ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 27-12-2020
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 146/2020 ಕಲಂ 392 ಐಪಿಸಿ :-
ದಿನಾಂಕ 26/12/2020 ರಂದು 2000 ಗಂಟೆಗೆ ಫಿರ್ಯಾದಿ
ಶ್ರೀಮತಿ. ಸಂಗೀತಾ ಗಂಡ ರಾಮಶೆಟ್ಟಿ ಮಸೂದಿ ವಯ:54 ವರ್ಷ ಜಾತಿ:ಲಿಂಗಾಯತ
ಉ:ಮನೆಗೆಲಸ ಸಾ/ಗುರುನಗರ ಬೀದರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ ದಿನಾಂಕ 26/12/2020 ರಂದು ಸಾಯಂಕಾಲ 7:15 ಪಿ.ಎಮ್. ಗಂಟೆಯ
ಸುಮಾರಿಗೆ ಫಿರ್ಯಾದಿ ರವರು ತಮ್ಮ ಪತಿಯೊಂದಿಗೆ ತಗಾರೆ ಕ್ರಾಸ ಕಡೆಯಿಂದ ಬೀದರ ಬಸ್ ನಿಲ್ದಾಣದ
ಕಡೆಗೆ ರೋಡಿನ ಮೇಲೆ ನಡೆದುಕೊಂಡು ಬರುವಾಗ ಎದುರಿನಿಂದ
ಎರಡು ಜನ ಅಪರಿಚಿತ ವ್ಯಕ್ತಿಗಳು ಒಂದು ದ್ವಿಚಕ್ರ ವಾಹಾನದ ಮೇಲೆ ಬಂದು ಕೊರಳಲ್ಲಿದ್ದ 50 ಗ್ರಾಂ ತೂಕದ ಬಂಗಾರದ
ಗಂಠನ ಸರ ಅ.ಕಿ. 2,00,000 ನೇದನ್ನು ಕಿತ್ತಿಕೊಂಡು ಮೊಟರ ಸೈಕಲನ್ನು
ಓಡಿಸಿಕೊಂಡು ತಗಾರೆ ಕ್ರಾಸ ಕಡೆಗೆ
ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 147/2020 ಕಲಂ 279, 304(ಎ) ಐಪಿಸಿ ಜೊತೆ 187 ಐಎಮ್.ವಿ ಕಾಯ್ದೆ :-
ದಿನಾಂಕ: 26/12/2020 ರಂದು ಫಿರ್ಯಾದಿ ಶ್ರೀಮತಿ ಸಾಬೇರಾಬೇಗಂ ಗಂಡ ಮೃತ ಸೈಯದ ಅಬ್ದುಲ್ ಗಫಾರ ವಯ 45 ವರ್ಷ ಉದ್ಯೋಗ: ಮನೆ ಕೆಲಸ ಸಾ: ಕೋಳಾರ (ಕೆ) ರವರು ನೀಡಿದ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿ ಗಂಡನಾದ ಸೈಯದ ಅಬ್ದುಲ್ ಗಫಾರ ವಯ 53 ವರ್ಷ ರವರು ಬೀದರನ ಬಿ.ವಿ.ಬಿ ಕಾಲೇಜಿನಲ್ಲಿ ಅಟೆಂಡರ ಅಂತ ಕೆಲಸ ಮಾಡಿಕೊಂಡಿದ್ದರು. ಗಂಡನ ಹತ್ತಿರ ಒಂದು ಟಿ.ವಿ.ಎಸ್ ಮೋಫಾಯಿಸ್ ಮೋಟಾರ ಸೈಕಲ್ ಇದ್ದು, ಅದರ ನಂ. ಕೆಎ-38/ಡಬ್ಲ್ಯೂ-0734 ಇರುತ್ತದೆ. ಸದರಿ ಮೋಟಾರ ಸೈಕಲ್ ಮೇಲೆ ದಿನಾಲು ಭೂಮಾರೆಡ್ಡಿ ಕಾಲೇಜಿಗೆ ಬೆಳಗೆ ಡ್ಯೂಟಿಗೆ ಹೋಗಿ ಸಾಯಂಕಾಲ ಮರಳಿ ಮನೆಗೆ ಬರುತ್ತಿದ್ದರು. ಹೀಗಿರುವಲ್ಲಿ ದಿನಾಂಕ 26/12/2020 ರಂದು ರಜೆಯಿದ್ದ ಪ್ರಯುಕ್ತ ಮನೆಯಲ್ಲಿ ಉಳಿದುಕೊಂಡಿದ್ದು, ಸಾಯಂಕಾಲ 7.00 ಪಿ.ಎಂ ಗಂಟೆ ಸುಮಾರಿಗೆ ರೆಷ್ಮೆ ಇಲಾಖೆಯ ಎದುರುಗಡೆ ಇರುವ ಮೋಟಾರ ಸೈಕಲ್ಗೆ ಪೆಟ್ರೋಲ್ ಹಾಕಿಕೊಂಡು ಬರುತ್ತೇನೆ ಅಂತ ಹೇಳಿ ಮೋಟಾರ ಸೈಕಲ್ ತೆಗೆದುಕೊಂಡಿರುತ್ತಾರೆ. ಮೋಟಾರ ಸೈಕಲ್ ನಂ. ಕೆಎ-38/ಡಬ್ಲ್ಯೂ-0734 ನೇದರ ಮೇಲೆ ಹೋಗುವಾಗ ಬೀದರ ಹುಮನಾಬಾದ ರೋಡಿನ ಮೇಲೆ ರೇಷ್ಮೆ ಇಲಾಖೆ ಕಾರ್ನರ್ ಹತ್ತಿರ ಒಂದು ಕೆ.ಎಸ್.ಆರ್.ಟಿ.ಸಿ ಬಸ್ಸ ಚಾಲಕನು ತನ್ನ ಬಸ್ಸನ್ನು ವೇಗವಾಗಿ ನಡೆಸಿಕೊಂಡು ಬಂದು ಮೋಟಾರ ಸೈಕಲ್ಗೆ ಡಿಕ್ಕಿ ಮಾಡಿದ್ದರಿಂದ ಫಿರ್ಯಾದಿ ಗಂಡ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಡಿಕ್ಕಿ ಮಾಡಿರುವ ಬಸ್ ನಂ ನಂಬರ ಕೆಎ-32/ಎಫ-2338. ಇರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಬಸವಕಲ್ಯಾಣ
ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 153/2020 ಕಲಂ 78(3) ಕೆಪಿ ಕಾಯ್ದೆ :-
ದಿನಾಂಕ:26/12/2020 ರಂದು 14:00 ಗಂಟೆಗೆ ಜಿ.ಎಂ.ಪಾಟೀಲ್ ಪಿ.ಎಸ.ಐ [ಕಾ&ಸು] ಪೊಲೀಸ್ ಠಾಣೆಯಲ್ಲಿರುವಾಗ ಬಸವಕಲ್ಯಾಣ ನಗರದ ಖಿಲಾ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತು ಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಭಾತ್ಮಿಯಂತೆ ಹೋಗಿ ನೋಡಿದಾಗ ಖಿಲಾ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಸಾರ್ವಜನಿಕರಿಗೆ 1 ರೂಪಾಯಿಗೆ 90/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಳ್ಳುವುದನ್ನು ನೋಡಿ ಸಮಯ 16:30 ಗಂಟೆಗೆ ಎಲ್ಲರು ಒಮ್ಮಲೆ ದಾಳಿಮಾಡಿ ಹಿಡಿದ ಇಬ್ಬರು ವ್ಯಕ್ತಿಗಳಿಗೆ ಅವರ ಹೆಸರು ಮತ್ತು ವಿಳಾಸ ವಿಚಾರಿಸಲು 1] ಬಬ್ಲೂ ತಂದೆ ಖಾಸಿಮ ಖಾನ ಪಠಾಣ ವಯಸ್ಸು// 22 ವರ್ಷ ಜಾತಿ// ಮುಸ್ಲಿಂ ಉ// ಟೇಲರ ಕೆಲಸ ಸಾ// ರಿಕ್ಷಾ ಕಾಲೋನಿ ಬಸವಕಲ್ಯಾಣ ಇತನ ಅಂಗ ಶೋಧನೆ ಮಾಡಲು ಇತನ ಹತ್ತಿರ ನಗದು ಹಣ 2100/-ರೂ,ಮತ್ತು 02 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಸಿಕ್ಕಿರುತ್ತದೆ. 2] ಇಮ್ರಾನ್ ತಂದೆ ಶೇರಖಾನ್ ಪಠಾಣ ವಯಸ್ಸು//25 ವರ್ಷ ಜಾತಿ//ಮುಸ್ಲಿಂ ಉ//ಬಟ್ಟೆ ವ್ಯಾಪಾರ ಸಾ//ಗಾಡವಾನಗಲ್ಲಿ ಬಸವಕಲ್ಯಾಣ ಇತನ ಅಂಗ ಶೋಧನೆ ಮಾಡಲು ಇತನ ಹತ್ತಿರ ನಗದು ಹಣ 2050/-ರೂ,ಮತ್ತು 02 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಸಿಕ್ಕಿರುತ್ತದೆ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
No comments:
Post a Comment