Police Bhavan Kalaburagi

Police Bhavan Kalaburagi

Wednesday, November 4, 2020

BIDAR DISTRICT DAILY CRIME UPDATE 04-11-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 04-11-2020

 

ಜನವಾಡಾ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 23/2020, ಕಲಂ. 174(ಸಿ) ಸಿ.ಆರ್.ಪಿ.ಸಿ :-

ದಿನಾಂಕ 03-11-2020 ರಂದು ಫಿರ್ಯಾದಿ ಸೂರ್ಯಕಾಂತ ತಂದೆ ಶ್ರೀಪತರಾವ ಜಗದಾಳೆ ಸಾ: ಮರಖಲ್ ಗ್ರಾಮ ರವರು ತಮ್ಮೂರ ರಾಜಕುಮಾರ ತಂದೆ ಭವರಾವ ಜಗದಾಳೆ ರವರ ಜೊತೆಯಲ್ಲಿ ಮೋಹನಸಿಂಗ್ ಠಾಕೂರ ರವರ ಹೊಲ ಸರ್ವೆ ನಂ. 167 ನೇದರಲ್ಲಿ ಹೋದಾಗ ಹೊಲದಲ್ಲಿನ ಬೊರೆ ಮರದ ಕೆಳಗಡೆ ಅಂದಾಜು 65 ರಿಂದ 70 ವರ್ಷದ ಮದ್ಯದ ವಯಸ್ಸಿನ ಒಬ್ಬ ವ್ಯಕ್ತಿ ಮಲಗಿಕೊಂಡಿದ್ದು, ಫಿರ್ಯಾದಿಯು ಅವನ ಹತ್ತಿರ ಹೋಗಿ ನೋಡಲು ಸದರಿ ವ್ಯಕ್ತಿ ಮೃತಪಟ್ಟಿರುತ್ತಾನೆ, ಅವನ ಮೈಮೇಲೆ ಬಿಳಿ ಮತ್ತು ಚಾಕಲೇಟ್ ಬಣ್ಣದ ಗೇರೆಯುಳ್ಳ ಫೂಲ್ ಶರ್ಟ ಹಾಗು ಕೆಂಪು ಮತ್ತು ನಿಳಿ ಬಣ್ಣದ ಚೌಕಡ ಲುಂಗಿಯಿದ್ದು, ಅವನ ಮೈ ಮೇಲೆ ಮೇಲ್ನೊಟಕ್ಕೆ ಯಾವುದೆ ಗಾಯಗಳು ಕಂಡು ಬಂದಿರುವುದಿಲ್ಲ, ಅವನು ಅಪರಿಚಿತ ವ್ಯಕ್ತಿಯಾಗಿದ್ದು, ಸದರಿ ಅಪರಿಚಿತ ವ್ಯಕ್ತಿ ಮೃತಪಟ್ಟ ಬಗ್ಗೆ ಅವನ ಸಾವಿನಲ್ಲಿ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.   

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 123/2020, ಕಲಂ. 454, 457, 380 ಐಪಿಸಿ :-

ದಿನಾಂಕ 31-10-2020 ರಂದು 2000 ಗಂಟೆಯಿಂದ ದಿನಾಂಕ 03-11-2020 ರಂದು 0800 ಗಂಟೆಯ ಅವಧಿಯಲ್ಲಿ ಬೀದರ ವೈಷ್ಣವಿ ಕಾಲೋನಿಯಲ್ಲಿರುವ ಫಿರ್ಯಾದಿ ಕಿರಣ ತಂದೆ ಸುರೇಶ ಡೊಂಗ್ರೆ ಸಾ: ವೈಷ್ಣವಿ ಕಾಲೊನಿ ಬೀದರ ರವರ ಮನೆಯ ಬಾಗಿಲಿನ ಕೀಲಿ ಮುರಿದು ಮನೆಯಲ್ಲಿ ಅಲಮಾರಾದಲ್ಲಿನ 1,35,000/- ರೂ ಮೌಲ್ಯದ ಬಂಗಾರದ ಆಭರಣಗಳು ಹಾಗೂ ಬೆಳ್ಳಿಯ ಸಾಮಾನುಗಳು ಹಾಗು ನಗದು ಹಣವನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 124/2020, ಕಲಂ. 379 ಐಪಿಸಿ :-

ದಿನಾಂಕ 16-10-2020 ರಂದು 2100 ಗಂಟೆಯಿಂದ 2200 ಗಂಟೆಯ ಅವಧಿಯಲ್ಲಿ ಫಿರ್ಯಾದಿ ಜೈಪಾಲ ರೆಡ್ಡಿ ತಂದೆ ಸಂಜೀವರೆಡ್ಡಿ ಸಾ: ಗಾದಗಿ, ಸದ್ಯ: ಲಾಡಗೇರಿ ಬೀದರ ರವರು ಬೀದರ ಪಾಪನಾಶ ಗೇಟ ಹತ್ತಿರ ನಿಲ್ಲಿಸಿದ ತನ್ನ  ಹೀರೊ ಸ್ಪ್ಲೆಂಡರ ಪ್ಲಸ್ ಮೋಟರ ಸೈಕಲ ನಂ. KA-38/L-9604, ಚಾಸಿಸ್ ನಂ. MBLHA10A10ALCHG28675, ಇಂಜಿನ್ ನಂ. HA10EJCHG17532, ಮಾಡಲ್: 2012, ಬಣ್ಣ: ಕಪ್ಪು ಹಾಗೂ .ಕಿ 25,000/- ರೂ ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 03-11-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: