Police Bhavan Kalaburagi

Police Bhavan Kalaburagi

Wednesday, February 10, 2021

BIDAR DISTRICT DAILY CRIME UPDATE 10-02-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 10-02-2021

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 04/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 09-02-2021 ರಂದು 0930 ಗಂಟೆಯಿಂದ 2000 ಗಂಟೆಯ ಅವಧಿಯಲ್ಲಿ ಫಿರ್ಯಾದಿ ತಾತೇರಾವ ತಂದೆ ಮಾಣಿಕ ಢೋಳ್ಳೆ ವಯ: 50 ವರ್ಷ, ಜಾತಿ: ಕಬ್ಬಲಿಗ, ಸಾ: ಮೋರಖಂಡಿ, ತಾ: ಬಸವಕಲ್ಯಾಣ ರವರ ಮಗನಾದ ಅಜಯ ತಂದೆ ತಾತೆರಾವ ಢೋಳ್ಳೆ ವಯ: 21 ವರ್ಷ, ಸಾ: ಮೋರಖಂಡಿ ಇತನು ತನ್ನ ಮನಸ್ಸಿನ ಮೇಲೆ ಯಾವುದೋ ಪರಿಣಾಮ ಮಾಡಿಕೊಂಡು ಮ್ಮ ಹೊಲದಲ್ಲಿನ ಜೋಪಡಿಯಲ್ಲಿರುವ ಕಟ್ಟಿಗೆಗೆ ಸಿರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ, ತನ್ನ ಮಗನ ಸಾವಿನಲ್ಲಿ ನನ್ನದು ಯಾರ ಮೇಲೆ ಯಾವುದೇ ತರಹದ ಸಂಶಯ ಅಥವಾ ದೂರು ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 09/2021, ಕಲಂ. 457, 380 ಐಪಿಸಿ :-

ದಿನಾಂಕ 08, 09-02-2021 ರ ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಮಲ್ಲಿಕಾಜುನ ತಂದೆ ವೈಜಿನಾಥ ಲಗ್ಗೋಂಡೆ ವಯ: 26 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಗಾದಗಿ, ತಾ: ಜಿ: ಬೀದರ, ರವರ ಮನೆಯ ದೇವರ ಕೋಣೆಯಲ್ಲಿ ಪ್ರವೇಶ ಮಾಡಿ ಕೋಣೆಯಲ್ಲಿನ ಅಲಮಾರದಲ್ಲಿನ 1) ಬಂಗಾರದ ಎಕ್ಸರ ಗುಂಡಾ 15 ಗ್ರಾಂ, 2) ಬಂಗಾರದ ನಾನ್ 25 ಗ್ರಾಂ., 3) 7 ಬಂಗಾರದ ಸಣ್ಣ ಉಂಗುರುಗಳು ಒಟ್ಟು 10 ಗ್ರಾಂ., 4) ಬೆಳ್ಳಿಯ ಕಾಲಚೈನ್, ಉಡವಾಣಿ ಮತ್ತು 5) ಬೆಳ್ಳಿ ಪಾಟಲಿ ಹೀಗೆ ಒಟ್ಟು ಅ.ಕಿ 1,40,000/- ರೂ. ದಷ್ಟು ಬೆಲೆ ಬಾಳುವ ಬಂಗಾರ & ಬೆಳ್ಳಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 15/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 09-02-2021 ರಂದು ರಾಜೇಶ್ವರ ಗ್ರಾಮದ ಮರಗೆಮ್ಮಾ ಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜನರಿಂದ ಹಣವನ್ನು ಪಡೆದುಕೊಂಡು ಜನರಿಗೆ ಮಟಕಾ ನಂಬರ ಚೀಟಿ ಬರೆದು ಕೊಡುತ್ತಿದ್ದಾನೆ ಅಂತಾ ವಸೀಮ ಪಟೇಲ್ ಪಿ.ಎಸ. (ಕಾ.ಸೂ) ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ರಾಜೇಶ್ವರ ಗ್ರಾಮದ ಮರಗೆಮ್ಮಾ ಮಂದಿರ ಹತ್ತಿರ ನಿಂತು ನೋಡಲು ಮರಗೆಮ್ಮಾ ಮಂದಿರ ಹತ್ತಿರ ಆರೋಪಿ 1) ಶಬ್ಬಿರ ಅಹೇಮದ ತಂದೆ ಅಬ್ದುಲಸಾಬ ಅಲಮಾರಿವಾಲೆ ವಯ: 56 ವರ್ಷ, ಜಾತಿ: ಮುಸ್ಲಿಂ, ಸಾ: ರಾಜೇಶ್ವರ ಇತನು ಸಾರ್ವಜನಿಕ ಸ್ಥಳದಲ್ಲಿ ಒಂದು ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಜೋರಾಗಿ ಕೂಗಿ ಕೂಗಿ ಜನರಿಗೆ ಕರೆದು ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಚೀಟಿ ಬರೆದು ಕೊಡುವಾಗ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಾಹಾಯದಿಂದ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ಅಂಗ ಜಡ್ತಿ ಮಾಡಲು ಆತನ ಹತ್ತಿರ 1) ನಗದು ಹಣ 1,150/- ರೂ., 2) 3 ಮಟಕಾ ನಂಬರ ಬರೆದ ಚೀಟಿಗಳು ಮತ್ತು 3) ಒಂದು ಬಾಲ ಪೆನ್ನು ಸಿಕ್ಕಿದ್ದು, ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ನಂತರ ಆತನಿಗೆ ವಿಚಾರಿಸಲು ತಾನು ಮಟಕಾ ನಂಬರ ಬರೆದ ಚೀಟಿಗಳನ್ನು ನಮ್ಮೂರ ಆರೋಪಿ 2) ಸಂತೋಷ ತಂದೆ ರಾಮಣ್ಣಾ ದಾಂಡೆಕರ ರವರಿಗೆ ಕೊಟ್ಟಾಗ ಸದರಿಯವರು ನನಗೆ ಕಮಿಷನ ಕೊಡುತ್ತಾರೆ ಅಂತಾ ಒಪ್ಪಿಕೊಂಡಿದ್ದರಿಂದ, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 27/2021, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 09-02-2021 ರಂದು ಇಸ್ಟಿಟ್ ಆಟದ ಬಗ್ಗೆ ಮಹಾಂತೇಶ ಲಂಬಿ ಪಿ.ಎಸ್. (ಕಾ.ಸೂ) ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಿತ್ತಕೋಟಾ ಗ್ರಾಮದಲ್ಲಿ ಭೀಮಶ್ಯಾ ಕೋರಿ ರವರ ಕಿರಾಣಾ ಅಂಗಡಿ ಹತ್ತಿರ ದೂರದಿಂದ ಮರೆಯಾಗಿ ನಿಂತು ನೋಡಲು ಖುಲ್ಲಾ ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಸಿದ್ರಾಮಯ್ಯಾ ತಂದೆ ಶಂಕರಯ್ಯಾ ಸೋಲಾಪೂರೆ ವಯ: 72 ವರ್ಷ, ಜಾತಿ: ಸ್ವಾಮಿ, 2) ಪ್ರಭುರಾವ ತಂದೆ ಲಕ್ಷ್ಮಣ ರಾಜೇಶ್ವರ ವಯ: 55 ವರ್ಷ, ಜಾತಿ: ಲಿಂಗಾಯತ, 3) ಮಲ್ಲಯ್ಯಾಸ್ವಾಮಿ ತಂದೆ ಸಂಗಯ್ಯಾ ಸಿಂಧನಕೇರಾ ವಯ: 36 ವರ್ಷ, ಜಾತಿ: ಸ್ವಾಮಿ, 4) ಪ್ರಭುರಾವ ತಂದೆ ಮಲ್ಲಿಕಾರ್ಜುನ ಮಾಲಿಬಿರಾದಾರ, ವಯ: 55 ವರ್ಷ, ಜಾತಿ: ಲಿಂಗಾಯತ, 5) ಭೀಮಶ್ಯಾ ತಂದೆ ನಾಗಪ್ಪಾ ಕೋರಿ, ವಯ: 48 ವರ್ಷ, ಜಾತಿ: ಲಿಂಗಾಯತ, 6) ಗುಂಡಪ್ಪಾ ತಂದೆ ಶಂಕರ ಹಂಗರಗಿ, ವಯ: 32 ವರ್ಷ, ಜಾತಿ: ಲಿಂಗಾಯತ, 7) ಸಂಜುಕುಮಾರ ತಂದೆ ಬಸವಣಪ್ಪಾ ವಳಕಿಂಡಿ ವಯ: 38 ವರ್ಷ, ಜಾತಿ: ಕಬ್ಬಲಿಗ 7 ಜನ ಎಲ್ಲರೂ ಸಾ: ಚಿತ್ತಕೋಟಾ ಮತ್ತು 8) ಬಸವರಾಜ ತಂದೆ ರೇವಣಸಿದ್ದಪ್ಪಾ ಡೊಂಗರಗೆ, ವಯ: 65 ವರ್ಷ, ಜಾತಿ: ಲಿಂಗಾಯತ, ಸಾ: ನೇಳಕೂಡ ಇವರೆಲ್ಲರೂ ಗೊಲಾಗಿ ಕುಳಿತು ಹಣ ಹಚ್ಚಿ ಅಂದರ-ಬಾಹರ ಎಂಬ ನಸೀಬಿನ ಜೂಜಾಟವಾಡುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವರಿಂದ 52 ಇಸ್ಟಿಟ್ ಎಲೆಗಳು ಮತ್ತು ನಗದು ಹಣ 4670/- ರೂ. ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: