Police Bhavan Kalaburagi

Police Bhavan Kalaburagi

Sunday, September 6, 2020

BIDAR DISTRICT DAILY CRIME UPDATE 06-09-2020

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 06-09-2020

 

ಹುಲಸೂರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 12/2020ಕ, ಕಲಂ. 174 ಸಿ.ಆರ್.ಪಿ.ಸಿ :- 

ಫಿರ್ಯಾದಿ ಜಯಶ್ರೀ ಗಂಡ ಸತೀಷ ಶಾಹು ವಯ: 43 ವರ್ಷ, ಜಾತಿ: ಕುರುಬ, ಸಾ: ಹಾಲಹಳ್ಳಿ, ತಾ: ಹುಲಸೂರ ರವರ ಗಂಡನಾದ ಸತೀಷ ಈತನು ಒಕ್ಕಲುತನಕ್ಕಾಗಿ 1,95,000/- ರೂ. ಗಳನ್ನು ಸಾಲ ಮಾಡಿಕೊಂಡಿದ್ದು, ಸಾಲವನ್ನು ತೀರಿಸಲಾಗದೆ ಅದೇ ಚಿಂತೆಯಲ್ಲಿ ದಿನಾಂಕ 05-09-2020 ರಂದು 0800 ಗಂಟೆಯಿಂದ 1400 ಗಂಟೆಯ ಅವಧಿಯಲ್ಲಿ ಮ್ಮೂರ ಶಿವಾರದ ಹೊಲ ಸರ್ವೆ ನಂ. 62 ನೇದರಲ್ಲಿನ ಬಂದಾರಿಯ ಮೇಲಿನ ಮುತ್ತುಲ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ತನ್ನ ಗಂಡನ ಸಾವಿನಲ್ಲಿ ಯಾರ ಮೇಲೂ ಯಾವುದೇ ರೀತಿಯ ಸಂಶಯವಿರುವದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

 

ಮಾರ್ಕೇಟ್ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 53/2020, ಕಲಂ. 379 ಐಪಿಸಿ :-

ದಿನಾಂಕ 29-07-2020 ರಂದು 1230 ಗಂಟೆಯ ಸುಮಾರಿಗೆ ಫಿರ್ಯಾದಿ ಸನಾ ಉರ್-ರಹಮಾನ ತಂದೆ ಎಮ.ಡಿ ಗುಲಾಮ ಜಿಲಾನಿ, ಸಾ: ಮನಿಯಾರ ತಾಲೀಮ ಬೀದರ ರವರು ಬೀದರ ನಗರ ಸಭೆಯ ಕಛೇರಿಯ ಆವರಣದಲ್ಲಿ ತನ್ನ ಹೊಂಡಾ ಶೈನ್ ದ್ವೀಚಕ್ರ ವಾಹನ ಸಂ. ಕೆಎ-38/ವಿ-3177, ಚಾಸಿಸ್ ನಂ. ME4JC65AFJT093543, ಇಂಜಿನ್ ನಂ. JC65ET2146040,ಅ.ಕಿ 30,000/- ನೇದನ್ನು ನಿಲ್ಲಿಸಿ ಕಚೇರಿಯಲ್ಲಿ ಹೋಗಿ ಮರಳಿ 1300 ಗಂಟೆಯ ಸುಮಾರಿಗೆ ಬಂದು ನೋಡಲು ಸದರಿ ವಾಹನ ಇರಲಿಲ್ಲ, ಸದರಿ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 135/2020, ಕಲಂ. 379 ಐಪಿಸಿ :-

ದಿನಾಂಕ 03-09-2020 ರಂದು 2030 ಗಂಟೆಯಿಂದ ದಿನಾಂಕ 04-09-2020 ರಂದು 0600 ಗಂಟೆಯ ಅವಧಿಯಲ್ಲಿ ಫಿರ್ಯಾದಿ ಹಣಮಂತ ತಂದೆ ಶಂಕರ ಚಿದ್ರಿ ವಯ: 36 ವರ್ಷ, ಜಾತಿ: ಲಿಂಗಾಯತ, ಸಾ: ಕಾಡವಾದ ಗ್ರಾಮ, ಸದ್ಯ: ಶಕ್ತಿ ನಗರ ಅಮಲಾಪುರ, ಬೀದರ ರವರು ತನ್ನ ದ್ವಿಚಕ್ರ ವಾಹನ ಸಂ. KA38-V/1293, ENGINE No. DHYWJA23991, CHASSIS No. MD2A11CY5JWA22449 ನೇದನ್ನು ಫಿರ್ಯಾದಿಯವರು ತನ್ನ ಮನೆಯ ಮುಂದೆ ನಿಲ್ಲಿಸಿರುವುದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 05-09-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 123/2020, ಕಲಂ. 457, 308 ಐಪಿಸಿ :-

ದಿನಾಂಕ 04-09-2020 ರಂದು 2130 ಗಂಟೆಯಿಂದ ದಿನಾಂಕ 05-09-2020 ರಂದು 0900 ಗಂಟೆಯ ಅವಧೀಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಸಂತೋಷ ತಂದೆ ಬಾಬುರಾವ ಪಾಟೀಲ ವಯ: 40 ವರ್ಷ, ಜಾತಿ: ಲಿಂಗಾಯತ, ಸಾ: ವಾಂಜ್ರಿ ಹುಮನಾಬಾದ ರವರ ಅಂಗಡಿಯ ಹಿಂದಿನ ತಗಡ ಕಟ್ ಮಾಡಿ ಅಂಗಡಿಯಲ್ಲಿ ಪ್ರವೇಶ ಮಾಡಿ ಅಂಗಡಿಯಲ್ಲಿರುವ 1) 2 ಕೀ ಪ್ಯಾಡ ಮೈಕ್ರೋ ಮ್ಯಾಕ್ಸ ಮೋಬೈಲಗಳು ಅ.ಕಿ 2000/- ರೂ., 2) 2 ಉಷಾ ಮೂಬೈಲ ಅ.ಕಿ 2000/- ರೂ., 3) 10 ಟಿ.ಎನ.ಬಿ ಮೋಬೈಲಗಳು ಅ.ಕಿ 8000/- ರೂ., 4) ಒಂದು ಎಸರ್ ಲ್ಯಾಪಟಾಪ ಅ.ಕಿ 5000/- ರೂ., 6) ಮೋಬೈಲ ಬಿಡಿ ಭಾಗಗಳು ಒಟ್ಟು ಅ.ಕಿ 5000/-ರೂ. ಹಾಗೂ 7) ಒಂದು ಡೆಮೋ ಏರಟೇಲ ಸೀಮ್ 9741866498, ಡೆಮೋ ಸಿಮ್ ಬಿ.ಎಸ್.ಎನ್.ಎಲ್ 9448201004 ನೇದ್ದವುಗಳು ಒಟ್ಟು ಅ.ಕಿ 22,000/- ರೂಪಾಯಿ ಬೆಲೆಬಾಳುವುದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನಗರ ಪೊಲೀಸ್ ಠಾಣೆ ಅಪರಾಧ ಸಂ. 86/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 05-09-2020 ರಂದು ಬೀದರ ನಗರದ ಬಾಗವಾನ ಗಲ್ಲಿ ಕ್ರಾಸ ಹತ್ತಿರ ರಾವ ತಾಲೀಮ ಓಣಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೊಗಿ ಬರುವ ಜನರಿಗೆ ಕರೆದು ತನ್ನ ಹತ್ತಿರ ಮಟಕಾ ಜೂಜಾಟ ಆಡಿದರೆ ಒಂದು ರೂಪಾಯಿಗೆ 90/- ರೂ. ಕೊಡುತ್ತೇನೆ ಅಂತ ಕರೆದು ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಚೀಟಿ ಬರೆದುಕೊಡುತ್ತಿದ್ದಾನೆಂದು ಸಿದ್ದಲಿಂಗ ಪಿ.ಎಸ್. (ಕಾಸು) ಬೀದರ ನಗರ ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಾಗವಾನ ಗಲ್ಲಿ ಕ್ರಾಸ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಆರೋಪಿ ಎಂ.ಡಿ ಆಬೀದ ತಂದೆ ಎಂ.ಶಿರಾಜ ವಯ: 26 ವರ್ಷ, ಜಾತಿ: ಮುಸ್ಲಿಂ, ಸಾ: ಬಾಗವಾನ ಗಲ್ಲಿ ಬೀದರ ಇತನು ಸಾರ್ವಜನಿಕ ಸ್ಥಳದಲ್ಲಿ ನಿಂತು ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಚೀಟಿ ಬರೆದು ಕೊಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಗೆ ಹಿಡಿದು ಆತನಿಂದ ಮಟಕಾ ಜೂಜಾಟದಲ್ಲಿ ತೊಡಗಿಸಿದ ನಗದು ಹಣ 1050/- ರೂ ಮತ್ತು ಒಂದು ಬಾಲ ಪೆನ್ನು, ಎರಡು ಮಟಕಾ ಚೀಟಿಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 136/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 05-09-2020 ರಂದು ಬೀದರ ನಗರದ ಮನ್ನಳಿ ರೋಡಿನ ಬದಿಯಲ್ಲಿ ಸಿದ್ದಾರೋಡ ಮಠದ ಹತ್ತಿರ ಮಟಕಾ ಚೀಟಿಗಳು ಬರೆದುಕೊಳ್ಳುತ್ತಿದ್ದಾರೆಂದು ಮಂಜನಗೌಡ ಪಾಟೀಲ್ ಪಿ.ಎಸ್. (ಕಾಸು-1) ಗಾಂಧಿಗಂಜ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬತರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬೀದರ ನಗರದ ಸಿದ್ದಾರೂಡ ಮಠದ ಹತ್ತಿರ ಹೊಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಆರೋಪಿತರಾದ 1) ಪಠಾಣ ಮಾಜೀದ ತಂದೆ ಪಠಾಣ ಜಬ್ಬರಖಾನ ವಯ: 30 ವರ್ಷ, ಸಾ: ಖಿಲ್ಲಾ ಗಲ್ಲಿ ಉದಗೀರ 2) ಮಹ್ಮದ ಮಜರ ತಂದೆ ರಫಿಕ ಅಹ್ಮದ ವಯ: 26 ವರ್ಷ, ಸಾ: ಶಹಾಗಂಜ ಬೀದರ ಇವರಿಬ್ಬರ ಮೇಲೆ ದಾಳಿ ಮಾಡಿ ವಶಕ್ಕೆ ಪಡೆದುಕೊಂಡು ಪಂಚರ ಸಮಕ್ಷಮ ಜಡ್ತಿ ಮಾಡಿ ನೋಡಲು ಅವರ ಹತ್ತಿರ ನಗದು ಹಣ 4320/- ರೂ., 10 ಮಟಕಾ ಚೀಟಿಗಳು ಹಾಗೂ 2 ಬಾಲ ಪೆನ ಸಿಕ್ಕಿದ್ದು ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: