ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 01-04-2021
ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 23/2021 ಕಲಂ 279, 304 (ಎ) ಐಪಿಸಿ ಜೋತೆ 187 ಐ ಎಮ್ ವಿ ಆಕ್ಟ್ :-
ದಿನಾಂಕ 31/03/2021 ರಂದು 08:30 ಗಂಟೆಗೆ ಶ್ರೀ ವಿರೇಶ ತಂದೆ ನಿಲಕಂಠರಾವ ದೇಶಮುಖ್ ಸಾ|| ಭವಾನಿ ಬಿಜಲಗಾಂವ ಗ್ರಾಮ ತಾ|| ಕಮಲನಗರ ಜಿ|| ಬೀದರ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ
ಸಾರಾಂಶವೆನೆಂದರೆ ದಿನಾಂಕ 30/03/2021 ರಂಂದು ಮಧ್ಯಾಹ್ನ 2:00 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಭಾವನಾದ
ಸಂತೋಷ ತಂದೆ ಕಲ್ಲಪ್ಪಾ ವಿಳಾಸಪೂರೆ ಬೋಗರ್ಿ (ಜೆ) ಗ್ರಾಮ ರವರು ಅವರ ಹಿರೋ ಸ್ಪೆಲಂಡರ್ ಪಲ್ಸ್
ಮೋಟಾರ್ ಸೈಕಲ್ ನಂ ಕೆಎ-38/ಎಕ್ಸ್-3634 ನೇದರ ಮೇಲೆ ಬೋಗರ್ಿ (ಜೆ) ಗ್ರಾಮದಿಂದ ಬೀದರ ದಲ್ಲಿನ ನಮ್ಮ ಸಂಬಂದಿಕರ
ಮನೆಯಲ್ಲಿನ ಹುಟ್ಟುಹಬ್ಬದ ಕಾರ್ಯಕ್ರಮ ಹೊಗಿದ್ದು, ಕಾರ್ಯಕ್ರಮ ಮುಗಿಸಿಕೊಂಡು ಬೀದರದಿಂದ ಬೋಗರ್ಿ (ಜೆ) ಗ್ರಾಮಕ್ಕೆ ಬೇನಕನಳ್ಳಿ
ಮಾರ್ಗವಾಗಿ ಬರುತ್ತಿರುವಾಗ ಫಿರ್ಯಾದಿಯು ಮೋಟಾರ್ ಸೈಕಲ್ ಚಲಾಯಿಸುತ್ತಿದ್ದು, ಬೀದರ ಕಂದಗೂಳ ರೋಡಿನ ಬೇನಕನಳ್ಳಿ ಗ್ರಾಮದ ದಾಟಿ
ಸ್ವಲ್ಪ ಮುಂದೆ ಬೆನಕನಳ್ಳಿ ಗ್ರಾಮದ ಸುಭಾಷ ಪವಾರ ರವರ ಹೊಲದ ಹತ್ತಿರ ರಾತ್ರಿ 11:20 ಗಂಟೆಯ ಸುಮಾರಿಗೆ ಬಂದಾಗ ನಮ್ಮ ಎದುರುಗಡೆಯಿಂದ
ಒಬ್ಬ ಗೂಡ್ಸ್ ಟೆಂಪು ವಾಹನ ಚಾಲಕ ತನ್ನ ವಾಹನ ಅತಿವೇಗ ಹಾಗು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ
ಅಪಾಯಕರವಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು
ಮೋಟಾರ್ ಸೈಕಲಕ್ಕೆ ಎದುರಿನಿಂದ ಡಿಕ್ಕಿಪಡಿಸಿದ್ದರಿಂದ ಮೋಟಾರ್ ಸೈಕಲನೊಂದಿಗೆ ಕೆಳಗಡೆ
ಬಿದ್ದಿದ್ದು, ಂತೋಷ ರವರು ರೋಡಿನ ಮೇಲೆ ಬಿದ್ದಿದ್ದು, ಅವರ ಮೇಲಿಂದ ಟೆಂಪು ಹಾಯಿದು ಸಂತೋಷ ರವರ ಎಡಕೈ
ರೆಟ್ಟೆಗೆ ಮತ್ತು ಎದೆ ಎಡಭಾಗದಲ್ಲಿ ಭಾರಿ ರಕ್ತಗಾಯವಾಗಿ ಮೌಂಸಖಂಡ ಬಂದಿದ್ದು, ಬಲಕೈಗೆ ಭಾರಿ ರಕ್ತಗಾಯ ಹಾಗೂ ಎಡ ಮತ್ತು
ಬಲಕಾಲಿನ ತೋಡೆಗೆ ಭಾರಿ ರಕ್ತಯಗಾಯವಾಗಿ ಮೌಂಸಖಂಡ ಹೊರಬಂದಿದ್ದು, ಹಾಗೂ ಗುದದ್ವಾರಕ್ಕೆ ಭಾರಿ ರಕ್ತಗಾಯವಾಗಿ
ಮೌಂಸಖಂಡ ಹೊರಬಂದು ಅವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಡಿಕ್ಕಿಪಡಿಸಿದ ಟೆಂಪು ನೋಡಲು ಅದರ ನಂ ಕೆಎ-38/ಎ-3478 ನೇದ್ದಾಗಿದ್ದು, ಅಲ್ಲೆ ಇದ್ದ ಅದರ ಚಾಲಕನಿಗೆ ಅವನ ಹೆಸರು ಮತ್ತು
ವಿಳಾಸ ವಿಚಾರಿಸಲು ಅವನು ತನ್ನ ಹೆಸರು ನಾಮದೇವ ತಂದೆ ನರಸಿಂಗರಾವ ಮಡಿವಾಳ ಚಾಂಬೋಳ ಗ್ರಾಮ ಅಂತಾ
ಹೇಳಿ ಆತನು ತನ್ನ ಟೆಂಪೊದೊಂದಿಗೆ ಅಲ್ಲಿಂದ ಒಡಿಹೊಗಿರುತ್ತಾನೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೋಳ್ಳಲಾಗಿದೆ.
ಬೀದರ ನೂತನ ನಗರ ಠಾಣೆ ಅಪರಾಧ ಸಂಖ್ಯೆ 35/2021 ಕಲಂ 379 ಐಪಿಸಿ :-
ದಿನಾಂಕ 25/03/2021 ರಂದು 1730
ಗಂಟೆಗೆ ಫಿರ್ಯಾದಿ ಶ್ರೀ. ಭೀಮರಾವ
ತಂದೆ ಸೂರ್ಯಕಾಂತ ವಯ:30 ವರ್ಷ ಜಾತಿ :ಲಿಂಗಾಯತ
ಉ:ಎಲೆಕ್ಟ್ರಿಶೀನ ಕೆಲಸ ಸಾ/ಪಾಂಡೆ ಫಾಮರ್ಾಸಿ ಕಾಲೇಜ ಕಾರ್ಟರ್ಸ ರಾಘವೆಂದ್ರ ಕಾಲೋನಿ
ನೌಬಾದ ಬೀದರ ರವರು ಠಾಣೆಗೆ ಹಾಜರಾಗಿ ಲಿಖಿತ
ದೂರು ಸಲ್ಲಿಸಿದರ ಸಾರಾಂಶವೇನಂದರೆ ಒಂದು ಹೀರೊ ಸ್ಪ್ಲೆಂಡರ ಪ್ಲಸ್ ಮೋಟರ ಸೈಕಲ
ನಂ ಏಂ38ಐ9233
ನೇದನ್ನು 2012 ನೇ ಸಾಲಿನಲ್ಲಿ ಖರಿದಿಸಿದ್ದು ಇರುತ್ತದೆ. ಹಿಗಿರುವಾಗ ದಿನಾಂಕ 15/03/2021 ರಂದು ರಾತ್ರಿ 2300
ಗಂಟೆಗೆ ನೌಬಾದ ರಾಘವೇಂದ್ರ
ಕಾಲೋನಿಯಲ್ಲಿ ಇರುವ ಮನೆಯ ಮುಂದೆ ಹೀರೊ ಸ್ಪ್ಲೆಂಡರ ಪ್ಲಸ್ ಮೊಟರ ಸೈಕಲನ್ನು ನಿಲ್ಲಿಸಿ ರಾತ್ರಿ ಮನೆಯಲ್ಲಿ ಮಲಗಿಕೊಂಡಿದ್ದು, ನಸುಕಿನಲ್ಲಿ 4:00 ಎ.ಎಮ್. ಗಂಟೆಗೆ ಎದ್ದು
ನೋಡಿದಾಗ ಮೊಟರ ಸೈಕಲ ನಾನು ಇಟ್ಟಿದ್ದ
ಜಾಗದಲ್ಲಿ ಇದ್ದಿರುವದಿಲ್ಲ. ಕಳುವಾದ ಮೊಟರ
ಸೈಕಲನ್ನು ಎಲ್ಲಾ ಕಡೆಗೆ ಹುಡುಕಾಡಿದೆವು ಎಲ್ಲಿಯೂ ಪತ್ತೆ ಯಾಗಿರುವದಿಲ್ಲ. ಕಳುವಾದ ಮೊಟರ ಸೈಕಲನ್ನು ಎಲ್ಲಾ ಕಡೆಗೆ ಹುಡುಕಾಡಿ
ಸಿಗದಿದ್ದಾಗ ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ. ಕಳ್ಳತನವಾದ ಮೋಟಾರ್ ಸೈಕಲ್ ವಿವರ ಹೀಗಿರುತ್ತದೆ: ಹೀರೊ ಸ್ಪ್ಲೆಂಡರ ಪ್ಲಸ್ ಮೋಟರ ಸೈಕಲ
ನಂ ಕೆಎ38ಎಲ್9233 ಚಾ.ನಂ. ಎಮ್.ಬಿ.ಎಲ್.ಎಚ್.ಎ.10ಎಎಮ್ಸಿಎಚ್.ಇ68325
ಇಂ. ನಂ. ಎಚ್.ಎ.10ಇಜೆಸಿಎಚ್.ಇ.86435
ಮಾಡಲ್: 2012, ಇದ್ದು ಅಂದಾಜು ಕಿಮ್ಮತ್ತು ರೂ- 15,000/-ರೂ ಆಗಿರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೋಳ್ಳಲಾಗಿದೆ.
ಮಾರ್ಕೇಟ ಪೊಲೀಸ ಠಾಣೆ ಅಪರಾಧ ಸಂಖ್ಯೆ
13/2021 ಕಲಂ 32, 34 ಕೆಇ ಕಾಯ್ದೆ :-
ದಿನಾಂಕ: 31-03-2021 ರಂದು ಆರೋಪಿತ ಅಬ್ದುಲ ಬಾಸಿತ್ @ ಅಕ್ರಮ ತಂದೆ ಅಬ್ದುಲ್ ಖಾದಗರ ಸಾ: ಮನಿಯಾರ
ತಾಲಿಮ ಇತನು ಬೀದರ ನಗರದ ಪೊಲೀಸ್ ಚೌಕ ಹತ್ತಿರ
ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾನೆಂದು ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ (ಕಾ.ಸು) ಮಾಕರ್ೆಟ ಪೊಲೀಸ್ ಠಾಣೆ ಬೀದರ
ರವರು ಇಂದು ದಿನಾಂಕ 31-03-2021 ರಂದು 1100 ಗಂಟೆಯ ಸುಮಾರಿಗೆ ಪಂಚರ ಸಮಕ್ಷಮ ಸಿಬ್ಬಂಧಿ ಜೋತೆ ದಾಳಿ ಮಾಡಿ ಆರೋಪಿಗೆ
ಹಿಡಿದು ಸದರಿಯವನ ಹತ್ತಿರ ಇದ್ದ ಓರಿಜಿನಲ್ ಚಾಯ್ಸ ವಿಸ್ಕಿ 90 ಎಮಎ ಒಟ್ಟು 42 ಇದ್ದು ಅಕಿ:35 ಒಟ್ಟು 1470/- ರೂ ಬೆಲೆಬಾಳುವದನ್ನು ಜಪ್ತಿ ಮಾಡಿಕೊಂಡು
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 61/2021 ಕಲಂ 420 ಐಪಿಸಿ :-
ದಿ: 31-03-2021 ರಂದು 1930 ಗಂಟೆಗೆ ಫಿರ್ಯಾದಿ ಫಾತಿಮಾ ಗಂಡ ಯುಸುಫಮಿಯ್ಯಾ ಮುಲ್ಲಾ ವಾಲೆ ವಯ: 38 ವರ್ಷ ಜಾ: ಮುಸ್ಲಿಂ, ಉ: ಕೂಲಿ ಕೆಲಸ ಸಾ:ಎಕಲಾಸಪೂರವಾಡಿ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ ದಿ: 15-01-2021 ರಂದು 1200 ಗಂಟೆಗೆ ಫಿರ್ಯಾದಿಯು ತನ್ನ ಮಗನಾದ ಸಾಜೀದ್ ರವರು ಕೂಡಿಕೊಂಡು ಭಾಲ್ಕಿಯ ಪಾತ್ರೆ ಗಲ್ಲಿ ಕ್ರಾಸ್ ಹತ್ತಿರ ಇರುವ ಎಟಿಎಮ್ ಕೇಂದ್ರಕ್ಕೆ ಹೋದಾಗ ಅಲ್ಲೆ ಒಬ್ಬ ಅಪರಿಚಿತ ವ್ಯಕ್ತಿ ಬಾಗಿಲಲ್ಲಿ ನಿಂತಿದ್ದು ಫಿರ್ಯಾದಿಯು ಅವನಿಗೆ ನನಗೆ ಹಣ ಡ್ರಾ ಮಾಡಲು ಬರುವುದಿಲ್ಲ ಹಣ ತೆಗೆದುಕೊಡಿ ಅಂತಾ ತನ್ನ ಹತ್ತಿರ ವಿದ್ದ ಎಟಿಎಮ್ ಕಾರ್ಡ ನೀಡಿದಾಗ ಆತನು ಫಿರ್ಯಾದಿಯು ನೀಡಿದ ಎಟೆಎಮ್ ಕಾರ್ಡ್ ತನ್ನ ಹತ್ತಿರವಿಟ್ಟು ಕೊಂಡು ಫಿರ್ಯಾದಿಗೆ ಇನ್ನೋಂದು ಎಟಿಎಮ್ ಕಾರ್ಡ ನೀಡಿ ನಿಮ್ಮ ಅಕೌಂಟನಲ್ಲಿ ಹಣವಿಲ್ಲ ಅಂತಾ ಹೇಳಿ ಕಳುಹಿಸಿರುತ್ತಾನೆ ಫಿರ್ಯಾದಿಯು ಬ್ಯಾಂಕಗೆ ಹೋಗಿ ವಿಚಾರಿಸಿದಾಗ ಖಾತೆ ನಂ. 38585900128 ನೆದರಲ್ಲಿ ರೂ. 19911/- ರೂಪಾಯಿ ಇದ್ದು ಇದೆ ದಿವಸ 10,000/- ಡ್ರಾ ಮಾಡಿಕೊಂಡಿರುತ್ತಿರಿ ಅಂತಾ ತಿಳಿಸಿರುತ್ತಾರೆ ಆದ್ದರಿಂದ ಸಿಂಡಿಕೆಟ್ ಬ್ಯಾಂಕ್ ಎಟಿಎಮ್ ಕೇಂದ್ರಕ್ಕೆ ಹೋದಾಗ ಬಾಗಿಲಲ್ಲಿ ನಿಂತಿದ ವ್ಯಕ್ತಿ ಮೋಸ ಮಾಡಿ ಹಣ ಡ್ರಾ ಮಾಡಿಕೊಂಡಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 40/2021 ಕಲಂ 78(3) ಕೆಪಿ ಕಾಯ್ದೆ :-
ದಿನಾಂಕ: 31/03/2021 ರಂದು 13:30 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿ ಇದ್ದಾಗ ಹಳ್ಳಿ ಗ್ರಾಮದ ವಿಠಲ ಪಾಟೀಲ ಅಂಗಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜನರಿಂದ ಹಣವನ್ನು ಪಡೆದುಕೊಂಡು ಜನರಿಗೆ ಮಟಕಾ ನಂಬರ ಚೀಟಿ ಬರೆದು ಕೊಡುತಿದ್ದಾನೆ, ಅಂತಾ ಮಾಹಿತಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಹಿಡಿದು ಆತನಿಗೆ ವಿಚಾರಿಸಲು ತನ್ನ ಹೆಸರು ರಂಜೀತ ತಂದೆ ಅಂಬಾದಾಸ ಗಾಯಕವಾಡ ವಯ:42 ವರ್ಷ ಜಾತಿ:ಎಸ,ಸಿ ಹೊಲಿಯಾ ಉ:ಕೂಲಿಕೆಲಸ ಸಾ:ಹಳ್ಳಿ ಅಂತಾ ತಿಳಸಿದನು ಸದರಿಯವನ ಅಂಗ ಜಡ್ತ ಮಾಡಲು ಇತನ ಹತ್ತಿರ 1) ನಗದು ಹಣ 1,520/- ರೂಪಾಯಿ 2) ನಾಲ್ಕು ಮಟಕಾ ನಂಬರ ಬರೆದ ಚೀಟಿಗಳು 3) ಒಂದು ಬಾಲ ಪೆನ್ನು ಸಿಕ್ಕಿರುತ್ತದೆ. ಸದರಿಯವನಿಗೆ ಮತ್ತು ಆತನ ಹತ್ತಿರ ಸಿಕ್ಕ ನಗದು ಹಣ ನಾಲ್ಕು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
No comments:
Post a Comment