Police Bhavan Kalaburagi

Police Bhavan Kalaburagi

Thursday, February 25, 2021

BIDAR DISTRICT DAILY CRIME UPDATE 25-02-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 25-02-2021

 

ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 09/2021, ಕಲಂ. 498(), 504, 506 ಜೊತೆ 34 ಐಪಿಸಿ :-

ಫಿರ್ಯಾದಿ ಮೀನಾಕ್ಷಿ ಗಂಡ ಸುರೇಶ ಚೌಹಾಣ ವಯ: 29 ವರ್ಷ, ಜಾತಿ: ಲಮಾಣಿ, ಸಾ: ನರಸಿಂಗ್ ಪುರ ಥಾಂಡಾ ಔರಾದ(ಬಿ), ಸದ್ಯ: ರಾಂಪುರೆ ಬ್ಯಾಂಕ ಕಾಲೋನಿ ಬೀದರ ರವರ ಮದುವೆಯು 10 ವರ್ಷಗಳ ಹಿಂದೆ ನರಸಿಂಗ್ ಪುರ ಥಾಂಡಾ ಔರಾದ(ಬಿ) ಗ್ರಾಮದ ರಾಮಸಿಂಗ್ ಚೌಹಾಣ ರವರ ಮಗನಾದ ಸುರೇಶ ಚೌಹಾಣ ಇತನೊಂದಿಗೆ ತಮ್ಮ ಧರ್ಮದ ಪ್ರಕಾರ ಫಿರ್ಯಾದಿಯವರ ತಂದೆ ತಾಯಿಯವರು ಮದುವೆ ಮಾಡಿ ಕೊಟ್ಟಿರುತ್ತಾರೆ, ಮದುವೆಯಾದ ನಂತರ ಫಿರ್ಯಾದಿಗೆ ಗಂಡ ಮತ್ತು ಅತ್ತೆ ರವರು 2-3 ವರ್ಷ ಮಾತ್ರ ಚೆನ್ನಾಗಿ ನೋಡಿಕೊಂಡಿದ್ದು ಇರುತ್ತದೆ, ನಂತರ ಅತ್ತೆ, ಗಂಡ ರವರು ನಿನಗೆ ಮಕ್ಕಳು ಆಗುತ್ತಿಲ್ಲ ಅಂತ ಮನಸ್ಸಿಗೆ ನೋವಾಗುವ ಹಾಗೆ ಮಾತನಾಡುತ್ತಾ ಜಗಳ ತೆಗೆದು ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾರೆ, ಸದರಿ ವಿಷಯವನ್ನು ಫಿರ್ಯಾದಿಯು ತನ್ನ ತವರು ಮನೆಯಲ್ಲಿ ತಿಳಿಸಿದಾಗ ಅವರು ಅನೇಕ ಸಲ ಪಂಚಾಯಿತಿ ಹಾಕಿ ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿರುತ್ತಾರೆ, ಅದರೆ ಆರೋಪಿತರಾದ 1) ಸುರೇಶ ಚೌಹಾಣ ತಂದೆ ರಾಮಸಿಂಗ್ ಚೌಹಾಣ (ಗಂಡ), 2) ರಾಜಾಬಾಯಿ ಗಂಡ ರಾಮಸಿಂಗ್ ಚೌಹಾಣ (ಅತ್ತೆ) ಇಬ್ಬರು ಸಾ: ನರಸಿಂಗ್ ಪುರ ಥಾಂಡಾ ಔರಾದ(ಬಿ) ಇವರಿಬ್ಬರು ಅವರ ಯಾರದೆ ಮಾತು ಕೇಳದೆ ಫಿರ್ಯಾದಿಗೆ ತೊಂದರೆ ಕೊಡುತ್ತಿದ್ದರಿಂದ ಮಾನಸಿಕ ಒತ್ತಡವಾಗಿ ತಲೆಯಲ್ಲಿ ಬ್ರೆನ್ ಟೂಮರ್ ಆಗಿರುತ್ತದೆ, ಫಿರ್ಯಾದಿಗೆ ಚಿಕಿತ್ಸೆ ಕೊಡಿಸದೇ ಮನೆಯಿಂದ ಹೊರಗೆ ಹಾಕಿರುತ್ತಾರೆ, ಕಾರಣ ಫಿರ್ಯಾದಿಯವರು ಸದರಿ ಆರೋಪಿತರ ಕಿರುಕುಳವನ್ನು ತಾಳಲಾರದೇ 2 ವರ್ಷಗಳ ಹಿಂದೆ ತನ್ನ ತವರು ಮನೆಗೆ ಬಂದು ವಾಸವಾಗಿರುತ್ತಾರೆ, 6 ತಿಂಗಳ ಹಿಂದೆ ಬ್ರೆನ್ಟೂಮರ್ ಶಸ್ತ್ರ ಚಿಕಿತ್ಸೆ ಆಗಿರುತ್ತದೆ, ಆದರೆ ಇಲ್ಲಿಯವರೆಗೆ ಗಂಡ ಕರೆಯಲು ಬಂದಿರುವದಿಲ್ಲ, ಹೀಗಿರುವಾಗ ದಿನಾಂಕ 22-11-2020 ರಂದು ಸದರಿ ಆರೋಪಿತರು ತವರು ಮನೆಗೆ ಬಂದು ಫಿರ್ಯಾದಿಯ ಜೊತೆಯಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ನಿನಗೆ ಮಕ್ಕಳು ಆಗಿಲ್ಲ, ನಿನಗೆ ಬ್ರೆನ್ ಟೂಮರ್ ಆಗಿದೆ ನಿನ್ನ ಜೊತೆಯಲ್ಲಿ ಸಂಸಾರ ಮಾಡುವದಿಲ್ಲ ಏನು ಬೇಕಾದರೂ ಮಾಡಿಕೊಳ್ಳು ಅಂತ ಜೀವದ ಬೆದರಿಕೆ ಹಾಕಿ ಜಗಳ ಮಾಡುವಾಗ ಜಗಳದ ಶಬ್ದವನ್ನು ಕೇಳಿ ಪಕ್ಕದ ಮನೆಯವರಾದ ನಂದು ತಂದೆ ನಾರಾಯಣ ಹಾಗೂ ಸೂರ್ಯಕಾಂತ ರವರು ಬಂದು ಜಗಳವನ್ನು ಕಣ್ಣಾರೆ ನೋಡಿ ಬಿಡಿಸಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 24-02-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 13/2021, ಕಲಂ. 9(ಬಿ)(1) (ಬಿ) ಸ್ಪೋಟಕ ಕಾಯ್ದೆ 1884 ಮತ್ತು ಕಲಂ. 286, 336 ಐಪಿಸಿ :-

ದಿನಾಂಕ 23-02-2021 ರಂದು ಸುಲ್ತಾನಪುರ ಶಿವಾರದ ಜಿ.ಕೆ ಕನ್ಸಟ್ರಕ್ಷನ್ ಕಂಪನಿಯಲ್ಲಿ ಅನಧಿಕೃತವಾಗಿ ಸ್ಪೋಟಕ ವಸ್ತುಗಳನ್ನು ಒಂದು ಟಿಪ್ಪರದಲ್ಲಿ ಸಂಗ್ರಹಿಸಿಟ್ಟಿರುತ್ತಾರೆ ಅಂತ ಅಮರಪ್ಪ ತಂದೆ ಸಂಗಪ್ಪಾ ಶಿವಬಲ್ ಪೊಲೀಸ ನಿರೀಕ್ಷಕರು ಅಂತರಿಕ ಭದ್ರತಾ ವಿಭಾಗ ಬೀದರ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಐ ರವರು ಪಿ.ಎಸ್. ಗ್ರಾಮೀಣ ಪೊಲೀಸ ಠಾಣೆ ರವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಅಲ್ಲಿ ಒಂದು ಟಿಪ್ಪರದಲ್ಲಿ ಸ್ಪೋಟವಸ್ತುಗಳು ಕಂಡು ಬಂಮೇರೆಗೆ ಅಲ್ಲಿ ಸ್ಥಳೀಯ ಪೊಲೀಸರಿಗೆ ಹಾಗೂ ಸಿಬ್ಬಂದಿಯವರಿಗೆ ಅಲ್ಲಿಂದ ಸಾಗಾಣಿಕೆಯಾಗದಂತೆ ನೋಡಿಕೊಳ್ಳಲು ನೇಮಿಸಿದ್ದು, ಸ್ಪೋಟಕ ವಸ್ತುಗಳಾಗಿದ್ದರಿಂದ ಸುರಕ್ಷತೆ ಕ್ರಮ ಕುರಿತು ಬಿ.ಡಿ.ಡಿ.ಎಸ್ ತಂಡ ಕಲಬುರಗಿ ರವರಿಗೆ ಮಾಹಿತಿ ನೀಡಿ ನಂತರ ದಿನಾಂಕ 24-02-2021 ರಂದು ಪಿ.ಎಸ್. ಗ್ರಾಮೀಣ ಠಾಣೆ ಮತ್ತು ಸಿಬ್ಬಂದಿ ಮತ್ತು ಅಂತರಿಕ ಭದ್ರತಾ ವಿಭಾಗ ಘಟಕದ ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಅಲ್ಲಿಗೆ ಬಿ.ಡಿ.ಡಿ.ಎಸ್ ತಂಡದವರು ಬಂದ ನಂತರ ಅವರ ಸಹಾಯದೊಂದಿಗೆ ಪಂಚರ ಸಮಕ್ಷಮ ಟಿಪ್ಪರದಲ್ಲಿ ಪರಿಶೀಲನೆ ಮಾಡಿ ನೋಡಿ ಟಿಪ್ಪರಲ್ಲಿದ್ದ ವಸ್ತುಗಳಾದ 1) ಐಡಿಯಲ್ ಇಂಡಸ್ಟ್ರೀಯಲ್ ಎಕ್ಸಪ್ಲೋಸಿವ್ ಲಿಮಿಟೆಡ್ ಸಿಕಿಂದ್ರಾಬಾದ ಕಂಪನಿಯ ತಲಾ 25 ಕೆ.ಜಿ ತೂಕವುಳ್ಳ 67 ಜಿಲೆಟಿನ ಸ್ಲುರಿ ಎಕ್ಸಪ್ಲೋಸಿವ್ ಬಾಕ್ಸಗಳಿದ್ದು, ಬಾಕ್ಸನಲ್ಲಿ 9 ಟೂಬಗಳು ಹೀಗೆ ಒಟ್ಟು 603 ಟೂಬಗಳು ಇರುತ್ತವೆ, 2) ನಾನ್ ಎಲೆಕ್ಟ್ರಿಕ್ ಡಿಟೊನೆಟರ್ (ಎನ್.ಇ.ಡಿ) 500, 3) ಕೊರೆಕ್ಸ್ 2500 ಮಿಟರ್, 4) ಒಂದು ಟಿಪ್ಪರ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ, ನಂತರ ಸ್ಥಳದಲ್ಲಿ ಇದ್ದ ಜಿ.ಕೆ. ಕನ್ಸಸ್ಟ್ರಕ್ಷನ ಮ್ಯಾನೆಜರ ಸೂರ್ಯಕಾಂತ ತಂದೆ ಗಣಪತಿ ಸಾ: ಹೆಡಗಾಪುರ ಈತನಿಗೆ ವಿಚಾರಣೆ ಮಾಡಲು ದರಿ ಸ್ಪೋಟಕ ವಸ್ತುಗಳು ಟಿಪ್ಪರ ಮಾಲಿಕ ಶಂಕರ ತಂದೆ ಗೋವಿಂದ ಚವ್ಹಾಣ ಸಾ: ಭೈರಾಪುರೆ ತಾಂಡಾ ಯಾದಗೀರಿ, ಟಿಪ್ಪರ ಚಾಲಕ ಮಹಾದೇವ ತಂದೆ ಪಾಂಡು ರಾಠೋಡ ಇವರು ತೆಗೆದುಕೊಂಡು ಬಂದಿದ್ದು ಇದನ್ನು ನಾವು ನಮ್ಮ ಕಂಕರ ಮಸೀನದಲ್ಲಿ ಉಪಯೋಗಿಸುತ್ತೇವೆ ಅಂತ ತಿಳಿಸಿದ್ದು ಇರುತ್ತದೆ, ಸದರಿ ಸ್ಪೋಟಕ ವಸ್ತುಗಳು ಅನಧಿಕೃವಾಗಿ ಅಜಾಗರೂಕತೆಯಿಂದ ಅಸುರಕ್ಷಿತವಾಗಿ ಸಂಗ್ರಹಿಸಿಟ್ಟಿದ್ದು ಇರುತ್ತದೆ, ಆದ್ದರಿಂದ ಸದರಿ ವಸ್ತುಗಳು ಅನಧಿಕೃತವಾಗಿ ಅಜಾಗರೂಕತೆಯಿಂದ ಅಸುರಕ್ಷಿತವಾಗಿ ಇಟ್ಟುಕೊಂಡಿದ ಜಿ.ಕೆ ಕನ್ಸಸ್ಟ್ರಕ್ಷನ ಕಂಪನಿಯ ಮಾಲೀಕ, ಟಿಪ್ಪರಗೆ ಸಂಬಂಧಿಸಿದ್ದ ಶಂಕರ ತಂದೆ ಗೋವಿಂದ ಚವ್ಹಾಣ, ಟಿಪ್ಪರ ಚಾಲಕ ಮಹಾದೇವ ತಂದೆ ಪಾಂಡು ಮತ್ತು ಜಿ.ಕೆ ಕನ್ಸಸ್ಟ್ರಕ್ಷನ ಮ್ಯಾನೆಜರಾದ ಸೂರ್ಯಕಾಂತ ತಂದೆ ಗಣಪತಿ ಸಾ: ಹೆಡಗಾಪುರ ರವರ ವಿರುದ್ದ ದಿನಾಂಕ 24-02-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಔರಾದ (ಬಿ) ಪೊಲೀಸ್ ಠಾಣೆ ಅಪರಾಧ ಸಂ. 20/2021, ಕಲಂ. 379 ಐಪಿಸಿ :-

ದಿನಾಂಕ 23-02-2021 ರಂದು 2330 ಗಂಟೆಯಿಂದ ದಿನಾಂಕ 24-02-2021 ರಂದು 0500 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿ ಶಾಲಿವಾನ ತಂದೆ ಪ್ರಭುರಾವ ಸಾ: ಗೀರಣೆ ಲೆಔಟ್ ಔರಾದ(ಬಿ) ರವರ ಮೋಟಾರ್ ಸೈಕಲ್ ಕೆಎ-38/ಎಚ್-6796, ಬಣ್ಣ ಕಪ್ಪು ಬಣ್ಣ ನೀಲಿ ಪಟ್ಟಿ, ಮಾಡಲ್ 2002, ಅ.ಕಿ 12,000/- ನೇದನ್ನು ಫಿರ್ಯಾದಿಯವರ ಮನೆಯ ಕಂಪೌಂಡ ಹತ್ತಿರದಿಂದ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ ಠಾಣೆ ಬೀದರ ಅಪರಾಧ ಸಂ. 31/2021, ಕಲಂ. 392 ಐಪಿಸಿ :-

ದಿನಾಂಕ 24-02-2021 ರಂದು 1600 ಗಂಟೆಗೆ ಫಿರ್ಯಾದಿ ಕುಂದುಮತಿ ಗಂಡ ಶಂಕರಾವ ಕೊಟೆ ವಯ: 58 ವರ್ಷ, ಜಾತಿ: ಲಿಂಗಾಯತ, ಸಾ: ಮನೆ ನಂ. 15-3-44/1 ಬ್ಯಾಂಕ ಕಾಲೋನಿ ಕುಂಬಾರವಾಡಾ ಬೀದರ ರವರು ತನ್ನ ತಂಗಿಯವರಾದ 1) ವಿದ್ಯಾವತಿ, 2) ಶೀಲಾ ಮೂವರು ಕೂಡಿ ಬೀದರ ಶಾಹಾಗಂಜ ಬಡಾವಣೆಗೆ ಹೊಗಿ ಅಲ್ಲಿಂಭಾಂಡೆ ರೀದಿಸಿ ಮರಳಿ 1930 ಗಂಟೆಗೆ ಆಟೋದಿಂ ಕುಂಬಾರವಾಡಾ ಕಮಾನ ಹತ್ತಿಇಳಿದು ಮೂವರು ನಡೆದುಕೊಂಡು ಹೊಗುವಾಗ ಕುಂಬಾರವಾಡಾ ಕಮಾನ ಹತ್ತಿಎದುರಗಡೆಯಿಂಒಬ್ಬ ವ್ಯಕ್ತಿ ಜಾಕೇಟ ಹಾಕಿ ಮುಖಕ್ಕೆ ಮಾಸ್ಕ ಧರಿಸಿ ತಲೆಗೆ ಕ್ಯಾಪ ಹಾಕಿ ಒಂದು ಕೆಂಪು ಬಣ್ಣದ ಸ್ಕೂಟಿ ವಾಹನ ತರಹ ಕಾಣುವ ವಾಹನದ ಮೇಲೆ ಬಂದು ಫಿರ್ಯಾದಿಯವರ ಕೊರಳಿನಲ್ಲಿದ್ದ 45 ಗ್ರಾಂ. ಬಂಗಾರದ ಗಂಟನ ಕಿತ್ತುಕೊಳ್ಳಬೇಕೆಂದು ಫಿರ್ಯಾದಿಯವರ ಕೊರಳಿಗೆ ಕೈ ಹಾಕಿದಾಗ ಗಂಟನ ಕಡೆದು ರ್ಧ ಫಿರ್ಯಾದಿಯವರ ಕೊರಳಿನಲ್ಲಿಯೇ ಇದ್ದು ರ್ಧ ಗಂಟನ ಆರೋಪಿತನು ಕಸಿದುಕೊಂಡು ಹೋಗಿರುತ್ತಾನೆ, ಕಸಿದುಕೊಂಡು ಹೋ ಬಂಗಾರದ ಗಂಟನ ಅಂದಾಜು 25 ಗ್ರಾಮ ಇದ್ದು ಅ.ಕಿ 1,25,000/- ರೂಪಾಯಿ ಆಗಬಹುದು, ಸದರಿ ಆರೋಪಿತನು ಮೋಟಾರ ಸೈಕಲ್ ಓಡಿಸಿಕೊಂಡು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 12/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 24-02-2021 ರಂದು ಉಜಳಂಬ ಗ್ರಾಮದ ಶಿವಾಜಿ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಾಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆಂದು ಕು: ಜೈಶ್ರೀ ಪಿ.ಎಸ್. ಮಂಠಾಳ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಉಜಳಂಬ ಗ್ರಾಮಕ್ಕೆ ಹೋಗಿ ಅಲ್ಲಿ ಕನಕದಾಸ ಚೌಕ ಹತ್ತಿರ ರೋಡಿನ ಪಕ್ಕದಲ್ಲಿ ಹೋಗಿ ರೋಡಿನ ಪಕ್ಕದಲ್ಲಿರುವ ಮನೆಗಳ ಮರೆಯಾಗಿ ನಿಂತು ನೋಡಲು ಅಲ್ಲಿ ಉಜಳಂಬ ಗ್ರಾಮದ ಶಿವಾಜಿ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ವಿಕ್ರಮ ತಂದೆ ಮಾಣಿಕರಾವ ಜಾಧವ ವಯ: 35 ವರ್ಷ, ಜಾತಿ: ಮರಾಠಾ, ಸಾ: ಉಜಳಂಬ ಇತನು ಮಟಕಾ ಎಂಬ ಜೂಜಾಟದ ನಂಬರ ಬರೆಯಿಸಿ 01/- ರೂಪಾಯಿಗೆ 80/- ರೂಪಾಯಿ ಪಡೆಯಿರಿ ಅಂತಾ ಚಿರಾಡುತ್ತಾ ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿದ್ದಾಗ ಪಂಚರ ಸಮಕ್ಷಮದಲ್ಲಿ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಅವನಿಗೆ ಹಿಡಿದಾಗ ಮಟಕಾ ನಂಬರ್ ಬರೆಯಿಸುತ್ತಿದ್ದ ಸಾರ್ವಜನಿಕರು ಓಡಿ ಹೋಗಿರುತ್ತಾರೆ, ನಂತರ ಪಂಚರ ಸಮಕ್ಷಮದಲ್ಲಿ ಅವನ ಅಂಗ ಜಡ್ತಿ ಮಾಡಿದಾಗ ಅವನ ಹತ್ತಿರ 1) ನಗದು ಹಣ 2440/- ರೂಪಾಯಿ., 2) 2 ಮಟಕಾ ಚೀಟಿಗಳು ಮತ್ತು 3) ಒಂದು ಬಾಲ್ ಪೆನ್ ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 10/2021, ಕಲಂ. 15(), 32 (3) ಕೆ.ಇ ಕಾಯ್ದೆ :-

ದಿನಾಂಕ 24-02-2021 ರಂದು ಹಿರನಾಗಾಂವ ಗ್ರಾಮದಲ್ಲಿ  ಪ್ರಕಾಶ ತಂದೆ ಗುಂಡಪ್ಪಾ ಕುದಮೂಡ ಇತನು ತನ್ನ ಕಿರಾಣಿ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ  ಸರಾಯಿ ಬಾಟಲಗಳನ್ನು ಇಟ್ಟುಕೊಂಡು ಜನರಿಗೆ ಪ್ಲಾಸ್ಟೀಕ ಗ್ಲಾಸಿನಲ್ಲಿ ಸರಾಯಿ ಹಾಕಿ ಕುಡಿಯಲು ಕೊಡುತ್ತಿದ್ದ ಬಗ್ಗೆ ಅರುಣಕುಮಾರ ಪಿಎಸ್ಐ (ಕಾ.ಸೂ) ಮುಡಬಿ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು ಠಾಣೆಯ  ಸಿಬ್ಬಂದಿಯವರೊಡನೆ ಹಿರನಾಗಾಂವ ಗ್ರಾಮಕ್ಕೆ ಹೋಗಿ ಅಂಬೇಡ್ಕರ ಚೌಕನಲ್ಲಿ ರೋಡಿನ ಬದಿಗೆ ಮರೆಯಾಗಿ ನಡೆದುಕೊಂಡು ಪ್ರಕಾಶ ಕುದಮೂಡ ರವರ ಕಿರಾಣೆ ಅಂಗಡಿಯ ಸಮಿಪ ಹೋಗಿ ಮರೆಯಾಗಿ ನಿಂತು ನೋಡಲು ಪ್ರಕಾಶ ಕುದಮೂಡ ಕಿರಾಣಿ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಪ್ರಕಾಶ ತಂದೆ ಗುಂಡಪ್ಪ ಕುದಮೂಡ ವಯ: 40 ವರ್ಷ, ಜಾತಿ: ಲಿಂಗಾಯತ, ಸಾ: ಹಿರನಾಗಾಂವ ಇತನು ಒಂದು ಪ್ಲಾಸ್ಟಿಕ ಚೀಲದಿಂದ ಸರಾಯಿ ಬಾಟಲಿ ತೆಗೆದು ಚಿಲ್ಲರೆಯಾಗಿ ಮಾರಾಟ ಮಾಡುತ್ತಿರುವಾಗ  ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದಾಗ ಸರಾಯಿ ಕುಡಿಯುತ್ತಿದ್ದ  ವ್ಯಕ್ತಿಗಳು ಓಡಿ ಹೋಗಿರುತ್ತಾರೆ, ನಂತರ ಆರೋಪಿಗೆ ಹಿಡಿದು ಅವನಿಂದ 90 ಎಮ್.ಎಲ್ ವುಳ್ಳ 10 ಯು.ಎಸ್ ವಿಸ್ಕಿ ಬಾಟಗಳು ಅ.ಕಿ 351/- ರೂಪಾಯಿಗಳು ಇದ್ದು, ನಂತರ ಆತನಿಗೆ ಸರಾಯಿ ಚಿಲ್ಲರೆ ಮಾರಾಟ ಮಾಡಲು ಪರವಾನಿಗೆ ಬಗ್ಗೆ ವಿಚಾರಿಸಲಾಗಿ ಈ ಬಗ್ಗೆ ಯಾವುದೆ ಪರವಾನಿಗೆ ಇರುವುದಿಲ್ಲಾ ನಾನು ನನ್ನ ಸ್ವಂತ ಲಾಭಕ್ಕಾಗಿ ಲೈಸನ್ಸ ಪಡೆಯದೆ ನಾನು ನನ್ನ ಕಿರಾಣಿ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಚಿಲ್ಲರೆಯಾಗಿ ಮಾಡುತ್ತಿರುವದಾಗಿ ಮತ್ತು ಜನರಿಗೆ ಕುಡಿಯಲು ಅನುವು ಮಾಡಿಕೊಡುತ್ತಿರುವದಾಗಿ ತಿಳಿಸಿದನು, ನಂತರ ಪಂಚರ ಸಮಕ್ಷಮ ಸದರಿ ಸರಾಯಿಯನ್ನು ಜಪ್ತಿ ಮಾಡಿಕೊಂಡು, ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 21/2021, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 24-02-2021 ರಂದು ಮಂಠಾಳ ಕ್ರಾಸ್ ಹತ್ತಿರ ಗ್ರ್ಯಾಂಡ ಧಾಬಾದ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸರಕಾರದಿಂದ ಯಾವುದೇ ಪರವಾನಗಿ ಇಲ್ಲದೇ ಅನಧೀಕೃತವಾಗಿ ಒಂದು ಚೀಲದಲ್ಲಿ ಸರಾಯಿ ಇಟ್ಟುಕೊಂಡು ಸಾರಾಯಿ ಮಾರಾಟ ಮಾಡುತ್ತಿದ್ದಾನೆ ಅಂತ ವಸೀಮ ಪಟೇಲ್ ಪಿಎಸ್ಐ (ಕಾ&ಸು) ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮಂಠಾಳ ಕ್ರಾಸ್ ಹತ್ತಿರ ಗ್ರ್ಯಾಂಡ ಧಾಬಾದಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತ ನೋಡಲು ಮಂಠಾಳ ಕ್ರಾಸ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಆರೋಪಿ ಸಾಗರ ತಂದೆ ಉದ್ದವ ಕಾಂಬಳೆ ವಯ: 23 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಎಕ್ಕಂಡಿ, ತಾ: ಲೋಹಾರಾ, ಜಿಲ್ಲಾ: ಉಸ್ಮಾನಾಬಾದ ಇತನು ತನ್ನ ಹತ್ತಿರ ಒಂದು ಚೀಲದಲ್ಲಿ ಸರಾಯಿ ಇಟ್ಟುಕೊಂಡು ಜನರಿಗೆ ಮಾರಾಟ ಮಾಡುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಸದರಿಯವನಿಗೆ ಹಿಡಿದು ಚೀಲದಲ್ಲಿ ಏನಿದೆ? ಅಂತಾ ವಿಚಾರಣೆ ಮಾಡಲು ತಿಳಿಸಿದೇನೆಂದರೆ ಇದರಲ್ಲಿ ಸರಾಯಿ ಇದೆ ನಾನು ಸರಕಾರದಿಂದ ಯಾವುದೇ ಪರವಾನಗಿ ಇಲ್ಲದೆ ಅನಧೀಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದೇನೆ ಅಂತಾ ಒಪ್ಪಿಕೊಂಡಿದ್ದರಿಂದ ಆತನ ಹತ್ತಿರ ಇದ್ದ ಚೀಲವನ್ನು ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು ಚೀಲದಲ್ಲಿ ಓರಿಜಿನಲ್ ಚಾಯಸ ಡಿಲಕ್ಸ ವಿಸ್ಕಿ ಸರಾಯಿ 90 ಎಂ.ಎಲ ವುಳ್ಳ 40 ಟೆಟ್ರಾ ಪ್ಯಾಕೇಟಗಳು ಅ.ಕಿ 1,400/- ರೂ. ಇರುತ್ತದೆ, ನಂತರ ಸದರಿ ಸರಾಯಿಯನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

No comments: