Police Bhavan Kalaburagi

Police Bhavan Kalaburagi

Tuesday, September 15, 2020

KALABURAGI DISTRICT CRIME REPORTED

 ಮಹಿಳೆ ಮೇಲೆ ಹಲ್ಲೆ ಪ್ರಕರಣ :-

ಅಫಜಲಪೂರ ಪೊಲೀಸ ಠಾಣೆ 

            ದಿನಾಂಕ 14-09-2020 ರಂದು 9:00 ಎ.ಎಮ್ ಕ್ಕೆ ಫೀರ್ಯಾದಿದಾರಳಾದ ಶ್ರೀಮತಿ ಸುರೇಖಾ ಗಂಡ ಗುರುಬಸಪ್ಪ ಅಜಗೊಂಡ ಸಾ: ಮಣೂರ ಇವರು ಠಾಣೆಗೆ ಹಾಜರಾಗಿ ಅರ್ಜಿ ಸಲ್ಲಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ ನಾವು ಸೊಲ್ಲಾರದಲ್ಲಿ ಇದ್ದಾಗ ನನ್ನ ಮೈದುನನೆ ನಮ್ಮ ಪಾಲಿಗೆ ಬಂದ ಆಸ್ತಿಯನ್ನು ಉಪಯೋಗಿಸುತ್ತಿದ್ದನು ಈಗ ನಾವು ಮಣೂರಕ್ಕೆ ಬಂದಿದ್ದರಿಂದ ನಮ್ಮ ಆಸ್ತಿಯನ್ನು ನಾವು ಪಡೆದುಕೊಂಡು ಸಾಗುವಳಿ ಮಾಡುತ್ತಿದ್ದರಿಂದ ನಮ್ಮ ಮೈದುನ ಸಿದ್ದರಾಮನು ನಮ್ಮ ಮೇಲೆ ಹಗೆತನ ಸಾಧಿಸಿ ತಕರಾರು ಮಾಡಿಕೊಂಡು ಇನ್ನು ನಮಗೆ ಹೆಚ್ಚಿನ ಆಸ್ತಿ ಕೊಡು ಅಂತಾ ಆಗಾಗ ಜಗಳ ಮಾಡುತ್ತಿರುತ್ತಾನೆ.  ಹೀಗಿದ್ದು ದಿನಾಂಕ 12-09-2020 ರಂದು ನಾನು ಮತ್ತು ನನ್ನ ಇಬ್ಬರು ಹೆಣ್ಣು ಮಕ್ಕಳಾದ ಪ್ರೀಯಾ ಮತ್ತು ಶ್ರದ್ದಾ ಮನೆಯ ಮುಂದೆ ಮಾತನಾಡುತ್ತಾ ನಿಂತಾಗ ನನ್ನ ಮೈದುನನಾದ ಸಿದ್ದಾರಾಮನ ಮಕ್ಕಳಾದ ರಾಹುಲ್ ಮತ್ತು ರೋಹಿತ್ ಮೂರು ಜನರು ಕೂಡಿಕೊಂಡು ಬಂದವರೆ ಅದರಲ್ಲಿ ನನ್ನ ಮೈದುನ ಬಂದು ನನಗೆ ಏ ರಂಡಿ ಎಲ್ಲಾ ನಿನ್ನಿಂದಲೇ ಆಗಿದೆ ನಮ್ಮ ಅಣ್ಣನ ತಲೆ ತುಂಬಿ ನಮ್ಮ ವಿರುದ್ದ ಜಗಳ ಮಾಡಸುತ್ತಿದ್ದಿಯಾ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ಆಗ ನಾನು ಸುಮ್ಮನೆ ನನಗೆ ಯಾಕೆ ಬೈಯುತ್ತಿದ್ದಿ ಅಂತಾ ಕೇಳಿದಕ್ಕೆ ನನ್ನ ಮೈದುನನು ನನಗೆ ತನ್ನ ಕಾಲಿನಲ್ಲಿ ಇದ್ದ ಚಪ್ಪಲಿಯಿಂದ ನನ್ನ ಮುಖಕ್ಕೆ ಹೊಡೆದನು ಆಗ ನನ್ನ ಎರಡು ಹೆಣ್ಣು ಮಕ್ಕಳು ಬಿಡಿಸಲು ಬಂದಾಗ ರಾಹುಲ್ ಇತನು ನನ್ನ ಮಗಳಾದ ಪ್ರೀಯಾಳ ಮೈ ಮೇಲಿನ ಬಟ್ಟೆ ಹರಿದು ಕುತ್ತಿಗೆ ಹಿಡೆದು ನಿನ್ನ ಸಾಯಿಸೇ ಬಿಡುತ್ತೇನೆ ಅಂತಾ ಅಂದನು ಅಷ್ಟರಲ್ಲಿ ದೇವಸ್ಥಾನಕ್ಕೆ ಹೋಗಿದ್ದ ನನ್ನ ಗಂಡನು ಓಡಿ ಬಂದು ಜಗಳ ಬಿಡಿಸಲು ಬಂದಾಗ ರಾಹುಲ್ ನು  ನನ್ನ ಗಂಡನಿಗೆ ಬಲಗಡೆ ಕಪಾಳಕ್ಕೆ ಜೋರಾಗಿ ತನ್ನ ಕೈಯಿಂದ ಹೊಡೆದಿರುತ್ತಾನೆ. ಮತ್ತು ನನ್ನ ಮೈದುನನು ನನಗೆ ಸೀರೆ ಹಿಡೆದು ಎಳೆದಾಡಿ ನನ್ನ ಮೂಗಿನ ಮೇಲೆ ಹಾಗೂ ತುಟೆಯ ಮೇಲೆ ಹೊಡೆದು ರಕ್ತಗಾಯ ಗೊಳಿಸಿರುತ್ತಾನೆ. ನನಗೆ ಮತ್ತು ನನ್ನ ಗಂಡ ಹಾಗೂ ಮಕ್ಕಳಿಗೆ ಹೊಡೆ ಬಡೆ ಮಾಡಿ ಅವಾಚ್ಯವಾಗಿ ಬೈದು ಜೀವ ಬೇದರಿಕೆ ಹಾಕಿ ನನ್ನ ಮಾನಕ್ಕೆ ಕುಂದುಂಟು ಮಾಡಿದ ನನ್ನ ಮೈದುನ ಹಾಗೂ ಅವನ ಮಕ್ಕಳ ಮೇಲೆ ಸೂಕ್ತ ಕಾನೂನು ಕ್ರಮ ಜರಿಗಿಸಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ  ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಹಲ್ಲೆ ಪ್ರಕರಣ :-

ಅಫಜಲಪೂರ ಪೊಲೀಸ ಠಾಣೆ 

     ದಿನಾಂಕ: 14-09-2020 ರಂದು 5-30 ಪಿಎಮ್ ಕ್ಕೆ ಪಿರ್ಯಾದಿದಾರಳಾದ ಶ್ರೀಮತಿ ಪುತಳಾಬಾಯಿ ಗಂಡ ಅರ್ಜುನ ರಾಠೋಡ ಸಾ|| ಅಳ್ಳಗಿ ತಾಂಡಾ ಮಾಶಾಳ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ಅರ್ಜಿ ಸಲ್ಲಿಸಿದ್ದು ಸದರಿ ಅರ್ಜಿ ಸಾರಾಂಶವೆನೆಂದರೆ, ನನ್ನ ಮೈದುನನಾದ ಕಿಶನ ತಂದೆ ವಾಲು ರಾಠೋಡ ಇತನು ನನ್ನ ಗಂಡನೊಂದಿಗೆ ನನಗೆ  ಇನ್ನೂ ಹೊಲ ಬರುತ್ತದೆ ಅಂತಾ ಬಂದಾರಿಯ ಸಂಭಂಧ ನಮ್ಮೊಂದಿಗೆ ತಕರಾರು ಮಾಡಿತ್ತಾ ಬಂದಿರುತ್ತಾನೆ. ಹೀಗಿದ್ದು ದಿನಾಂಕ: 12-09-2020 ರಂದು ರಾತ್ರಿ 10-30 ಪಿಎಮ್ ಸುಮಾರಿಗೆ ಮೂತ್ರ ವಿಸರ್ಜನೆ ಮಾಡಲು ನಮ್ಮ ಮನೆಯ ಮುಂದಿನ ಖುಲ್ಲಾ ಜಾಗದಲ್ಲಿ ಹೋಗಿದ್ದಾಗ ನನ್ನ ಮೈದುನನು ಮತ್ತು ನೆಗೆಣಿಯಾದ ಅನೀತಾ ಇಬ್ಬರೂ ಕೂಡಿಕೊಂಡು ನನ್ನ ಹತ್ತಿರ ಬಂದು ಅದರಲ್ಲಿ ಅನೀತಾ ಇವಳು ಏ ರಂಡಿ ನೀನು ಯಾಕೆ ಇಲ್ಲಿ ಏಕಿ ಮಾಡುಕತ್ತಿ ಅಂತಾ ಬೈಯುತ್ತಿದ್ದಾಗ ಕಿಶನ ಇತನು ಈ ರಂಡಿದು ಬಾಳ ಆಗ್ಯಾದ ತಡಿ ಅಂತಾ ತನ್ನ ಹತ್ತಿರ ವಿದ್ದ ಚಾಕುವಿನಿಂದ ನನಗೆ ಚುಚ್ಚಲು ಬಂದಾಗ ಆ ಚಾಕು ನನ್ನ ಬಲಗೈಗೆ ಹತ್ತಿ ರಕ್ತಗಾಯವಾಗಿರುತ್ತದೆ. ಆಗ ನಾನು ಜೋರಾಗಿ ಚೀರಿದ್ದರಿಂದ  ನನ್ನ ಗಂಡ ಮತ್ತು ನನ್ನ ಮಗನಾದ ಗೊವಿಂದ ರವರು ಬಂದಾಗ ಮತ್ತು ನಮ್ಮ ಓಣಿಯಲ್ಲಿನ ಜನರು ಬಂದಾಗ ಬಿಟ್ಟು ಓಡಿ ಹೋಗಿರುತ್ತಾರೆ. ಆಗ ನನ್ನ ಗಂಡ ಮತ್ತು ನನ್ನ ಮಗ ಕೂಡಿಕೊಂಡು ನನಗೆ ಅಫಜಲಪೂರದ ದವಾಖಾನೆಗೆ ತಂದು ಸೇರಿಕೆ ಮಾಡಿ ಉಪಚಾರ ಕೋಡಿಸಿರುತ್ತಾರೆ ಈ ‍ಘಟನೆ ಬಗ್ಗೆ ನಾನು ನನ್ನ ಗಂಡ ಮತ್ತು ಮಗ ಚರ್ಚಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಕೊಡುತ್ತಿದ್ದು ಕಾರಣ ನನ್ನ ಮೈದುನನಾದ ಕೀಶನ ಮತ್ತು ಆತನ ಹೆಂಡತಿಯಾದ ಅನೀತಾರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ  ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ

ರಸ್ತೆ ಅಪಘಾತ ಪ್ರಕರಣ ಮರಣಾಂತಿಕ:-

ಮಾಡಬೂಳ ಪೊಲೀಸ ಠಾಣೆ 

             ದಿನಾಂಕ:14/09/2020 ರಂದು 00-15 ಎ.ಎಮ್.ಕ್ಕೆ ಕಲಬುರಗಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹಾಜರಿದ್ದ ಮೃತಳ ಗಂಡನಾದ ಮೋನಪ್ಪ ತಂದೆ ಸಾಯಿಬಣ್ಣ ಜಮಾದಾರ ಇವರು ನೀಡಿದ ದೂರಿನ ಸಾರಾಂಶವೆನೆಂದರೆ, ನಾನು ಬೀದರ ಜಿಲ್ಲೆಯ ನಿಡವಂಚಿ ಗ್ರಾಮದವನಿದ್ದು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 13/09/2020 ರಂದು ಬೆಂಗಳೂರಿನಿಂದ ತನ್ನ ಹೆಂಡತಿಯ ತವರು ಮನೆಯಾದ ಕಣಸೂರ ಗ್ರಾಮಕ್ಕೆ ಬಂದು ಹೆಂಡತಿ ಮಕ್ಕಳೊಂದಿಗೆ ಮಾತನಾಡಿಸಿಕೊಂಡು ಸಾಯಂಕಾಲ ಬೆಂಗಳೂರಿಗೆ ಹೋಗುವ ಸಂಬಂದ 6-00 ಪಿ.ಎಂ ಕ್ಕೆ ಕಣಸೂರದಿಂದ ಕಲಬುರಗಿಯವರೆಗೆ ಕಳುಹಿಸಲು ತನ್ನ ಹೆಂಡತಿ ಮತ್ತು ನಮ್ಮ ಸಂಬಂಧಿ ವೈಜನಾಥ ಇವರು ಮೋಟರ ಸೈಕಲ ನಂಬರ ಕೆ.ಎ 05 ಕೆ.ವ್ಹಿ-7512 ನೇದ್ದರ ಮೇಲೆ ನಾನು ಮತ್ತು ನಮ್ಮ ಮಾವ ಶಿವಪ್ಪ ಇನ್ನೊಂದು ಮೋಟರ ಸೈಕಲ ಮೇಲೆ ಕಲಬುರಗಿಗೆ ಬರುತ್ತಿರುವಾಗ ವೈಜನಾಥ ಇತನ ಚಲಾಯಿಸುತ್ತಿದ್ದ ಮೋಟರ ಸೈಕಲ ಮುಂದೆ ಇದ್ದು ನಮ್ಮ ಮೋಟರ ಸೈಕಲ ಸ್ವಲ್ಪ ಅಂತರದಲ್ಲಿ ಹಿಂದೆ ಇದ್ದು ನಾವು ಕೋರವಾರ ದಾಟಿ ವಚ್ಚಾ ಗ್ರಾಮ ಇನ್ನು ಸ್ವಲ್ಪ ದೂರ ಇರುವಾಗ ವೈಜನಾಥನು ತನ್ನ ಮೋಟರ ಸೈಕಲನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ಓಡಿಸುತ್ತಿರುವಾಗ ಎದುರುಗಡೆಯಿಂದ ಒಂದು ವಾಹನ ಬರುತ್ತಿರುವುದು ಕಂಡು ವೈಜನಾಥನು ತನ್ನ ವಶದಲ್ಲಿದ್ದ ಮೋಟರ ಸೈಕಲ ಒಮ್ಮೇಲೆ ರೋಡಿನ ಎಡ ಬದಿಗೆ ತೆಗೆದುಕೊಂಡಾಗ ಮೋಟರ ಸೈಕಲ ಸ್ಕಿಡ ಆಗಿ ಮೋಟರ ಸೈಕಲ ಸಮೇತ ಬಿದ್ದರು ಆಗ ನಾವು ಗಾಬರಿಯಾಗಿ ಏನಾಯಿತು ಅಂತಾ ಹೋಗಿ ನೋಡಲಾಗಿ ನನ್ನ ಹೆಂಡತಿಯ ತಲೆಗೆ ಭಾರಿ ಗುಪ್ತ ಗಾಯವಾಗಿ ಕಿವಿಯಿಂದ ಮತ್ತು ಮೂಗಿನಿಂದ ರಕ್ತ ಸೋರುತ್ತಿದ್ದು ಅವಳು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ನಾವು ಕೂಡಲೇ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿಯ ಯುನೈಟೇಡ ಆಸ್ಪತ್ರೆಗೆ ತಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿದ್ದು ಕಾರಣ ಮೋಟರ ಸೈಕಲ ನಂಬರ ಕೆ.ಎ 05 ಕೆ.ವ್ಹಿ-7512 ನೇದ್ದರ ಸವಾರ ವೈಜನಾಥ ತಂದೆ ಪ್ರಭು ಸಾ:ಕಣಸೂರ ಇತನ ಮೇಲೆ ಕಾನೂನಿನ ರೀತಿ ಕ್ರಮ ಜರುಗಿಸಬೇಕು ಅಂತಾ ವಗೈರೆಯಾಗಿ ನೀಡಿರುವ ದೂರಿನ ಸಾರಾಂಶದ ಮೇಲಿಂದ ಮಾಡಬೂಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

No comments: