Police Bhavan Kalaburagi

Police Bhavan Kalaburagi

Friday, March 12, 2021

BIDAR DISTRICT DAILY CRIME UPDATE 11-03-2021

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 11-03-2021

 

ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 12/2021, ಕಲಂ. 363 ಐಪಿಸಿ :-

ಫಿರ್ಯಾದಿ ರಾಜೇಂದ್ರ ಸ್ವಾಮಿ ತಂದೆ ವೀರಯ್ಯಾ ಸ್ವಾಮಿ ವಯ: 47 ವರ್ಷ, ಸಾ: ಬೆನಕನಳ್ಳಿ, ಸದ್ಯ: ಹೌಸಿಂಗ್ ಬೊರ್ಡ ಕಾಲೋನಿ ನೌಬಾದ, ಬೀದರ ರವರ ಹಿರಿಯ ಮಗಳಾದ ಸ್ನೆಹಾ ವಯ: 15 ವರ್ಷ 9 ನೇ ತರಗತಿಯಲ್ಲಿ ಬೀದರ ಗುರುನಾನಕ ದೇವ ಪಬ್ಲಿಕ್ ಸ್ಕೂಲ್ದಲ್ಲಿ ಓದುತ್ತಿದ್ದಾಳೆ, ಹೀಗಿರುವಾಗ ದಿನಾಂಕ 09-03-2021 ರಂದು ಶಾಲೆಯಲ್ಲಿ ಪೇರೆಂಟ್ ಮಿಟಿಂಗ್ ಇದ್ದಿದ್ದು, ಸದರಿ ಮಿಟಿಂಗ್ಗೆ ಅಣ್ಣನ ಮಗನಾದ ಅಭೀಶೆಕ ಇತನು ಹೋಗಿದ್ದು, ಅವಳಿಗೆ ಟೆಸ್ಟನಲ್ಲಿ ಅಂಕ ಕಡಿಮೆ ಬಂದಿದ್ದು ಇರುತ್ತದೆ, ನಂತರ ಶಾಲೆಯಿಂದ ಮರಳಿ 1630 ಗಂಟೆಗೆ ಮನೆಗೆ ಬಂದಿರುತ್ತಾಳೆ, ಮನೆಗೆ ಬಂದು ಊಟ ಮಾಡಿದ ನಂತರ ಅಂದಾಜು 1800 ಗಂಟೆಯ ಸುಮಾರಿಗೆ ಓದುತ್ತೇನೆಂದು ಪುಸ್ತಕಗಳನ್ನು ತೆಗೆದುಕೊಂಡು ಮೇಲಿನ ಕೋಣೆಗೆ ಹೋಗಿರುತ್ತಾಳೆ, ನಂತರ ಫಿರ್ಯಾದಿಯು 1815 ಗಂಟೆಗೆ ಅವಳಿಗೆ ಕೊಣೆಯಲ್ಲಿ ಹೋಗಿ ನೋಡಲಾಗಿ ಅವಳು ಕೊಣೆಯಲ್ಲಿ ಇರಲಿಲ್ಲ, ಅವಳಿಗೆ ಫಿರ್ಯಾದಿಯು ತನ್ನ ಹೆಂಡತಿ, ಅಣ್ಣನಾದ ಮಲ್ಲಿಕಾರ್ಜುನ್ ಸ್ವಾಮಿ ಮತ್ತು ಪರಿಚಯ ಇರುವ ಶ್ರೀಕಾಂತ ತಂದೆ ಇಶ್ವರ್ ಔರಾದಕರ್ ರವರು ಕೂಡಿ ತಮ್ಮ ಸಂಭಂದಿಕರು ಮತ್ತು ರೈಲ್ವೆ ನಿಲ್ದಾಣ, ಹೌಸಿಂಗ್ ಬೊರ್ಡ ಕಾಲೋನಿ, ಬಸ ನಿಲ್ದಾಣ ಮುಂತಾದ ಕಡೆಗಳಲ್ಲಿ ತಿರುಗಾಡಿ ಹುಡುಕಾಡಲಾಗಿ ಮಗಳ ಬಗ್ಗೆ ಯಾವುದೆ ಪತ್ತೆ ಆಗಿರುವದಿಲ್ಲ, ಮಗಳಿಗೆ ಟೆಸ್ಟದಲ್ಲಿ ಅಂಕ ಕಡಿಮೆ ಬಂದಿದ್ದರಿಂದ ಅವಳು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಎಲ್ಲಿಗೆ ಹೋಗಿರುತ್ತಾಳೊ ಗೊತ್ತಿರುವುದಿಲ್ಲ ಅವಳು ಕಾಣೆಯಾಗಿರುತ್ತಾಳೆ ಅಥವಾ ಯಾರೋ ಅಪರಿಚಿತ ವ್ಯಕ್ತಿ ಅಪಹರಣ ಮಾಡಿರುವ ಬಗ್ಗೆ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 10-03-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 48/2021, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 10-03-2021 ರಂದು ಮದರಗಿ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಶೋಕ ಕನಕಪೂರ ಎಂಬ ವ್ಯಕ್ತಿ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾನೆಂದು ಮಹಾಂತೇಶ ಪಿ.ಎಸ್.. (ಕಾ.ಸೂ) ಪಿಎಸ್ಐ ಚಿಟಗುಪ್ಪಾ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮದರಗಿ ಗ್ರಾಮದ ಅಂಗನವಾಡಿ ಕಟ್ಟಡದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ಅಶೋಕ ತಂದೆ ನಾಗಪ್ಪಾ ಕನಕಪೂರ, ವಯ: 35 ವರ್ಷ, ಜಾತಿ: ಕಬ್ಬಲಿಗ, ಸಾ: ಮದರಗಿ ಇತನು ಒಂದು ಪ್ಲಾಸ್ಟಿಕ ಚೀಲದಲ್ಲಿ ಸರಾಯಿ ಮಾರಾಟ ಮಾಡುವುದನ್ನು ನೋಡಿ ಆತನ ಮೇಲೆ ದಾಳಿ ಮಾಡಿ ಹಿಡಿದು ಅವನ ಹತ್ತಿರ ಇದ್ದ ಪ್ಲಾಸ್ಟಿಕ ಚೀಲದಲ್ಲಿ ನೋಡಲು ಅದರಲ್ಲಿ ಯು.ಎಸ್ ವಿಸ್ಕಿ 90 ಎಂ.ಎಲ್ ನ 55 ಪ್ಲಾಸ್ಟಿಕ್ ಬಾಟಲಗಳು .ಕಿ 1932/- ರೂ. ಇದ್ದು, ನಂತರ ಸದರಿ ಆರೋಪಿಗೆ ಮಧ್ಯ ಮಾರಾಟ ಮಾಡಲು ಸರಕಾರದಿಂದ ಪರವಾನಿಗೆ ಪಡೆದ ಯಾವುದಾದರೂ ಕಾಗದ ಪತ್ರಗಳು ಇವೆಯಾ ಅಂತಾ ವಿಚಾರಿಸಿದಾಗ ನನ್ನ ಹತ್ತಿರ ಯಾವುದೇ ಕಾಗದ ಪತ್ರಗಳಿರುವುದಿಲ್ಲ ಸದರಿ ಸರಾಯಿ ಬಾಟಲಗಳನ್ನು ನಿರ್ಣಾ ವೈನ ಶಾಪನಿಂದ ಖರೀದಿ ಮಾಡಿಕೊಂಡು ಬಂದಿರುವುದಾಗಿ ತಿಳಿಸಿರುತ್ತಾನೆ, ಸದರಿ ಸರಾಯಿಯನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: