Police Bhavan Kalaburagi

Police Bhavan Kalaburagi

Sunday, February 28, 2021

BIDAR DISTRICT DAILY CRIME UPDATE 28-02-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 28-02-2021

 

ಮನ್ನಾಎಖೆಳ್ಳಿ ಠಾಣೆ ಪೊಲೀಸ್ ಠಾಣೆ ಅಪರಾಧ ಸಂ. 26/2021, ಕಲಂ. 279, 338, 304 (), 283 ಐಪಿಸಿ ಜೊತೆ 187 ಐಎಮ್ವಿ ಕಾಯ್ದೆ :-

ದಿನಾಂಕ 26-02-2021 ರಂದು ಫಿರ್ಯಾದಿ ಅಫ್ರೋಜ ಖಾನ ತಂದೆ ಇಸ್ಮಾಯಿಲ ಖಾನ ಮಾಲಿ ಪಾಟೀಲ ವಯ: 41 ವರ್ಷ, ಜಾತಿ: ಮಸ್ಲಿಂ, ಸಾ: ತಾಳಮಡಗಿ ರವರು ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವಾಗ ರಾತ್ರಿ ರಾ.ಹೆ. ನಂ. 65 ರೋಡಿನ ಆಚೆ ಹೈದ್ರಾಬಾದ ಹೋಗುವ ರೋಡಿಗೆ ಹುಮನಾಬಾದ ಕಡೆಯಿಂದ ಲಾರಿ ನಂ. ಕೆಎ-39/-0005 ನೇದರ ಚಾಲಕನಾದ ಆರೋಪಿ ನಂ. 1 ಇತನು ತನ್ನ ಲಾರಿಯನ್ನು ತಂದು ಯಾವುದೇ ಮುನ್ಸುಚನೆ ಇಲ್ಲದೆ ವಾಹನದ (ಇಂಡಿಕೇಟರ) ಹಾಕದೆ ಹಾಗೆ ನಿಲ್ಲಿಸಿ ತಾನು ಕೆಳಗೆ ಇಳಿದು ಬಹಿರ್ದೆಸೆಗೆ ಹೋಗಿರುತ್ತಾನೆ, ನಂತರ 2210 ಗಂಟೆ ಸುಮಾರಿಗೆ ಹುಮನಾಬಾದ ಕಡೆಯಿಂದ ಮನ್ನಾಎಖೇಳ್ಳಿ ಕಡೆಗೆ ಲಾರಿ ನಂ. ಎಮ್.ಎಚ್-25/ಯು-1677 ನೇದರ ಚಾಲಕನಾದ ಆರೋಪಿ ನಂ. 2 ದಶರಥ ತಂದೆ ರೊಹಿದಾಸ ವಾಕಳೆ ವಯ: 25 ವರ್ಷ, ಜಾತಿ: ಸಮಗಾರ, ಸಾ: ಎಕ್ಕುರಗಾ, ತಾ: ಉಮರ್ಗಾ, ಜಿ: ಉಸ್ಮನಾಬಾದ ಇತನು ತನ್ನ ಲಾರಿಯನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಯಿಸುತ್ತಾ ಬಂದು ರೋಡಿನ ಮೇಲೆ ನಿಲ್ಲಿಸಿ ಹೋದ ಲಾರಿ ನಂ. ಕೆಎ-39/-0005  ನೇದಕ್ಕೆ ಜೋರಾಗಿ ಡಿಕ್ಕಿ ಮಾಡಿದ ಪ್ರಯುಕ್ತ ಚೀರುವ ಶಬ್ದ ಕೇಳಿ ಫಿರ್ಯಾದಿ ಮತ್ತು ಧಾಬಾದ ಮಾಲಿಕ ಪ್ರೇಮ ಇಬ್ಬರು ಓಡುತ್ತಾ ಹೋಗಿ ನೋಡಲು ಆರೋಪಿ ನಂ. 2 ಇತನು ಞ್ಟೇರಿಂಗ ಮೇಲೆ ಮೃತಪಟ್ಟಿದ್ದು, ಆತನ ಪಕ್ಕದಲ್ಲಿ ಕುಳಿತ ಇನ್ನೂ ಇಬ್ಬರು ವ್ಯಕ್ತಿ್ತಗಳಿಗೆ ಭಾರಿ ಗಾಯಗೊಂಡಿದ್ದು ಇಬ್ಬರನ್ನು ಚಿಕಿತ್ಸೆ ಕುರಿತು 108 ವಾಹನದಲ್ಲಿ ಸರಕಾರಿ ಆಸ್ಪತ್ರೆ ಹುಮನಾಬಾದಕ್ಕೆ ಸಾಗಿಸಲಾಯಿತು ಮತ್ತು ಆರೋಪಿ ನಂ. 1 ಇತನು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 27-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 24/2021, ಕಲಂ. 279, 338 ಐಪಿಸಿ :-

ದಿನಾಂಕ 27-02-2021 ರಂದು ಫಿರ್ಯಾದಿ ಸಾವಿತ್ರಿ ಗಂಡ ಜೀವನ ಸಿಂದೆ ವಯ: 33 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಎಕಂಬಾ, ಸದ್ಯ: ಔರಾದ(ಬಿ) ರವರ ಮಗನಾದ ಸುಜಲ್ ತಂದೆ ಜೀವನ ಸಿಂದೆ ವಯ: 13 ವರ್ಷ ಶಾಲೆಯಿಂದ ಮನೆಗೆ ನಡೆದುಕೊಂಡು ಬರುವಾಗ ಹಳೆ ನವಚೇತನ ಶಾಲೆಯ ಎದುರುಗಡೆ ಔರಾದ(ಬಿ) ಬಸ ನಿಲ್ದಾಣದ ಕಡೆಯಿಂದ ಮೋಟಾರ ಸೈಕಲ ನಂ. ಎಪಿ-28/ಎಬಿ-9755 ನೇದರ ಚಾಲಕನಾದ ಆರೋಪಿ ಬಸವರಾಜ ತಂದೆ ತುಕಾರಾಮ ಮೇತ್ರೆ ವಯ: 25 ವರ್ಷ, ಜಾತಿ: ಎಸ್.ಸಿ, ಸಾ: ಜನತಾ ಕಾಲೋನಿ, ಔರಾದ(ಬಿ) ಇತನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಗೆ ನಡೆದುಕೊಂಡು ಹೋಗುತ್ತಿದ್ದ  ಸುಜಲ್ ಇತನಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ್ದು, ಸದರಿ ಡಿಕ್ಕಿಯಿಂದ ಸುಜಲ ಇತನ ಎಡಗಾಲ ತೋಡೆಗೆ ಭಾರಿ ಗುಪ್ತಗಾಯಗೊಂಡಿದ್ದರಿಂದ ಆತನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಔರಾದ(ಬಿ) ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 44/2021, ಕಲಂ. 279, 337, 338 ಐಪಿಸಿ :-

ಫಿರ್ಯಾದಿ ಉಮಾಶ್ರೀ ತಂದೆ ಸುಭಾಷ ಭುಸಣ್ಣನೋರ, ವಯ: 18 ವರ್ಷ, ಜಾತಿ: ಕಬ್ಬಲಿಗ, ಸಾ: ಮಲಕಾಪೂರ ವಾಡಿ, ತಾ: ಹುಮನಾಬಾದ ರವರ ನಿಶ್ಚಿತಾರ್ಥ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕೋಳ್ಳೂರ ಗ್ರಾಮದ ವಸಂತ ತಂದೆ ತಮ್ಮಣ್ಣಾ ಧುತ್ರಿ ವಯ: 35 ವರ್ಷ ರವರೊಂದಿಗೆ ನಿಶ್ಚಿತವಾಗಿರುತ್ತದೆ, ಹೀಗಿರುವಾಗ ದಿನಾಂಕ 27-02-2021 ರಂದು ಫಿರ್ಯಾದಿಯವರ ಭಾವಿಗಂಡ ರವರು ಮಲಕಾಪೂರ ವಾಡಿಗೆ ಬಂದಿದ್ದು ಇಬ್ಬರೂ ಮೋಟರ ಸೈಕಲ ನಂ. ಟಿ.ಎಸ್-07/ಇ.ಡಿ-7800 ನೇದರ ಮೇಲೆ ಮ್ಮೂರಿಂದ ಉಡಬಾಳ ಯಲ್ಲಮ್ಮ ಜಾತ್ರೆಗೆ ಹೋಗುವಾಗ ರಾ.ಹೆ ನಂ. 75 ಹುಡಗಿ-ಚಿಟಗುಪ್ಪಾ ರೋಡ ಮೇಲೆ ಚಿಟಗುಪ್ಪಾ ನಾನಾ ಹಜರತ ಹತ್ತಿರಚಿಟಗುಪ್ಪಾ ಪುರಸಭೆ ಸ್ವಾಗತ ಕಮಾನ ಹತ್ತಿರ ಎದುರಿನಿಂದ ಚಿಟಗುಪ್ಪಾ ಕಡೆಯಿಂದ ಬಂದ ಮೋಟರ ಸೈಕಲ ನಂ. ಕೆಎ-39/ಎಲ್-4675 ನೇದರ ಚಾಲಕನಾದ ಆರೋಪಿ ಮೊಹಮ್ಮದ ಸಾದಿಕ ತಂದೆ ಮೊಹಮ್ಮದ ರಸೂಲ ಶಾಹ ವಯ: 24 ವರ್ಷ, ಸಾ: ಸಿಂಧನಕೇರಾ ಇತನು ತನ್ನ ಮೋಟರ ಸೈಕಲನ್ನು ಅತಿವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ತನ್ನ ಸೈಡ್ ಬಿಟ್ಟು ಫಿರ್ಯಾದಿಯ ಸೈಡಿಗೆ ಬಂದು ಫಿರ್ಯಾದಿ ಕುಳಿತ ಮೋಟರ ಸೈಕಲಗೆ ಎದುರಿನಿಂದ ಡಿಕ್ಕಿ ಮಾಡಿ ಅಪಘಾತ ಪಡಿಸಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಎಡ ಮೋಳಕೈ ಕೆಳಗೆ ತರಚಿದ ಗಾಯ, ಎಡ ಮೋಳಕಾಲಿಗೆ ಗುಪ್ತಗಾಯ ಹಾಗೂ ವಸಂತ ರವರಿಗೆ ಎಡಹಣೆಗೆ, ಎಡಹುಬ್ಬಿಗೆ ಭಾರಿ ರಕ್ತಗಾಯ, ಎಡಗಣ್ಣಿನ ಕೆಳಗೆ, ಬಲಪಾದ, ಬಲಹಿಮ್ಮಡಿಗೆ ರಕ್ತಗಾಯವಾಗಿರುತ್ತದೆ ಮತ್ತು ಆರೋಪಿಯ ಎಡಹಣೆ ಮೇಲೆ ರಕ್ತಗಾಯವಾಗಿರುತ್ತದೆ ಮತ್ತು ಆರೋಪಿಯ ಮೋಟರ ಸೈಕಲ ಹಿಂದೆ ಕುಳಿತ ರಹೆಮತುನ್ನಿಸಾ ಗಂಡ ಮೊಹಮ್ಮದ ಸಾದಿಕ ಶಾಹ ವಯ: 22 ವರ್ಷ, ಸಾ: ಸಿಂಧನಕೇರಾ ಅವಳ ಹಣೆಗೆ ಮೇಲೆ ಭಾರಿ ರಕ್ತಗಾಯವಾಗಿ ಮೂಗಿನಿಂದ ರಕ್ತಸ್ರಾವ, ಬಲಗಲ್ಲಕ್ಕೆ ಹಾಗು ಎಡಭುಜಕ್ಕೆ ತರಚಿದಗಾಯ ಹಾಗು ಗುಪ್ತಗಾಯಗಳಾಗಿರುತ್ತವೆ ನಂತರ ಎಲ್ಲರಿಗೂ ದಾರಿ ಹೋಕರಾದ ಸಿಂಧನಕೇರಾ ಗ್ರಾಮದ ಫರೀದ ತಂದೆ ನಸೀರಸಾಬ ಸುಲ್ತಾನಿ ಹಾಗೂ ಇತರರು ಆಟೋದಲ್ಲಿ ಚಿಕಿತ್ಸೆಗಾಗಿ ಚಿಟಗುಪ್ಪಾ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 05/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 27-02-2021 ರಂದು ಚಾಂಗಲೇರಾ ಗ್ರಾಮದ ಬಸ್ ನಿಲ್ದಾಣದ ಎದುರಿಗೆ ಬೀದರ-ಚಿಂಚೊಳಿ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಎಂಬ ನಸೀಬಿನ ಜೂಜಾಟ ನಡೆಸುತ್ತಿದ್ದಾನೆ ಅಂತಾ ಗಂಗಮ್ಮಾ ಪಿಎಸ್ಐ ಬೇಮಖೇಡಾ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಚಾಂಗಲೇರಾ ಗ್ರಾಮದ  ಅಂಬೇಡ್ಕರ ವೃತ್ತದ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಆರೋಪಿ ಮಲ್ಲಪ್ಪಾ ತಂದೆ ಸುಬಣ್ಣಾ ಫುಲ್ಲಾ ವಯ: 24 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಕಾರಪಾಕಪಳ್ಳಿ ಇತನು ಚಾಂಗಲೇರಾ ಗ್ರಾಮದ ಬಸ್ ನಿಲ್ದಾಣದ ಎದುರಿಗೆ ಬೀದರ ಚಿಂಚೊಳಿ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 100/- ರೂಪಾಯಿಗಳು ಕೊಡುತ್ತೇನೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಅತನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂದಿಸಿದ 1) ನಗದು ಹಣ 2770/- ರೂಪಾಯಿಗಳು, 2) ಮಟಕಾ ನಂಬರ್ ಬರೆದ 1 ಮಟಕಾ ಚೀಟಿ ಹಾಗು 3) ಒಂದು ಬಾಲ ಪೆನ್ನ ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 16/2021, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 27-02-2021 ರಂದು ಹಿಪ್ಪಳಗಾಂವ ಗ್ರಾಮದ ಸರಕಾರಿ ಶಾಲೆಯ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವೂ ಜನರು ಅಂದರ-ಬಾಹರ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆಂದು ಶಿವರಾಜ . ಪಾಟೀಲ್ ಪಿ.ಎಸ್. (ಕಾ.ಸೂ) ಜನವಾಡಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಿಪ್ಪಳಗಾಂವ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಹಿಂದುಗಡೆ  ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಎಂಬ ನಸೀಬಿನ ಇಸ್ಪಿಟ್ ಜೂಜಾಟ ಆಡುತ್ತಿದ್ದ ಆರೋಪಿತರಾದ 1) ಪವನ ತಂದೆ ಶಿವರಾಜ ಸಿದ್ದಗೊಂಡ, 2)  ಸಂಜುಕುಮಾರ ತಮದೆ ಮಾಣಿಕ ಸಂಕೆ, 3) ಸಾಯಿನಾಥ ತಂದೆ ವಿಠಲ ಸಂಕೆ, 4) ಕಾಶಿನಾಥ ತಂದೆ ಸುಭಾನಿ ಸಂಕೆ ಹಾಗೂ 5) ವಿಜಯಕುಮಾರ ತಂದೆ ರಾಮಪ್ಪ ರಕ್ಷಾಳೆ ಎಲ್ಲರೂ ಸಾ: ಹಿಪ್ಪಳಗಾಂವ ಗ್ರಾಮ ವರ ಮೇಲೆ ದಾಳಿ ಮಾಡಿ ಅವರನ್ನು ದಸ್ತಗಿರಿ ಮಾಡಿ ಅವರಿಂದ ಜೂಜಾಟಕ್ಕೆ ಬಳಸುತ್ತಿದ್ದ ಒಟ್ಟು 52 ಇಸ್ಪೀಟ ಎಲೆಗಳು, ಒಟ್ಟು ನಗದು ಹಣ 6800/- ರೂ. ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: