Police Bhavan Kalaburagi

Police Bhavan Kalaburagi

Tuesday, April 6, 2021

BIDAR DISTRICT DAILY CRIME UPDATE 06-04-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 06-04-2021

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 55/2021, ಕಲಂ. 406, 420 ಜೊತೆ 34 ಐಪಿಸಿ :-

ನಾಗಶೇಟ್ಟಿ ತಂದೆ ಬಸಪ್ಪಾ ಕಾರಾಮುಂಗಿ ವಯ: 57 ವರ್ಷ, ಜಾತಿ: ಲಿಂಗಾಯತ, ಸಾ: ಹನುಮಾನ ನಗರ ಕುಂಬಾರವಾಡಾ, ಬೀದರ ರವರು ಬೀದರ ಗಾಂಧಿಗಂಜದಲ್ಲಿ ಅಡತ ವ್ಯಾಪಾರ ಮಾಡಿಕೊಂಡಿದ್ದು, ಅಲ್ಲದೆ ಕಮೀಷನ್ ಏಜಂಟ್ ಅಂತ ಸಹ ಕೆಲಸ ಮಾಡುತ್ತಾರೆ, ಹೀಗಿರುವಾಗ ಮಹಾರಾಷ್ಟ್ರದ ಜಲಗಾಂವದಲ್ಲಿರುವ ನಿಕ್ಕಿ ಆಗ್ರೋ ಪ್ರಾವಿಟ್ ಲಿಂ ಕಂಪನಿಯವರು ಫಿರ್ಯಾದಿಗೆ ತೊಗರೆ ಖರೀದಿಸುವಂತೆ ತಿಳಿಸಿದ್ದರಿಂದ ಅಂದಾಜು 31 ಟನ್ ತೊಗರೆ ಖರೀದಿ ಮಾಡಿದ್ದು ಇರುತ್ತದೆ, ಫಿರ್ಯಾದಿಯು ಖರೀದಿ ಮಾಡಿದ ಅಂದಾಜು 31 ಟನ್ ತೊಗರೆಯನ್ನು  ದಿನಾಂಕ 22-03-2021 ರಂದು ಮಹಾರಾಷ್ಟ್ರದ ಜಲಗಾಂವದಲ್ಲಿರುವ ನಿಕ್ಕಿ ಆಗ್ರೋ ಪ್ರಾವಿಟ್ ಲಿಂ ಕಂಪನಿಯವರಿಗೆ ಕಳುಹಿಸುವ ಕುರಿತು ಬೀದರ ನಗರದ ಸಾಯಿ ಟ್ರಾಸ್ಸಪೋರ್ಟ ವರಿಗೆ ಕರೆ ಮಾಡಿ ಒಂದು ಲಾರಿ ಕಳುಹಿಸಲು ತಿಳಿಸಿದಾಗ ಅವರು ಸದ್ಯ ಯಾವುದೆ ಲಾರಿ ಇಲ್ಲಾ ಹೈದ್ರಾಬಾದನ ಅಜಾದ ಗೂಡ್ಸ ಕ್ಯಾರಿಯರ ಟ್ರಾಸ್ಸಪೋರ್ಟದಿಂದ ಕರೆಯಿಸಿ ಕಳುಹಿಸುತ್ತೆನೆ ಅಂತ ಹೇಳಿ ಲಾರಿ ನಂ. ಆರ್.ಜೆ-09/ಜಿಡಿ-1655 ನೇದನ್ನು ಕಳುಹಿಸಿದ್ದು ಇರುತ್ತದೆ, ಸದರಿ ಲಾರಿಯಲ್ಲಿ ಫಿರ್ಯಾದಿಯು ತಾನು ಖರೀದಿ ಮಾಡಿದ 50 ಕೆಜಿಯ 620 ತೊಗರೆ ಬ್ಯಾಗಗಳು (31 ಟನ್) ತುಂಬಿ ಕಳುಹಿಸಿದ್ದು ಇರುತ್ತದೆ, ಲಾರಿ ಚಾಲಕನ ಹೆಸರು ಜಾಕೀರಖಾನ ಅಂತ ಟ್ರಾಸ್ಸಫೋರ್ಟ ಮಾಲೀಕರಿಂದ ಗೊತ್ತಾಗಿರುತ್ತದೆ, ಫಿರ್ಯಾದಿಯು ಕಳುಹಿಸಿದ 31 ಟನ್ ತೊಗರೆಯನ್ನು ಮಹಾರಾಷ್ಟ್ರದ ಜಲಗಾಂವದಲ್ಲಿರುವ ನಿಕ್ಕಿ ಆಗ್ರೋ ಪ್ರಾವಿಟ್ ಲಿಂ ಕಂಪನಿಯವರಿಗೆ ದಿನಾಂಕ 24,25-03-2021 ರಂದು ಮುಟ್ಟಿಸಬೇಕಾಗಿತ್ತು ಸದರಿ ಕಂಪನಿಯವರಿಗೆ ವಿಚಾರಣೆ ಮಾಡಿದಾಗ ಇಲ್ಲಿಯವರೆಗೆ ಮುಟ್ಟಿಸಿರುವದಿಲ್ಲಾ, ನಂತರ ತಿಳಿದು ಬಂದಿದ್ದೆನೆಂದರೆ ಫಿರ್ಯಾದಿಯವರ ತೊಗರೆ ತುಂಬಿಕೊಂಡು ಹೋದ ಲಾರಿ ನಂ. ಆರ್.ಜೆ-09/ಜಿಡಿ-1655 ನೇದನ್ನು ನಂತರ ಅದರ ನಂಬರ ಆರ್.ಜೆ-09/ಜಿಬಿ-9593 ಅಂತ ಬದಲಾಯಿಸಿರುತ್ತಾರೆ ಅಂತ ಗೊತ್ತಾಗಿರುತ್ತದೆ, ಕಾರಣ ಫಿರ್ಯಾದಿಯವರ ತೊಗರೆಗೆ ತುಂಬಿಕೊಂಡು ಕಳುಹಿಸಿದ ಲಾರಿ ನಂ. ಆರ್.ಜೆ-09/ಜಿಡಿ-1655 ನೇದರಲ್ಲಿ 31 ಟನ್ ತೊಗರೆ ಅಂದಾಜು 20,85,700/- ರೂಪಾಯಿದ್ದು ಮಹಾರಾಷ್ಟ್ರದ ಜಲಗಾಂವದಲ್ಲಿರುವ ನಿಕ್ಕಿ ಆಗ್ರೋ ಪ್ರಾವಿಟ್ ಲಿಂ ಕಂಪನಿಯವರಿಗೆ ತಲುಪಿಸದೆ ಸದರಿ ಲಾರಿ ನಂ. ಆರ್.ಜೆ-09/ಜಿಡಿ-1655 ನೇದರ ಚಾಲಕ ಜಾಕೀರಖಾನ, ಸಾಯಿ ಟ್ರಾರ್ಸಪೊರ್ಟ ಬೀದರನ ಮಾಲೀಕ ಮಹಾತಂಯ್ಯಾ ಮತ್ತು ಅಜಾದ ಗೂಡ್ಸ ಕ್ಯಾರಿಯರನ ಹೈದ್ರಾಬಾದನ ಮಾಲೀಕ ಕೂಡಿ ಫಿರ್ಯಾದಿಗೆ ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 05-04-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 15/2021, ಕಲಂ. 379, 427, 511 ಐಪಿಸಿ :-

ದಿನಾಂಕ 04-04-2021 ರಂದು 2300 ಗಂಟೆಯಿಂದ ದಿನಾಂಕ 05-04-2021 ರಂದು 0130 ಗಂಟೆಯ ಅವಧಿಯಲ್ಲಿ ಡಿಸಿಸಿ ಬ್ಯಾಂಕ ಎದುರುಗಡೆ ಇರುವ ಎಕ್ಸಿಸ್ ಬ್ಯಾಂಕನ ಎಟಿಎಮ ಮಶೀನನ್ನು ಯಾರೋ ಅಪರಿಚಿತರು ಡ್ಯಾಮೇಜ ಮಾಡಿ ಅಂದಾಜು 50,000/- ರೂ. ಬೆಲೆಬಾಳುವದನ್ನು ಹಾನಿ ಮಾಡಿ ಅದರಲ್ಲಿಯ ಹಣವನ್ನು ಕಳವು ಮಾಡಲು ಪ್ರಯತ್ನಿಸಿರುತ್ತಾರೆಂದು ಕೊಟ್ಟ ಫಿರ್ಯಾದಿ ಗುರುನಾತ ಗಣಾಚಾರಿ ತಂದೆ ಶಾಂತಯ್ಯಾ ಗಣಾಚಾರಿ ಸಾ: ಎಕ್ಸಿಸ ಬ್ಯಾಂಕ ಬೀದರ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಧನ್ನೂರ ಪೊಲೀಸ ಠಾಣೆ ಅಪರಾಧ ಸಂ. 27/2021, ಕಲಂ. 279, 338, 304(ಎ) ಐಪಿಸಿ :-

ದಿನಾಂಕ 04-04-2021 ರಂದು ಆನಂದ ತಂದೆ ಬಾಬುರಾವ ಕಮಠಾಣೆ ವಯ: 32 ವರ್ಷ, ಜಾತಿ: ಎಸ.ಟಿ ಗೊಂಡ, ಸಾ: ಜಾಂತಿ ರವರ ತಂದೆ ಬಾಬುರಾವ ತಂದೆ ಮಾಣಿಕ ಸಾ: ಜಾಂತಿ ರವರು ಹಲಬರ್ಗಾ ಪೆಟ್ರೋಲ ಬಂಕದಿಂದ ಹಲಬರ್ಗಾ ಕಡೆಗೆ ನಡೆದುಕೊಂಡು ಹೋಗುವಾಗ ಜಾಂತೆ ಪೆಟ್ರೋಲ ಬಂಕದಿಂದ ಅಂದಾಜು 200 ಮೀಟರ ಅಂತರದಲ್ಲಿ ರೋಡಿನ ಮೇಲೆ ಹೋದಾಗ ಎದುರುಗಡೆಯಿಂದ ಮೋಟಾರ ಸೈಕ ನಂ. ಕೆಎ-38/ಎಕ್ಸ-2353 ನೇದರ ಚಾಲಕನಾದ ಆರೋಪಿ ಸಂಗಮೇಶ ತಂದೆ ಅಶೋಕ ಖಂಡ್ರೆ ಸಾ: ಧನ್ನೂರ ಇತನು ತನ್ನ ಮೋಟಾರ ಸೈಕಲನ್ನು  ಹಲಬರ್ಗಾ ಕಡೆಯಿಂದ ಅತಿವೇಗ ಹಾಗು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ನಡೆದುಕೊಂಡು ಹೊಗುತ್ತಿದ್ದ ಫಿರ್ಯಾದಿಯವರ ತಂದೆ ಬಾಬುರಾವ ರವರಿಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯವರ ತಂದೆ ಬಾಬುರಾವ ರವರ ಬಲಗೈಗೆ ಭಾರಿ ರಕ್ತಗಾಯ, ಬಲಗಾಲಿನ ತೊಡೆ ಮತ್ತು ಗುಪ್ತಾಂಗಕ್ಕೆ ಭಾರಿ ರಕ್ತಗಾಯವಾಗಿ ಅಲಲ್ಲಿ ತರಚಿದ ರಕ್ತಗಾಯಗಳು ಆಗಿರುತ್ತವೆ ಹಾಗೂ ಆರೋಪಿಗೂ ಸಹ ಭಾರಿ ಗುಪ್ತಗಾಯ ಹಾಗು ರಕ್ತಗಾಯವಾಗಿದ್ದರಿಂದ ಇಬ್ಬರಿಗೆ ರೋಡಿನ ಮೇಲೆ ಹೊಗಿ ಬರುವ ಜನರು ನೋಡಿ 108 ಅಂಬುಲೇನ್ಸದಲ್ಲಿ ಬೀದರ ಸರಕಾರಿ ಆಸ್ಪತ್ರೆಗೆ ತರುವಾಗ ದಾರಿಯಲ್ಲಿ ಫಿರ್ಯಾದಿಯವರ ತಂದೆ ಬಾಬುರಾವ ರವರು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 43/2021, ಕಲಂ. 279, 337, 338, 304() ಐಪಿಸಿ ಜೊತೆ 187 .ಎಂ.ವಿ ಕಾಯ್ದೆ :-

ದಿನಾಂಕ 04-04-2021 ರಂದು ಫಿರ್ಯಾದಿ ವಿನೋದ ತಂದೆ ಅಮೃತರಾವ ವಾಗ್ಮೋರೆ ವಯ: 21 ವರ್ಷ, ಜಾತಿ: ಎಸ್.ಸಿ ಹೊಲೆಯ, ಸಾ: ಗುಡಪಳ್ಳಿ, ತಾ: ಔರಾದ[ಬಿ] ರವರ ಓಣಿಯ ಲಾಲಪ್ಪಾ ಇವರ ಮಗಳ ಮದುವೆ ಇದುದ್ದರಿಂದ ಮದುವೆಗೆ ಬಟ್ಟೆಗಳನ್ನು ರೀದಿ ಮಾಡಲು ಫಿರ್ಯಾದಿ ಮತ್ತು ಲಾಲಪ್ಪಾ ಕೂಡಿ ಅವರ ಮೋಟರ ಸೈಕಲ ನಂ. ಕೆಎ-38/ವ್ಹಿ-5324 ನೇದರ ಮೇಲೆ ಗುಡಪಳ್ಳಿಯಿಂದ ಔರಾದಗೆ ಬಂದು ಔರಾದನಲ್ಲಿ ಬಟ್ಟೆಗಳನ್ನು ಖರೀದಿ ಮಾಡಿ ಇಬ್ಬರು ಗುಡಪಳ್ಳಿಗೆ ಹೋಗುತ್ತಿರುವಾಗ ಮೋಟರ ಸೈಕಲ ಲಾಲಪ್ಪಾ ರವರು ಚಲಾಯಿಸುತ್ತಿದ್ದು, ಇಬ್ಬರು ಔರಾದ[ಬಿ]-ಸಂತಪುರ ರಸ್ತೆಯ ಮೇಲೆ ಬೊರಾಳ ನರ್ಸರಿ ಹತ್ತಿರ ಬಂದಾಗ ಬೊರಾಳ ಕಡೆಯಿಂದ ಹೊಂಡಾ ಶೈನ ಮೋಟರ ಸೈಕಲ ನಂ. ಎಂ.ಹೆಚ್-24/ಬಿಎಫ್-2417 ನೇದರ ಚಾಲಕನಾದ ಆರೋಪಿ ವಿಜಯಕುಮಾರ ತಂದೆ ನಿವೃತ್ತಿರಾವ ಪಾಂಡ್ರೆ ಸಾ: ಬೊರಾಳ ಇತನು ತನ್ನ ಹಿಂದೆ ಅಪ್ಪಾರಾವ ತಂದೆ ವಿಠಲರಾವ ಪಾಂಡ್ರೇ ಸಾ: ಬೊರಾಳ ರವರನ್ನು ಕೂಡಿಸಿಕೊಂಡು ಹಿಂದೆ ಮುಂದೆ ನೊಡದೇ ಅಜಾಗರುಕತೆಯಿಂದ ತನ್ನ ವಾಹನವನ್ನು ಚಲಾಯಿಸಿ ಫಿರ್ಯಾದಿಯು ಕುಳಿತು ಹೋಗುವ ಮೋಟರ ಸೈಕಗೆ ಜೋರಾಗಿ ಡಿಕ್ಕಿ ಮಾಡಿದ್ದು, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಗೆ ಯಾವುದೆ ಗಾಯಗಳು ಆಗಿರುವುದಿಲ್ಲ, ಆದರೆ ಲಾಲಪ್ಪಾ ರವರ ಭೂಜಕ್ಕೆ ತರಚಿಗುಪ್ತಗಾಯ, ಗಟಾಯಿಗೆ ತರಚಿದ ರಕ್ತಗಾಯ, ಎಡಗಡೆ ಸೊಂಟದ ಹತ್ತಿರ ಭಕಾಳಿಗೆ ತರಚಿದ ರಕ್ತಗಾಯ ಮತ್ತು ತಲೆಗೆ ಭಾರಿ ಗುಪ್ತಗಾಯವಾಗಿ ಮಾತಾಡುವ ಸ್ಥೀತಿಯಲ್ಲಿ ಇರಲಿಲ್ಲ, ಮೋಟರ ಸೈಕಲ್ ಸಹ ಡ್ಯಾಮೇಜ ಆಗಿರುತ್ತದೆ, ಆರೋಪಿಯು ತನ್ನ ಮೋಟರ ಸೈಕಲ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಅಪ್ಪಾರಾವ ರವರ ಬಲಗಡೆ ಕಣ್ಣಿನ ಮೇಲೆ ರಕ್ತಗಾಯ ಮತ್ತು ಎರಡು ಮೊಣಕಾಲುಗಳಿಗೆ ತರಚಿದ ರಕ್ತಗಾಯಗಳಾಗಿರುತ್ತವೆ, ನಂತರ ಸದರಿ ಅಪಘಾತದಲ್ಲಿ ಗಾಯಗೊಂಡ ಲಾಲಪ್ಪಾ ಇತನಿಗೆ ಚಿಕಿತ್ಸೆ ಕುರಿತು ಫಿರ್ಯಾದಿ ಮತ್ತು ಮ್ಮೂರ ಉತ್ತಮ ತಂದೆ ಬಾಳಪ್ಪಾ ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ಸರಕಾರಿ ಆಸ್ಪತ್ರೆ ಔರಾದ[ಬಿ]ಗೆ ತಂದು ದಾಖಲು ಮಾಡಿದ್ದು ಇರುತ್ತದೆ, ನಂತರ ಗಾಯಾಳು ಲಾಲಪ್ಪಾ ರವರು ಬೀದರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 05-04-2021 ರಂದು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕಗೊಳ್ಳಲಾಗಿದೆ.

No comments: