Police Bhavan Kalaburagi

Police Bhavan Kalaburagi

Wednesday, March 3, 2021

BIDSAR DISTRICT DAILY CRIME UPDATE 03-03-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 03-03-2021

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 21/2021, ಕಲಂ. 379 ಐಪಿಸಿ :-

ಫಿರ್ಯಾದಿ ನಾಗೇಶ ತಂದೆ ಜ್ಞಾನಚಂದ ಚಲ್ವಾ ಸಾ: ಅಶೋಕ ನಗರ ಬೀದರ ರವರು ತನ್ನ ಹೊಂಡಾ ಎಕ್ಟಿವಾ ಮೊಟರ ಸೈಕಲ ನಂ. KA39Q6735, ಚಾಸಿಸ್ ನಂ. ME4JF507CHU057529, ಇಂಜಿನ ನಂ. JF50EU5056869, ಬಣ್ಣ: ಬಿಳಿ ಬಣ್ಣ, ಮಾಡಲ್: 2017 ಹಾಗೂ .ಕಿ. 40,000/-  ರೂ. ನೇದನ್ನು ಕೆ..ಬಿ ಕಛೇರಿಯ ಎದುರುಗಡೆ ಣಿಯಲ್ಲಿರುವ ಬಸವೇಶ್ವರ ಆಸ್ಪತ್ರೆ ಬೀದರ ನೇದರ ಹೊರಗಡೆ ನಿಲ್ಲಿಸಿರುವುದನ್ನು ದಿನಾಂಕ 23-02-2021 ರಂದು 2300 ಗಂಟೆಯಿಂದ ದಿನಾಂಕ 24-02-2021 ರಂದು 0600 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳªÀÅ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 02-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ ಠಾಣೆ, ಬೀದರ ಅಪರಾಧ ಸಂ. 34/2021, ಕಲಂ. 379 ಐಪಿಸಿ :-

ದಿನಾಂಕ 25-01-2021 ರಂದು 0930 ಗಂಟೆಯಿಂದ 1000 ಗಂಟೆಯ ಅವಧಿಯಲ್ಲಿ ಫಿರ್ಯಾದಿ ಸಂಜುಕುಮಾರ ತಂದೆ ವಾಮನರಾವ ಅಲ್ಲಾಳೆ ವಯ: 34 ವರ್ಷ, ಜಾತಿ: ರಾಠಾ, ಸಾ: ರಾಜನಾಳ ಗ್ರಾಮ, ತಾ: ಬೀದರ ರವರು ಬೀದರ ಗಾಂಧಿಗಂಜ ಬೀದರದಲ್ಲಿರುವ ಗಣಪತಿ ಮಂದಿರ ಎದುರಗಡೆ ನಿಲ್ಲಿಸಿದ ತನ್ನ ದ್ವಿಚಕ್ರ ವಾಹನ ನಂ. KA-38/X-3106, ENGINE NO. JC85EG0097357, CHESSI NO. ME4JC852HLG058887 ನೇದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 02-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 40/2021, ಕಲಂ. 379 ಐಪಿಸಿ :-

ಫಿರ್ಯಾದಿ ಶೇಖ್ ಮುಕ್ತಾರ ತಂದೆ ಶೇಖ್ ಮಹೇಮುದ್ ದಪೆದಾರ್ ವಯ: 38 ವರ್ಷ, ಜಾತಿ: ಮುಸ್ಲಿಂ, ಸಾ: ಸಿದ್ದಿ ತಾಲಿಮ್ ಹಳೆ ಭಾಲ್ಕಿ ರವರ ಭಾವನಾದ ಜಮೀಲಮಿಯಾ ತಂದೆ ಮಹ್ಮದ್ ಸುಕುರ್ ಸಾ: ವಳಂಡಿ, ತಾ: ದೇವಣಿ, ಜಿ: ಲಾತೂರ (ಎಮ್.ಎಸ್) ಈತನು 2020 ನೇ ಸಾಲಿನಲ್ಲಿ ದೇವಣಿ ಪಟ್ಟಣದಲ್ಲಿ ಮಾರುತಿ ಸುಝುಕಿ ಸ್ವೀಫ್ಟ್ ವಿ.ಡಿ.ಐ ಕಾರ್ ನಂ. ಎಮ್.ಹೆಚ್-20/ಬಿ.ಸಿ-8149 ನೇದನ್ನು ಖರೀದಿ ಮಾಡಿ ಫಿರ್ಯಾದಿಗೆ ಉಪಯೋಗಿಸಲು ಕೊಟ್ಟಿರುತ್ತಾರೆ, ಹೀಗಿರುವಾಗ ದಿನಾಂಕ 01-03-2021 ರಂದು ಫಿರ್ಯಾದಿಯು ಸದರಿ ಕಾರಿನಲ್ಲಿ ತನ್ನ ಖಾಸಗಿ ಕೆಲಸ ಕುರಿತು ಬೀದರಗೆ ಹೋಗಿ 1800 ಗಂಟೆ ಸುಮಾರಿಗೆ ಭಾಲ್ಕಿಗೆ ಬಂದು ದಿನನಿತ್ಯದಂತೆ ಭಾಲ್ಕಿ ಪಟ್ಟಣದ ಸಿದ್ದಿ ತಾಲಿಮ್ ಹಳೆ ಭಾಲ್ಕಿಯ ಮನೆಯ ಮುಂದೆ ಕಾರ್ ನಿಲ್ಲಿಸಿ 2230 ಗಂಟೆ ಸುಮಾರಿಗೆ ಮಲಗಿಕೊಂಡು ನಂತರ ರಾತ್ರಿ 0200 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆ ಕುರಿತು ಎದ್ದಾಗ ಕಾರ್ ನೋಡಲು ತಾನು ನಿಲ್ಲಿಸಿದ ಸ್ಥಳದಲ್ಲಿ ಸದರಿ ಕಾರ್ ಇರಲಿಲ್ಲ, 3 ಲಕ್ಷ ಬೆಲೆ ಬಾಳುವ ಸದರಿ ಕಾರನ್ನು ದಿನಾಂಕ 01-03-2021 ರಂದು 2300 ಗಂಟೆಯಿಂದ ದಿನಾಂಕ 02-03-2021 ರಂದು ರಾತ್ರಿ 0200 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 44/2021, ಕಲಂ. 3 & 7 ಇ.ಸಿ ಕಾಯ್ದೆ :-

ದಿನಾಂಕ 02-03-2021 ರಂದು ಹುಮನಾಬಾದ ಪಟ್ಟಣದ ಅಷ್ಟೇಕರ ಪೆಟ್ರೋಲ ಬಂಕ್ ಹತ್ತಿರ ಲಾರಿ ನಂ. ಜಿ.ಜೆ-36/ಟಿ-5410 ನೇದರಲ್ಲಿ ಸರಕಾರದಿಂದ ಸಾರ್ವಜನಿಕರಿಗೆ ವಿತರಿಸುವ ಅಕ್ಕಿ ಅಕ್ರಮವಾಗಿ ಸಾಗಿಸುವ ಕುರಿತು ನಿಲ್ಲಿಸಿರುತ್ತಾರೆಂದು ಫಿರ್ಯಾದಿ ಶೇಖರ ತಂದೆ ಷಣ್ಮೂಖರಾವ ಕಮಲಾಪುರಕರ ವಯ: 37 ವರ್ಷ, ಜಾತಿ: ಎಸ.ಸಿ ಹೋಲಿಯಾ, ಉ: ಆಹಾರ ನೀರಿಕ್ಷಕರು, ಸಾ: ಭಾರತ ನಗರ ಕಲಬುರ್ಗಿ, ಸದ್ಯ: ತಹಸೀಲ ಕಚೇರಿ ಹುಮನಾಬಾದ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿರ್ಯಾದಿಯವರ ಪೊಲೀಸ ಅಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ಸದರಿ ಲಾರಿ ಮೇಲೆ ದಾಳಿ ಮಾಡಿ ಒಟ್ಟು 230 ಕ್ವಿಂಟಲ 70 ಕೆ.ಜಿ ಪಿ.ಡಿ.ಎಸ ಅಕ್ಕಿ ಜಪ್ತಿ ಮಾಡಿಕೊಂಡು ಆರೋಪಿತರಾದ 1) ಅಪರಿಚಿತ ಚಾಲಕ ಲಾರಿ ನಂ. ಜಿ.ಜೆ-36/ಟಿ-5410, 2) ಅಪರಿಚತ ಮಾಲಿಕ ಲಾರಿ ನಂ. ಜಿ.ಜೆ-36/ ಟಿ-5410 ರವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: