Police Bhavan Kalaburagi

Police Bhavan Kalaburagi

Sunday, November 29, 2020

BIDAR DISTRICT DAILY CRIME UPDATE 29-11-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 29-11-2020

 

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 102/2020, ಕಲಂ. 279, 304 () .ಪಿ.ಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 29-11-2020 ರಂದು ಫಿರ್ಯಾದಿ ಶಕ್ತಿ ತಂದೆ ನಾಮದೇವ ವಯ: 30 ವರ್ಷ, ಸಾ: ಬಸವನಗರ ಭಾಲ್ಕಿ, ಸದ್ಯ: ನೌಬಾದ ಬೀದರ ರವರು ಮತ್ತು ಸಂತೋಷ ತಂದೆ ಮಧುಕರ ಕಸಬೆ, ವಯ: 40 ವರ್ಷ, ಜಾತಿ: ಮಂಗರವಾಡಿ, ಸಾ: ಬಸವ ನಗರ ಭಾಲ್ಕಿ, ಸದ್ಯ: ನೌಬಾದ ಬೀದರ ಇಬ್ಬರು ಕೂಡಿಕೊಂಡು ಚೌಳಿ ಕಮಾನ ಹತ್ತಿರ ರಸ್ತೆಯಲ್ಲಿ ಝೊಪಡಿಯಿಂದ ನೌಬಾದ ಬಸವೇಶ್ವರ ವೃತ್ತಕ್ಕೆ ಎಮ್ಮೆ ಬೊಳಿಸುವ ಕೆಲಸಕ್ಕೆ ಹೋಗುವಾಗ ಫಿರ್ಯಾದಿಯು ಸಂಡಾಸಕ್ಕೆ ಹೋಗಲು ಚಹಾ ಭಂಡಿಯಲ್ಲಿ ನೀರು ತೆಗೆದುಕೊಂಡು ಹೋಗುವಷ್ಟರಲ್ಲಿ ಭಾಲ್ಕಿ ಕಡೆಯಿಂದ ಟ್ಯಾಂಕರ ಲಾರಿ ನಂ. 9501 ನೇದ್ದರ ಚಾಲಕನದ ಆರೋಪಿಯು ತನ್ನ ಲಾರಿಯನ್ನು ಅತೀ ವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನೌಬಾದ ಬಸವೇಶ್ವರ ವೃತ್ತದ ಹತ್ತಿರ ಸಂತೋಷನಿಗೆ ಡಿಕ್ಕಿ ಮಾಡಿ ಕೊಳಾರ ಕಡೆಗೆ ಓಡಿ ಹೋಗಿರುತ್ತಾನೆ, ಸದರಿ ವಾಹನದ ಪಾಸಿಂಗ್ ಮತ್ತು ಸಿರಿಜ್ ನೋಡಿರುವದಿಲ್ಲ, ನಂತರ ಸಂತೋಷ ಇತನಿಗೆ ನೋಡಲಾಗಿ ಆತನ ಎದೆಯಲ್ಲಿ ಭಾರಿ ಗುಪ್ತಗಾಯ, ತಲೆಯ ಹಿಂದೆ ರಕ್ತಗುಪ್ತಗಾಯವಾಗಿ ಮೂಗಿನಿಂದ ರಕ್ತ ಬಂದಿರುತ್ತದೆ, ಎಡಗೈ ಮೊಳಕೈ ಮತ್ತು ಎಡಗಾಲ ಮೊಳಕಾಲ ಮುರಿದಿರುತ್ತದೆ, ಬಲಬುಜದ ಹತ್ತಿರ ಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: