Police Bhavan Kalaburagi

Police Bhavan Kalaburagi

Tuesday, January 26, 2021

BIDAR DISTRICT DAILY CRIME UPDATE 26-01-2021

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 26-01-2021

ಬೀದರ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 7/2021 ಕಲಂ 379 ಐಪಿಸಿ :- 

ದಿನಾಂಕ 25/01/2021 ರಂದು 13:00 ಗಂಟೆಗೆ ಫಿರ್ಯಾದಿ ಶ್ರೀ ಗುಲಾಮ ಏಕ್ಬಾಲ್ ಅಹ್ಮದ ತಂದೆ ಗುಲಾಮ ಮಹೇಮುದ ವಯ:80 ವರ್ಷ ಜಾ:ಮುಸ್ಲಿಂ :ಸೈಕಲ್ ಟೆಕ್ಟಿ ಅಂಗಡಿ ವ್ಯವಹಾರ ಸಾ: ಮನೆ ನಂ.306/3,13-3-104 ಹಳದಕೇರಿ ರೋಡ ಲಾಲವಾಡಿ ಬೀದರ ರವರು ಠಾಣೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ ಫಿರ್ಯಾದಿಯು ಬೀದರ ನಗರದ ನಯಾ ಕಮಾನ ಹತ್ತಿರ ಸವೇರಾ ಸೈಕಲ್ ಟೆಕ್ಸಿ ಅಂಗಡಿ ಇಟ್ಟುಕೊಂಡು ವ್ಯವಹಾರ ಮಾಡಿಕೊಂಡಿದ್ದು ದಿನಾಂಕ 25/01/2021 ರಂದು ಮುಂಜಾನೆ 10:15 ಗಂಟೆಗೆ ಮನೆಯಿಂದ ಹೊಂಡಾ ಏಕ್ಟಿವಾ ಮೊಟಾರ ಸೈಕಲ್ ನಂ ಕೆಎ-38/ಆರ್-3987 ನೇದ್ದರ ಮೇಲೆ ಕುಳಿತು ಮನೆಯಿಂದ ನನ್ನ ನಯಾ ಕಮಾನ ಹತ್ತಿರ ಇದ್ದ ಸವೇರಾ ಸೈಕಲ್ ಟೆಕ್ಸಿ ಅಂಗಡಿಗೆ ಬಂದು ಅಂಗಡಿಯ ಎದುರುಗಡೆ ಮೊಟಾರ ಸೈಕಲ್ ನಿಲ್ಲಿಸಿ ಚಾವಿ ಅದಕ್ಕೆ ಇಟ್ಟು ಅಂಗಡಿಯ ಪಕ್ಕದಲ್ಲಿದ್ದ ಸಲೀಮ ರವರ ಚಹಾ ಹೊಟಲ್ ಹೊರಗಡೆ ನಿಂತು ಚಹಾ ಕುಡಿದು ಪುನಃ ಮೊಟಾರ ಸೈಕಲ್ ನಿಲ್ಲಿಸಿದ ಸ್ಥಳದಲ್ಲಿ ಬಂದು ನೋಡಲು ಅಲ್ಲಿ ನನ್ನ ಮೊಟಾರ ಸೈಕಲ್ ಇರಲ್ಲಿಲ್ಲಾ ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ನಾನು ಎಲ್ಲಾ ಕಡೆಗಳಲ್ಲಿ ಹುಡುಕಾಡಿ ನೋಡಲು ಎಲ್ಲಿಯು ನನ್ನ ಕಳ್ಳತನವಾದ ಮೋಟಾರ ಸೈಕಲ್ ಸಿಕ್ಕಿರುವುದ್ದಿಲ್ಲಾ, ನನ್ನ ಬಿಳಿ ಬಣ್ಣದ ಹೊಂಡಾ ಎಕ್ಟಿವಾ ಮೊಟಾರ ಸೈಕಲ್ ನಂ ಕೆಎ-38/ಆರ್-3987 ನೇದ್ದರ ಅಂದಾಜು ಕಿ.35000/-ರೂ ಇರುತ್ತದೆ. ಸದರಿ ನನ್ನ ಮೊಟಾರ ಸೈಕಲ್ನ Chassis No. ME4JF502LET543947  & Engine No.JF50ET1545442 ನೆದ್ದು ಇರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 7/2021 ಕಲಂ 457, 380 ಐಪಿಸಿ :-

ದಿನಾಂಕ 25/01/2021 ರಂದು 1800 ಗಂಟೆಗೆ ಫಿರ್ಯಾದಿ ಶ್ರೀ. ಸುರೇಶ ತಂದೆ ಕಾಶಿನಾಥ ಶಂಭು ವಯ:38 ವರ್ಷ ಜಾತಿ: ಲಿಂಗಾಯತ ಉ:ವ್ಯಾಪಾರ ಸಾ/ಕೊಳಾರ (ಕೆ) ತಾ/ಬೀದರ ಇವರು ಠಾಣೆಗೆ ಹಾಜರಾಗಿ  ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ,  ಫಿರ್ಯಾದಿಯು ಅಭಿರುಚಿ ಎಂಬ ಹೆಸರಿನ ಮಿನರಲ ವಾಟರ ವ್ಯಾಪಾರ ಮಾಡಿಕೊಂಡು ಉಪಜೀವಿಸಿಕೊಂಡಿರುತ್ತೇನೆ.  ಕೊಳಾರ (ಕೆ) ಗ್ರಾಮದಲ್ಲಿಯ ಜೈಭವಾನಿ ಮಂದಿರದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದೇನೆ.     ಹೀಗಿರುವಾಗ  ದಿನಾಂಕ 25/01/2021 ರಂದು ಮುಂಜಾನೆ  ಜೈ ಭವಾನಿ ಮಂದಿರದ ಪುಜಾರಿಯವರಾದ  ಶ್ರೀ. ಸುನಿಲ ತಂದೆ ಶಿವಾಜಿರಾವ ಇವರು ನನಗೆ ತಿಳಿಸಿದ್ದೇನೆಂದರೆ  ದಿನಾಂಕ 24/01/2021 ರಂದು ರಾತ್ರಿ 2100 ಗಂಟೆಗೆ ಮಂದಿರವನ್ನು ಮುಚ್ಚಿ ಕೀಲಿ ಹಾಕಿ ಮನೆಗೆ ಹೋಗಿದ್ದು, ಇಂದು ಮಂದಿರಕ್ಕೆ ಬಂದು ನೋಡಿದಾಗ ಮಂದಿರದಲ್ಲಿಯ ಭವಾನಿ ಮೂರ್ತಿಯ ಮೇಲಿನ ಬೆಳ್ಳಿ ಮತ್ತು ಬಂಗಾರದ ಆಭರಗಳು ಯಾರೊ ಕಳ್ಳರು ಕಳವು ಮಾಡಿರುತ್ತಾರೆ ಎಂದು ತಿಳಿಸಿದಾಗ ಫಿರ್ಯಾದಿಯು ಮಂದಿರಕ್ಕೆ ಹೋಗಿ ನೋಡಿದಾಗ ಮಂದಿರದ ಬಾಗಿಲಿನ ಕೀಲಿ ಮತ್ತು ಕೊಂಡಿ ಮುರಿದಿದ್ದು, ಮಂದಿರದಲ್ಲಿಯ ಭವಾನಿ ಮೂತರ್ಿಯ ಮೇಲಿನ 1) 1 ಕಿ.ಗ್ರಾಂ. ಆಭರಣ ಬೆಳ್ಳಿಯ  ಕಿರಿಟ ಅ.ಕಿ. 30,000/- ರೂ. 2)250 ಗ್ರಾಂ ಆಭರಣ ಬೆಳ್ಳಿಯ ಪಾದುಕೆ ಅ.ಕಿ. 7500/- ರೂ. 3)50 ಗ್ರಾಂ. ಆಭರಣ ಬೆಳ್ಳಿಯ ಗ್ಲಾಸ್ ಅ.ಕಿ. 2500/- ರೂ. ಹಾಗು 4)15 ಗ್ರಾಂ. ಆಭರಣ ಬಂಗಾರದ ತಾಳಿಗಳು ಅ.ಕಿ. 45,000/- ರೂ. ಹೀಗೆ ಒಟ್ಟು 85 ಸಾವಿರ ಮೌಲ್ಯವುಳ್ಳ ಬಂಗಾರ ಹಾಗು ಬೆಳ್ಳಿಯ ಆಭರಣಗಳನ್ನು   ಯಾರೊ ಅಪರಿಚಿತ ಕಳ್ಳರು ಜೈ ಭವಾನಿ  ಮಂದಿರದ ಬಾಗಿಲಿನ ಬೀಗವನ್ನು ಮುರಿದು ಕಳವು ಮಾಡಿಕೊಂಡು ಹೋಗಿದ್ದು, ಇರುತ್ತದೆ.    ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.


No comments: