ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 15-11-2020
ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 171/2020 302 ಐಪಿಸಿ :-
ದಿನಾಂಕ
14/11/2020 ರಂದು 1145 ಗಂಟೆಗೆ
ಫಿರ್ಯಾಧಿ ಶ್ರಿ ಗೋಪಾಲ ತಂದೆ ಝರಣಪ್ಪಾ ನಂದಗಾಯಿ ವಯ 40 ವರ್ಷ ಜಾತಿ:
ಕಬ್ಬಲಿಗರ ಉದ್ಯೋಗ: ಪಾನಿ ಪೂರಿ ವ್ಯಾಪಾರ ಕೆಲಸ ಸಾ: ಕೋಳ್ಳೂರ ತಾ: ಚಿಂಚೋಳಿ ಜಿ: ಕಲಬುರಗಿ
ಸದ್ಯ ಹನುಮಾನ ನಗರ ಮೌಲಾಲಿ, ಮಲ್ಕಾಜಿಗಿರಿ
ಸಿಕಿಂದ್ರಾಬಾದ (ಹೈದ್ರಾಬಾದ) ರವರು ಠಾಣೆಗೆ ಹಾಜರಾಗಿ ನೀಡಿರು ಲಿಖಿತ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿಯು ಒಟ್ಟು ಮೂರು ಜನ ಸಹೋದರು ಮತ್ತು ಇಬ್ಬರೂ
ಸಹೋದರಿಯರಿದ್ದು ಇವರ ತಮ್ಮ ಮಾರುತಿ ಈತನ ಹೆಂಡತಿ ಶಕುಂತಲಾ ಹಾಗೂ ಐಶ್ವರ್ಯ, ಅಂಕುಶ, ಕೃಷ್ಣಾ ಅಂತ
ಒಬ್ಬಳು ಹೆಣ್ಣು ಹಾಗೂ ಇಬ್ಬರೂ ಗಂಡು ಮಕ್ಕಳು ಇರುತ್ತಾರೆ. ಮಾರುತಿ ಈತನು ತನ್ನ ಹೆಂಡತಿ ಮಕ್ಕಳೊಂದಿಗೆ
ಜೀವಿಸುತ್ತಿದ್ದನು. ಮಾರುತಿ ಈತನು ಅಂದಾಜು
ಕಳೆದ 3 ವರ್ಷಗಳಿಂದ
ಬೀದರ ಗಾಂದಿಗಂಜದಲ್ಲಿ ಹಮಾಲಿ ಕೆಲಸ ಮಾಡಿಕೊಂಡು ತನ್ನ ಹೆಂಡತಿ ಮಕ್ಕಳೊಂದಿಗೆ ಬೀದರ ವಿದ್ಯಾನಗರ
ಕಾಲೋನಿಯಲ್ಲಿ ಇರುವ ಬಸವರಾಜ ತಂದೆ ವಿಠಲ ನಿಟ್ಟೂರೆ ಎಂಬುವವರ ಮನೆಯಲ್ಲಿ ಬಾಡಿಯಿಂದ
ವಾಸವಾಗಿದ್ದನು. ಲಾಕ ಡೌನ ಆಗಿದ್ದರಿಂದ ಮರಳಿ
ತನ್ನ ಹೆಂಡತಿ ಮಕ್ಕಳೊಂದಿಗೆ ಕೋಳ್ಳೂರಕ್ಕೆ ಬಂದು ಕೋಳ್ಳೂರದಲ್ಲಿ ವಾಸವಾಗಿದ್ದನು. ನಂತರ ಈಗ
ಅಂದಾಜು 8-10 ದಿವಸಗಳ
ಹಿಂದೆ ತನ್ನ ಹೆಂಡತಿ ಮಕ್ಕಳಿಗೆ ಕೊಳ್ಳೂರದಲ್ಲಿ
ಬಿಟ್ಟು ಬೀದರ ಗಾಂದಿಗಂಜದಲ್ಲಿ ಕೆಲಸ ಮಾಡಲು ಹೋಗುತ್ತೇನೆ ಅಂತ ಮನೆಯಲ್ಲಿ ಹೇಳಿ ಬೀದರಕ್ಕೆ ಬಂದು
ಬೀದರ ಗಾಂಧಿಗಂಜದಲ್ಲಿ ಇರುವ ಮಾತೆ ಮಾಣಿಕೇಶ್ವರಿ ಅಂಗಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಬಸವರಾಜ
ತಂದೆ ವಿಠಲ್ ನಿಟ್ಟೂರೆ ರವರ ಮನೆಯಲ್ಲಿಯೇ ಬಾಡಿಗೆಯಿಂದ ಇದ್ದನು. ಹೀಗಿರುವಲ್ಲಿ ದಿನಾಂಕ 14/11/2020 ರಂದು ಬೆಳಗೆ
ಅಂದಾಜು 7.00 ಗಂಟೆ
ಸುಮಾರಿಗೆ ಫಿರ್ಯಾದಿ ಸಿಕಿಂದ್ರಾಬಾದಲ್ಲಿದ್ದಾಗ ಅಳಿಯ ಲೋಕೇಶ ಈತನು ಫೋನ ಮಾಡಿ ತಿಳಿಸಿದೇನೆಂದರೆ, ಬೀದರ
ವಿದ್ಯಾನಗರ ಕಾಲೋನಿಯಲ್ಲಿ ಮಾರುತಿ ಬಾಡಿಗೆಯಿಂದ ಇರುವ ಮನೆಯಲ್ಲಿ ಮಾರುತಿ ಈತನಿಗೆ ಯಾರೋ ಕೊಲೆ
ಮಾಡಿರುತ್ತಾರೆ ಅಂತ ಫೋನ ಮಾಡಿ ತಿಳಿಸಿರುತ್ತಾರೆ
ವಿಷಯ ತಿಳಿಸಿದ ಕೂಡಲೇ
ಸಿಕಿಂದ್ರಾಬಾದದಿಂದ ದಿನಾಂಕ 14/11/2020 ರಂದು ಅಂದಾಜು
ಬೆಳಗೆ 10.00 ಗಂಟೆಗೆ
ವಿದ್ಯಾನಗರದಲ್ಲಿ ಮಾರುತಿ ಈತನು ಬಾಡಿಗೆಯಿಂದ
ಇರುವ ಮನೆಗೆ ಹೋಗಿ ನೋಡಲು ಮನೆಯಲ್ಲಿ ಮಾರುತಿ ವಯ 36 ವರ್ಷ ಈತನ ಮೃತ
ದೇಹವಿತ್ತು,
ಪರಿಶೀಲಿಸಿ
ನೋಡಲು ಕುತ್ತಿಗೆ ದಾರದಿಂದ ಬಿಗಿದ ಗಾಯ ಮತ್ತು ತಲೆಯಲಿ, ಹಣೆಯಲ್ಲಿ
ರಕ್ತಗಾಯವಾಗಿದ್ದು ಇತ್ತು. ಯಾರೋ ಅಪರಿಚಿತರು ಯಾವುದೋ ಉದ್ದೇಶದಿಂದ ದಿನಾಂಕ 13/11/2020 ರಂದು ರಾತ್ರಿ 10.30 ಗಂಟೆಯಿಂದ
ದಿನಾಂಕ 14/11/2020 ರಂದು ಬೆಳಗಿನ
ಜಾವ 5.00 ಗಂಟೆ ಮದ್ಯ
ಅವಧಿಯಲ್ಲಿ ಮಾರುತಿ ಈತನಿಗೆ ಕುತ್ತಿಗೆಗೆ
ಬಿಗಿದು,
ಯಾವುದೋ
ಆಯುಧದಿಂದ ಹಣೆಯಲ್ಲಿ, ತಲೆಯಲ್ಲಿ ಹೊಡೆದು ಕೊಲೆ ಮಾಡಿರುತ್ತಾರೆ. ಅಂತಾ ನೀಡಿದ
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 172/2020 ಕಲಂ 15(ಎ) 32(3) ಕೆ.ಇ. ಕಾಯ್ದೆ :-
ದಿನಾಂಕ
14/11/2020 ರಂದು 1315 ಗಂಟೆ
ಸುಮಾರಿಗೆ ದ್ರೋಪದಿ ಪಿಎಸ್ಐ ಪಿ.ಎಸ್.ಐ (ಕಾಸು-2) ಗಾಂಧಿಗಂಜ
ಪೊಲೀಸ ಠಾಣೆ ರವರು ಸಿಬ್ಬಂದಿಯೊಂದಿಗೆ ಠಾಣಾ
ಸರಹದ್ದಿಯಲ್ಲಿ ಪೆಟ್ರೋಲಿಂಗ ಮಾಡುತ್ತಾ ಬೀದರ ಬಗದಲ್ ರೋಡ ಚಿದ್ರಿ ರಿಂಗ್ ರೋಡ ಹತ್ತಿರ
ಹೋದಾಗ ಖಚೀತ ಮಾಹಿತಿ ಬಂದಿದೇನೆಂದರೆ, ಚಿದ್ರಿ-ನ್ಯೂ
ಆದರ್ಶ ಕಾಲೋನಿ ರಿಂಗ್ ರೋಡ ಬದಿಯಲ್ಲಿ ಇರುವ ದೀಪ'ಸ್ ಲಿಕ್ಕರ
ಜಂಕ್ಷನ ಮುಂದೆ ಅನಧಿಕೃತವಾಗಿ ಸರಾಯಿ ಕುಡಿಯಲು ಅನುವು ಮಾಡಿಕೊಟ್ಟಿರುತ್ತಾರೆ ಅಂತ ಖಚೀತ ಮಾಹಿತಿ
ಬಂದ ಮೇರೆಗೆ ಚೀದ್ರಿ ರಿಂಗ್ ರೋಡ ಹತ್ತಿರ ದೀಪ್'ಸ್ ಲಿಕ್ಕರ
ಜಂಕ್ಷನ ಹತ್ತಿರ ಹೋಗಿ ಸರಾಯಿ ಕುಡಿಯಲು ಅನುವು ಮಾಡಿಕೊಟ್ಟಿದ್ದನು ನೋಡಿ ಪಂಚರ ಸಮಕ್ಷಮ ದಾಳಿ
ಮಾಡಿ ಸರಾಯಿ ಕುಡಿಯಲು ಅನುವು ಮಾಡಿಕೊಟ್ಟ ಶಾಂತಪ್ಪಾ ತಂದೆ ಶಿವಲಿಂಗಪ್ಪಾ ಸಾವಳಗಿ ವಯ 52 ವರ್ಷ ಜಾತಿ:
ಲಿಂಗಾಯತ ಉದ್ಯೋಗ: ದೀಪ'ಸ್ ಲಿಕರ ಜಕ್ಷಂನದಲ್ಲಿ ಮ್ಯಾನೆಜರ ಸಾ: ಎಸ್.ಬಿ ಕಾಲೇಜ ರಸ್ತೆ
ವಿದ್ಯಾ ನಗರ ಕಲಬುರಗಿ ಈತನ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಸ್ಥಳದಲ್ಲಿ ಟೇಬಲ್ ಮೇಲೆ
ಇದ್ದ 180 ಎಂ.ಎಲ್ ನ
ಒಂದು ಅರ್ದ ಖಾಲಿಯಿದ್ದ ಬ್ಯಾಗಪೈಪರ್ ಪ್ಯಾಕೇಟ,
180
ಎಂ.ಎಲ್ ನ ಅರ್ದ ಖಾಲಿ ಇದ್ದ ಒಂದು ಆಫಿಸರ್ ಚಾಯಿಸ್ಸ ಪ್ಯಾಕೇಟ, ಎರಡು
ಪ್ಲಾಸ್ಟೀಕ ಗ್ಲಾಸಗಳು ಹಾಗೂ ಎರಡು ಕಟ್ಟಿಗೆ ಬೆಂಚಗಳು, ಒಂದು ಕಟ್ಟಿಗೆಯ
ಟೇಬಲ ಜಪ್ತಿ ಮಾಡಿಕೊಂಡು ಅರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 127/2020 ಕಲಂ ಮನುಷ್ಯ ಕಾಣೆ :-
ದಿನಾಂಕ 14/11/2020 ರಂದು 1330 ಗಂಟೆಗೆ ಫಿರ್ಯಾದಿ ಶ್ರೀ ವಿಠಲರಾವ ತಂದೆ ಲಿಂಗಪ್ಪ ಸಾ/ ಚಾಂದೊರಿ ರವರು ಪೊಲೀಸ ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ, ಫಿರ್ಯಾದಿಗೆ ಇಬ್ಬರು ಮಕ್ಕಳಿರುತ್ತಾರೆ. ಇವರ ಮಗನಾದ ಶಶಿಕಾಂತ ವಯ 32 ವರ್ಷ ಈತನು ಸೂಮಾರು 9 ವರ್ಷಗಳಿಂದ ಸೈನಿಕನಾಗಿ ಆಸ್ಸಾಮ ರೈಪಲ್ಸನಲ್ಲಿ ಕರ್ತವ್ಯದ ಮೇಲೆ ಇರುತ್ತಾರೆ. ಇದೀಗ ದಿನಾಂಕ 05/10/2020 ರಿಂದ ಶಶಿಕಾಂತ ಈತನು ರಜೆಯ ಮೇಲೆ ಮನೆಗೆ ಬಂದು ಮನೆಯ ಕಡೆಗೆ ಉಳಿದಿರುತ್ತಾನೆ. ಹೀಗಿರುವಾಗ ದಿನಾಂಕ 08/11/2020 ರಂದು ಶಶಿಕಾಂತ ಈತನು ತನ್ನ ಗೆಳೆಯನಾದ ಅನೀಲ ತಂದೆ ಪರಶುರಾಮ ಪಂಚಾಳ ಈತನ ಕಡೆಗೆ ಹೋಗಿ ಬರುವುದಾಗಿ ಹೇಳಿ ಹೋಗಿರುತ್ತಾನೆ ನಂತರ ಎರಡು ದಿವಸ ಆತನ ಗೆಳೆಯನಾದ ಅನೀಲ ಈತನ ಕಡೆಗೆ ವಾಸವಾಗಿದ್ದು ಇರುತ್ತದೆ. ನಂತರ ದಿನಾಂಕ 10/11/2020 ರಂದು 1400 ಗಂಟೆಯ ಸೂಮಾರಿಗೆ ಫಿರ್ಯಾದಿಯ ಮಗಳ ಮಗನಾದ ಗೋವರ್ಧನ ಈತನು ಬಂದು ವ ತಿಳಿಸಿದ್ದೆನೆಂದರೆ ಶಶಿಕಾಂತನಿಗೆ ಆತನ ಗೆಳೆಯನಾದ ಅನೀಲ ಈತನು 1130 ಗಂಟೆಯ ಸೂಮಾರಿಗೆ ಬೀದರ ನಗರದ ಜನವಾಡ ರೋಡ ವಾಟರ ಟ್ಯಾಂಕ ಹತ್ತಿರ ಕ್ರೊಜರನಲ್ಲಿ ಕೂಡಿಸಿ ಗ್ರಾಮದ ಕಡೆಗೆ ಕಳಿಸಿರುತ್ತೆನೆ ಶಶಿಕಾಂತ ಈತನು ಬಂದಿದ್ದಾನೆಯೆ? ಹೇಗೆ ಅಂತ ಕೇಳಿರುತ್ತಾನೆ ಆಗ ಶಶಿಕಾಂತ ಈತನು ಇನ್ನು ಮನೆಗೆ ಬಂದಿರುವುದಿಲ್ಲಾ ಎಂಬುದಾಗಿ ತಿಳಿಸಿ ನಂತರ ಶಶಿಕಾಂತ ಈತನ ದೂ. ಸಂ. 7085754086 ನೇದ್ದನ್ನು ಫೋನ ಸ್ವಿಚ್ ಆಫ್ ಇರುತ್ತದೆ ಅಂತ ತಿಳಿಸಿದಾಗ ಕೂಡಲೇ ಮಗನ ಇರುವಿಕೆ ಬಗ್ಗೆ ಎಲ್ಲ್ಲಾ ಸಂಬಂಧಿಕರ ಹತ್ತಿರ ಬಂದಿರಬಹುದು ಅಂತ ಫೋನ ಮಾಡಿ ಕೆಳಿದಾಗ ಯಾವುದೇ ಸುಳಿವು ಸಿಕ್ಸಿರುವುದಿಲ್ಲಾ. ಹಾಗೂ ಈ ಬಗ್ಗೆ ಬೀದರ ನಗರಕ್ಕೆ ಬಂದು ಕ್ರೊಜರ ನೇದ್ದರ ಚಾಲಕನಿಗೆ ಮಗನ ಭಾವ ಚಿತ್ರ ತೋರಿಸಿ ವಿಚಾರಿಸಿದಾಗ ಅವನು ಈ ಭಾವಚಿತ್ರದಲ್ಲಿ ತೋರಿಸಿದ ವ್ಯೆಕ್ತಿ ತನ್ನ ವಾಹನದಲ್ಲಿ ಬಂದಿರುವುದಿಲ್ಲಾ ಅಂತ ಹೇಳಿರುತ್ತಾನೆ. ಅಂದಿನಿಂದ ಇಂದಿನವರೆಗೆ ಫೀಯರ್ಾದಿ ರವರ ಮಗ ಕಾಣೆಯಾದ ಬಗ್ಗೆ ಎಲ್ಲಾ ಕಡೆ ಹುಡಕಾಡಿದ್ದು ಯಾವುದೆ ಸುಳಿವು ಸಿಕ್ಸಿರುವುದಿಲ್ಲಾ. ಎಲ್ಲಾ ಕಡೆ ಹುಡಕಾಡಿ ಪೊಲೀಸ ಠಾಣೆಗೆ ಬಂದು ಈ ದೂರು ನೀಡಲು ತಡವಾಗಿರುತ್ತದೆ. ಕಾಣೆಯಾದ ವ್ಯಕ್ತಿಯ ವಿವರ ಈ ಕೆಳಗಿನಂತೆ ಇರುತ್ತದೆ. ಹೆಸರು : ಶಶಿಕಾಂತ ತಂದೆ ಹೆಸರು :-ವಿಠಲರಾವ ವಯಸು - 32 ವರ್ಷ, ಎತ್ತರ 5.7 ಫೀಟ ಚಹರೆ ಪಟ್ಟಿ - ತೆಳ್ಳನೆಯ ಮೈಕಟ್ಟು, ಗೋದಿ ಮೈಬಣ್ಣ, ಇರುತ್ತದೆ. ಧರಿಸಿದ ಬಟ್ಟೆಗಳು :-ಕಪ್ಮ್ಪ ಬಣ್ಣದ ಅಂಗಿ, ನೀಲಕಿ ಬಣ್ಣದ ಜೀನ್ಸ್ ಪ್ಯಾಂಟ್ ಮಾತನಾಡುವ ಭಾಷೆ :-ಮರಾಠಿ, ಹಿಂದಿ ಕನ್ನಡ ಭಾಷೆ ಮಾತನಾಡುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
No comments:
Post a Comment