Police Bhavan Kalaburagi

Police Bhavan Kalaburagi

Saturday, April 24, 2021

BIDAR DISTRICT DAILY CRIME UPDATE 24-04-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 24-04-2031

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ಸಂ. 16/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 21-04-2021 ರಂದು ಫಿರ್ಯಾದಿ ಸಂಗಪ್ಪಾ ತಂದೆ ವೈಜಿನಾಥ ವಯ: 40 ವರ್ಷ, ಜಾತಿ: ಗೊಂಡಾ, ಸಾ: ಹಳೆ ಚಿದ್ರಿ ಬೀದರ ರವರು ಚಿದ್ರಿ ರಿಂಗ ರೋಡದಿಂದ ಚಿದ್ರಿ ಗ್ರಾಮಕ್ಕೆ ಹೋಗುವಾಗ ತಮ್ಮೂರ ಪಂಡಿತ ಚಿದ್ರಿ ಇವರ ಹೊಲದಲ್ಲಿ ಕೆಲವು ಜನರು ನಿಂತಿದ್ದು ಏನೋ ನೋಡುತ್ತಿರುವುದನ್ನು ನೋಡಿ ಫಿರ್ಯಾದಿಯು ಸಹ ಹೋಗಿ ನೋಡಲು ಒಬ್ಬ ಅಪರಿಚಿತ ಗಂಡು ವ್ಯಕ್ತಿ ಮೃತಪಟ್ಟಿದ್ದು ಸದರಿ ವ್ಯಕ್ತಿ ಯಾರು ಎಂಬುದು ತಿಳಿದು ಬಂದಿರುವುದಿಲ್ಲಾ, ಮೃತ ವ್ಯಕ್ತಿ ಸರಾಯಿ ಕುಡಿದು ಬಿಸಿಲಿನಲ್ಲಿ ಬಿದ್ದು ಮೃತಪಟ್ಟಂತೆ ಕಂಡುಬಂದಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಕಾರಣ ಸದರಿ ವಿಷಯಕ್ಕೆ ಸಂಬಂದಿಸಿದಂತೆ ಮುಂದಿನ ಕ್ರಮ ಕೈಕೊಳ್ಳಲು ವಿನಂತಿ ಇದೆ ಅಂತಾ ನೀಡಿದ ಸಾರಾಂಶದ ಮೇರೆಗೆ ದಿನಾಂಕ 23-04-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ .

 

ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 15/2021, ಕಲಂ. 498(), 323, 504, 506 ಜೊತೆ 34 ಐಪಿಸಿ :-

ಫಿರ್ಯಾದಿ ಕಾವೇರಿ ಗಂಡ ವಿಜಯಕುಮಾರ ವಯ: 27 ವರ್ಷ, ಜಾತಿ: ಕುರುಬ, ಸಾ: ರಾಮನಗರ ಚಿದ್ರಿ ರೋಡ ಬೀದರ ರವರ ಮದುವೆಯು ದಿನಾಂಕ 06-05-2013 ರಂದು ಬೀದರ ರಾಮನಗರದ ವಿಠ್ಠಲರಾವ ಯಲಗೊಯಿಕರ್ ರವರ ಮಗನಾದ ವಿಜಯಕುಮಾಇತನ ಜೊತೆಯಲ್ಲಿ ಆಗಿರುತ್ತದೆ, ಫಿರ್ಯಾದಿಗೆ ಸಾತ್ವಿಕ್ ವಯ 7 ವರ್ಷ ಮತ್ತು ರುತ್ವಿಕ್ ವಯ 4 ವರ್ಷ ಹೀಗೆ ಎರಡು ಜನ ಗಂಡು ಮಕ್ಕಳು ಇರುತ್ತಾರೆ, ಗಂಡನಾದ ವಿಜಯಕುಮಾರ ಇತನು ಮದುವೆಯಾದ ಸ್ವಲ್ಪ ದಿವಸಗಳ ಕಾಲ ಮಾತ್ರ ಚೆನ್ನಾಗಿ ನೋಡಿಕೊಂಡು ನಂತರ ದಿನಾಲು ಸರಾಯಿ ಕುಡಿದು ಮನೆಗೆ ಬಂದು ಕೈಯಿಂದ ಹೊಡೆ ಬಡೆ ಮಾಡುವದು, ಅವಾಚ್ಯವಾಗಿ ಬೈಯುವದು ಮತ್ತು ಫಿರ್ಯಾದಿಯು ಕೆಲಸದ ನಿಮಿತ್ಯ ಹೊರಗಡೆ ಹೋದಾಗ ಫಿರ್ಯಾದಿಯ ಮೇಲೆ ಸಂಶಯ ಪಟ್ಟು ನೀನು ಬೇರೆಯವರ ಜೊತೆಯಲ್ಲಿ ಮಲಗಿಕೊಂಡು ಮನೆಗೆ ಬರುತ್ತಿ ಅಂತ ಮನಸ್ಸಿಗೆ ಹತ್ತುವ ಹಾಗೆ ಮಾತನಾಡುತ್ತಾ ಮಾನಸಿಕ ಹಾಗು ದೈಹಿಕ ಕಿರುಕುಳ ಕೊಡುತ್ತಾ ಬಂದಿರುತ್ತಾನೆ ಮತ್ತು ಅತ್ತೆಯಾದ ಶುಶೀಲಾಬಾಯಿ ಇವಳು ಸಹ ಗಂಡನಿಗೆ ನಿನ್ನ ಹೆಂಡತಿ ಚೆನ್ನಾಗಿಲ್ಲ, ಅವಳಿಗೆ ಮನೆಯಿಂದ ಹೊರಗೆ ಹಾಕು, ನಿನಗೆ ಬೆರೆ ಮದುವೆ ಮಾಡುತ್ತೇನೆ ಅಂತ ಮನಸ್ಸಿಗೆ ನೋವಾಗುವ ಹಾಗೆ ಮಾತನಾಡುತ್ತಾ ಮಾನಸಿಕ ಹಾಗÄ ದೈಹಿಕ ಕಿರುಕುಳ ನೀಡಿರುತ್ತಾಳೆ, ತನಗೆ ಗಂಡ, ಅತ್ತೆ ರವರು ಕಿರುಕುಳ ಕೊಡುವ ಬಗ್ಗೆ ತನ್ನ ತಾಯಿಯಾದ ಮೀನಾಕ್ಷಿ, ಅಣ್ಣನಾದ ವಿಜಯರಾಜ, ದೊಡ್ಡಮ್ಮಳಾದ ಶಿವಮ್ಮಾ, ಚಿಕ್ಕಪ್ಪನಾದ ಚಂದ್ರಶೇಖರ ರವರಿಗೆ ತಿಳಿಸಿದಾಗ ಅವರು ಬೀದರಗೆ ಗಂಡನ ಮನೆಗೆ ಬಂದು ಗಂಡ, ಅತ್ತೆ ರವರಿಗೆ ಬುದ್ದಿವಾದ ಹೇಳಿರುತ್ತಾರೆ, ಆದರೂ ಸಹ ಅವರು ಫಿರ್ಯಾದಿಗೆ vÆಂದರೆ ಕೊಡುವದು ಬಿಟ್ಟಿರುವದಿಲ್ಲ, ಹೀಗಿರುವಾಗ ಫಿಯಾದಿಯವರ ಕಾಲೋನಿಯಲ್ಲಿಯೇ ಟೇಲರಿಂಗ ಕೆಲಸ ಕಲಿಸುವವರು ಇದ್ದು ಫಿರ್ಯಾದಿಯು ಸಹ ತನ್ನ ಗಂಡನಿಗೆ ಟೆಲರಿಂಗ್ ಕೆಲಸ ಕಲಿಯುತ್ತೇನೆಂದು ಹೇಳಿದಾಗ ದಿನಾಂಕ 21-04-2021 ರಂದು ಫಿರ್ಯಾದಿಗೆ ನೀನು ಟೇಲರಿಂಗ್ ಕೆಲಸ ಕಲಿಯಲು ಹೋಗುವದಿಲ್ಲ, ಬೇರೆಯವರ ಜೊತೆಯಲ್ಲಿ ಇರಲು ಹೋಗುತ್ತಿ ಅಂತ ಬೈದು ಜಗಳ ಮಾಡಿ ಕೈಯಿಂದ ಕಪಾಳದ ಮೇಲೆ, ಬೆನ್ನಿನ ಮೇಲೆ ಹೊಡೆದು ಕೂದಲು ಹಿಡಿದು ಕಾಲಿನಿಂದ ಒದ್ದಿರುತ್ತಾನೆ ಮತ್ತು ಕಬ್ಬಿಣದ ಪೈಪ್ ತೆಗೆದುಕೊಂಡು ಕೈಗಳ ಮೇಲೆ, ಕಾಲುಗಳ ಮೇಲೆ ಹೊಡೆದಿರುತ್ತಾನೆ ಮತ್ತು ಅಲ್ಲಿಯೇ ಇದ್ದ ಅರಗಲ್ ತೆಗೆದುಕೊಂಡು ಹೊಡೆಯಲು ಬಂದಾಗ ಜಗಳ ಮಾಡುವ ಶಬ್ದವನ್ನು ಕೇಳಿ ಪಕ್ಕದ ಮನೆಯವರಾದ ನಾಗಪ್ಪಾ, ರಾಜಮ್ಮಾ, ಹನುಮಂತ ರವರು ಬಂದು ಬಿಡಿಸಿಕೊಂಡಿರುತ್ತಾರೆ, ಜಗಳದ ವಿಷಯ ನಿನ್ನ ತವರು ಮನೆಯಲ್ಲಿ ಹೇಳಿದರೆ ನಿನಗೆ ಜೀವಂತ ಇಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 23-04-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 38/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 23-04-2021 ರಂದು ಭೋಸಗಾ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಾಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆಂದು ಕು: ಜೈಶ್ರೀ ಪಿ.ಎಸ್. ಮಂಠಾಳ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡ, ಠಾಣೆಯ ಸಿಬ್ಬಂದಿವಯರೊಡನೆ ಭೋಸಗಾ ಗ್ರಾಮಕ್ಕೆ ಹೋಗಿ ಗ್ರಾಮದ ಶಿವಾಜಿ ಚೌಕ ಹತ್ತಿರ ರೋಡಿನ ಪಕ್ಕದಲ್ಲಿರುವ ಮನೆಗಳ ಮರೆಯಾಗಿ ನಿಂತು ನೋಡಲು ಅಲ್ಲಿ ಭೋಸಗಾ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ರಂಜೀತ ತಂದೆ ಗಣಪತಿ ಮಾನೆ ವಯ: 40 ವರ್ಷ, ಜಾತಿ: ಸಮಗಾರ, ಸಾ: ಭೋಸಗಾ ಗ್ರಾಮ ಇತನು ಮಟಕಾ ಎಂಬ ಜೂಜಾಟದ ನಂಬರ ಬರೆಯಿಸಿ 01/- ರೂಪಾಯಿ 80/- ರೂಪಾಯಿ ಪಡೆಯಿರಿ ಅಂತಾ ಚಿರಾಡುತ್ತಾ ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮದಲ್ಲಿ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದುಕೊಂಡಾಗ ಹಣ ಕೊಟ್ಟು ಮಟಕಾ ನಂಬರ್ ಬರೆಯಿಸುತ್ತಿದ್ದ ಸಾರ್ವಜನಿಕರು ಓಡಿ ಹೋಗಿರುತ್ತಾರೆ, ಹಿಡಿದ ವ್ಯಕ್ತಿಗೆ ಇಲ್ಲಿ ನೀನು ಏನು ಬರೆದುಕೊಳ್ಳುತಿದ್ದಿ ಅಂತಾ ವಿಚಾರಿಸಿದಾಗ ಅವನು ತಿಳಿಸಿದ್ದೇನೆಂದರೆ, ನಾನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಎಂಬ ಜೂಜಾಟದ ನಂಬರ ಬರೆದುಕೊಂಡು ಹಣವನ್ನು ನಮ್ಮೂರ ಅಂ ತಂದೆ ಹರಿನಾಥ ಕಾಂಬಳೆ ವಯ: 35 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಇವನಿಗೆ ಕೋಡುತ್ತೇನೆ ಅವನು ನನಗೆ ಕಮಿಷ£ï ಹಣ ನೀಡುತ್ತಾನೆ ಅಂತಾ ಹೇಳಿದನು, ನಂತರ ಪಂಚರ ಸಮಕ್ಷಮದಲ್ಲಿ ಅವನ ಅಂಗ ಜಡ್ತಿ ಮಾಡಿದಾಗ ಆತನ ಹತ್ತಿರ 1) ನಗದು ಹಣ 550/- ರೂಪಾಯಿ, 2) ಒಂದು ಮಟಕಾ ಚೀಟಿಗಳು ಮತ್ತು 3) ಒಂದು ಬಾಲ್ ಪೆನ್ನ ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿ  ಆರೋಪಿತನ ವಿರುದ್ಧ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: