Police Bhavan Kalaburagi

Police Bhavan Kalaburagi

Monday, August 24, 2020

BIDAR DISTRICT DAILY CRIME UPDATE 24-08-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 24-08-2020

 

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 48/2020, ಕಲಂ. 279, 304() ಐಪಿಸಿ & 187 ಐಎಂವಿ ಕಾಯ್ದೆ :-

ಮೃತ ರಾಜೇಶ ತಂದೆ ಸಿದ್ರಾಮ ದಿಗ್ವಾಲ ವಯ: 48 ವರ್ಷ, ಜಾತಿ: ಎಸ್.ಸಿ ಸಮಗಾರ, ಸಾ: ಜೂನಿಯರ್ ಕಾಲೇಜ ಹತ್ತಿರ ಬೀದರ ಇವನು ದಿನಾಂಕ 23-08-2020 ರಂದು 0400 ಗಂಟೆಯಿಂದ 0630 ಗಂಟೆಯ ಅವಧಿಯಲ್ಲಿ ಬೀದರ ಜಹಿರಾಬಾದ ರೋಡ್ ವಡ್ಡಿ ಕ್ರಾಸ್ ಕಡೆಯಿಂದ ನಡೆದುಕೊಂಡು ಜಹಿರಾಬಾದ ಕಡೆಗೆ ಹೋಗುವಾಗ ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗೂ ನಿಸ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ರಾಜೇಶ ಇತನಿಗೆ ಡಿಕ್ಕಿ ಮಾಡಿದ್ದರಿಂದ ರಾಜೇಶ ಇತನು ಭಾರಿ ರಕ್ತಗಾಯವಾಗಿ ದೇಹವು ಪುರ್ತಿ ಛಿದ್ರವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಮೃತನ ಹೆಂಡತಿ ಫಿರ್ಯಾದಿ ಸಂಗೀತಾ ಗಂಡ ರಾಜೇಶ ದಿಗ್ವಾಲ ವಯ: 37 ವರ್ಷ, ಜಾತಿ: ಮಗಾರ, ಸಾ: ಜೂನಿಯರ ಕಾಲೇಜ ಹತ್ತಿರ ಬೀದರ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 107/2020, ಕಲಂ. 279, 338 ಐಪಿಸಿ :-

ದಿನಾಂಕ 23-08-2020 ರಂದು ಫಿರ್ಯಾದಿ ನಿತೀನ ತಂದೆ ರವೀಂದ್ರ ಪಾಟೀಲ್ ವಯ: 14 ವರ್ಷ, ಜಾತಿ: ಮಾಲಗಾರ ಲಿಂಗಾಯತ, ಸಾ: ಸಸ್ತಾಪೂರ ಗ್ರಾಮ, ತಾ: ಬಸವಕಲ್ಯಾಣ ರವರು ತಮ್ಮೂರ ವಿಕಾಸ ತಂದೆ ರಾಜಕುಮಾರ ಸ್ವಾಮಿ ವಯ: 25 ವರ್ಷ, ಜಾತಿ: ಸ್ವಾಮಿ ರವರೊಂದಿಗೆ ಫಿರ್ಯಾದಿಯ ಅಣ್ಣನಾದ ರಾಘವೇಂದ್ರ ಪಾಟೀಲ್ ರವರ ಹಿರೋ ಹೊಂಡಾ ಸ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ನಂ. ಕೆ.-56/ಜೆ-4754 ನೇದ ಮೇಲೆ ಹಿಂದುಗಡೆ ಕುಳಿತುಕೊಂಡು ಸಸ್ತಾಪೂರ ಶಿವಾರದಲ್ಲಿರುವ ಮ್ಮ ಹೊಲಕ್ಕೆ ಹೋಗಿ ನ್ನ ಅಜ್ಜಿ ತಾತಾನಿಗೆ ರೊಟ್ಟಿ ಕೊಟ್ಟು ಮರಳಿ ಸಸ್ತಾಪೂರ ಗ್ರಾಮಕ್ಕೆ ಬರುವಾಗ ಸಸ್ತಾಪೂರ-ಮಿರ್ಜಾಪೂರ ರೋಡಿನ ಮೇಲೆ ಬಾಬುರೆಡ್ಡಿ ರವರ ಹೊಲದ ಹತ್ತಿರ ವಿಕಾಸ ಸ್ವಾಮಿ ಇತನು ಸದರಿ ಮೋಟಾರ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಒಮ್ಮೇಲೆ ಸ್ಕಿಡ್ ಮಾಡಿದ್ದರಿಂದ ಹಿಂದೆ ಕುಳಿತಿರುವ ಫಿರ್ಯಾದಿ ಮತ್ತು ವಿಕಾಸ ಸ್ವಾಮಿ ಇಬ್ಬರು ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದುದ್ದರಿಂದ ಫಿರ್ಯಾದಿಯ ಎಡಗಾಲಿನ ಮೊಳಕಾಲಿನ ಕೆಳಗೆ ಭಾರಿ ಗುಪ್ತಗಾಯವಾಗಿರುತ್ತದೆ, ಮೋಟಾರ ಸೈಕಲ್ ಚಲಾಯಿಸುತ್ತಿದ್ದ ವಿಕಾಸ ಇತನಿಗೆ ಎಡಗೈ ಕಿರು ಬೆರಳಿಗೆ ತರಚಿದಗಾಯವಾಗಿರುತ್ತದೆ, ನಂತರ ವಿಕಾಸ ಸ್ವಾಮಿ ಇತನು ಅಣ್ಣನಾದ ರಾಘವೇಂದ್ರ ಇತನಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಅಣ್ಣ ಮತ್ತು ಮ್ಮೂರ ಶರಣು ತಂದೆ ಬಾಬುರಾವ ಪಾಟೀಲ್ ಇಬ್ಬರು ಅಪಘಾತ ಸ್ಥಳಕ್ಕೆ ಬಂದು 108 ಅಂಬುಲೆನ್ಸಗೆ ಕರೆಯಿಸಿ ಅದರಲ್ಲಿ ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕುರಿತು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 177/2020, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 23-08-2020 ರಂದು ಭಾಲ್ಕಿಯ ಬೀರದೆವ ಗಲ್ಲಿಯಲ್ಲಿರುವ ಕನಕ ಭವನದ ಹತ್ತಿರ ಕೆಲವು ಜನರು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಪರೆಲ ಎಂಬ ನಸೀಬಿನ ಇಸ್ಪೀಟ ಜೂಜಾಟ ಆಡುತ್ತಿದ್ದಾರೆಂದು ಅಮರ ಕುಲ್ಕರ್ಣಿ ಪಿ.ಎಸ್. (ಕಾ.ಸೂ) ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬೀರದೆವ ಗಲ್ಲಿಯಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲು ಕನಕ ಭವನದ ಹತ್ತಿರ ಆರೋಪಿತರಾದ 1) ಬಾಲಾಜಿ ತಂದೆ ದತ್ತು ಮರೂರಕರ, 2) ಸಾಗರ ತಂದೆ ಶಂಕರ ಬಿರಾದಾರ, 3) ನಿತ್ಯಾನಂದ ತಂದೆ ನಾರಾಯಣರಾವ ಹಳ್ಳೆ, 4) ಶಂಕರ ತಂದೆ ಜಗನ್ನಾಥ ದೇವನಾಳೆ 5) ಅಮರ ತಂದೆ ಗುಂಡಪ್ಪಾ ಮೇತ್ರೆ 5 ಜನ ಸಾ: ಬಸವೇಶ್ವರ ಚೌಕ ಹತ್ತಿರ ಭಾಲ್ಕಿ ಹಾಗೂ 6) ರವಿ ತಂದೆ ರಾಜೇಂದ್ರ ತೇಲಂಗ ಸಾ: ದೇವಿ ನಗರ ಭಾಲ್ಕಿ ಇವರೆಲ್ಲರೂ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಪರೆಲ ಎಂಬ ಸಿಬಿನ ಸ್ಪಿ ಜೂಜಾಟ ಆಡುತ್ತಿರುವದನ್ನು ನೋಡಿ ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 2350/- ರೂ ಹಾಗು 52 ಸ್ಪಿ ಎಲೆಗಳು ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಂತಾಕಿ ಪೊಲೀಸ್ ಠಾಣೆ ಅಪರಾಧ ಸಂ. 39/2020, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 23-08-2020 ರಂದು ಕೊಳ್ಳೂರ ಗ್ರಾಮದ ಬೀರಗೊಂಡ ತಂದೆ ಶೆಂಕರಗೊಂಡ ಇರಕರ್ ರವರ ಹೊಟೇಲ್ ಹತ್ತಿರ ಪಕ್ಕದಲ್ಲಿ ಒಬ್ಬ ವ್ಯಕ್ತಿ ಒಂದು ಸಣ್ಣ ಪ್ಲಾಸ್ಟಿಕ ಚೀಲದಲ್ಲಿ ಸರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆಂದು ಮಂಜುನಾಥ ಪಿಎಸ್ಐ ಚಿಂತಾಕಿ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕೊಳ್ಳೂರ ಗ್ರಾಮದ ಬೊಂಮಗೊಂಡೇಶ್ವರ ಚೌಕ ಹತ್ತಿರ ಇರುವ ಹೋಟೆಲ್ ಹತ್ತಿರ ಪಕ್ಕದಲ್ಲಿ ಹೋಗಿ ನೋಡಲಾಗಿ ಬಾತ್ಮಿಯಂತೆ ಅಲ್ಲಿ ಆರೋಪಿ ಬೀರಗೊಂಡ ತಂದೆ ಶಂಕರಗೊಂಡ ಇರಕರ್ ವಯ: 24 ವರ್ಷ, ಜಾತಿ: ಎಸ್.ಟಿ ಗೊಂಡಾ, ಸಾ: ಕೊಳ್ಳೂರ ಗ್ರಾಮ ಇತನುಜ ಒಂದು ಸಣ್ಣ ಪ್ಲಾಸ್ಟಿಕ ಚೀಲದಲ್ಲಿ ಸರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವಾಗ ಪಂಚರ ಸಮಕ್ಷಮದಲ್ಲಿ ಆತನ ಮೇಲೆ ದಾಳಿ ಮಾಡುವಾಗ ಪೊಲೀಸರನ್ನು ನೋಡಿ ಓಡಲು ಪ್ರಯತ್ನಿಸಿದಾಗ ಅವನಿಗೆ ಕೂಡಲೆ ಲ್ಲರೂ ಕೂಡಿ ಹಿಡಿದು ಅವನಿಗೆ ಚೆಕ್ ಮಾಡಲು ಅವನ ಹತ್ತಿರ ಒಂದು ಸಣ್ಣ ಪ್ಲಾಸ್ಟಿಕ ಚೀಲದಲ್ಲಿ ಒರಿಜನಲ್ ಚಾಯಿಸ್ 90 ಎಮ್.ಎಲ್ ವುಳ್ಳ 40 ಸರಾಯಿಯ ಪೌಚಗಳು ಅ.ಕಿ 1405/- ರೂಪಾಯಿ ಹಾಗೂ 06 ಪ್ಲಾಸ್ಟಿಕ್ ಗ್ಲಾಸಗಳು ಹಾಗೂ ಆತನ ಹತ್ತಿರ 200/- ರೂಪಾಯಿ ನಗದು ಹಣ ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ನಂತರ ಆರೋಪಿತನಿಗೆ ಸದರಿ ಸರಾಯಿ ಮಧ್ಯವನ್ನು ಮಾರಾಟ ಮಾಡಲು ಸರಕಾರದಿಂದ ಯಾವುದಾದರು ಅನುಮತಿ ಇದೆಯೇ ಅಂತಾ ಕೇಳಲು ಅವನು ತನ್ನ ಹತ್ತಿರ ಯಾವುದೇ ಲೈಸನ್ಸ, ಅನುಮತಿ ಪತ್ರ ಇಲ್ಲ ಎಂದು ತಿಳಿಸಿರುತ್ತಾನೆ, ನಂತರ ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: