ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 27-10-2020
ಭಾಲ್ಕಿ ನಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 14/2020, ಕಲಂ. 174 (ಸಿ) ಸಿ.ಆರ್.ಪಿ.ಸಿ :-
ದಿನಾಂಕ 26-10-2020 ರಂದು ಫಿರ್ಯಾದಿ ಈಶ್ವರ ತಂದೆ ದಿಲೀಪಕುಮಾರ ಕೋಣೆ ವಯ: 28 ವರ್ಷ, ಜಾತಿ: ಲಿಂಗಾಯತ, ಸಾ: ಸಾಯಿ ನಗರ ಭಾಲ್ಕಿ ರವರು ಭಾಲ್ಕಿಯ ಪುಣ್ಯಾಶ್ರಮದ ಹಿಂಭಾಗದಲ್ಲಿರುವ ಕೆರೆಯ ದಡದ ಮೇಲಿಂದ ಹೋಗುವಾಗ ಮೋದಲನೆ ಗೇಟ ಹತ್ತಿರ ಮಲ್ಲಪ್ಪಾ ಜಲ್ದೆ ರವರ ಹೋಲದ ಹತ್ತಿರ ಹೋದಾಗ ಒಮ್ಮೆಲೆ ವಾಸನೆ ಬಂದಿದ್ದರಿಂದ ನಿಂತು ಪರಿಶೀಲಿಸಿ ನೋಡಲು ಕೆರೆಯ ದಂಡೆಯ ಮೇಲೆ ಸುಮಾರು 20 ಫೀಟ ಕೇಳಗಡೆ ಒಂದು ಅಪರಿಚಿತ ಗಂಡು ವ್ಯಕ್ತಿಯ ಶವ ಬಿದ್ದಿದ್ದು ವಯಸ್ಸು ಅಂದಾಜು 35 ರಿಂದ 40 ವರ್ಷ ಇರಬಹುದು ಶವದ ಮೇಲೆ ಒಂದು ಬೀಳಿ ಬಣ್ಣದ ಶರ್ಟ ಮತ್ತು ಕಪ್ಪು ಬಣ್ಣದ ಪ್ಯಾಂಟ ಇದ್ದು ಶವ ಪುರ್ತಿ ಕೊಳೆತಿದ್ದು ಮುಖ ಸರಿಯಾಗಿ ಕಾಣುತಿಲ್ಲ, ಬಲ ಭುಜಕ್ಕೆ, ಮುಖಕ್ಕೆ ಮತ್ತು ಎರಡು ಕೈಗಳ ಬೆರಳುಗಳಿಗೆ ಏನೋ ತಿಂದಿರುತ್ತವೆ ಸದರಿ ವ್ಯಕ್ತಿ ಸುಮಾರು 3 ರಿಂದ 4 ದಿವಸಗಳ ಹಿಂದೆ ಮೃತಪಟ್ಟಂತೆ ಕಂಡು ಬರುತ್ತದೆ, ಸದರಿಯವನ ಸಾವಿನಲ್ಲಿ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಜನವಾಡಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 22/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 26-10-2020 ರಂದು ಫಿರ್ಯಾದಿ ಸುಭಾಷ ತಂದೆ ಥಾವರು ರಾಠೋಡ ಸಾ: ಅಲಿಯಂಬರ (ಬಿ) ತಾಂಡಾ, ತಾ: ಜಿ: ಬೀದರ ರವರು ತನ್ನ ಹೆಂಡತಿ ರುಕ್ಕುಬಾಯಿ ರಾಠೋಡ, ಮಗ ರವಿ ರಾಠೋಡ, ಸೊಸೆ ಸಕ್ಕುಬಾಯಿ ರಾಠೋಡ ಎಲ್ಲರೂ ತಮ್ಮ ಹೋಲದಲ್ಲಿನ ಸೋಯಾ ಬೆಳೆ ಕಟಾವು ಮಾಡಲು ಹೋಗಿ ಸೋಯಾ ತೆಗೆಯುತ್ತಿರುವಾಗ ಫಿರ್ಯಾದಿಯವರ ಹೆಂಡಿತಯ ಬಲಗಾಲಿನ ಹಿಮ್ಮಡಿ ಹತ್ತಿರ ಹಾವು ಕಚ್ಚಿದ್ದರಿಂದ ಕೂಡಲೆ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ವೈದ್ಯರಿಗೆ ತೋರಿಸಲಾಗಿ ವೈದ್ಯರು ರುಕ್ಕುಬಾಯಿಗೆ ನೋಡಿ ಇವಳು ಮೃತಪಟ್ಟಿರುತ್ತಾಳೆಂದು ತಿಳೀಸಿರುತ್ತಾರೆ, ಅವಳ ಸಾವಿನಲ್ಲಿ ಯಾರ ಮೇಲೆ ಯಾವುದೆ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 120/2020, ಕಲಂ. 379 ಐಪಿಸಿ :-
ದಿನಾಂಕ 25-09-2020 ರಂದು 1700 ಗಂಟೆಯಿಂದ 1800 ಗಂಟೆಯ ಅವಧಿಯಲ್ಲಿ ಬೀದರ ಸರಫ ಬಜಾರ ಹತ್ತಿರ ನಿಲ್ಲಿಸಿದ ಫಿರ್ಯಾದಿ ಬಸವರಾಜ ತಂದೆ ಗುರಪ್ಪ ಸಾ: ಅತಿವಾಳ, ತಾ: ಬೀದರ ರವರ ಹೀರೊ ಸ್ಪ್ಲೆಂಡರ ಪ್ಸಸ್ ಮೋಟರ ಸೈಕಲ ನಂ. KA-38/R-9375 ನೇದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ವಾಹನದ ವಿವರ 1) ಹೀರೊ ಸ್ಪ್ಲೆಂಡರ ಪ್ಸಸ್ ಮೋಟರ ಸೈಕಲ ನಂ. KA-38/R-9375, 2) ಚಾಸಿಸ್ ನಂ. MBLHA10BWFHD85259, 3) ಇಂಜಿನ್ ನಂ. HA10EWFHD37268, 4) ಮಾಡಲ್: 2015, 5) ಬಣ್ಣ: ಕಪ್ಪು ಹಾಗೂ 6) 25,000/- ರೂ ಆಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 26-10-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿ ಗಂಜ ಪೊಲೀಸ್ ಠಾಣೆ ಬೀದರ ಅಪರಾಧ ಸಂ. 163/2020, ಕಲಂ. 454. 457, 380 ಐಪಿಸಿ :-
ದಿನಾಂಕ 23-10-2020 ರಂದು 1100 ಗಂಟೆಯಿಂದ ದಿನಾಂಕ 26-10-2020 ರಂದು 1100 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಡಾ|| ರವಿಂದ್ರ ತಂದೆ ಬಸಪ್ಪಾ ಡೊಂಬರ ವಯ: 37 ವರ್ಷ, ಜಾತಿ: ಎಸ್.ಸಿ, ಸಾ: ನಿಪನಾಳ ಗ್ರಾಮ, ತಾ: ರಾಯಬಾಗ, ಸದ್ಯ: ಗುಮ್ಮೆ ಕಾಲೋನಿ ಬೀದರ ರವರು ಬಾಡಿಗೆಯಿಂದ ವಾಸವಾಗಿರುವ ಮನೆಯ ಮುಖ್ಯ ದ್ವಾರದ ಬೀಗವನ್ನು ಮುರಿದಿ ಮನೆಯಲ್ಲಿ ಪ್ರವೇಶ ಮಾಡಿ ಮನೆಯಲ್ಲಿನ ಅಲಮಾರಾ ಕೀಲಿ ಮುರಿದು ಅಲಮಾರಾದಲ್ಲಿನ ಲಾಕರ ಕೀಲಿ ಮುರಿದು ಅದರಲ್ಲಿರುವ 1) 15 ಗ್ರಾಮ ಬಂಗಾರದ 06 ಕೈ ಉಂಗುರುಗಳು, 2) 20 ಗ್ರಾಮ ಬಂಗಾರದ ಕೊರಳಿನ ಚೈನ, 3) 18 ಗ್ರಾಮ ಬಂಗಾರದ ಕಿವಿಯ ಓಲೆ ಹಿಗೆ ಒಟ್ಟು 53 ಗ್ರಾಮ ಬಂಗಾರದ ಆಭರಣಗಳು ಅ.ಕಿ 2,50,000/- ರೂ., 4) ನಗದು ಹಣ 88,000/- ರೂ., 5) ಬೋಟ ಕಂಪನಿಯ ಎಯರ ಫೋನ ಅ.ಕಿ 1300/- ರೂ. ಹಿಗೆ ಎಲ್ಲಾ ಒಟ್ಟು 3,39,300/- ರೂಪಾಯಿ ಮೌಲ್ಯದ ಬಂಗಾರ ಒಡವೆಗಳು, ಎಯರ ಫೋನ, ಮತ್ತು ನಗದು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment