Police Bhavan Kalaburagi

Police Bhavan Kalaburagi

Monday, January 18, 2021

BIDAR DISTRICT DAILY CRIME UPDATE 18-01-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 18-01-2021

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಯು.ಡಿ.ಆರ್ ನಂ. 02/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 17-01-2021 ರಂದು ಫಿರ್ಯಾದಿ ಪಂಡರಿ ತಂದೆ ಗ್ಯಾನೋಬಾ ಭಾಲ್ಕೆ ಸಾ: ಸೈದಾಪುರ ವಾಡಿ ರವರ ಮಗನಾದ ಶ್ರೀನಿವಾಸ ತಂದೆ ಪಂಡರಿ ಭಾಲ್ಕೆ ವಯ: 23 ವರ್ಷ, ಜಾತಿ: ಮರಾಠಾ, ಸಾ: ಸೈದಾಪುರ ವಾಡಿ ಇತನು ಬಾವಿಯಲ್ಲಿ ನೀರು ತರಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಇಜಾಡಲು ಬಾರದೇ ನೀರು ಕುಡಿದು ಮೃತಪಟ್ಟಿರುತ್ತಾನೆ, ತನ್ನ ಮಗನ ಸಾವಿನಲ್ಲಿ ಯಾರ ಮೇಲೆ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ  ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 10/2021, ಕಲಂ. 279, 337, 338, 304(ಎ) ಐಪಿಸಿ ಜೋತೆ 187 ಐಎಂವಿ ಕಾಯ್ದೆ :-

ದಿನಾಂಕ 17-01-2021 ರಂದು ಮಷ್ಣಗೊಂಡ ತಂದೆ ಸಿದ್ದಗೊಂಡ ಕಂಗಟೆ ಸಾ: ಕರಂಜಿ (ಬಿ) ಗ್ರಾಮ, ತಾ: ಔರಾದ (ಬಾ), ಜಿ: ಬೀದರ ರವರು ತನ್ನ ಹೆಂಡತಿ ಸವಿತಾ ಕಂಗಟೆ ಇಬ್ಬರು ತನ್ನ ಹಿರೋ ಸ್ಪ್ಲೇಂಡರ್ ಪ್ಲಸ್ ಮೋಟಾರ್ ಸೈಕಲ್ ನಂ. ಕೆಎ-38/ಎಸ್-5109 ನೇದರ ಮೇಲೆ ಕರಂಜಿ (ಬಿ) ಗ್ರಾಮದಿಂದ ಬೀದರಗೆ ಕಂದಗೂಳ ಮಾರ್ಗವಾಗಿ ಬರುತ್ತಿರುವಾಗ ಹಿಂದುಗಡೆ ಸಂಬಂಧಿ ಸಾಯಿಗೊಂಡಾ ತಂದೆ ಮಲಗೊಂಡಾ ಕಂಗಟೆ ಮತ್ತು ಗೊವಿಂದಗೊಂಡ ತಂದೆ ಬಳಗೊಂಡಾ ರಾಯಪಳ್ಳಿ ರವರು ಸಹ ತಮ್ಮ ಮೋಟಾರ ಸೈಕಲ್ ಮೇಲೆ ಬೀದರಗೆ ಬರುತ್ತಿದ್ದು, ಕಂದಗೂಳ ಬೀದರ ರೋಡಿನ ದದ್ದಾಪೂರ ಕ್ರಾಸ್ ದಾಟಿ ಸ್ವಲ್ಪ ಮುಂದೆ ಬಂದಾಗ ಎದರುಗಡೆಯಿಂದ ಟ್ರಾಕ್ಟರ್ ನಂ. ಎಮ್.ಹೆಚ್-13/ಎಜೆ-2238, ಟ್ರಾಲಿ ನಂ. ಎಮ್.ಹೆಚ್.-13/ಟಿ-6385 ನೇದರ ಚಾಲಕನಾದ ಆರೋಪಿ ವೈಜಿನಾಥ ತಂದೆ ಶೀವಾಜಿ ಪವಾರ ಸಾ: ಮಾಳವಾಡಿ, ತಾ: ಗಂಗಾಬೀಡ್, ಜಿ: ಪರಬಾಣಿ, ಮಹಾರಾಷ್ಟ ರಾಜ್ಯ ಇತನು ತನ್ನ ಟ್ರಾಕ್ಟರನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ್ ಸೈಕಲಗೆ ಡಿಕ್ಕಿ ಪಡಿಸಿದ್ದರಿಂದ  ಟ್ರಾಕ್ಟರ್ ಹೆಂಡತಿ ಸುನೀತಾ ಇವಳ ತಲೆಯ ಮೇಲೆ ಹಾದು ಹೋಗಿದ್ದರಿಂದ ತಲೆಗೆ ಭಾರಿ ರಕ್ತಗಾಯವಾಗಿ ಮೌಂಸ ಖಂಡ ಹೊರ ಬಂದಿದ್ದು, ಮುಖದ ಮೇಲೆ ಎಡಗೈಗೆ ಭಾರಿ ರಕ್ತಗಾಯವಾಗಿ ಮೌಂಸಖಂಡ ಹೊರಬಂದು ಅವಳು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ ಹಾಗೂ ಫಿರ್ಯಾದಿಯ ಎದೆ & ಬೆನ್ನಿನ ಮೇಲೆ ಗುಪ್ತಗಾಯ ಮತ್ತು ಬಲಗೈಗೆ ಭಾರಿ ಗುಪ್ತಗಾಯವಾಗಿರುತ್ತದೆ, ನಂತರ ಆರೋಪಿಯು ತನ್ನ ಟ್ರಾಕ್ಟರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೊಗಿರುತ್ತಾನೆ ಹಾಗೂ ಸದರಿ ಘಟನೆ ಕಣ್ಣಾರೆ ನೋಡಿದ ಸಾಯಿಗೋಂಡ ಕಂಗಟೆ ಮತ್ತು ಗೊವಿಂದಗೊಂಡ ರೈಪಳ್ಳೆ ರವರು ತಕ್ಷಣ 108 ಅಂಬುಲೇನ್ಸ್ ವಾಹನಕ್ಕೆ ಕರೆ ಮಾಡಿ ಅದರಲ್ಲಿ ಗಾಯಗೊಂಡ ಫಿರ್ಯಾದಿಗೆ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 10/2021, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 17-01-2021 ರಂದು ಫಿರ್ಯಾದಿ ಮಲಶೇಟ್ಟಿ ತಂದೆ ಗುಂಡಪ್ಪ ಚಿಂಚೋಳೆ ವಯ: 60 ವರ್ಷ ಜಾತಿ: ಲಿಂಗಾಯತ, ಸಾ: ಗಾಂಧಿನಗರ ಮೈಲೂರ ಬೀದರ ರವರು ತನ್ನ ಟಿವಿಎಸ್ ಎಕ್ಸ.ಎಲ್ ಮೋಟಾರ ಸೈಕಲ ನಂ. ಕೆಎ-38/ಕೆ-9599 ನೇದನ್ನು ಚಲಾಯಿಸಿಕೊಂಡು ಮೈಲೂರದಿಂದ ಶಿವನಗರ (ಉತ್ತರ) ಬೀದರಗೆ ತನ್ನ ಅಣ್ಣನ ಮನೆಗೆ ಹೋಗಲು ಬೀದರನ ಕ್ಲಾಸೀಕ್ ಧಾಬಾ ಹತ್ತಿರ ಹೋದಾಗ ಪಾಪನಾಶ ಗೇಟ್ ಕಡೆಯಿಂದ ಮೋಟಾರ ಸೈಕಲ ನಂ. ಟಿಎಸ್-13/ಇಡಿ-4236 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಡಿಕ್ಕಿ ಮಾಡಿ, ಮೊಟಾರ ಸೈಕಲ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಎಡಗಾಲ ಮೊಳಕಾಲ ಕೆಳಗೆ ಭಾರಿ ರಕ್ತ, ಗುಪ್ತಗಾಯ, ತಲೆಯ ಎಡಭಾಗದಲ್ಲಿ ತರಚಿದ ರಕ್ತಗಾಯವಾಗಿರುತ್ತದೆ, ನಂತರ ಹಿಂದೆ ಬರುತ್ತಿದ್ದ ಅಣ್ಣ ನಾಗಶೇಟ್ಟೆಪ್ಪಾ ಮತ್ತು ಅವರ ಮಗ ಸತೀಶ ಇಬ್ಬರೂ ನೋಡಿ ಗಾಯಗೊಂಡ ಫಿರ್ಯಾದಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 04/2021, ಕಲಂ. 457, 380 ಐಪಿಸಿ :-

ದಿನಾಂಕ 16-01-2021 ರಂದು ಫಿರ್ಯಾದಿ ಪಾಂಡುರಂಗ ತಂದೆ ಮುರಾಹರಿ ಬಿರಾದಾರ ವಯ: 50 ವರ್ಷ, ಜಾತಿ: ಮರಾಠಾ, ಸಾ: ಸಾವಳಿ ರವರು ತನ್ನ ಮನೆಗೆ ಬಿಗ ಹಾಕಿರುವುದನ್ನು ನೋಡಿ ಯಾರೋ ಅಪರಿಚಿತ ಕಳ್ಳರು ಮನೆಯ ಬೀಗ ಓಡೆದು ಮನೆಯಲ್ಲಿನ 4000/- ರೂ. ನಗದು ಹಣ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 17-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ. 03/2021, ಕಲಂ. ಮಹಿಳೆ ಕಾಣೆ :-

ಫಿರ್ಯಾದಿ ಶಾಮ ತಂದೆ ರಾಮ ಜಾಧವ: 42 ವರ್ಷ, ಜಾತಿ: ಲಮಾಣಿ, ಸಾ: ಸಾಯಗಾಂವ ತಾಂಡಾ ರವರ ಮಗಳಾದ ರೇಣುಕಾ ತಂದೆ ಶಾಮ ಜಾಧವ ವಯ: 20 ವರ್ಷ, ಜಾತಿ: ಲಮಾಣಿ, ಸಾ: ಸಾಯಗಾಂವ ತಾಂಡಾ ಇಕೆಯು ದಿನಾಂಕ 16-01-2021 ರಂದು 1600 ಗಂಟೆಗೆ ಮ್ಮ ಮನೆಯಿಂದ ಬಯಲು ಜಾಗಕ್ಕೆ ಹೋಗುತ್ತೇನೆ ಅಂತ ಹೋದವಳು ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ, ಫಿರ್ಯಾದಿಯು ತನ್ನ ಮಗಳನ್ನು ಸಂಬಂಧಿಕರಿಗೆ, ಗೆಳೆಯರಿಗೆ ಹಾಗೂ ಬೀದರ, ಜಹಿರಾಬಾದ, ಹುಮನಾಬಾದ, ಭಾಲ್ಕಿ, ಬಸವಕಲ್ಯಾಣ, ಹುಲಸೂರ ಮೊದಲಾದ ಕಡೆ ಹುಡುಕಿದರೂ ಸಹ ಅವಳ ಬಗ್ಗೆ ಪತ್ತೆಯಾಗಿರುವುದಿಲ್ಲ, ತನ್ನ ಮಗಳ ಚಹರೆ ಪಟ್ಟಿ ಬಣ್ಣ ಗೋಧಿ, ದುಂಡು ಮುಖ, ಎತ್ತರ 5 “ , ಕನ್ನಡ, ಹಿಂದೆ, ಮರಾಠಿ ಹಾಗೂ ಲಂಬಾಣಿ ಭಾಷೆ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

No comments: