ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 08-02-2021
ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 13/2021, ಕಲಂ. 279, 337, 338 ಐಪಿಸಿ ಜೊತೆ 187 ಐ.ಎಂ.ವಿ ಕಾಯ್ದೆ :-
ದಿನಾಂಕ 07-02-2021 ರಂದು ಫಿರ್ಯಾದಿ ಗಣೇಶ @ ಗಣಪತಿ ತಂದೆ ತಿಪ್ಪಣ್ಣ ಮೇತಕಲ್ಲೆ, ವಯ: 30 ವರ್ಷ, ಜಾತಿ: ಹೇಳವಾ, ಸಾ: ಈಶ್ವರ ನಗರ ಬಸವಕಲ್ಯಾಣ ರವರ ತಮ್ಮನಾದ ಮಾಣಿಕ ವಯ: 29 ವರ್ಷ ಇತನು ಹೆಂಡತಿ ಮಹಾನಂದಾ ವಯ: 24 ವರ್ಷ ಇಬ್ಬರೂ ಕೂಡಿ ತನ್ನ ಮಗ ಕರಣ ವಯ: 09 ತಿಂಗಳು ಈತನಿಗೆ ಆಸ್ಪತ್ರೆಗೆ ತೋರಿಸಿಕೊಂಡು ಬರಲು ಡಾ: ಭುರಾಳೆ ಆಸ್ಪತ್ರೆಗೆ ಹೋಗುವದಾಗಿ ಹೇಳಿ ತನ್ನ ಟಿ.ವ್ಹಿ.ಎಸ್ ಮೋಪೇಡ್ ನಂ. ಕೆಎ-56/ಜೆ-0793 ನೇದರ ಮೇಲೆ ಹೋಗಿ ಮರಳಿ ಮನೆಗೆ ಹೋಗುವಾಗ ಈಶ್ವರ ನಗರ ಕ್ರಾಸ್ ಡಿವೈಡರ್ ಗ್ಯಾಪ್ ಹತ್ತಿರ ಮಾಣಿತ ಈತನು ತನ್ನ ಟಿ.ವ್ಹಿ.ಎಸ್ ಮೋಪೇಡನ ಬಲಭಾಗದ ಇಂಡಿಕೇಟರ್ ಹಾಕಿ & ಕೈಸನ್ನೆ ಮಾಡಿ ಯು-ಟರ್ನ್ ತಿರಿಗಿಸಿಕೊಳ್ಳುತ್ತಿರುವಾಗ ಅದೇ ಸಮಯಕ್ಕೆ ಬಸ್ ನಿಲ್ದಾಣದ ಕಡೆಯಿಂದ ಮೋಟರ ಸೈಕಲ ನಂ. ಕೆಎ-39/ಹೆಚ್-2943 ನೇದರ ಚಾಲಕನಾದ ಆರೋಪಿಯು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತಮ್ಮನ ಟಿ.ವ್ಹಿ.ಎಸ್. ಮೋಪೇಡಗೆ ಡಿಕ್ಕಿ ಮಾಡಿದ್ದ, ಸದರಿ ಅಪಘಾತದಿಂದ ತಮ್ಮನಿಗೆ ಯಾವುದೇ ಗಾಯವಾಗಿರುದಿಲ್ಲ ಹಾಗೂ ಆತನ ಹೆಂಡತಿಗೆ ತಲೆಯ ಹಿಂದೆ, ಎಡಭಾಗದಲ್ಲಿ ರಕ್ತಗಾಯ, ಬೆನ್ನಿನಲ್ಲಿ ಗುಪ್ತಗಾಯ, ಎರಡು ಮೊಳಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ ಹಾಗೂ ತಮ್ಮನ ಮಗನಾದ ಕರಣ ಈತನಿಗೆ ತಲೆಗೆ ಮತ್ತು ಬಲಗೈಗೆ ರಕ್ತ ಮತ್ತು ಗುಪ್ತಗಾಯವಾಗಿರುತ್ತದೆ, ಡಿಕ್ಕಿ ಮಾಡಿದ ಆರೋಪಿಯು ಮೋಟಾರ ಸೈಕಲ್ ಸ್ಥಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ, ನಂತರ ಗಾಯಗೊಂಡ ಮಹಾನಂದಾ ಹಾಗೂ ಕಿರಣ ಇಬ್ಬರಿಗೂ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಸವಕಲ್ಯಾಣ ಸರ್ಕಾರಿ ಆಸ್ಪತ್ರಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 15/2021, ಕಲಂ. 279, 337, 338 ಐಪಿಸಿ :-
ದಿನಾಂಕ 07-02-2021 ರಂದು ಫಿರ್ಯಾದಿ ಬಲಬೀರ ತಂದೆ ಪರಸರಾಮ ವಯ: 35 ವರ್ಷ, ಜಾತಿ: ಎಸ್.ಸಿ ಚವ್ಹಾರ, ಸಾ: ಮದನಾಪೂರ (ಯು.ಪಿ) ರವರು ತನ್ನ ಐಸ್ ಕ್ರೀಮ್ ಭಂಡಿ ತೆಗೆದುಕೊಂಡು ಮಾರಾಟ ಮಾಡಲು ಭಾತಂಬ್ರಾ ಗ್ರಾಮಕ್ಕೆ ಹೋಗಿ ಭಾತಂಬ್ರಾ ಗ್ರಾಮದಲ್ಲಿ ಐಸ್ ಕ್ರೀಮ್ ಮಾರಾಟ ಮಾಡಿ ಐಸ್ ಕ್ರೀಮ್ ಭಂಡಿಯನ್ನು ಭಾತಂಬ್ರಾ ಗ್ರಾಮದಿಂದ ಭಾಲ್ಕಿಗೆ ತಳ್ಳಿಕೊಂಡು ಬರುವಾಗ ಭಾತಂಬ್ರಾ- ಭಾಲ್ಕಿ ರೋಡಿನ ಮೇಲೆ ಸಿದ್ದಾಪೂರವಾಡಿ ಕ್ರಾಸ್ ದಾಟಿ ಸ್ವಲ್ಪ ಮುಂದೆ ಇರುವ ಬ್ರಿಜ ಹತ್ತಿರ ಹಿಂದಿನಿಂದ ಅಂದರೆ ಭಾತಂಬ್ರಾ ಕಡೆಯಿಂದ ಫ್ಯಾಶನ ಪ್ಲಸ್ ಮೋಟಾರ ಸೈಕಲ್ ನಂ. ಕೆಎ-37/ಆರ್- 1897 ನೇದರ ಚಾಲಕನಾದ ಆರೋಪಿ ಶೇಖಮಹೇಬೂಬ ತಂದೆ ಚಾಂದಸಾಬ ಸಾ: ಭಾಲ್ಕಿ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿದ್ದರಿಂದ ಫಿರ್ಯಾದಿಯ ಬಲಗಾಲ ಹೆಬ್ಬಟಿಗೆ ರಕ್ತಗಾಯ, ಬಲಗೈ ಮೋಳಕೈ ಹತ್ತಿರ ಗುಪ್ತಗಾಯವಾಗಿರುತ್ತದೆ ಮತ್ತು ಆರೋಪಿಯ ಗಟಾಯಿಗೆ ಭಾರಿ ರಕ್ತಾ,ಗಾಯ, ಎಡ ಮೋಳಕಾಲಿಗೆ ಭಾರಿ ರಕ್ತಾಗಾಯ, ಎಡಮೋಳಕೈಗೆ ರಕ್ತಗಾಯ, ಹೊಟ್ಟೆಯ ಎಡಬದಿಗೆ, ಎಡಗಾಲ ಪಾದಕ್ಕೆ ರಕ್ತಗಾಯವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 11/2021, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 07-02-2021 ರಂದು ಸಾವಳಿ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಸರಾಯಿ ಮಾರಾಟ ಮಾಡುತ್ತಿದ್ದಾರೆ ಅಂತಾ ತಾನಾಜಿ ಪಿಎಸ್ಐ ಕಮಲನಗರ ಪೊಲಿಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸಾವಳಿ ಗ್ರಾಮಕ್ಕೆ ಹೋಗಿ ಸಾವಳಿ ಗ್ರಾಮದ ಶಾಲೆಯ ಹಿಂದೆ ಇರುವ ಟೀನ್ ಶೇಡ ಮುಂದೆ ಆರೋಪಿತರಾದ 1) ಮೈನು ತಂದೆ ಇಮಾಮಸಾಬ ಶೇಖ ವಯ: 29 ವರ್ಷ, ಜಾತಿ: ಮುಸ್ಲಿಂ, 2) ಗಣೇಶ ತಂದೆ ಸಂಜು ನಾಗಂಪಲ್ಲೆ ವಯ: 20 ವರ್ಷ, ಜಾತಿ: ಮರಾಠಾ, ಇಬ್ಬರು ಸಾ: ಸಾವಳಿ ಇವರಿಬ್ಬರು ತನ್ನ ಮುಂದೆ ಒಂದು ಬೀಳಿ ಚೀಲದಲ್ಲಿ ಸರಾಯಿ ಇಟ್ಟುಕೊಂಡು ಹೊಗಿಬರುವ ಜನರಿಗೆ ಸರಾಯಿ ಮಾರಾಟ ಮಾಡಲು ಇಟ್ಟುಕೊಂಡಿರುವುದನ್ನು ನೋಡಿ ಸದರಿ ಆರೋಪಿತರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಅವರಿಗೆ ಹಿಡಿದು ಅವರಿಗೆ ನಿಮ್ಮ ಹತ್ತಿರ ಸರಕಾರದಿಂದ ಯಾವುದಾದರು ಪರವಾನಿಗೆ ಇದೆಯೇ ಅಂತಾ ವಿಚಾರಿಸಲು ಇಲ್ಲಾ ಅಂತಾ ತಿಳಿಸಿದ್ದು, ನಂತರ ಅವರಿಂದ 1) ಯು.ಎಸ್ ವಿಸ್ಕಿ 90 ಎಂ.ಎಲ್ ನ 80 ಪ್ಲಾಸ್ಟಿಕ್ ಬಾಟಲಗಳು ಅ.ಕಿ 2810/- ರೂ., 2) ಓಲ್ಡ್ ಟಾವರ್ನ ವಿಸ್ಕಿ 180 ಎಂ.ಎಲ್ 10 ಪೇಪರ್ ಪೌಚಗಳು ಅ.ಕಿ 867/- ರೂ. ಹೀಗಿ ಇವುಗಳ ಒಟ್ಟು ಮೊತ್ತ 3677/- ರೂಪಾಯಿ ಇದ್ದು, ಸದರಿ ಸರಾಯಿಯನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಮಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment