Police Bhavan Kalaburagi

Police Bhavan Kalaburagi

Friday, January 1, 2021

BIDAR DISTRICT DAILY CRIME UPDATE 01-01-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 01-01-2021

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 27/2020, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 31-12-2020 ರಂದು ಫಿರ್ಯಾದಿ ವೀರಣ್ಣಾ ತಂದೆ ನಿಲೇಶ ಹುಬ್ಬಾರೆ ವಯ: 40 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ:ರಂಡಗಿ ರವರ ಮಗನಾದ ಪ್ರವೀಣ ತಂದೆ ವೀರಣ್ಣಾ ಹುಬ್ಬಾರೆ ವಯ: 16 ವರ್ಷ ಇತನು ಮನೆಯಲ್ಲಿ ಯಾರು ಇಲ್ಲದ ಸಮಯವನ್ನು ನೋಡಿ ತನ್ನ ಮಾನಸೀಕ ಅಸ್ವಸ್ಥ ಅವಸ್ಥೆಯಲ್ಲಿ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನೆಯಲ್ಲಿರುವ ಕಟ್ಟಿಗಿಗೆ ಹಾಕಿರುವ ಕೊಂಡಿಗೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ, ತನ್ನ ಮಗನ ಸಾವಿನಲ್ಲಿ ನನ್ನದು ಯಾರ ಮೇಲೆ ಯಾವುದೇ ತರಹದ ದೂರು ಅಥವಾ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 54/2020, ಕಲಂ. 279, 304() ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 31/12/2020 ರಂದು 1415 ಗಂಟೆಗೆ ಫಿರ್ಯಾದಿ ಅಜಮತ ಅಲಿ ತಂದೆ ರಾಜ ಮೋಹ್ಮದ ಸಂಗೋಳಗಿವಾಲೆ ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ: ಕಮಠಾಣಾ ರವರು ತನ್ನ ಹೋಟಲಲ್ಲಿ ಕೆಲಸ ಮಾಡುವ ರಜಾಕಮಿಯ್ಯ ತಂದೆ ಮೋಯಿಜಮಿಯ್ಯ ಬುಡವಾಲೆ ವಯ: 22 ವರ್ಷ ಇತನಿಗೆ ಕಿರಾಣಿ ಸಾಮಾನು ತರಲು ಹೇಳಿದಂತೆ ಅವನು ಹೋಟಲ ಹೊರಗೆ ಬಂದು ಕಿರಾಣಿ ಅಂಗಡಿಗೆ ಹೋಗುವಾಗ ಹೋಟಲ ಹತ್ತಿರ ಹಿಂದಿನಿಂದ ಅಂದರೆ ಬೀದರ ಕಡೆಯಿಂದ ಲಾರಿ ನಂ. ಕೆಎ-23/-2189 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಜಾಕಮಿಯ್ಯ ಇತನಿಗೆ ಅಪಘಾತಪಡಿಸಿ ಲಾರಿಯ ಮುಂದಿನ ಟೈರ ರಜಾಕಮಿಯ್ಯ ಇತನ ಎಡಗಡೆಯ ಭಕಾಳಿ ಮೇಲೆ ಹಾಯಿಸಿದ್ದರಿಂದ ಆತನ ಎಡಗಡೆಯ ಭಕಾಳಿಗೆ ಭಾರಿ ಗುಪ್ತಗಾಯ ಮತ್ತು ಬಲಗಾಲ ಮೋಳಕಾಲ ಕೆಳಗೆ ಭಾರಿ ಗುಪ್ತಗಾಯವಾಗಿ ಕಾಲು ಮುರಿದಿರುತ್ತದೆ ಮತ್ತು ಮೋಳಕಾಲಿಗೆ ತರಚಿದ ಗಾಯ ಸಹ ಆಗಿರುತ್ತದೆ, ಕೂಡಲೇ ಫಿರ್ಯಾದಿ ಮತ್ತು ತಮ್ಮೂ ಮೋಹ್ಮದ ಶಫೀ ತಂದೆ ಗುಡುಸಾಬ ಮದರಸಾಬವಾಲೆ ಇಬ್ಬರು ನೋಡಿ ರಜಾಕಮಿಯ್ಯ ಇತನಿಗೆ 108 ಅಂಬುಲೆನ್ಸದಲ್ಲಿ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರಗೆ ತಂದಾಗ ವೈದ್ಯರು ನೋಡಿ ರಜಾಕಮಿಯ್ಯ ಇತನು ಮೃತಪಟ್ಟಿರುತ್ತಾನೆ ಅಂತ ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 109/2020, ಕಲಂ. 302, 201 ಐಪಿಸಿ :-

ದಿನಾಂಕ 26-12-2020 ರಂದು 2030 ಗಂಟೆಯಿಂದ ದಿನಾಂಕ 30-12-2020 ಮದ್ಯಾವಧಿಯಲ್ಲಿ ಯಾರೋ ಅಪರಿಚಿತರು ಯಾವದೋ ಉದ್ದೇಶಕ್ಕಾಗಿ ಫಿರ್ಯಾದಿ ಸಮಾಧಾನ ತಂದೆ ನೀಲಪ್ಪಾ ಕೋಕಣೆ ವಯ: 38 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಮದಕಟ್ಟಿ ರವರ ತಮ್ಮನಿಗೆ ಎಲ್ಲಿಯೋ ಕೊಲೆ ಮಾಡಿ ಕೊಲೆ ಮಾಡಿದ ವಿಷಯ ಹಾಗೂ ಸಾಕ್ಷಿ ನಾಶ ಪಡಿಸುವ ಸಲುವಾಗಿ ಗೋರ್ಟಾ (ಬಿ) ಶಿವಾರದಲ್ಲಿರುವ ಅರಣ್ಯ ಪ್ರದೇಶದಲ್ಲಿ ತಂದು ಶವವನ್ನು ಬಿಸಾಡಿ ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 31-12-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ ಠಾಣೆ ಬೀದರ ಅಪರಾಧ ಸಂ. 200/2020, ಕಲಂ. 20(ಬಿ) ಮತ್ತು 2() ನ್.ಡಿ.ಪಿ.ಎಸ್ ಕಾಯ್ದೆ :-

ದಿನಾಂಕ 31-12-2020 ರಂದು ಆದರ್ಶ ಕಾಲೋನಿಯ ರೈಲ್ವೇ ಟ್ರ್ಯಾಕ್ ಹತ್ತಿರ ಇಬ್ಬರು ವ್ಯಕ್ತಿಗಳು ಒಂದು ಬ್ಯಾಗಿನಲ್ಲಿ ಗಾಂಜಾ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಮಂಜನಗೌಡ ಪಾಟೀಲ ಪಿಎಸಐ-2 ಗಾಂಧಿಗಂಜ ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಳೆ ಆದರ್ಶ ಕಾಲೋನಿಯ ಹಿಂದುಗಡೆಯಿಂದ ಮರೆಯಾಗಿ ನಿಂತು ನೋಡಲು ಇಬ್ಬರು ವ್ಯಕ್ತಿಗಳು ಒಂದು ಬ್ಯಾಗಿನಲ್ಲಿ ಗಾಂಜಾ ಸಾಗಾಣಿಕೆ ಮಾಡುವ ಬಗ್ಗೆ ದೃಡಪಡಿಸಿಕೊಂಡು ಅವರು ಅಲ್ಲಿಂದ ಕದಲದಂತೆ ನೋಡಿಕೊಂಡು ಅವರ ಹೆಸರು ವಿಚಾರಿಸಲಾಗಿ 1) ರಮೇಶ ತಂದೆ ಬಿಕ್ಕು ವಯ: 25 ರ್ಷ, ಜಾತಿ: ಲಮಾಣಿ, ಸಾ: ಖರಸಗುತ್ತಿ ಗಂಗಾರಾಮ ಥಾಂಡಾ, 2) ಶ್ರೀನಿವಾಸ ತಂದೆ ಮಾಣಿಕ ವಯ: 22 ವರ್ಷ, ಜಾತಿ: ಲಮಾಣಿ, ಸಾ: ಖರಸಗುತಿ್ತ ಗಂಗಾರಾಮ ಥಾಂಡಾ ಅಂತಾ ತಿಳಿಸಿದ್ದು, ಸದರಿ ಗಾಂಜಾವನ್ನು ಬಾಲಾಜಿ ತಾಂಡಾ ರಾಠೋಡ ಎಂಬುವವನಿಂದ ಪಡೆದುಕೊಂಡು ಬೀದರನ ಇರಾನಿ ಗಲ್ಲಿಯ ಜೋಯಾ ಎಂಬ ಮಹಿಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ನುಡಿದಿದ್ದು, ನಂತರ ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 77/2020, ಕಲಂ. ಮನುಷ್ಯ ಕಾಣೆ :-

ದಿನಾಂಕ 29-12-2020 ರಂದ 1130 ಗಂಟೆಯ ಸುಮಾರಿಗೆ ಕು.ಸಂತೋಷಿ ತಂದೆ ಕರಬಸಪ್ಪಾ ಖಂಡಗೊಂಡಾ ವಯ: 26 ವರ್ಷ, ಜಾ:ಎಸ.ಟಿ ಗೊಂಡಾ, ಉ: ವಿದ್ಯಾರ್ಥಿ, ಸಾ: ಜಲಸಂಗಿ, ತಾ: ಹುಮನಾಬಾದ ಇವಳು ಬೀದರ ನಗರದ ಬಸವೇಶ್ವರ ವೃತದ ಹತ್ತಿರದಿಂದ ಕಾಣೆಯಾಗಿರುತ್ತಾಳೆಂದು ಫಿರ್ಯಾದಿ ಕರಬಸಪ್ಪಾ ತಂದೆ ಶಿವರಾಮ ಖಂಡಗೊಂಡಾ ವಯ: 68 ವರ್ಷ, ಜಾತಿ: ಎಸ.ಟಿ ಗೊಂಡಾ, ಸಾ: ಜಲಸಂಗಿ, ತಾ: ಹುಮನಾಬಾದ ರವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 117/2020, ಕಲಂ. 498 (), 323, 504, 506 ಐಪಿಸಿ :-

ಫಿರ್ಯಾದಿ ಸುರಯ್ಯಾ ಗಂಡ ತಬರೇಜ ನಿಡವಾಳವಾಲೆ ವಯ: 21 ವರ್ಷ, ಜಾತಿ: ಮುಸ್ಲಿಂ, ಸಾ: ಮನ್ನಾಎಖೇಳ್ಳಿ ರವರಿಗೆ 6 ವರ್ಷಗಳ ಹಿಂದೆ ಮನ್ನಾಎಖೇಳ್ಳಿ ಗ್ರಾಮದ ತಬರೇಜ ತಂದೆ ಇಸ್ಮಾಯೀಲ ಸಾಬ ನಿಡವಾಳವಾಲೆ ಈತನ ಜೊತೆ ಪ್ರೀತಿಸಿ ಮದುವೆ ಮಾಡಿಕೊಂಡಿದ್ದು, ಫಿರ್ಯಾದಿಗೆ ಇದುವರೆಗೆ ಮಕ್ಕಳಾಗಿರುವುದಿಲ್ಲ, ಮದುವೆ ದ ಮೇಲೆ ಕೆಲವು ದಿವಸ ಗಂಡ ಫಿರ್ಯಾದಿಯವರ ಜೊತೆ ಚೆನ್ನಾಗಿ ಉಳಿದು ಸಂಸಾರ ಮಾಡಿ ನಂತರ ಗಂಡ ದಿನಾಲೂ ಸರಾಯಿ ಕುಡಿದು ಬಂದು ನೀನು ನನ್ನ ಜೊತೆ ಓಡಿ ಬಂದು ಮದುವೆ ಮಾಡಿಕೊಂಡಿದ್ದಿ ನೀನು ಬೇರೆಯವನ ಜೊತೆ ಇದ್ದಿ, ಅವಾರಾ ಇದ್ದಿ ಅಂತಾ ಫಿರ್ಯಾದಿಯ ಶೀಲ ಮೇಲೆ ಸಂಶಯ ಮಾಡಿ ದಿನಾಲೂ ಅವಾಚ್ಯ ಶಬ್ದಗಳಿಂದ ಬೈಯುವುದು ಹೊಡೆಯುವುದು ಮಾಡುತ್ತಾ ದೈಹೀಕ ಹಾಗೂ ಮಾನಸೀಕ ಕಿರುಕುಳ ನೀಡುತ್ತಾ ಬಂದಿರುತ್ತಾನೆ, ಹೀಗಿರುವಾಗ ದಿನಾಂಕ 31-12-2020 ರಂದು ಫಿರ್ಯಾದಿಯ ತಾಯಿ ಜೈನಾಬೀ ಹಾಗೂ ಅಣ್ಣಾ ಅಬ್ದುಲ ಗನಿ ಇವರಿಗೆ ತಿಳಿಸಿ ನನಗೆ ಇಲ್ಲಿಂದ ತವರು ಮನೆಗೆ ಕರೆದುಕೊಂಡು ಹೊಗಿ ಇತನಿಂದ ಸಾಕಾಗಿದೆ ಅಂತಾ ಹೇಳಿದಾಗ ತಾಯಿ ಹಾಗೂ ಅಣ್ಣಾ ಇಬ್ಬರೂ ಫಿರ್ಯಾದಿಗೆ ಹುಮನಾಬಾದಕ್ಕೆ ಕರೆದುಕೊಂಡು ಹೋಗಲು ಮನ್ನಾಎಖೇಳ್ಳಿಗೆ ಬಂದಾಗ ಗಂಡ ಮನೆಗೆ ಬಂದು ಇವತ್ತು ಊಟಕ್ಕೆ ಏನು ಮಾಡಲಿಲ್ಲ, ನಿನಗೆ ಬಹಳ ಸೊಕ್ಕು ಬಂದಿದೆ, ಯಾಕೆ ನಿನ್ನ ತಾಯಿ ಹಾಗೂ ಅಣ್ಣಾನಿಗೆ ಕರೆಯಿಸಿದ್ದಿ ಅಂತ ಇವತ್ತು ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಫಿರ್ಯಾದಿಯ ಕೈಹಿಡಿದು ಝೀಂಜಾ ಮುಷ್ಠಿ ಮಾಡಿ ತನ್ನ ಕೈಯಿಂದ ಮುಖದ ಮೇಲೆ, ತಲೆಯ ಮೇಲೆ, ಎಡಗೈ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 159/2020, ಕಲಂ. 3 & 7 ಇ.ಸಿ ಕಾಯ್ದೆ ಮತ್ತು ಕಲಂ. 18(ಎ), ದಿ ಕರ್ನಾಟಕ ಎಸೆನಶಿಯಲ್ ಕಮೊಡಿಟಿಸ್ (ಪಿ.ಡಿ.ಎಸ್ ಸಿಸ್ಟಂ) ಕಂಟ್ರೋಲ್ ಆರ್ಡರ್ 1992 :-

ದಿನಾಂಕ 30-12-2020 ರಂದು ಬ್ಯಾಲಹಳ್ಳಿ ಗ್ರಾಮದ ಮಸ್ಜಿದ ಕಾಂಪ್ಲೇಕ್ಸನಲ್ಲಿ ಪೂರ್ವ ದಿಕ್ಕಿಗೆ ಮುಖ ಮಾಡಿ ಶಟರ ಇರುವ ಎರಡು ಕೊಣೆಗಳಲ್ಲಿ ಅನಧಿಕೃತವಾಗಿ ಸರ್ಕಾರದಿಂದ ಸಾರ್ವಜನಿಕರಿಗೆ ಮತ್ತು ವಿವಿಧ ಇಲಾಖೆಗಳಿಗೆ ವಿತರಿಸುವ ಪಿ.ಡಿ.ಸ್ ಗೆ ಸಂಬಂಧಿಸಿದ ಅಕ್ಕಿ ಮತ್ತು ಗೋಧಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿ ಇಟ್ಟಿರುತ್ತಾರೆಂದು ಅಂತ ಫಿರ್ಯಾದಿ ಮಿಲನಕುಮಾರ ಆಹಾರ ಶಿರೆಸ್ತೆದಾರರು ತಹಸಿಲ್ದಾರ ಕಚೇರಿ ಭಾಲ್ಕಿ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಅವರಯ ಮುಂದಿನ ಕ್ರಮ ಕುರಿತು ತಹಸಲ್ದಾರರು ಭಾಲ್ಕಿ ರವರಿಗೆ ಪತ್ರ ಬರೆದು ವಿನಂತಿಸಿಕೊಂಡಾಗ ತಹಸಿಲ್ದಾರರು ಭಾಲ್ಕಿ ರವರ ಸೂಚನೆ ಪತ್ರ ನೀಡಿದ ಮೇರೆಗೆ ಆಹಾರ ನಿರೀಕ್ಷಕರುಗಳಾದ ಪರಮೇಶ್ವರ ಬಚ್ಚಣ್ಣ, ಸುನೀಲ್ ಜಿಂದೆ ಮತ್ತು ಗಣಪತಿ ಎ.ಎಸ್. ಧನ್ನೂರಾ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರೊಡನೆ ಬ್ಯಾಲಹಳ್ಳಿ ಗ್ರಾಮದ ಬಸ ನಿಲ್ದಾಣಕ್ಕೆ ಹೊಗಿ ಇಬ್ಬರು ಪಂಚರನ್ನು ಬರಮಾಡಿಕೊಂಡು ಬಾತ್ಮಿಯಂತೆ ಬ್ಯಾಲಹಳ್ಳಿ ಗ್ರಾಮದ ಮಸ್ಜಿದ ಕಾಂಪ್ಲೇಕ್ಸನಲ್ಲಿ ಪೂರ್ವ ದಿಕ್ಕಿಗೆ ಮುಖ ಮಾಡಿ ಶಟರ ಇರುವ ಎರಡು ಕೊಣೆಗಳ ಹತ್ತಿರ ಹೊಗಿ ನೊಡಲು ಸದರಿ ಕೊಣೆಗಳ ಮುಂದೆ ಅಕ್ಕಿಯ ಕಾಳುಗಳು ಬಿದ್ದಿರುವುದು ಕಂಡು ಬಂದಿರುತ್ತದೆ ಮತ್ತು ಸ್ಥಳದಲ್ಲಿ ಯಾರು ಉಸ್ತುವಾರಿ ನೊಡಿಕೊಳ್ಳುವವರು ಇರುವುದಿಲ್ಲ, ನಂತರ ಎರಡು ಕೊಣೆಗಳ ಶಟರಗಳ ಬೀಗ ತೆರೆದು ಶಟರ ಎತ್ತಿ ಒಳಗಡೆ ಹೊಗಿ ನೊಡಲು ಸರಕಾರದಿಂದ ಸಾರ್ವಜನಿಕರಿಗೆ ಮತ್ತು ವಿವಿಧ ಇಲಾಖೆಗಳಿಗೆ ವಿತರಿಸುವ ಪಿ.ಡಿ.ಸ್ ಗೆ ಸಂಬಂಧಿಸಿದ ಅಕ್ಕಿ ಮತ್ತು ಗೋಧಿ ತುಂಬಿದ ಚೀಲಗಳು ಕಂಡು ಬಂದಿರುತ್ತವೆ, ಸದರಿ ಚಿಲಗಳು ಪರೀಶಿಲಿಸಿ ನೊಡಲು ಸದರಿ ಚೀಲಗಳಲ್ಲಿ ಸರ್ಕಾರದಿಂದ ಸಾರ್ವಜನಿಕರಿಗೆ ಮತ್ತು ವಿವಿಧ ಇಲಾಖೆಗಳಿಗೆ ವಿತರಿಸುವ ಪಿ.ಡಿ.ಎಸ್ ಗೆ ಸಂಬಂಧಿಸಿದ ಅಕ್ಕಿ ಮತ್ತು ಗೋಧಿ ಇರುವದು ಕಂಡು ಬಂದಿರುತ್ತದೆ, ನಂತರ ಸದರಿ ಚೀಲಗಳು ಎಣಿಸಿ ನೊಡಲು 1) ತಲಾ 40 ಕೆ.ಜಿ ಅಕ್ಕಿ ಇರುವ 60 ಪ್ಲಾಸಿಕ ಚಿಲಗಳು ಇದ್ದು ಒಟ್ಟು 24 ಕ್ವಿಂಟಲ್ ಅಕ್ಕಿ ಇದ್ದು ಅದರ ಅ.ಕಿ. 52,800/- ರೂ. ಮತ್ತು 2) ತಲಾ 40 ಕೆ.ಜಿ ಗೋಧಿ ಇರುವ 10 ಪ್ಲಾಸ್ಟಿಕ ಚೀಲಗಳು ಇದ್ದು ಒಟ್ಟು 4 ಕ್ವಿಂಟಲ್ ಗೋಧಿ ಇದ್ದು ಅದರ ಅ.ಕಿ 8,800/- ರೂಪಾಯಿ ಬೇಲೆ ಇರುತ್ತದೆ, ನಂತರ ಎಲ್ಲಾ ಅಕ್ಕಿ ಮತ್ತು ಗೋಧಿಯ ಚೀಲಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು, ನಂತರ ಸ್ಥಳದಲ್ಲಿ ವಿಚಾರಣೆ ಮಾಡಲು ಅಲ್ಲಿ ಗೊತ್ತಾಗಿದ್ದೇನೆಂದರೆ ಸದರಿ ಕೊಣೆಗಳನ್ನು 1) ಅಕ್ಬರ ಸಾ: ಹಳ್ಳಿಖೇಡ[ಬಿ], 2) ಖಾಲಿದ ಸಾ: ಹಳ್ಳಿಖೇಡ[ಬಿ] ಮತ್ತು 3) ಲತೀಫ್ ಸಾ: ಬ್ಯಾಲಹಳ್ಳಿ ರವರು ವ್ಯಾಪಾರ ಮಾಡುವ ಕುರಿತು ಬಾಡಿಗೆಯಿಂದ ಪಡೆದುಕೊಂಡಿದ್ದು ಸದರಿ ಅಕ್ಕಿ ಮತ್ತು ಗೋಧಿಯನ್ನು ಅಕ್ರಮವಾಗಿ ಸಂಗ್ರಹಿಸಿರುತ್ತಾರೆ ಅಂತ ಗೊತ್ತಾಗಿರುತ್ತದೆ, ಕಾರಣ ಸರ್ಕಾರದಿಂದ ಸಾರ್ವಜನಿಕರಿಗೆ ಮತ್ತು ವಿವಿಧ ಇಲಾಖೆಗಳಿಗೆ ವಿತರಿಸುವ ಪಿ.ಡಿ.ಸ್ ಗೆ ಸಂಬಂಧಿಸಿದ ಅಕ್ಕಿ ಮತ್ತು ಗೋಧಿಯನ್ನು ಅನಧಿಕೃತವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿದ ಸದರಿ ಆರೋಪಿತರ ವಿರುದ್ಧ ದಿನಾಂಕ 31-12-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: