ಅಕ್ರಮ ಗಾಂಜಾ ಜಪ್ತಿ:-
ಆಳಂದ ಪೊಲೀಸ ಠಾಣೆ
ದಿನಾಂಕ: 16/09/2020 ರಂದು 11.00 ಎ ಎಮ್ ಕ್ಕೆ ಮಾನ್ಯ ಮಲ್ಲಿಕಾರ್ಜುನ ಸಾಲಿ ಡಿ.ವೈ.ಎಸ್.ಪಿ ಆಳಂದ ಉಪ ವಿಭಾಗ ರವರು ಖಾದ್ದಾಗಿ ಠಾಣೆಗೆ ಹಾಜರಾಗಿ ಒಂದು ಜ್ಞಾಪನ ಪತ್ರದೊಂದಿಗೆ ಮುದ್ದೆಮಾಲು ಮತ್ತು ಜಪ್ತಿ ಪಂಚನಾಮೆಯೊಂದಿಗೆ ಒಬ್ಬ ಅಪಾಧಿತನನ್ನು ತಂದು ಹಾಜ ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ಬಸಣ್ಣಾ ತಂದೆ ನಿಂಗಪ್ಪಾ ಖೇಡ್ಲೆ ಇತನು ತನ್ನ ಬಾಲಖೇಡ ಸೀಮಾಂತರದ ಸರ್ವೇ ನಂ 44 ನೆದ್ದರಲ್ಲಿ ಗಾಂಜಾ ಬೆಳೆದು ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಮಾರಾಟ ಮಾಡುವ ಸಲುವಾಗಿ ಗಾಂಜಾ ಗಿಡಗಳನ್ನು ಬೆಳೆಸಿರುತ್ತಾನೆ ಮತ್ತು ಸದ್ಯ ಆತನು ತನ್ನ ಹೊಲದಲ್ಲಿದ್ದಾನೆ ಎಂದು ಮಾಹಿತಿ ಮೇರೆಗೆ ನಾನು ಈ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಅವರ ಮಾರ್ಗದರ್ಶನದಲ್ಲಿ ಮಾಹಾಂತೇಶ ಜಿ. ಪಾಟೀಲ್ ಪಿ.ಎಸ್.ಐ ಆಳಂದ ಪೊಲೀಸ ಠಾಣೆ ಹಾಗೂ ಆಳಂದ ಪೊಲೀಸ್ ಠಾಣೆ ಸಿಬ್ಬಂದಿಯರಾದ ಸಿದ್ದರಾಮ ಎಚ್ ಸಿ 149, ಮಹಿಬೂಬ್ ಶೇಖ್ ಸಿಪಿಸಿ 681, ರತನ್ ಸಿಪಿಸಿ 521 ಹಾಗೂ ನಮ್ಮ ಜೀಪ್ ಚಾಲಕ ಬೀರಣ್ಣಾ ಎ.ಹೆಚ್.ಸಿ 106 ರವರನ್ನು ಹಾಗೂ ಪತ್ರಾಂಕಿತ ಅಧೀಕಾರಿಗಳಾದ ಶ್ರೀ ದಯಾನಂದ ಪಾಟೀಲ್ ತಹಸೀಲ್ದಾರರು ಹಾಗೂ ತಾಲೂಕಾ ದಂಡಾಧೀಕಾರಿಗಳು ಆಳಂದ ರವರಿಗೆ ವಿಷಯ ತಿಳಿಸಿ ಬರಮಾಡಿಕೊಂಡು ಸದರಿ ಗಾಂಜಾ ಬೆಳೆದ ಸ್ಥಳದಲ್ಲಿ ದಾಳಿ ಕಾಲಕ್ಕೆ ಹಾಜರಿರಲು ಕೋರಿಕೊಂಡು ಮತ್ತು ಉಳಿದ ಸಿಬ್ಬಂದಿ ಜನರಿಗೆ ದಾಳಿ ಮಾಡಲು ನಡೆಯಿರಿ ಅಂತಾ ತಿಳಿಸಿ ಅವರೆಲ್ಲರನ್ನು ಕರೆದುಕೊಂಡು ಬಾಲಖೇಡ ಗ್ರಾಮಕ್ಕೆ ತಲುಪಿ ಇಬ್ಬರು ಪಂಚ ಜನರನ್ಮ್ನ ಕರೆದು ವಿಷಯ ತಿಳಿಸಿ ಎಲ್ಲರು ಕೂಡಿ ದಾಳಿ ಕುರಿತು ಭಾತ್ಮಿ ಇದ್ದ ಬಾಲಖೇಢ ಸೀಮಾಂತರದ ಸವರ್ೇ ನಂ 44 ಹೊಲಕ್ಕೆ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿ ಹೊಲದಲ್ಲಿದ್ದು, ನಮ್ಮನ್ನು ನೋಡಿ ಆತನು ಓಡಿ ಹೋಗುತ್ತಿರುವಾಗ ಆತನಿಗೆ ಸಿಬ್ಬಂದಿ ಮತ್ತು ನಾನು ಕೂಡಿ ಬೆನ್ನು ಹತ್ತಿರ ಹಿಡಿದು ವಿಚಾರಿಸಲಾಗಿ ಆತ ತನ್ನ ಹೆಸರು ಬಸಣ್ಣಾ ತಂದೆ ನಿಂಗಪ್ಪಾ ಖೇಡ್ಲೆ ವಯ- 65 ವರ್ಷ ಜಾತಿ- ಬೇಡರ್ ಉ- ಒಕ್ಕಲುತನ ಸಾ|| ನಸಿರವಾಡಿ ಅಂತಾ ತಿಳಿಸಿದ್ದು ಆತನಿಗೆ ಗಾಂಜಾ ಬೆಳೆದ ಬಗ್ಗೆ ವಿಚಾರಿಸಲಾಗಿ ಆತನು ಸಮಂಜಸವಾದ ಉತ್ತರ ನೀಡದೆ ಇದ್ದ ಕಾರಣ ಆತನಿಗೆ ಪುನಃ ಪುನಃ ಹೆಚ್ಚಿನ ವಿಚಾರಣೆ ಮಾಡಲಾಗಿ ಆತ ತಿಳಿಸಿದ್ದೆನೆಂದರೆ ತೋಗರಿಯ ಸಾಲುಗಳ ಮದ್ಯದಲ್ಲಿ ಬೆಳೆದ ಗಾಂಜಾ ಗಿಡವನ್ನು ತೊರಿಸಿದನು. ವಿಚಾರಿಸಲು ಸದರಿ ಗಾಂಜಾ ಗಿಡಗಳನ್ನು ಒಂದು ತಿಂಗಳ ಹಿಂದೆ ಬೀಜ ಹಾಕಿದ್ದು, ಇನ್ನು 4 ತಿಂಗಳು ಬಿಟ್ಟರೆ ಪ್ರತಿ ಗಿಡದಿಂದ ಒಂದು ಕಿಲೋ ಗಾಂಜಾ ಸಿಗುತ್ತದೆ ಎಂದು ಮತ್ತು ಗಾಂಜಾ ಗಿಡಗಳು ಹೂವು & ಬೀಜಗಳಾದ ಮೇಲೆ ಗಾಂಜಾವನ್ನು ನನ್ನ ಸ್ವಂತ ಲಾಭಕ್ಕಾಗಿ ಮಾಹಾರಾಷ್ಟ್ರದ ಬೇರೆ ಬೇರೆ ಕಡೆಗೆ ತಗೆದುಕೊಂಡು ಹೋಗಿ ಮಾರಾಟ ಮಾಡುತ್ತೇನೆ ಅಂತಾ ತಿಳಿಸಿದನು. ನಂತರ ಸದರಿ ವ್ಯೆಕ್ತಿಯನ್ನು ವಶಕ್ಕೆ ಪಡೆದುಕೊಂಡು, ತೋಗರಿ ಹೊಲದಲ್ಲಿ ಬೆಳೆದ ಸದರಿ ಗಾಂಜಾ ಗಿಡಗಳನ್ನು ನಾನು ಮತ್ತು ಸಂಗಡ ಇದ್ದ ಪತ್ರಾಂಕಿತ ಅಧಿಕಾರಿ ಮತ್ತು ಪಂಚರ ಸಮಕ್ಷಮ ಆರೋಪಿತನಿಂದ ಗಾಂಜಾ ಗಿಡಗಳನ್ನು ಕಾಂಡ ಸಮೇತ ಕಿತ್ತಿಸಲು ಒಟ್ಟು 54 ದೊಡ್ಡ ಗಾಂಜಾ ಗಿಡಗಳಿದ್ದು, ಅವುಗಳನ್ಮ್ನ ಆಳಂದ ಪಟ್ಟಣದ ಕಿರಾಣಿ ವ್ಯಾಪಾರಿ ರಾಜೇಂದ್ರ ಜಮಾದಾರ ಈತನ ಎಲೆಕ್ಟ್ರಿಕಲ್ ತೂಕದ ಮಶೀನ್ ಮೇಲೆ ಇಟ್ಟು ಒಂದೊಂದು ಕಟ್ಟನ್ನು ತೂಕ ಮಾಡಿದ್ದು ಒಟ್ಟು 19.28 ಕೆ.ಜಿ. ಅಂದಾಜು 1,30,000/- ರೂ ಕಿಮ್ಮತ್ತಿನವು ಇರಬಹುದು. ನಂತರ ಆಪಾದಿತ ಬಸಣ್ಣಾ ತಂದೆ ನಿಂಗಪ್ಪಾ ಖೇಡ್ಲೆ ಇತನಿಗೆ ವಶಕ್ಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದು ಮೂಲ ಜಪ್ತಿ ಪಂಚನಾಮೆ, ಆರೋಪಿ, ಮುದ್ದೆಮಾಲಿನೊಂದಿಗೆ ಹಾಜರು ಪಡಿಸಿ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಬೇಕು ಅಂತಾ ಕೊಟ್ಟ ಜ್ಞಾಪನ ಪತ್ರದ ನೀಡಿದ ಸಾರಾಂಶದ ಮೇಲಿಂದ ಆಳಂದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಅಕ್ರಮ ಗಾಂಜಾ ಜಪ್ತಿ:-
ನರೋಣಾ ಪೊಲೀಸ ಠಾಣೆ
ದಿನಾಂಕ:16/09/2020 ರಂದು ಶ್ರೀ.ಮಲ್ಲಿಕಾರ್ಜುನ ಡಿಎಸ್.ಪಿ ಸಾಹೇಬರು ಆಳಂದ ರವರು ಠಾಣೆಗೆ ಹಾಜರಾಗಿ ಒಬ್ಬ ಆಪಾದಿತ, ಜಪ್ತಿ ಪಂಚನಾಮೆ ಹಾಗೂ ಜಪ್ತಾದ ಮುದ್ದೆಮಾಲು ಹಾಜರಪಡಿಸಿ ಸೂಕ್ತ ಕಾನೂನ ಕ್ರಮ ಜರುಗಿಸಲು ಕೊಟ್ಟ ವರದಿ ಸಾರಾಂಶವೇನಂದರೆ, ದಿನಾಂಕ:16/09/2020 ರಂದು ಮಧ್ಯಾಹ್ನ ಶ್ರೀ.ಉದಂಡಪ್ಪಾ ಪಿ.ಎಸ್.ಐ ನರೋಣಾ ಪೊಲೀಸ್ ಠಾಣೆ ರವರು ಫೋನಮಾಡಿ ನರೋಣಾ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಸಂಗೋಳಗಿ ಗ್ರಾಮದಲ್ಲಿ ಈಶ್ವರ ತಂದೆ ರಾಮಣ್ಣಾ ಮೇಲಿನಕೇರಿ ಈತನು ತನ್ನ ಮನೆಯ ಖುಲ್ಲಾ ಜಾಗದಲ್ಲಿ ಗಾಂಜಾ ಗಿಡ ಬೆಳೆಸಿದ ಬಗ್ಗೆ ಬಾತ್ಮೀ ಇರುತ್ತದೆ ಅಂತಾ ತಿಳಿಸಿದಾಗ ನಾನು ನರೋಣಾ ಪೊಲೀಸ್ ಠಾಣೆಗೆ ಭೇಟಿ ನೀಡಿ ಹಾಜರಿದ್ದ ಶ್ರೀ.ಉದಂಡಪ್ಪ ಪಿ.ಎಸ್.ಐ, ನರೋಣಾ ಪೊಲೀಸ್ ಠಾಣೆ ರವರಿಗೆ ಇಬ್ಬರು ಪಂಚರನ್ನು ಕರೆಯಿಸಲು ತಿಳಿಸಿದ ಮೇರೆಗೆ ಇಬ್ಬರು ಪಂಚ ಜನರನ್ಮ್ನ ಠಾಣೆಗೆ ಕರೆಸಿ ಸಿಬ್ಬಂದಿಯವರಾದ ಶ್ರೀ. ಉದಂಡಪ್ಪ ಪಿ.ಎಸ್.ಐ ನರೋಣಾ ಪೊಲೀಸ್ ಠಾಣೆ, ಶ್ರೀ.ಚಂದ್ರಕಾಂತ ಸಿಪಿಸಿ-904, ಶ್ರೀ.ಸತೀಶ ಕಾಸರ್ ಸಿಪಿಸಿ-851, ಶ್ರೀ.ಬಸವರಾಜ ಸಿಪಿಸಿ-1206. ಶ್ರೀ.ಈರಣ್ಣಾ ಸಿ.ಹೆಚ್.ಸಿ-561, ಶ್ರೀ.ಪ್ರದೀಪ ಸಿಪಿಸಿ-115 ವಿಷಯನ್ನು ರವರಿಗೆ ತಿಳಿಸಿ. ಅದೇ ರೀತಿ ಸದರಿ ಮಾಹಿತಿಯನ್ನು ಮಾನ್ಯ ತಹಸೀಲ್ದಾರು ಮತ್ತು ತಾಲ್ಲೂಕು ದಂಡಾಧಿಕಾರಿ ರವರು ಆಳಂದ ರವರಿಗೆ ಮಾಹಿತಿ ನೀಡಿ ಠಾಣೆಯಿಂದ ನಾನು, ಸಿಬ್ಬಂದಿ, ಪಂಚರೆಲ್ಲರೂ ಸೇರಿ ಸಕರ್ಾರಿ ಜೀಪಗಳಲ್ಲಿ ಬಸವನಸಂಗೋಳಗಿ ಗ್ರಾಮಕ್ಕೆ ಹೋಗಿ, ಗ್ರಾಮದ ಜೈಭೀಮ ನಗರದಲ್ಲಿರುವ ಈಶ್ವರ ತಂದೆ ರಾಮಣ್ಣಾ ಮೇಲಿನಕೇರಿ ಈತನ ಮನೆಯ ಹತ್ತಿರ ಹೋಗುತ್ತಿದ್ದಾಗ 2 ಜನ ವ್ಯಕ್ತಿಗಳು ನಿಂತಿದ್ದು ನಮ್ಮ ವಾಹನಗಳನ್ನು ನೋಡಿ ಓಡಲು ಪ್ರಾರಂಭಿಸಿದರು ನಾವೆಲ್ಲರೂ ನಮ್ಮ ವಾಹನಗಳನ್ನು ನಿಲ್ಲಿಸಿ ಓಡಿ ಹೋಗುತ್ತಿರುವ ವ್ಯಕ್ತಿಗಳಿಗೆ ಹಿಡಿಯಲಾಗಿ ಒಬ್ಬ ವ್ಯಕ್ತಿ ಸಿಕ್ಕಿದ್ದು ಇನ್ನೊಬ್ಬ ವ್ಯಕ್ತಿ ತಪ್ಪಿಸಿಕೊಂಡು ಓಡಿ ಹೋಗಿರುತ್ತಾನೆ ವಶಕ್ಕೆ ಸಿಕ್ಕ ವ್ಯಕ್ತಿಯನ್ನು ವಿಚಾರಿಸಲಾಗಿ ಆತನು ತನ್ನ ಹೆಸರು ಲಕ್ಷ್ಮಣ ತಂದೆ ರಾಮಣ್ಣಾ ಮೇಲಿನಕೇರಿ, ವಯಾ:40 ವರ್ಷ, ಜಾತಿ:ಪ-ಜಾತಿ, ಉ:ಕೂಲಿಕೆಲಸ, ಸಾ:ಬಸವನಸಂಗೋಳಗಿ ಗ್ರಾಮ ಅಂತಾ ತಿಳಿಸಿದ್ದು ಓಡಿ ಹೋದವನ ಹೆಸರು ವಿಚಾರಿಸಲಾಗಿ ಆತನು ತನ್ನ ಅಣ್ಣನಾದ ಈಶ್ವರ ತಂದೆ ರಾಮಣ್ಣಾ ಮೇಲಿನಕೇರಿ ವಯಾ:42 ವರ್ಷ, ಜಾತಿ:ಪ-ಜಾತಿ, ಉ:ಕೂಲಿಕೆಲಸ, ಸಾ:ಬಸವನಸಂಗೋಳಗಿ ಗ್ರಾಮ ಅಂತಾ ತಿಳಿಸಿದನು. ಓಡಿ ಹೋಗುತ್ತಿರುವ ಬಗ್ಗೆ ಕಾರಣ ಕೇಳಿದಾಗ ತಾನು ಹಾಗೂ ತನ್ನ ಅಣ್ಣ ಈಶ್ವರ ಇಬ್ಬರು ಸೇರಿ ಕೆಲವು ತಿಂಗಳ ಹಿಂದೆ ಮಾಹಾರಾಷ್ಟ್ರ ರಾಜ್ಯದ ಉಮಗರ್ಾ ದಿಂದ ಗಾಂಜಾ ಬೀಜ ತಂದು ನಾವಿಬ್ಬರು ಸೇರಿ ನಮ್ಮ ಅಣ್ಣನಿಗೆ ಸಕರ್ಾರದಿಂದ ಆಶ್ರಯ ಯೋಜನೆ ಅಡಿಯಲ್ಲಿ ನೀಡಿದಂತಹ ನಿವೇಶನ ಸಂ:97 ರಲ್ಲಿ ಖುಲ್ಲಾ ಜಾಗೆಯಲ್ಲಿ ಗಾಂಜಾ ಗಿಡ ಬೆಳಸಿದ್ದು. ಸದರಿ ಗಾಂಜಾ ನಮ್ಮೂರಿನಲ್ಲಿ ಹಣಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಬೆಳೆಸಿರುತ್ತೇವೆ. ಅಂತಾ ತಿಳಿಸಿದಾಗ ಮಾನ್ಯ ತಹಶೀಲ್ದಾರು ಆಳಂದ ರವರ ಸಮ್ಮುಖದಲ್ಲಿ ಹಾಗೂ ಈ ಮೇಲೆ ನಮೂದಿಸಿದ ಪಂಚರ ಸಮಕ್ಷಮದಲ್ಲಿ ಸೆರೆಸಿಕ್ಕ ಲಕ್ಷ್ಮಣ ತಂದೆ ರಾಮಣ್ಣಾ ಮೇಲಿನಕೇರಿ ಈತನು ತೋರಿಸಿದ ಗಾಂಜಾ ಗಿಡ ಬೆಳೆಸಿದ ಸ್ಥಳವನ್ನು ಪರಿಶೀಲಿಸಲಾಗಿ ಮನೆಯ ಖುಲ್ಲಾ ಜಾಗದಲ್ಲಿ ತೊಗರಿ ಕಟ್ಟಿಗೆಯ ಸಹಾಯದಿಂದ ನಿಮರ್ಿಸಿದ ಕೇರಿನ ಪಕ್ಕ ಒಂದು ಗಾಂಜಾ ಗಿಡ ಅಂದಾಜು 09 ಫೀಟ್ ಎತ್ತರವಿರುತ್ತದೆ. ಹಸಿ ಗಾಂಜಾ ಗಿಡದ ಒಟ್ಟು ತೂಕ 20 ಕೆ.ಜಿ 300 ಗ್ರಾಂ ಇದ್ದು, ಒಟ್ಟು 80000/- ರೂ ಮೌಲ್ಯವಿರುತ್ತದೆ ಸದರಿ ಜಪ್ತಿ ಪಡಿಸಿಕೊಂಡ ಮುದ್ದೆಮಾಲು, ಆರೋಪಿ ಲಕ್ಷ್ಮಣ ತಂದೆ ರಾಮಣ್ಣಾ ಮೇಲಿನಕೇರಿ, ಸಾ:ಬಸವನ ಸಂಗೋಳಗಿ ಗ್ರಾಮ ಈತನನ್ನು ವಶಕ್ಕೆ ಪಡೆದುಕೊಂಡು ನರೋಣಾ ಪೊಲೀಸ್ ಠಾಣೆಗೆ ಹಾಜರಾಗಿ ಆರೋಪಿತ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ನರೋಣಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಅಕ್ರಮ ಗಾಂಜಾ ಜಪ್ತಿ:-
ರೇವೂರ ಪೊಲೀಸ ಠಾಣೆ
ದಿನಾಂಕ 16-09-2020 ರಂದು ಮಾನ್ಯ ಪಿಎಸ್ಐ ಸಾಹೇಬರು ಜಪ್ತಿ ಪಡಿಸಿಕೊಂಡ ಗಾಂಜಾ ಮುದ್ದೆ ಮಾಲನ್ನು ತಂದು ಮುಂದಿನ ಕ್ರಮಕ್ಕಾಗಿ ವರದಿ ಹಾಜರ ಪಡಿಸಿದ ವರದಿ ಸಾರಂಶವೆನೆಂದರೆ, ದಿನಾಂಕ 16-09-2020 ರಂದು ಬೆಳಿಗ್ಗೆ ಅತನೂರ ಗ್ರಾಮದ ವಿಜಯಕುಮಾರ ತಂದೆ ಶಂಕರ ಕ್ಷತ್ರಿ ರವರ ಮನೆಯ ಹಿತ್ತಲಿನಲ್ಲಿ ಅನದಿಕೃತವಾಗಿ ಗಾಂಜಾ ಗಿಡಗಳನ್ನು ಬೆಳೆಸಿ, ಗಾಂಜಾ ಮಾರಾಟ ಮಾಡುತ್ತಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ, ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ನಂತರ ಪತ್ರಾಂಕಿತ ಅಧಿಕಾರಿಯವರಾದ ಕು.ದಿವ್ಯಾ ಕರಜಗಿ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಅತನೂರ ಮತ್ತು ಇಬ್ಬರು ಸರಕಾರಿ ಪಂಚ ಜನರು ಹಾಗೂ ನಮ್ಮ ಠಾಣೆಯ ಸಿಬ್ಬಂದಿ ಜನರಾದ ದಯಾನಂದ ಸಿಹೆಚ್ ಸಿ-344, ಸಿದ್ದರಾಮ ಸಿಹೆಚ್ ಸಿ-537, ವಿಶ್ವನಾಥ ಸಿಪಿಸಿ-1115 ಶಿವಾನಂದ ಸಿಪಿಸಿ-934 ವಿವೇಕಾನಂದ ಸಿಪಿಸಿ-429 ಕೂಡಿಕೊಂಡು ಅತನೂರ ಗ್ರಾಮದ ಹತ್ತಿರ ಹೋಗಿ ಗ್ರಾಮದ ಬಾತ್ಮಿದಾರರಿಗೆ ಸದರಿ ವಿಜಯಕುಮಾರ ಕ್ಷತ್ರಿ ಈತನ ಮತ್ತು ಮನೆಯ ಬಗ್ಗೆ ವಿಚಾರಿಸಿದಾಗ ಬಾತ್ಮಿದಾರನು ನಮ್ಮ ಜೊತೆಗೆ ಬಂದು ದೂರದಿಂದ ವಿಜಯಕುಮಾರ ಕ್ಷತ್ರಿ ಈತನ ಹೆಸರಿನಲ್ಲಿರುವ ಮನೆ ತೊರಿಸಿದ ಮೇರೆಗೆ, ನಾವು ವಿಜಯಕುಮಾರ ಕ್ಷತ್ರಿ ಈತನ ಮನೆಯ ಹಿತ್ತಲಿನಲ್ಲಿ ಹೋಗಿ ತಲಾಸ ಮಾಡಲಾಗಿ ಮನೆಯ ಹಿತ್ತಲಿನ ಔಡಲ ಗಿಡಗಳ ಮದ್ಯದಲ್ಲಿ ಗಾಂಜಾ ಗಿಡಗಳು ದೋರೆತಿದ್ದು. ಗಾಂಜಾ ಗಿಡಗಳನ್ನು ಕಾಂಡ ಸಮೇತ ಕಿತ್ತಿಸಲು ಒಟ್ಟು 07 ಗಾಂಜಾ ಗಿಡಗಳಿದ್ದು ಅವುಗಳನ್ನು ತೂಕ ಒಟ್ಟು 7 ಕೆ.ಜಿ ತೂಕವಿದ್ದು ಅಂದಾಜು 7,000/- ರೂ ಕಿಮ್ಮತ್ತಿನವು ಇರಬಹುದು. ಇವುಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ಆರೋಪಿತನಾದ ವಿಜಯಕುಮಾರ ಕ್ಷತ್ರಿ ಈತನ ಮೇಲೆ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಂಶದ ಮೇಲಿಂದ ರೇವೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಇಸ್ಪೇಟ ಜೂಜಾಟ
ಅಫಜಲಪೂರ ಪೊಲೀಸ ಠಾಣೆ
ದಿನಾಂಕ 16-09-2020 ರಂದು 7:30 ಪಿ.ಎಮ್ ಕ್ಕೆ ಮಾನ್ಯ ಅಶೋಕ ಪಿ.ಎಸ್.ಐ (ಕ್ರೈಂ) ಸಾಹೇಬರು ಠಾಣೆಗೆ ಹಾಜರಾಗಿ 03 ಜನ ಆರೋಪಿ ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆಯನ್ನು ಹಾಜರುಪಡಿಸಿ ಸ:ತ: ಫೀರ್ಯಾದಿ ಸಲ್ಲಿಸಿದ ಸಾರಾಂಶವೇನೆಂದರೆ, ದಿನಾಂಕ:16/09/2020 ರಂದು 5-00 ಪಿಎಮ್ ಕ್ಕೆ ಠಾಣೆಯಲಿದ್ದಾಗ ಬಳೂರ್ಗಿ ಗ್ರಾಮದ ಸೇವಾಲಾಲ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ನಾನು, ಪಂಚರು ಹಾಗೂ ಠಾಣೆ ಸಿಬ್ಬಂದಿ ಜನರಾದ 1)ಸುರೇಶ ಸಿಹೆಚ್ ಸಿ-394 2)ರಾವುತಪ್ಪ ಸಿಪಿಸಿ-142, 3)ಆದಿಗೊಂಡ ಪಿಸಿ-1247 ರವರೊಂದಿಗೆ ಠಾಣೆಯಿಂದ ಹೊರಟು, ಬಳೂರ್ಗಿ ತಾಂಡಾದ ಸೇವಾಲಾಲ ಗುಡಿಯ ಹತ್ತೀರ ಹೋಗಿ ಸ್ವಲ್ಪ ದೂರ ನಮ್ಮ ವಾಹನ ನಿಲ್ಲಿಸಿ ಗುಡಿಯ ಮರೆಯಾಗಿ ನಿಂತು ನೊಡಲು ಸೇವಾಲಾಲ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ 03 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾನು ನಮ್ಮ ಸಿಬ್ಬಂದಿಯವರೊಂದಿಗೆ ಸದರಿಯವರ ಮೇಲೆ ದಾಳಿ ಮಾಡಿ ಎಲ್ಲಾ 03 ಜನರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ 1) ಕಬೀರ ತಂದೆ ನರ್ಸಿಂಗ ರಾಠೋಡ ವ||45 ಜಾ||ಲಂಬಾಣಿ ಉ||ಕೂಲಿ ಸಾ||ಬಳೂರ್ಗಿ ತಾಂಡಾ 2) ರಾಜೇಂದ್ರ ತಂದೆ ಗೋಪು ರಾಠೋಡ ವ||24 ಜಾ||ಲಂಬಾಣಿ ಉ||ಕೂಲಿ ಸಾ||ಬಳೂರ್ಗಿ 3) ಸಂತೋಷ ತಂದೆ ಪುಲು ರಾಠೋಡ ವ||32 ಜಾ||ಲಂಬಾಣಿ ಉ||ಕೂಲಿ ಸಾ||ಬಳೂರ್ಗಿ ತಾಂಡಾ ತಿಳಿಸದ್ದರಿಂದ ಇಸ್ಪೇಟ ಜೂಜಾಟಕ್ಕೆ ಸಂಬಂದಪಟ್ಟ ಒಟ್ಟು 2750/- ನಗದು ಹಣ ಮತ್ತು 52 ಇಸ್ಪೇಟ ಎಲೆಗಳು ಮುಂದಿನ ಪುರಾವೆಗಾಗಿ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಮುದ್ದೆಮಾಲು ಮತ್ತು ಆರೋಪಿತರೊಂದಿಗೆ ಠಾಣೆಗೆ ಬಂದು ಆರೋಪಿತರ ವಿರುದ್ದ ಮುಂದಿನ ಕ್ರಮ ಕೈಕೊಳ್ಳುವಂತೆ ಕೊಟ್ಟ ಫೀರ್ಯಾದಿ ಸಾರಾಂಶದ ಮೇಲಿಂದ ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಮಟಕಾ ಜೂಜಾಟ
ಮುಧೋಳ ಪೊಲೀಸ ಠಾಣೆ
ದಿನಾಂಕ-16/09/2020 ರಂದು ಸರಕಾರಿ ತರ್ಫೇಯಿಂದ ಶ್ರೀ ಆನಂದರಾವ ಎಸ.ಎನ್. ಪಿ.ಐ ಮುಧೋಳ ಪೊಲೀಸ ಠಾಣೆ ರವರು ನೀಡಿದ ಜ್ಞಾಪನಾ ಪತ್ರದ ಸಾರಾಂಶವೆನೇಂದರೆ, ದಿನಾಂಕ: 16/09/2020 ರಂದು ಮಲ್ಕಾಪಲ್ಲಿ ಗ್ರಾಮದಲ್ಲಿ ವ್ಮಟಕಾ ಜೂಜಾಟ ನಡೆಯುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಮತ್ತ ಪಂಚರು ಹಾಗು ಸಿಬ್ಬಂದಿಜನರನ್ನು ಕರೆದುಕೊಂಡುಮಲ್ಕಾಪಲ್ಲಿಗ್ರಾಮದ ವೆಂಕಟರೆಡ್ಡಿ ಇವರ ಕಿರಾಣಿ ಅಂಗಡಿ ಮುಂದೆಒಬ್ಬ ವ್ಯಕ್ತಿ ವ್ಮಟಕಾ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹತ್ತೀರ ಇದ್ದ ಎರಡು ಅಂಕೆ ಸಂಖ್ಯ ಬರೆದ ಮಟಕಾ ಚೀಟಿ, ಒಂದು ಬಾಲ ಪೆನ ಮತ್ತ 2400/- ರೂ ನಗದು ಹಣಜಪ್ತು ಪಡಿಸಿಕೊಂಡು ಆರೋಪಿತನೊಂದಿಗೆ ಠಾಣೆಗೆ ತಂದು ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಮುಧೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಹಲ್ಲೆ ಪ್ರಕರಣ
ಮುಧೋಳ ಪೊಲೀಸ ಠಾಣೆ
No comments:
Post a Comment