Police Bhavan Kalaburagi

Police Bhavan Kalaburagi

Friday, May 7, 2021

BIDAR DISTRICT DAILY CRIME UPDATE 07-05-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 07-05-2021

 

ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 39/2021, ಕಲಂ. 7 .ಸಿ ಕಾಯ್ದೆ ಮತ್ತು 409, 420 ಐಪಿಸಿ ಹಾಗೂ ಕಲಂ. 18(ಸಿ) ಡ್ರಗ್ಸ್ & ಕಾಸ್ಮಿಟಿಕ್ ಕಾಯ್ದೆ-1940 ಜೊತೆ ಕಲಂ. 5 ಕರ್ನಾಟಕ ಸಾಂಕ್ರಮಿಕ ರೋಗಗಳ ಅಧಿನಿಯಮ-2020 :-

ದಿನಾಂಕ 06-05-2021 ರಂದು ಫಿರ್ಯಾದಿ ಶರಣಬಸಪ್ಪ ಹಣಮನಾಳ ತಂದೆ ಸತ್ಯಪ್ಪ ವಯ: 47 ವರ್ಷ, ಉ: ಸಹಾಯಕ ಔಷಧ ನಿಯಂತ್ರಕರು ಬೀದರ ರವರಿಗೆ ಬೀದರ ನಗರ ಪೊಲೀಸ ಠಾಣೆಯ ಪೊಲೀಸ ಉಪ-ನಿರೀಕ್ಷಕರಾದ ಪ್ರಭಾಕರ ಪಾಟೀಲ್ ರವರು ಕರೆ ಮಾಡಿ ನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿರುವ ಕೋಟೆಯ ಎದುರುಗಡೆ ಇದ್ದ ಮಜೀದ ಹತ್ತಿರ ಎರಡು ಜನರು ಕೂಡಿಕೊಂಡು ಕೋವಿಡ್-19 ರೋಗಿಗಳಿಗೆ ಕೋಡುವ Remdesivir ಎಂಬ ಚುಚ್ಚು ಮದ್ದನ್ನು ಯಾವುದೇ ಅನುಮತಿ ಇಲ್ಲದೇ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಸೆನ್ ಪೊಲೀಸ ಠಾಣೆ ಪೊಲೀಸ ನಿರೀಕ್ಷಕರಾದ ಬಸವರಾಜ ಫುಲಾರಿ ರವರಿಗೆ ಮಾಹಿತಿ ಬಂದಿದ್ದು ದಾಳಿ ಕುರಿತು ಹೋಗಲು ನೀವು ಬೀದರ ನಗರ ಪೊಲೀಸ ಠಾಣೆಗೆ ಬನ್ನಿ ಅಂತ ತಿಳಿಸಿದ ಕೂಡಲೆ ಪಿರ್ಯಾದಿಯವರು ಕೂಡಲೆ ನಗರ ಪೊಲೀಸ ಠಾಣೆಗೆ ಬಂದು ಇಬ್ಬರು ಪಂಚರನ್ನು ಬರಮಾಡಿಕೊಂಡು, ಪಿಎಸ್ಐ ಪ್ರಭಾರಕ ಹಾಗೂ ಪಿಐ ಸೆನ್ ಮತ್ತು ಠಾಣೆಯ ಸಿಬ್ಬಂದಿಯವರೊಡನೆ ಕೋಟೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೊಡಲಾಗಿ ಮಸಿದಿ ಹತ್ತಿರ ಆರೋಪಿರಾದ 1) ಅಬ್ದುಲ್ಲಾ ತಂದೆ ಶೇಖ ಮೈನೊದ್ದೀನ್ ವಯ: 36 ವರ್ಷ, ಜಾತಿ: ಮುಸ್ಲಿಂ, : ಸ್ಟಾಫ್ ನರ್ಸ, ಸಾ: ಮನಿಯಾರ ತಾಲೀಮ ಬೀದರ ಹಾಗೂ 2) ಮೊಹ್ಮದ ವಸೀಮ್ ತಂದೆ ಮೊಹ್ಮದ ಸುಲ್ತಾನ ವಯ: 40 ವರ್ಷ, ಜಾತಿ: ಮುಸ್ಲಿಂ, ಸಾ: ಮಂದಕನಳ್ಳಿ ಗ್ರಾಮ ಇವರಿಬ್ಬರು ತನ್ನ ಕೈಯಲ್ಲಿ Remdesivir ಚುಚ್ಚು ಮದ್ದು ಇರುವ ಬಾಟಲ್ ಹಣ ಪಡೆದು ಮಾರಾಟ ಮಾಡುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ಎಲ್ಲರೂ ಸುತ್ತುವರೆದು ದಾಳಿ ಮಾಡಿ ಅವರನ್ನು ಹಿಡಿದು ವಿಚಾರಿಸಿದಲ್ಲಿ ಅವರು ಕೋವಿಡ್-19 ಪಾಜಿಟಿವ್ ರೋಗಿಗಳಿಗೆ ನೀಡುವ Remdesivir ಎಂಬ ಚುಚ್ಚು ಮದ್ದನ್ನು ಮುಖ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ, ನಾವು ಈಗ 23,000/- ರೂ ಮಾರಾಟ ಮಾಡುತ್ತಿದ್ದೇವೆ ಅಂತ ತಿಳಿಸಿದನು, ಆಗ ಅವರಿಗೆ ನಿಮಗೆ ಮಾರಾಟ ಮಾಡಲು ಪರವಾನಿಗೆ ಇದೇಯೇ? ಹೇಗೆ? ಎಂದು ಕೆಳಲಾಗಿ ನಮ್ಮ ಹತ್ತಿರ ಯಾವುದೆ ಪರವಾನಿಗೆ ಇಲ್ಲಾ ಅಂತ ತಿಳಿಸಿದರು, ನಮತರ ಅವರಿಂದ 100 ಎಂ.ಜಿ/ವೈಲ್ ವುಳ್ಳವು ಬಾಟಲ್ ಇದ್ದು ಅವುಗಳು ಪರಿಶಿಲಿಸಲಾಗಿ ಅದು Remdesivir ಚುಚ್ಚು ಮದ್ದು ಇದ್ದು, ಅವು DESREM ಎಂಬ ಟ್ರೆಡ್ ಮಾರ್ಕ ಇರುತ್ತವೆ, ಎರಡು ಬಾಟಲಗಳ ಬ್ಯಾಚ ನಂ. 246039A ಇದ್ದು ಅವುಗಳ ಒಂದರ ಮುಖ ಬೆಲೆ 4800/- ರೂ ಇದ್ದು ಅವುಗಳ ತಯಾರಿಕಾ ದಿನಾಂಕ 03-12-2020 ಇದ್ದು, ಎಕ್ಸಪೈರಿ ದಿನಾಂಕ 02-12-2021 ಇರುತ್ತದೆ, ಅವು Mylan Laboratories Limited At Plot No. 42 to 52 Sy. No. 166, 171, 172 & 177 TSITC, Phase-III IDA Pashamylaram (v) Patanchuru(m) Sangareddy dist (TS)-502307 ಅಂತ ಇದ್ದು, ನಂತರ ಸದರಿ ಆರೋಪಿತರ ಅಂಗ ಜಡತಿ ಮಾಡಿದಲ್ಲಿ ಅಬ್ದುಲ್ಲಾ ಅವನ ಹತ್ತಿರ ಒಂದು TECHNO ಕಂಪನಿಯ ಸ್ಮಾರ್ಟ ಫೋನ ಸಿಕ್ಕಿದ್ದು, ಸದರಿ ಆರೋಪಿತನು ಕೋವಿಡ್-19 ಪಾಜಿಟಿವ್ ರೋಗಿಗಳಿಗೆ ಉಪಚಾರದ ಸಲುವಾಗಿ ಸರಕಾರವು Remdesivir ಚುಚ್ಚು ಮದ್ದನ್ನು ಅತೀ ಅವಶ್ಯಕ ಎಂದು ಪರಿಗಣಿಸಿದ್ದು, ಸದರಿ ಚುಚ್ಚು ಮದ್ದುಗಳು ಅಪ್ರಾಮಾಣಿಕವಾಗಿ ಸರಕಾರಕ್ಕೆ ಮೋಸ ಮಾಡುವ ಉದ್ದೇಶದಿಂದ ಯಾರಿಗೂ ಗೊತ್ತಾಗದ ರೀತಿಯಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಯುವ ಚುಚ್ಚು ಮದ್ದುಗಳನ್ನು ಕಾಳಸಂತೆಯಲ್ಲಿ ಸರಕಾರಕ್ಕೆ ಮೊಸ ಮಾಡಿ ಸಾಂಕ್ರಾಮಿಕ ರೋಗ ಹೆಚ್ಚು ಹರಡುವಂತೆ ಮಾಡಿ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿರುವಾಗ ದಾಳಿ ಕಾಲಕ್ಕೆ ಸಿಕ್ಕಿದ್ದು ಇರುತ್ತದೆ, ನಂತರ ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 46/2021, ಕಲಂ. 279, 338 ಐಪಿಸಿ :-

ದಿನಾಂಕ 06-05-2021 ರಮದು ಫಿರ್ಯಾದಿ ಪದ್ಮಾವತಿ ಗಂಡ ಸಂಗಪ್ಪಾ ಚಿಂಚೋಳಿ ವಯ: 50 ವರ್ಷ, ಜಾತಿ: ಲಿಂಗಾಯತ, ಸಾ: ಸಿಂಧನಕೇರಾ, ತಾ: ಹುಮನಾಬಾದ ರವರ ಮಗನಾದ ಶ್ರೀಶೈಲ್ ಇತನು ಸಿಂಧನಕೇರಾ ಕ್ರಾಸ್ ಹತ್ತಿರ ತನ್ನ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ ನಂ. ಕೆಎ-39/ಎಲ್-3011 ನೇದನ್ನು ರೋಡಿನ ಬದಿಯಲ್ಲಿ ಚಲಾಯಿಸಿಕೊಂಡು ಹೈವೇ ರೋಡಿನ ಕಡೆಗೆ ಬರುತ್ತಿರುವಾಗ ಅದೇ ಸಮಯಕ್ಕೆ ಎದುರಿನಿಂದ ಅಂದರೆ ಹೈವೇ ರೋಡಿನ ಕಡೆಯಿಂದ ಮೋಟಾರ್ ಸೈಕಲ ನಂ. ಕೆಎ-27/ಇ.ಸಿ-3496 ನೇದರ ಚಾಲಕನಾದ ಆರೋಪಿ ಲೋಕೇಶ ತಂದೆ ಮಡೆಪ್ಪಾ ಜಳ್ಳಿ ಸಾ: ಸಿಂಧನಕೇರಾ, ತಾ: ಹುಮನಾಬಾದ ಇತನು ತನ್ನ ಮೋಟಾರ್ ಸೈಕಲನ್ನು ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶ್ರೀಶೈಲ್ ಇವನು ಚಲಾಯಿಸುತ್ತಿದ್ದ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಪಡೆಸಿದ್ದು ಇರುತ್ತದೆ, ಸದರಿ ಡಿಕ್ಕಿಯಿಂದ ಶ್ರೀಶೈಲ್ ಇವನಿಗೆ ಬಲಗಣ್ಣಿಗೆ ತೀವ್ರ ರಕ್ತಗಾಯವಾಗಿರುತ್ತದೆ ಹಾಗೂ ಲೋಕೇಶ ಇವನಿಗೆ ಬಲಗಣ್ಣಿಗೆ ಮತ್ತು ಹಣೆಯ ಮೇಲೆ ತೀವ್ರ ರಕ್ತಗಾಯವಾಗಿರುತ್ತದೆ, ನಂತರ ಗಾಯಗೊಂಡ ಇಬ್ಬರಿಗೂ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಕೂಡಿಸಿಕೊಂಡು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಮೌಖಿಕ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 53/2021, ಕಲಂ. 379 ಐಪಿಸಿ :-

ದಿನಾಂಕ 02-05-2021 ರಂದು 1030 ಗಂಟೆಯ ಸುಮಾರಿಗೆ ಫಿರ್ಯಾದಿ ಅಬುಜರ ತಂದೆ ಸೈಯದ ಖಲೀಲ ಸಿಂದೆ ಸಾ: ಭಾತಂಬ್ರಾ, ತಾ: ಭಾಲ್ಕಿ ರವರು ತನ್ನ ಹೊಂಡಾ ಶೈನ್ ಮೋಟಾರ ಸೈಕಲ್ ನಂ. ಕೆಎ-39/ಕ್ಯೂ-6029 ನೇದರ ಮೇಲೆ ಕೂಲಿ ಕೆಲಸಕ್ಕೆ ಬಟ್ಟೆ ಅಂಗಡಿಗೆ ಹೋದಾಗ ಲಾಕಡೌನ ಪ್ರಯುಕ್ತ ಅಂಗಡಿ ಬಂದ ಇದ್ದು, ಫಿರ್ಯಾದಿಯು ತನ್ನ ಮೋಟಾರ ಸೈಕಲನ್ನು ಅಂಗಡಿಯ ಮುಂದೆ ನೆರಳಿಗೆ ನಿಲ್ಲಿಸಿ ಹೊರಗಡೆ ಹೋಗಿ 1400 ಗಂಟೆಗೆ ಬಂದು ನೋಡಲು ಸದರಿ ಮೋಟಾರ ಸೈಕಲ ಇರಲಿಲ್ಲಾ, ನಂತರ ಫಿರ್ಯಾದಿ ಮತ್ತು ಅಣ್ಣ ಹಾಗೂ ಗೆಳೆಯ ಮೂವರು ಕೂಡಿ ಸದರಿ ವಾಹನವನ್ನು ಸುತ್ತಮುತ್ತ ಹಳ್ಳಿಗಳಲ್ಲಿ ಹುಡಕಾಡಲು ಮೋಟಾರ ಸೈಕಲ ಸಿಗಲಿಲ್ಲಾ, ಸದರಿ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಸದರಿ ವಾಹನದ ಅ.ಕಿ 40,000/- ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 06-05-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

No comments: