Police Bhavan Kalaburagi

Police Bhavan Kalaburagi

Sunday, April 4, 2021

BIDAR DISTRICT DAILY CRIME UPDATE 04-04-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 04-04-2021

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 53/2021, ಕಲಂ. 392 ಐಪಿಸಿ :-

ದಿನಾಂಕ 03-04-2021 ರಂದು ಅಂದಾಜು 1645 ಗಂಟೆಗೆ ಫಿರ್ಯಾದಿ ದೇವಿಕಾ ಗಂಡ ಮಹೇಶ ಕಣಜೆ ವಯ: 26 ವರ್ಷ, ಜಾತಿ: ಲಿಂಗಾಯತ, ಸಾ: ದೇವಿ ಕಾಲೋನಿ ಜೈತಿರ್ಥ ಕಲ್ಯಾಣ ಮಂಟಪ ಹತ್ತಿರ, ಉದನೂರ ರಸ್ತೆ ಕಲಬುರಗಿ ರವರು ಮೃತಂಜಯ ನಗರದಲ್ಲಿ ತಮ್ಮ ಅತ್ತೆಯ ಮನೆಯ ಮುಂದೆ ರೋಡಿನ ಬದಿಯಲ್ಲಿ ನಿಂತಾಗ ಅದೆ ವೇಳೆಗೆ ಒಂದು ಕಪ್ಪು ಬಣ್ಣದ ಪಲ್ಸರ ಮೋಟಾರ ಸೈಕಲ ಮೇಲೆ ಇಬ್ಬರು ಅಪರಿಚಿತರು ಬಂದು ಫಿರ್ಯಾದಿಯವರ ಕೊರಳಿನಲ್ಲಿದ್ದ ಬಂಗಾರದ ಲಾಕೇಟ ಹಾಗೂ ಮಿನಿ ಗಂಟನ ನೇದವುಗಳನ್ನು ಮೋಟಾರ ಸೈಕಲ ಮೇಲೆ ಹಿಂದೆ ಕುಳಿತ ವ್ಯಕ್ತಿ ಕಡಿದುಕೊಂಡು ಮೋಟಾರ ಸೈಕಲ ಓಡಿಸಿಕೊಂಡು ಹೋಗಿರುತ್ತಾರೆ, ಆಗ ಫಿರ್ಯಾದಿಯು ಚಿರಾಡುತ್ತಿರುವಾಗ ಅಲ್ಲಿಯೆ ಇದ್ದ ಸಂಬಂಧಿಕರಾದ ಶಾಮರಾವ ತಂದೆ ಅಣ್ಣೆಪ್ಪಾ ಹಾಗು ಇತರರು ಅವರಿಗೆ ಹಿಡಿಯಲು ಬೆನ್ನು ಹತ್ತಿದಾಗ ತಪ್ಪಿಸಿಕೊಂಡು ಓಡಿ ಹೊಗಿರುತ್ತಾರೆ. ಮೋಟರ ಸೈಕಲ ಮೇಲೆ ಬಂದ ಅಪರಿಚಿತ ಸುಲಿಗೆಕೊರರಲ್ಲಿ ಮೋಟಾರ ಸೈಕಲ ಚಲಾಯಿಸುತ್ತಿದ್ದ ವ್ಯಕ್ತಿ ಹೇಲ್ಮೇಟ್ ಧರಿಸಿದ್ದು ಹಿಂದೆ ಕುಳಿತ ವ್ಯಕಿ್ತ ಮುಖಕ್ಕೆ ಮಾಸ್ಕ ಹಾಕಿರುತ್ತಾನೆ, ಅವರು ಕಿತ್ತುಕೊಂಡು ಹೋದ ಬಂಗಾರದ ಲಾಕೇಟ 35 ಗ್ರಾಂ .ಕಿ 1,12,000/- ರೂ. ಹಾಗು ಮಿನಿ ಗಂಟನ 15 ಗ್ರಾಂ .ಕಿ 48,000/- ರೂ. ಹೀಗೆ ಒಟ್ಟು 50 ಗ್ರಾಂ ಬಂಗಾರ .ಕಿ 1,60,000/- ರೂ ಬೆಲೆಬಾಳುದನ್ನು ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 41/2021, ಕಲಂ. ಮನುಷ್ಯ ಕಾಣೆ :-

ಫಿರ್ಯಾದಿ ಲಕ್ಷ್ಮಿಬಾಯಿ ಗಂಡ ಮಾಣಿಕ ಚಂದಾಪೂರೆ ಸಾ: ಬೀರಿ (ಕೆ), ತಾ: ಭಾಲ್ಕಿ ರವರ ಗಂಡ ಮಾಣಿಕ ರವರಿಗೆ 90 ವರ್ಷ ವಯಸ್ಸಾಗಿದ್ದು ಅವರು ಕಣ್ಣುಗಳು ಸರಿಯಾಗಿ ಕಾಣಿಸುತ್ತಿರಲಿಲ್ಲ, ಅವರು ಬಡಿಗೆ ಹಿಡಿದುಕೊಂಡು ನಡೆಯುತ್ತಿದ್ದರು, ಹೀಗಿರುವಾಗ ದಿನಾಂಕ 25-11-2020 ರಂದು ಗಂಡ ಚಂದಾಪುರಕ್ಕೆ ಹೋಗಿ ಬರುತ್ತೆನೆ ಎಂದು ಹೇಳಿ ಹೋಗಿ ಮನೆಗೆ ಮರಳಿ ಬರದೆ ಕಾಣೆಯಾಗಿರುತ್ತಾರೆ, ಅವರನ್ನು ಎಲ್ಲಾ ಕಡಗೆ ಹುಡುಕಾಡಿದರೂ ಸಹ ಅವರು ಪತ್ತೆಯಾಗಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 03-04-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 42/2021, ಕಲಂ. ಮಹಿಳೆ ಕಾಣೆ :-

 

ಫಿರ್ಯಾದಿ ಶಾಂತಕುಮಾರ ತಂದೆ ಏಕನಾಥ ಘನಮಲೆ ವಯ: 28 ವರ್ಷ, ಜಾತಿ: ಎಸ.ಟಿ ಗೊಂಡ, ಸಾ: ನೀರಗುಡಿ ರವರ ಹೆಂಡತಿಯ ಹೆರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಆಗಿರುವದರಿಂದ ಸರ್ಕಾರದಿಂದ 5,000/- ರೂ ಅನುದಾನ ಸಿಕ್ಕಿರುತ್ತದೆ, ಅನುದಾನ ಹಣವನ್ನು ಫಿರ್ಯಾದಿಯು ತನಗೆ ಕೊಡುವಂತೆ ಕೇಳಿದಾಗ ಹೆಂಡತಿ ಹಣವನ್ನು ಕೊಡಲು ನಿರಾಕರಿಸಿರುತ್ತಾಳೆ, ಬಗ್ಗೆ ಬ್ಬರ ನಡುವೆ ತಕರಾರು ಆಗಿರುತ್ತದೆ, ಹೀಗಿರುವಾಗ ದಿನಾಂಕ 01-04-2021 ರಂದು 1200 ಗಂಟೆಯಿಂದ 1300 ಗಂಟೆಯ ಅವಧಿಯಲ್ಲಿ ಫಿರ್ಯಾದಿಯು ಮನೆಯಲ್ಲಿ ಇಲ್ಲದೆ ಸಮಯದಲ್ಲಿ ಹಣದ ವಿಷಯದಲ್ಲಿ ಆದ ತಕರಾರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಗಳಾದ ವಿಜಯಲಕ್ಷ್ಮಿ ವಯ: 1 ವರ್ಷ ಇವಳಿಗೆ ಜೊತೆಯಲ್ಲಿ ಕರೆದುಕೊಂಡು ಮನೆಯಿಂದ ಯಾರಿಗೂ ಹೇಳದೆ ಹೋಗಿರುತ್ತಾಳೆ, ಮನೆಯಿಂದ ಹೋದವಳು ತಿರುಗಿ ಮನೆಗೆ ಬಂದಿರುವದಿಲ್ಲಾ, ತನ್ನ ಹೆಂಡತಿ ಮತ್ತು ಮಗಳಿಗೆ ಎಲ್ಲಾ ಕಡೆ ಸಂಬಂಧಿಕರಲ್ಲಿ ಹುಡಕಾಡಿದರರೂ ಅವರಿಬ್ಬರ ಪತ್ತೆಯಾಗಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 03-04-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 24/2021, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 03-04-2021 ರಂದು ಇಸ್ಲಾಂಪೂರ ಗ್ರಾಮದ ಹನುಮಾನ ಮಂದಿರದ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಖುಲ್ಲಾ ಜಾಗದಲ್ಲಿ ಲೈಟಿನ ಬೆಳಕಿನಲ್ಲಿ ಕೆಲವು ಜನರು ಅಂದರ-ಬಾಹರ ಎಂಬ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತ ಶಿವರಾಜ . ಪಾಟೀಲ್ ಪಿ.ಎಸ್. (ಕಾ.ಸೂ) ಜನವಾಡಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಪಿ.ಎಸ್. (.ವಿ) ಹಾಗೂ ಸಿಬ್ಬಂದಿಯವರೊಡನೆ ಇಸ್ಲಾಂಪೂರ ಗ್ರಾಮದ ಹನುಮಾನ ಮಂದಿರದ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಖುಲ್ಲಾ ಜಾಗದಲ್ಲಿ ದುಂಡಾಗಿ ಕಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಎಂಬ ನಸೀಬಿನ ಇಸ್ಪಿಟ್ ಜೂಜಾಟ ಆಡುತ್ತಿದ್ದ ಆರೋಪಿತರಾದ 1) ಉಮೇಶ ತಂದೆ ಹಣಮಂತ ಖಾನಾಪೂರೆ, 2) ಮಲ್ಲಪ್ಪಾ ತಂದೆ ಶ್ರೀಪತಿ ಕುರುಬುರ, 3) ಬಸವರಾಜ ತಂದೆ ಮಾಣಿಕ ರಕ್ಷೆ, 4) ಯಾದವರಾವ ತಂದೆ ನರಸಿಂಗರಾವ ಬಿರಾದಾರ, 5) ಚಂದ್ರಪ್ಪಾ ತಂದೆ ಬಾಳಪ್ಪಾ 5 ಜನ ಸಾ: ಇಸ್ಲಾಂಪೂರ ಗ್ರಾಮ, 6) ಶಂಕರ ತಂದೆ ಮಾದಪ್ಪಾ ನೌಬಾದೆ ಸಾ: ನೌಬಾದ, ಬೀದರ ಇವರೆಲ್ಲರ ಮೇಲೆ ದಾಳಿ ಮಾಡಿ ಸದರಿಯವರಿಗೆ ದಸ್ತಗಿರಿ ಮಾಡಿ, ಜೂಜಾಟಕ್ಕೆ ಬಳಸುತ್ತಿದ್ದ ಒಟ್ಟು 52 ಇಸ್ಪೀಟ ಎಲೆಗಳು, ಜೂಜಾಟದಲ್ಲಿ ತೊಡಗಿಸಿದ ಒಟ್ಟು ನಗದು ಹಣ 6530/- ರೂ. ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 62/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 03-04-2021 ರಂದು ಭಾಲ್ಕಿಯ ಸುಭಾಷ ಚೌಕ ಹತ್ತಿರ 4 ಜನರು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಒಂದು ರೂಪಾಯಿಗೆ 80/- ರೂ. ಕೊಡುತ್ತೆವೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಮಾಡಿ ಕರೆದು ಅವರಿಂದ ಹಣ ಪಡೆದು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾರೆ ಅಂತಾ ಟಿ.ಆರ್. ರಾಘವೇಂದ್ರ ಪೊಲೀಸ್ ನಿರೀಕ್ಷಕರು ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಡು, ಠಾಣೆಯ ಸಿಬ್ಬಂದಿಯವರೊಡನೆ ಸುಭಾಷ ಚೌಕ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲು ಸುಭಾಷ ಚೌಕ ಬದಿಯಲ್ಲಿ 3 ಜನ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತು ಒಂದು ರೂಪಾಯಿಗೆ 80/- ರೂ ಕೊಡುತ್ತೆವೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಅವರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದು ಕೊಡುವದನ್ನು ನೋಡಿ ಪಂಚರ ಸಮಕ್ಷಮ ದರಿಯವರ ಮೇಲೆ ದಾಳಿ ಮಾಡುವಷ್ಟರಲ್ಲಿ ಮೂವರು ಓಡಿ ಹೋದರು ಒಬ್ಬನಿಗೆ ಹಿಡಿದು ವಿಚಾರಿಸಲು ತನ್ನ ಹೆಸರು ಆನಂದ ತಂದೆ ಧನರಾಜ ಮೈನಾಳೆ ವಯ: 21 ವರ್ಷ ಜಾತಿ: ಲಿಂಗಾಯತ ಸಾ: ಖಡಕೇಶ್ವರ ಗಲ್ಲಿ ಹಳೆ ಭಾಲ್ಕಿ ಅಂತಾ ತಿಳಿಸಿದನು ಓಡಿ ಹೋದವರ ಹೆಸರು ವಿಚಾರಿಸಲು 1) ಸಲಿಂ ತಂದೆ ಬಾಬುಮಿಯ್ಯಾ ಸೇಕ ಸಾ: ಹಳೆ ಭಾಲ್ಕಿ, 2) ತಾನಾಜಿ ತಂದೆ ಗಣಪತರಾವ ಕದಮ ಸಾ: ಗಣೇಶಪೂರವಾಡಿ, 3) ನಾಜೀರಅಲಿ ತಂದೆ ಮುಜಾಫರಅಲಿ ಸೈಯದ ಸಾ: ಬಾಗವಾನ ಗಲ್ಲಿ ಹಳೆ ಭಾಲ್ಕಿ ಅಂತಾ ತಿಳಿಸಿ ನಾನು ಮತ್ತು ಸಲಿಂ ಹಾಗೂ ತಾನಾಜಿ ಮೂವರು ಕೂಡಿ ಜನರಿಂದ ಪಡೆದ ಹಣ ಹಾಗೂ ಮಟಕಾ ಚೀಟಿಗಳನ್ನು ನಾಜೀರಅಲಿ ಇವನಿಗೆ ಕೊಡುತ್ತೆವೆ ಅಂತಾ ತಿಳಿಸಿದ್ದು, ಪಂಚರ ಸಮಕ್ಷಮ ಸದರಿಯವನ ವಶದಿಂದ 1) ನಗದು ಹಣ 1040/- ರೂಪಾಯಿ, 2) 4 ಮಟಕಾ ಚೀಟಿಗಳು ಹಾಗೂ 3) ಒಂದು ಬಾಲ ಪೆನ್ನ ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: