Police Bhavan Kalaburagi

Police Bhavan Kalaburagi

Sunday, March 21, 2021

BIDAR DISTRICT DAILY CRIME UPDATE 21-03-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 21-03-2021

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 27/2021, ಕಲಂ. ಮನುಷ್ಯ ಕಾಣೆ :-

ಫಿರ್ಯಾದಿ ಸಂಧ್ಯಾ ಗಂಡ ನವಿನರೆಡ್ಡಿ ಚಿಡಗುಪ್ಪಿಕರ್ ವಯ: 28 ವರ್ಷ, ಜಾತಿ: ರೆಡ್ಡಿ, ಸಾ: ಮನೆ ಸಂ. 19-6-279 ಶಿವನಗರ(ಉತ್ತರ) ಬೀದರ ರವರು ತನ್ನ ಗಂಡನ ಜೊತೆ ಜಗಳ ಮಾಡಿ ತಮ್ಮ ಮಕ್ಕಳೊಂದಿಗೆ ತನ್ನ ತವರು ಮನೆಗೆ ಹೋದಾಗ ಗಂಡನಾದ ನವಿನ ರೆಡ್ಡಿ ಇತನು ದಿನಾಂಕ 16-11-2020 ರಂದು ಹೋದವನು ಮತ್ತೆ ಮರಳಿ ಮನೆಗೆ ಬಂದಿರುವುದಿಲ್ಲ, ಆತನಿಗೆ ಎಲ್ಲಾ ಕಡೆ ಹುಡಕಾಡಿದರು ಸಿಕ್ಕಿರುವುದಿಲ್ಲ, ನವಿನರೆಡ್ಡಿ ಈತನ ವಿವರ 1) ಹೆಸರು: ನವಿನರೆಡ್ಡಿ, 2) ತಂದೆ ಹೆಸರು: ಸುರೇಶ ರೆಡ್ಡಿ, 3) ವಯ: 32 ವರ್ಷ, 4) ಎತ್ತರ: 5’5 ಫೀಟ,  5) ಚಹರೆ ಪಟ್ಟಿ: ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, 6) ಧರಿಸಿದ ಬಟ್ಟೆಗಳು: ಒಂದು ಅಂಗಿ ಮತ್ತು ಪ್ಯಾಂಟು ಹಾಗೂ 7) ಮಾತನಾಡುವ ಭಾಷೆ: ಕನ್ನಡ, ಹಿಂದಿ, ತೆಲಗು ಮಾತನಾಡುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 20-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 379 ಐಪಿಸಿ :-

ದಿನಾಂಕ 04-07-2020 ರಂದು 1530 ಗಂಟೆಯಿಂದ  1600  ಗಂಟೆಯ ಅವಧಿಯಲ್ಲಿ ಗುರುನಾನಕ ಕಾಲೋನಿಯ ರೊಹಿತ ರೆಸ್ಟೊರೆಂಟ  ಎದುರಿಗೆ ಇಟ್ಟಿದ್ದ ಫಿರ್ಯಾದಿ ವೈಜಿನಾಥ ತಂದೆ ಕರಬಸಪ್ಪ ಶೇರೆ ವಯ: 59 ವರ್ಷ, ಜಾತಿ: ಲಿಂಗಾಯತ, ಸಾ: ಗುರುನಾನಕ ಕಾಲೋನಿ ಬೀದರ ರವರ ಹೊಂಡಾ ಸಿಬಿ ಶೈನ  ಮೋಟರ ಸೈಕಲ ನಂ. KA-38/U-3715, Chassis No. ME4JC654EHT035539, Engine No.  JC65ET1055842, ಮಾಡಲ್ 2017, ಬಣ್ಣ: ಕಪ್ಪು ಬಣ್ಣ ಹಾಗೂ .ಕಿ 25,000/- ರೂ. ನೇದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 20-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 45/2021, ಕಲಂ. ಮನುಷ್ಯ ಕಾಣೆ :-

ಫಿರ್ಯಾದಿ ದಿಗಂಬರ ತಂಧೆ ಭೀಮಣ್ಣಾ ಮೇತ್ರೆ ವಯ: 49 ವರ್ಷ, ಸಾ: ಅಲ್ಲಂ ಪ್ರಭು ನಗರ ಬೀದರ, ಸದ್ಯ: ವಿದ್ಯಾನಗರ ಬೀದರ ರವರ ಅಕ್ಕಳಾದ ಜಯಶ್ರೀ ಗಂಡ ಪಾಡುರಂಗ ಮೇತ್ರೆ ಸಾ: ಬೋರಾಳ, ತಾ: ದೇವಣಿ, ಜಿ: ಲಾತೂರ (ಎಮ್.ಎಸ್) ರವರ ಮಗಳಾದ ಪಲ್ಲವಿ ಇವಳ ಮದುವೆಯು ಮೇಹಕರ ಗ್ರಾಮದ ಸಂತೋಷ ಇವರ ಜೊತೆ ದಿನಾಂಕ 16-02-2021 ರಂದು ಮೇಹಕರ ಗ್ರಾಮದಲ್ಲಿ ಆಗಿರುತ್ತದೆ, ಮದುವೆಯಾದ ನಂತರ ಫಿರ್ಯಾದಿಯು ತನ್ನ ಅಕ್ಕನ ಮಗಳಾದ ಪಲ್ಲವಿಗೆ ಬೀದರಗೆ ಕರೆದುಕೊಂಡು ಬಂದಿ ಇರುತ್ತದೆ, ಹೀಗಿರುವಾಗ ದಿನಾಂಕ 11-03-2021 ರಂದು 1300 ಗಂಟೆಗೆ ಪಲ್ಲವಿ ಇವಳು ಪಾಪನಾಶ ದೇವಾಲಯಕ್ಕೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋಗಿ 2200 ಗಂಟೆಯಾದರು ಮರಳಿ ಮನೆಗೆ ಬಂದಿರುವದಿಲ್ಲಾ, ನಂತರ ಫಿರ್ಯಾದಿಯು ಪಲ್ಲವಿಯ ಮೋಬೈಲ್ ನಂ. ನಂ 9980154591 ನೇದಕ್ಕೆ ಕರೆ ಮಾಡಿದಾಗ ಅದು ಸ್ವೀಚ್ಡ್ಆಫ್ ಆಗಿತ್ತು, ನಂತರ ಫಿರ್ಯಾದಿಯು ಆಕೆಯನ್ನು ಎಲ್ಲಾ ಕಡೆ ಬಂಧು ಬಳಗ ಹಾಗು ಗೆಳೆಯರಲ್ಲಿ ಮತ್ತು ಅವರ ಗಂಡನ ಮನೆಯವರಿಗೂ ಪಲ್ಲವಿ ಕಾಣೆಯಾದ ಬಗ್ಗೆ ವಿಚಾರಿಸಿದ್ದು ಆದರೆ ಎಲ್ಲಿಯು ಅವಳ ಪತ್ತೆ ಆಗಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 20-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 08/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 20-03-2021 ರಂದು ಫಿರ್ಯಾದಿ ಲತಾ ಗಂಡ ಸಾಬಯ್ಯಾ ತೆಲಂಗ ವಯ: 54 ವರ್ಷ, ಜಾತಿ: ಇಳಗಾರ, ಸಾ: ಬಾಗವಾನ ಗಲ್ಲಿ ಹುಮನಾಬಾದ ರವರ ಮಗನಾದ ಲೋಕೇಶ ತಂದೆ ಸಾಬಯ್ಯಾ ತೆಲಂಗ ವಯ: 38 ವರ್ಷ, ಸಾ: ಬಾಗವಾನ ಗಲ್ಲಿ ಹುಮನಾಬಾದ ಇತನು ದಿನಾಂಕ 20-03-2021 ರಂದು ಗೋಕುಳ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಮೇಲೆ ಹಾಕಿರುವ ಸಿರಿಯಲ್ ಲೈಟಗಳನ್ನು ತೆಗೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರುತ್ತಾನೆ ಅವನಿಗೆ ತಲೆ ಹಿಂಭಾಗದಲ್ಲಿ ಭಾರಿ ರಕ್ತಗಾಯವಾಗಿ ಬಲಕಿವಿಯಿಂದ ರಕ್ತ ಬಂದಿದ್ದರಿಂದ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಚಿಕಿತ್ಸೆ ಫಲಕಾರಿಯಾಗದೇ ಲೋಕೇಶ ಇತನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ, ತನ್ನ ಮಗನ ಸಾವಿನಲ್ಲಿ ನನ್ನದು ಯಾರ ಮೇಲೆ ಯಾವುದೇ ತರಹದ ದೂರು ಅಥವಾ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: