದರಿ ವ್ಯಕ್ತಿಗೆ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲು ಅವನು ಸುರ್ಯಕಾಂತ ತಂದೆ
ಕಂಟೆಪ್ಪಾ ಕುಶನೂರೆ ವಯ 56 ವರ್ಷ ಜ್ಯಾತಿ ಲಿಂಗಾಯತ ಉ// ಹೊಟೇಲ ಕೆಲಸ ಸಾ// ಚಾಂಡೇಶ್ವರ ಅಂತಾ
ಹೇಳಿದ್ದು ಅವನ ಹತ್ತಿರ ಇದ್ದ 1) ಒರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ 90 ಎಮ್.ಎಲ್.
ಪೌಚ್ 2)
ಒಲ್ಡ್ ಟವಾನ್ ವಿಸ್ಕಿ
180 ಎಮ್.ಎಲ್. 2 ಪೌಚ್ ಮುದೆ ಮಾಲು
ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಆರೋಪಿತನ ವಿರುಧ್ದ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೋಳ್ಳಲಾಗಿದೆ.
ಖಟಕ ಚಿಂಚೋಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 55/2020 ಕಲಂ 78(3) ಕೆ.ಪಿ. ಕಾಯ್ದೆ
:-
ದಿನಾಂಕ:
11/08/2020 ರಂದು 14:00 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಮದಕಟ್ಟಿ ಗ್ರಾಮದಲ್ಲಿ
ಶಿವಾಜಿ ಚೌಕ ಹತ್ತಿರ ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿ ಮಟಕಾ
ಬರೆದುಕೊಳ್ಳುತ್ತಿದ್ದಾನೆ ಅಂತಾ ಭಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಮದಕಟ್ಟಿ ಗ್ರಾಮದ ಶಿವಾಜಿ ಚೌಕ
ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ 1 ರೂಪಾಯಿಗೆ 80 ರೂ, ಕೊಡುತ್ತೆವೆ ಅಂತಾ ಮಟಕಾ ನಶಿಬಿನ ಆಟ
ಇರುತ್ತದೆ ಅಂತಾ ಜೋರಾಗಿ ಚೀರುತ್ತಿದ್ದನು, ಅದನ್ನು
ಖಚಿತ ಪಡಿಸಿಕೊಂಡು ಸದರಿ ವ್ಯಕ್ತಿಯ ಮೇಲೆ 15:05 ಗಂಟೆಗೆ ಮದಕಟ್ಟಿ ಗ್ರಾಮದ ಶಿವಾಜಿ
ಚೌಕ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಮಟಕಾ ಚೀಟಿ ಬರೆದು ಕೊಳ್ಳುತ್ತಿದ್ದವನ ಮೇಲೆ
ದಾಳಿ ಮಾಡಿ ಅವನ ಹೇಸರು ವಿಚಾರಿಸಲು ರಾಮರತನ ತಂದೆ ವಿನಾಯಕರಾವ ಮೀರಾಜದಾರ ವಯ-44 ಜಾತಿ ಮರಾಠ ಉ- ಕೂಲಿ ಕೇಲಸ ಸಾ- ಮದಕಟ್ಟಿ
ಅಂತಾ ತಿಳಿಸಿದ್ದು ಈ ವೇಳೆಯಲ್ಲಿ ಅವನ ಅಂಗ ಜಡ್ತಿ ಮಾಡಲು ತನ ಅಂಗಿಯ ಜೇಬಿನಲ್ಲಿ ಒಂದು 1 ಮಟಕಾ ನಂಬರ ಉಳ್ಳ ಚಿಟಿ ಹಾಗೂ 1 ಬಾಲ್ ಪೇನ್ ಮತ್ತು ಪ್ಯಾಂಟಿನ ಬಲಗಡೆ
ಜೇಬಿನಲ್ಲಿ 2290/-
ರೂಪಾಯಿಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಮೇಹಕರ ಪೊಲಿಸ ಠಾಣೆ ಅಪರಾಧ ಸಂಖ್ಯೆ 61/2020 ಕಲಂ 379 ಐಪಿಸಿ :-
ದಿನಾಂಕ 11-08-2020 ರಂದು 1715 ಗಂಟೆಗೆ ಫಿರ್ಯಾದಿ ಶ್ರೀ ಬಬನ್ ತಂದೆ ಮಾಧರಾವ ಗಾಜರೆ ವಯ 35 ವರ್ಷ ಜಾಮರಾಠ ಉ:ಒಕ್ಕಲುತನ ಸಾ: ತೂಗಾಂವ(ಹೆಚ್) ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಂಶವೆನೆಂದರೆ, ಇವರ ಹತ್ತಿರ ಒಂದು ಎಮ್ಮೆ, ಒಂದು ಆಕಳು, ಒಂದು ಹೋರಿ ಇದ್ದು ಒಂದು ಹೋರಿಯನ್ನು ಇವರು ಸೋಗಾಂವ(ಎಮ್.ಹೆಚ್) ನಿಂದ 50,000/- ರೂ ಯಲ್ಲಿ 08 ದಿವಸಗಳ ಹಿಂದೆ ಖರೀದಿ ಮಾಡಿದ್ದು ದಿನಾಂಕ 07-08-2020 ರಂದು ಬೆಳಿಗ್ಗೆ 7 ಗಂಟೆಗೆ ಹೊಲಕ್ಕೆ ತೆಗೆದುಕೊಂಡು ಹೋಗಿ ಅದೇ ಹೊಲದಲ್ಲಿ ಸಾಯಂಕಾಲದ ವರೆಗೆ ಮೇಯಿಸಿ ಸಾಯಂಕಾಲ ಸುಮಾರು 6 ಗಂಟೆಗೆ ಅಲ್ಲಿಯೇ ಕಟ್ಟಿ ಊಟಕ್ಕೆಂದು ಮನೆಯ ಕಡೆಗೆ ಬಂದು ಮನೆಯಲ್ಲಿ ಊಟ ಮಾಡಿಕೊಂಡು ರಾತ್ರಿ 10 ಗಂಟೆಯ ಸುಮಾರಿಗೆ ಹೊಲಕ್ಕೆ ಹೋಗಿ ನೋಡುವಷ್ಟರಲ್ಲಿ ಹೊಲದಲ್ಲಿ ಕಟ್ಟಿದ್ದ ನನ್ನ ಎಲ್ಲಾ ದನಗಳಿಗೆ ಕಟ್ಟಿದ ಹಗ್ಗ ಕೋಯ್ದು ಯಾರೋ ಕಳ್ಳರು ನನ್ನ ದನಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಒಂದು ಎಮ್ಮೆ ಅಂ.ಕಿ-14000/- ರೂ, ಆಕಳು ಅಂ.ಕಿ-35000/- ರೂ ಸ್ವಂತ ಮನೆಯ ಒಂದು ಹೋರಿ ಅಂ.ಕಿ-20000/- ಹಾಗೂ ಖರೀದಿ ಮಾಡಿದ ಇನ್ನೊಂದು ಹೋರಿ ಅಂ.ಕಿ-50000/- ರೂ ಹೀಗೆ ಎಲ್ಲಾ ಸೇರಿ ಒಟ್ಟು 119000/- ರೂ ಕಿಮ್ಮತ್ತು ಇರುತ್ತದೆ. ನನ್ನ ದನಗಳನ್ನು ಸುತ್ತಮುತ್ತಲಿನ ಗ್ರಾಮಗಳಲ್ಲಿ ಎಷ್ಟು ಹುಡುಕಿದರೂ ಸಿಕ್ಕಿರುವುದಿಲ್ಲ ಕಾರಣ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಅಂತಾ ನೀಡಿದರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
No comments:
Post a Comment