ದಿನಂಪ್ರತಿ ಅಪರಾಧಗಳ
ಮಾಹಿತಿ ದಿನಾಂಕ: 02-09-2020
ನೂತನ ನಗರ ಪೊಲೀಸ್ ಠಾಣೆ ಅಪರಾಧ
ಸಂಖ್ಯೆ
98/2020 ಕಲಂ 379 ಐಪಿಸಿ :-
ದಿನಾಂಕ 01/09/2020 ರಂದು 2015 ಗಂಟೆಗೆ ಫಿರ್ಯಾದಿ ಪ್ರದೀಪಕುಮಾರ ತಂದೆ ಶಶಿಕಾಂತ ವಯ:21 ವರ್ಷ ಜಾತಿ:ಎಸ್.ಸಿ. ಸಮಗಾರ ಉ;ವಿದ್ಯಾರ್ಥಿ ಸಾ/ನಂದಿ ಕಾಲೋನಿ ಬೀದರ.
ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ
ಸಾರಾಂಶವೇನಂದರೆ ಫಿರ್ಯಾದಿಯ ಬಜಾಜ
ಪಲ್ಸಾರ ಎನ್.ಎಸ್.200 ಮೋಟರ ಸೈಕಲ
ನಂ ಕೆ.ಎ.38ಎಕ್ಸ.0708 ನೇದನ್ನು 2020 ನೇ ಸಾಲಿನಲ್ಲಿ
ಖರಿದಿಸಿದ್ದು ಇರುತ್ತದೆ. ಅದನ್ನು
ದಿನಾಂಕ 14/08/2020 ರಂದು ರಾತ್ರಿ 2230
ಗಂಟೆಯ ಸುಮಾರಿಗೆ ಮೊಟರ ಸೈಕಲನ್ನು ನಂದಿ ಕಾಲೋನಿಯ
ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಮಲಗಿ
ಕೊಂಡಿದ್ದು, ದಿನಾಂಕ 15/08/2020 ರಂದು ಮುಂಜಾನೆ 5:30
ಎ.ಎಮ್. ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಬಂದು
ನೋಡಿದಾಗ ಮೊಟರ ಸೈಕಲ ಇರಲಿಲ್ಲ. ಅಕ್ಕಪಕ್ಕದಲ್ಲಿ
ನೋಡಿದರೂ ಎಲ್ಲಿಯೂ ಕಾಣಲಿಲ್ಲ ದಿನಾಂಕ 14/08/2020 ರಂದು ರಾತ್ರಿ 10:30
ಪಿ.ಎಮ್. ಗಂಟೆಯಿಂದ ದಿನಾಂಕ 15/08/2020
ರಂದು ಮುಂಜಾನೆ 5:30 ಎ.ಎಮ. ಗಂಟೆಯ
ಅವಧಿಯಲ್ಲಿ ಯಾರೋ ಅಪರಿಚಿತರು ಕಳುವು ಮಾಡಿಕೊಂಡು
ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಮೇಹಕರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 64/2020 ಕಲಂ 32, 34
ಕೆ.ಇ. ಕಾಯ್ದೆ :-
ದಿನಾಂಕ: 01/09/2020
ರಂದು 1545 ಗಂಟೆಗೆ ಪಿಎಸ್ಐ
ರವರು ಠಾಣೆಯಲ್ಲಿದ್ದಾಗ ಬೊಳೆಗಾಂವ ಗ್ರಾಮದ ಹನುಮಾನ ಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ಪೇಪರ
ಕಾಟೂನದಲ್ಲಿ ಸಾರಾಯಿ ಇಟ್ಟುಕೊಂಡು ಮಾರಾಟಾ ಮಾಡುತ್ತಿದ್ದಾನೆ ಅಂತ ಖಚತಿ ಬಾತ್ಮಿ ಬಂದ ಮೇರೆಗೆ
ಸಿಬ್ಬಂದಿಯೊಂದಿಗೆ ಬೊಳೆಗಾಂವ ಗ್ರಾಮದ ಹನುಮಾನ
ಮಂದಿರ ಹತ್ತಿರ ಹೋಗಿ ನೋಡಿದಾಗ ಮಂದಿರ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ತನ್ನ ಮುಂದೆ ಪೇಪರ ಕಾಟೂನ ಇಟ್ಟುಕೊಂಡು ಸರಾಯಿ ಮಾರಾಟ ಮಾಡುತ್ತ ನಿಂತಿದ್ದನು.
ಸದರಿ ವ್ಯಕ್ತಿ ಸಾರಾಯಿ ಮಾರಾಟ ಮಾಡುವುದ್ದನ್ನು ಖಚಿತ ಪಡಿಸಿಕೊಂಡು ಅವನ ಮೇಲೆ 1635 ಗಂಟೆಗೆ ಒಮ್ಮೆಲೆ ದಾಳಿ ಮಾಡಿ ಅವನ ಹೆಸರು ಮತ್ತು ವಿಳಾಸ ವಿಚಾರಿಸಿದಾಗ ಅವನು ತನ್ನ
ಹೆಸರು ಸೌದಾಗರ ತಂದೆ ನಿಂಗಪ್ಪ ಮೇತ್ರೆ ವಯ: 40 ವರ್ಷ ಜಾ: ಕುರುಬ ಉ: ಕೂಲಿ ಕೆಲಸ ಸಾ: ಬೊಳೆಗಾಂವ ಅಂತ ತಿಳಿಸಿರುತ್ತಾನೆ. ಅವನ ಮುಂದೆ ಇರುವ ಸಾರಾಯಿಯನ್ನು ನಮ್ಮ ಪಂಚರ ಸಮಕ್ಷಮ
ಪರಿಶೀಲಿಸಿದಾಗ ಒಂದು ಕಾಟೂನದಲ್ಲಿ 1) 90
ಎಮ್. ಎಲ್ ಸಾಮಥ್ರ್ಯವುಳ್ಳ ಒಟ್ಟು 116
ಯು.ಎಸ. ವಿಸ್ಕಿ ಪ್ಲಾಸ್ಟಿಕ ಬಾಟಲಗಳುಳ್ಳ ಪೇಪರ ಕಾಟೂನ ಅ: ಕಿ: 4060/- ಇನ್ನೊಂದು
ಕಾಟೂನದಲ್ಲಿ 2) 180 ಎಮ್.ಎಲ್.
ಸಾಮಥ್ರ್ಯವುಳ್ಳ 19 ಒಲ್ಡ ಟವರಿನ
ಟೆಟ್ರಾ ಪಾಕೆಟಗಳು ಅ: ಕಿ 1634/- ಹೀಗೆ
ಒಟ್ಟು 5694/- ಹಾಗೂ ಅವನ ಅಂಗ
ಜಡ್ತಿ ಮಾಡಿ ಅವನ ಬಳಿವಿದ್ದ ರೂ. 1710/- ನಗದು
ಹಣ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಮನ್ನಾಏಖೆಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 74/2020 ಕಲಂ 32, 34 ಕೆ.ಇ. ಕಾಯ್ದೆ :-
ದಿನಾಂಕ 01/09/2020 ರಂದು
0800 ಗಂಟೆಗೆ ಪಿಎಸ್.ಐ. ರವರು ಠಾಣೆಯಲ್ಲಿದ್ದಾಗ
ಖಚಿತ ಬಾತ್ಮಿ ಬಂದಿದ್ದೆನೆಂದರೆ, ಬನ್ನಳ್ಳಿ ಗ್ರಾಮದ ಕನಕದಾಸ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಮೇಲೆ ಒಂದು ಬಿಳಿ ಚೀಲದಲ್ಲಿ ವಿಸ್ಕಿ ಬಾಟಲಗಳು ಇಟ್ಟು ಸಾರ್ವಜನಿಕರಿಂದ ಹಣ ಪಡೆದು ಮಾರಾಟ ಮಾಡುತ್ತೀದ್ದಾನೆ. ಅಂತಾ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿದಾದ
ವಿಸ್ಕಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಸಮವಸ್ತ್ರದಲ್ಲಿದ್ದ ಪೊಲೀಸರಿಗೆ ನೋಡಿ ಆ ವ್ಯಕ್ತಿ ಹಾಗು ಖರೀದಿ ಮಾಡುತ್ತಿದ್ದ ಸಾರ್ವಜನಿಕರು ಓಡಿ ಹೊದರು ಅಲ್ಲಿಯೇ ಬಿಟ್ಟು ಹೊದ ಚಿಲದಲ್ಲಿ ಏನು ಇದೆ ಅಂತಾ ಪಂಚರ ಸಮಕ್ಷಮದಲ್ಲಿ ಅವುಗಳನ್ನು ನೋಡಲು ಅದರಲ್ಲಿ 1) ಓಲ್ಡ ಟಾವರೀನ
180 ಎಮ್ ಎಲ್ ಕಾಗದ ಪುಟದಿಂದ ತೈಯಾರಿಸಿದ 03 ವಿಸ್ಕಿ ಬಾಟಲಗಳು
ಇದ್ದು ಅವುಗಳ ಕಿಮ್ಮತ್ತು 261=00 ರೂಪಾಯಿ ಹಾಗು
2) ಯು.ಎಸ್ ವಿಸ್ಕಿ 90 ಎಮ್ ಎಲ್ ವುಳ್ಳ 31 ಬಾಟಲಗಳು
ಇದ್ದು ಇವುಗಳ ಕಿಮ್ಮತ್ತು 1085=00 ರೂ ಹೀಗೆ ಒಟ್ಟು
1346=00 ರೂ ಬೆಲೆ ಬಾಳುವ ವಿಸ್ಕಿ ಇದ್ದು ಈ ವಿಸ್ಕಿ ಬಾಟಲಗಳನ್ನು ಮಾರಾಟ ಮಾಡುತ್ತಿದ್ದ ಓಡಿ ಹೊದ ವ್ಯಕ್ತಿಯ ಹೆಸರು ಮತ್ತು ವಿಳಾಸ ಕನಕದಾಸ
ಚೌಕ ಹತ್ತಿರ ನಿಂತ ರಘುನಾಥ ತಂದೆ ತಿಪ್ಪಾರಡ್ಡಿ ಸಾ: ಬನ್ನಳ್ಳಿ ಇವರಿಗೆ ಕೇಳಿ ತೀಳಿದುಕೋಳಲು ಸದರಿಯವನ ಹೆಸರು ಈರಪ್ಪಾ ತಂದೆ ಮಾಣೀಕ ರೇಕುಳಗಿ ವಯ 41 ವರ್ಷ ಜಾತಿ
ಕಬ್ಬಲೀಗ ಉ: ಕೂಲಿ ಕೆಲಸ ಸಾ: ಬನ್ನಳ್ಳಿ ಅಂತಾ ಗೊತ್ತಾಗಿದ್ದು ಆತನ
ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
No comments:
Post a Comment