ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 03-01-2021
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ಸಂ. 01/2021, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ನಾಗಪ್ಪಾ ತಂದೆ ಶಂಕರೆಪ್ಪಾ ಕಾಮಣ್ಣನವರ ವಯ: 50 ವರ್ಷ, ಸಾ: ಚಿಟ್ಟಾ ವಾಡಿ ರವರ ಮಗನಾದ ಕಿರಣ ವಯ: 20 ವರ್ಷ ಇತನು ಕಳೆದ ವರ್ಷ 10ನೇ ತರಗತ್ತಿಯಲ್ಲಿ ಅನುತ್ತಿರ್ಣನಾಗಿದ್ದು, ಅಲ್ಲದೇ ಅನುತ್ತಿರ್ಣನಾದ ವಿಷಯಗಳ ಉತ್ತಿರ್ಣನಾಗುವ ಬಗ್ಗೆ ತಯಾರಿಯಲ್ಲಿದ್ದು, ಅಲ್ಲದೇ ತನಗೆ ಒಂದು ಮೋಟಾರ ಸೈಕಲ ಖರೀದಿಸಿ ಕೊಡಿ ಅಂತ ಆಗಾಗ ಹೇಳುತ್ತಿದ್ದನು, ಮೋಟಾರ ಸೈಕಲ್ ಖರೀದಿಸಲು ಹತ್ತಿರ ಹಣ ಇಲ್ಲದ ಕಾರಣ ಖರಿದಿಸಲು ಆಗುವದಿಲ್ಲಾ ಅಂತ ಹೇಳಿದಕ್ಕೆ ಕಿರಣ ಇತನು ಮನೆಯಲ್ಲಿ ಯಾರು ಇಲದನ್ನು ನೋಡಿ ತನಗೆ ಮೋಟಾರ ಸೈಕಲ್ ಕೊಡಿಸಿಲ್ಲಾ ಅಂತ ಮನನೊಂದು ದಿನಾಂಕ 02-01-2021 ರಂದು 0800 ಗಂಟೆಯಿಂದ 0930 ಗಂಟೆಯ ಅವಧಿಯಲ್ಲಿ ತಮ್ಮ ಮನೆಯ ಛಾವಣಿಯ ಕಟ್ಟಿಗೆಗೆ ಸೀರೆಯಿಂದ ನೇಣು ಹಾಕಿಕೊಂಡಿದನ್ನು ನೋಡಿ ಕೂಡಲೇ ಆತನಿಗೆ ಕೆಳಗೆ ಇಳಿಸಿ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಸಿದಾಗ ವೈದ್ಯರು ಪರಿಕ್ಷಿಸಿ ಕಿರಣ ಇತನು ಮೃತಪಟ್ಟಿರುತ್ತಾನೆಂದು ತಿಳಿಸಿರುತ್ತಾರೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಾರ್ಕೆಟ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 01/2021, ಕಲಂ. 279, 338, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 02-01-2021 ರಂದು ಫಿರ್ಯಾದಿ ಪ್ರೇಮಲಾ ಗಂಡ ಸೀಮನ ವಂiÀÄ: 35 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಶಾಹಾಪುರ ಗೇಟ, ಬೀದರ ರವರ ಗಂಡನಾದ ಸೀಮನ ತಂದೆ ಬಾಬು ವಯ: 40 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಶಾಹಾಪುರ ಗೇಟ, ಬೀದರ ಇವರಿಗೆ ಸgÁಯಿ ಕುಡಿಯುವ ಚಟ ಇರುತ್ತದೆ. ಹೀಗಿರುವಾಗ ದಿನಾಂಕ 01-01-2021 ರಂದು 2200 ಗಂಟೆಯಿಂದ 2330 ಗಂಟೆಯ ಅವಧಿಯಲ್ಲಿ ಗಂಡ ಸೀಮನ ರವರು ದೇವ ದೇವ ವನದ ಕಡೆಯಿಂದ ಶಾಹಪುರ ಗೇಟ ಕಡೆಗೆ ನಡೆದುಕೊಂಡು ಬರುವಾಗ ಯಾವುದೋ ಅಪರಿಚಿತ ವಾಹನದ ಚಾಲಕನು ತನ್ನ ವಾಹನ ಅತಿವೇಗ ಹಾಗೂ ನಿಸ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಸೀಮನ ರವರಿಗೆ ಡಿಕ್ಕಿ ಮಾಡಿ ತನ್ನ ವಾಹನ ನಿಲ್ಲಿಸದೆ ಓಡಸಿಕೊಂಡು ಹೋಗಿರುತ್ತಾನೆ, ಸದರಿ ಅಪಘಾತದಿಂದ ಗಂಡನ ತಲೆಯ ಹಿಂದೆ ಭಾರಿ ರಕ್ತ ಮತ್ತು ಗುಪ್ತಗಾಯ ಹಾಗೂ ಎಡಗಾಲಿನ ಪಾದದ ಮೇಲೆ, ಬೆರಳುಗಳಿಗೆ ರಕ್ತಗಾಯ ಮತ್ತು ಎಡಗಾಲಿನ ಮೊಳಕಾಲಿನ ಕೆಳಗೆ ಗುಪ್ತಗಾಯವಾಗಿದ್ದರಿಂದ ಅವರಿಗೆ ಚಿಕಿತ್ಸೆ ಕುರಿತು 108 ಅಂಬುಲೆನ್ಸನಲ್ಲಿ ್ಲ ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಿನಾಂಕ 02-01-2021 ರಂದು ರಾತ್ರಿ 0030 ಗಂಟೆಯ ಸುಮಾರಿಗೆ ತಂದು ದಾಖಲು ಮಾಡಿದ್ದು, ನಂತರ ಚಿಕಿತ್ಸೆ ಪಡೆಯುತ್ತಿರುವಾಗ ಚಿಕಿತ್ಸೆ ಕಾಲಕ್ಕೆ ಫಿರ್ಯಾದಿಯವರ ಗಂಡ ಸೀಮನ ರವರು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನಗರ ಪೊಲೀಸ್ ಠಾಣೆ ಅಪರಾಧ ಸಂ. 02/2021, ಕಲಂ. 392, 427 ಐಪಿಸಿ :-
ಫಿರ್ಯಾದಿ ಸುಭಾಷ ತಂದೆ ಮಾರುತಿ ವಯ: 28 ವರ್ಷ, ಜಾತಿ: ಕುರುಬ, ಉ: ಟೆಂಟ ಹೌಸದಲ್ಲಿ ಕೆಲಸ, ಸಾ: ಸೋಲಪೂರ ಗ್ರಾಮ, ತಾ: ಜಿ: ಬೀದರ ರವರು ಸುಮಾರು 05 ವರ್ಷಗಳಿಂದ ತಮ್ಮೂರಿನ ರಾಜಕುಮಾರ ಇವರ ಟೆಂಟ ಹೌಸದಲ್ಲಿ ಕೆಲಸ ಮಾಡಿಕೊಂಡಿದ್ದು, ಹೀಗಿರುವಾಗ ದಿನಾಂಕ 02-01-2020 ರಂದು ಮಾಲೀಕರಾದ ರಾಜಕುಮಾರ ಇವರು ಮಾಮನಕೇರಿ ಗ್ರಾಮದಲ್ಲಿ ಬಸವರಾಜ ಸಾ: ಮಾಮನಕೇರಿ ರವರ ಮನೆಯಲ್ಲಿ ಮದುವೆಯ ಬಾಸಣಿಕೆ ಕಾರ್ಯಕ್ರಮವಿದೆ ಅವರ ಮನೆಯಲ್ಲಿ ಟೆಂಟ ಹಾಕಿ ಬರಲು ತಿಳಿಸಿದ್ದರಿಂದ ಫಿರ್ಯಾದಿ ಮತ್ತು ಚಂದ್ರಕಾಂತ ತಂದೆ ನಾರಾಯಣ ಸಾ: ಸೋಲಪೂರ ಇಬ್ಬರು ಟೆಂಟ ಹೌಸ ಸಾಮಾನಗಳನು ಟಾಟಾ ಎಸಿ ವಾಹನ ನಂ. ಕೆಎ-38/5364 ನೇದರಲ್ಲಿ ಹಾಕಿಕೊಂಡು ಸೋಲಪೂರ ಗ್ರಾಮದಿಂದ ಬಿಟ್ಟು ಮಾಮನಕೇರಿ ಗ್ರಾಮಕ್ಕೆ ಹೋಗಿ ರವರ ಮನೆಯಲ್ಲಿ ಟೆಂಟ ಸಾಮಾನಗಳು ಹಾಕಿ ಸೋಲಪೂರ ಗ್ರಾಮಕ್ಕೆ ಹೋಗಿದ್ದು, ನಂತರ ಮಾಲಿಕರಾದ ರಾಜಕುಮಾರ ಇವರು ಸಾಯಂಕಾಲ ತಿಳಿಸಿದೆನೆಂದರೆ ಮಾಮನಕೇರಿ ಗ್ರಾಮದಲ್ಲಿ ಬಾಸಣಿಕೆ ಕಾರ್ಯಕ್ರಮ ಮುಗಿದ ನಂತರ ಅಗ್ರಹಾರ ಗ್ರಾಮದಲ್ಲಿ ಬಬಲು ತಂದೆ ಸುಭಾಷ ಸಾ: ಅಗ್ರಹಾರ ಇವರ ಮನೆಯಲ್ಲಿ ತೊಟ್ಟಿಲು ಕಾರ್ಯಕ್ರಮವಿದೆ ಆದ್ದರಿಂದ ಮಾಮನಕೇರಿಯಲ್ಲಿದ್ದ ಟೆಂಟ ಸಾಮಾನಗಳು ತೆಗೆದುಕೊಂಡು ಹೋಗಲು ತಿಳಿಸಿದಾಗ ಫಿರ್ಯಾದಿ ಮತ್ತು ಚಂದ್ರಕಾಂತ ಇಬ್ಬರು ತಮ್ಮ ಟಾಟಾ ಎಸಿ ವಾಹನ ತೆಗೆದುಕೊಂಡು ಸೋಲಪೂರ ಗ್ರಾಮದಿಂದ ಬಿಟ್ಟು ಮಾಮನಕೇರಿ ಗ್ರಾಮಕ್ಕೆ ಬಂದು ಟೆಂಟ ಸಾಮಾನಗಳನು ವಾಹನದಲ್ಲಿ ಹಾಕಿಕೊಂಡು ಮಾಮನಕೇರಿ ಗ್ರಾಮದಿಂದ 2100 ಗಂಟೆಗೆ ಬಿಟ್ಟು ಜ್ಞಾನಸುಧಾ ಶಾಲೆಯ ಮಾರ್ಗವಾಗಿ ರಿಂಗ ರೋಡಿನ ಮುಖಾಂತತ ಅಗ್ರಹಾರ ಗ್ರಾಮಕ್ಕೆ ಹೋಗುವಾಗ 2110 ಗಂಟೆಯ ಸುಮಾರಿಗೆ ಫಿರ್ಯಾದಿಯವರು ನಿಸರ್ಗಾ ಲೇಔಟ್ ಹತ್ತಿರ ಬಂದಾಗ ಅಲ್ಲಿ 04 ಜನ ಹುಡುಗರು ಫಿರ್ಯಾದಿಯವರ ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿ ಚಾಕುವಿನಿಂದ ಹೆದರಿಸಿ ಫಿರ್ಯಾದಿಯಿಂದ 3 ಗ್ರಾಂ ಬಂಗಾರದ ಉಂಗುರು, ಒಂದು ವಿವೋ ಕಂಪನಿಯ ಮೋಬೈಲ್, ನಗದು ಹಣ 1500/- ರೂ.ಗಳು ಹಿಗೆ ಒಟ್ಟು 22,500/- ರೂಪಾಯಿಗಳು ಕಸಿದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 03-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಲಸೂರ ಪೊಲೀಸ ಠಾಣೆ ಅಪರಾಧ ಸಂ. 02/2021, ಕಲಂ. ಮಹಿಳೆ ಕಾಣೆ :-
ಫಿರ್ಯಾದಿ ವಾಮನರಾವ ತಂದೆ ತುಳಸಿರಾಮ ಮೂಗೆ ವಯ: 70 ವರ್ಷ, ಜಾತಿ: ಮರಾಠಾ, ಸಾ: ಹಾಲಳ್ಳಿ ರವರ ಸೋಸೆಯಾದ ಸುಮಿತ್ರಾ ವಯ 25 ವರ್ಷ ಇವಳು ದಿನಾಂಕ 26-11-2020 ರಂದು 2200 ಗಂಟೆಯಿಂದ ದಿನಾಂಕ 27-11-2020 ರಂದು 0600 ಗಂಟೆಯ ಅವಧಿಯಲ್ಲಿ ಹಾಲಳ್ಳಿ ಗ್ರಾಮದ ತಮ್ಮ ಮನೆಯಿಂದ ಕಾಣೆಯಾಗಿರುತ್ತಾಳೆ, ತನ್ನ ಸೊಸೆಗೆ ಎಲ್ಲಾ ಕಡೆಗೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 02-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಅಪರಾಧ ಸಂ. 01/2021, ಕಲಂ. 279, 338 ಐಪಿಸಿ :-
ದಿನಾಂಕ 02-01-2021 ರಂದು ಫಿರ್ಯಾದಿ ಅಬ್ದುಲ ವಹಾಬ ತಂದೆ ಅಬ್ದುಲ ಖಯೂಮ ದರ್ಜಿ ವಯ: 65 ವರ್ಷ, ಜಾತಿ: ಮುಸ್ಲಿಂ, ಸಾ: ಹಳ್ಳಿಖೇಡ(ಬಿ) ರವರು ತಮ್ಮ ಮನೆಯಿಂದ ತನ್ನ ವಾಹನಕ್ಕೆ ಪೇಟ್ರೋಲ್ ಹಾಕಿಕೊಂಡು ಬರುವ ಸಲುವಾಗಿ ಹಳ್ಳಿಖೇಡ(ಬಿ) ಪಟ್ಟಣದ ಬಿ.ಎಸ್.ಎಸ್.ಕೆ ಪೆಟ್ರೋಲ್ ಬಂಕಗೆ ಹೊಂಡಾ ಎಕ್ಟಿವಾ ಮೊಟಾರ ಸೈಕಲ ನಂ. ಕೆಎ-39/ಆರ್-3044 ನೇದರ ಮೇಲೆ ಹೋಗುವಾಗ ಬೀದರ-ಹುಮನಾಬಾದ ರೋಡ ಹಳ್ಳಿಖೇಡ[ಬಿ] ಕ್ರಾಸ ಹತ್ತಿರ ಆಕಡೆ ಈಕಡೆ ನೋಡಿ ರೋಡ ದಾಟಿ ತನ್ನ ಸೈಡಿಗೆ ಹೋಗುವಾಗ ಬೀದರ ಕಡೆಯಿಂದ ಎನ್.ಈ.ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ-38/ಎಫ್-997 ನೇದರ ಚಾಲಕನಾದ ಆರೋಪಿ ಕಲ್ಲಪ್ಪಾ ತಂದೆ ಬಸವಣಪ್ಪಾ ನಿಜಲಿಂಗೆ, ಡಿಪೊ-2 ನೇದರಲ್ಲಿ ಬಸ್ಸ್ ಚಾಲಕ. ಸಾ: ಬರ್ದಾಪೂರ, ತಾ: ಭಾಲ್ಕಿ ಇತನು ಸದರಿ ಬಸನ್ನು ಬಸ್ಸಿನ ಮುಂದೆ ಬರುತ್ತಿದ್ದ ಯಾವುದೊ ಒಂದು ಟ್ರ್ಯಾಕ್ಟರಗೆ ಓವರಟೇಕ ಮಾಡಿಕೊಂಡು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನೆ ಫಿರ್ಯಾದಿಯ ಮೊಟಾರ ಸೈಕಲಗೆ ಬಲಗಡೆಯ ಭಾಗಕ್ಕೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಎಡಗಾಲ ಮೊಳಕಾಲ ಕೆಳಗೆ ಭಾರಿ ರಕ್ತ ಮತ್ತು ಗುಪ್ತಗಾಯವಾಗಿ ಮುರಿದಿರುತ್ತದೆ ಮತ್ತು ಬಲಗೈ ಮೊಳಕೈ ಹತ್ತಿರ ತರಚಿದ ಗಾಯಗಳು ಆಗಿರುತ್ತವೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment