ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 04-06-2021
ಜನವಾಡಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 04/2021, ಕಲಂ. 174 ಸಿ.ಆರ್.ಪಿ.ಸಿ :-
ಹೋನ್ನೇಕೇರಿ ಗ್ರಾಮದ ಶಿವಾರದಲ್ಲಿ ಹೋಲ ಸರ್ವೆ ನಂ. 45 ನೇದರಲ್ಲಿ ಮಂಜುಳಾ ಗಂಡ ನಾಗರೆಡ್ಡಿ ಯಲಮೂರರೆಡ್ಡಿ ಸಾ: ಹೋನ್ನೇಕೇರಿ ಗ್ರಾಮ, ತಾ: ಜಿ: ಬೀದರ ರವರ ಗಂಡ ನಾಗರೆಡ್ಡಿ ಅವರ ಹೆಸರಿನಲ್ಲಿ 2 ಎಕರೆ 10 ಗುಂಟೆ ಜಮೀನು ಇದ್ದು, ಸದರಿ ಜಮೀನಿನ ಮೇಲೆ ಎಸ.ಬಿ.ಐ ಬ್ಯಾಂಕ ( ಎ.ಡಿ.ಬಿ ಬ್ರಾಂಚ) ಬೀದರ, ಪಿ.ಕೆ.ಪಿ.ಎಸ ಅಣದೂರ ಹಾಗೂ ಕೆ.ಜಿ.ಬಿ ಬ್ಯಾಂಕ ನೌಬಾದ ಬೀದರನಲ್ಲಿ ಸದರಿ ಜಮೀನ ಮೇಲೆ ಕೃಷಿ ಸಾಲ ಪಡೆದಿದ್ದು, ಕಳೆದ ಎರಡು ಮೂರು ವರ್ಷಗಳಿಂದ ಸರಿಯಾಗಿ ಮಳೆಯಾಗದ ಕಾರಣ ಜಮೀನಲ್ಲಿ ಬೆಳೆಯಾಗಿರುವುದಿಲ್ಲಾ, ಬ್ಯಾಂಕಿನಲ್ಲಿ ಮಾಡಿದ ಸಾಲ ಹಾಗೂ ಕೈಕಡ ತೆಗೆದುಕೊಂಡ ಸಾಲ ಹೇಗೆ ತಿರಿಸೋಣ ಅಂತಾ ನೊಂದು ಚಿಂತೆಯಲ್ಲಿ ಇರುತ್ತಿದ್ದರು, ಹೀಗಿರುವಾಗ ದಿನಾಂಕ 03-06-2021 ರಂದು ಗಂಡ ನಾಗರೆಡ್ಡಿಯವರು ಹೋಲದಲ್ಲಿ ಕಸ ಆಯಲು ಹೋಗುತ್ತೇನೆ ಅಂತಾ ಹೇಳಿ ಹೋಲದ ಕಡೆ ಹೋಗಿ ಜಮೀನಿನ ಮೇಲೆ ಮಾಡಿದ ಕೃಷಿ ಸಾಲ ತಿರಿಸಲಾಗದೆ ನೊಂದು ತಮ್ಮ ಹೋಲ ಸರ್ವೆ ನಂ. 45 ನೇದರ ಜಮೀನಿನ ಕಟ್ಟೆ ಮೇಲಿನ ಹೂಗೆಜ್ಜೆ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ಅವರ ಸಾವಿನಲ್ಲಿ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ನೂತನ ನಗರ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 61/2021, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 03-06-2021 ರಂದು ಫಿರ್ಯಾದಿ ಪ್ರಕಾಶ ತಂದೆ ಶೇರಣಪ್ಪಾ ಚಿಂತಲಗೇರೆ ವಯ: 36 ವರ್ಷ, ಜಾತಿ: ಕುರುಬ, ಸಾ: ಬರೂರ, ಸದ್ಯ: ಕೋಳಾರ(ಕೆ) ಗ್ರಾಮ, ಬೀದರ ರವರು ತಮ್ಮ ಮೋಟಾರ ಸೈಕಲ ನಂ. ಕೆಎ-38/ಎಲ್- 1566 ನೇದರ ಮೇಲೆ ರಮೇಶ ಕಲಬುರಕಿ ರವರನ್ನು ಕೂಡಿಸಿಕೊಂಡು ತಾವು ಕೆಲಸ ಮಾಡುವ ಸಾಯಿ ಕಂಪನಿಗೆ ತಮ್ಮ ಸೈಡಿಗೆ ತಾವು ತಮ್ಮ ಮೋಟಾರ ಸೈಕಲನ್ನು ಚಲಾಯಿಸಿಕೊಂಡು ಬರುವಾಗ ಕೋಳಾರ ಕೈಗಾರಿಕಾ ಪ್ರದೇಶದ ಕೋರವಿನ್ ಕೆಮಿಕಲ್ ಫ್ಯಾಕ್ಟ್ರಿಯ ಹಿಂದುಗಡೆ ರೋಡಿನ ಮೇಲೆ ಒಂದು ಟೆಂಪೋ ಚಾಲಕನು ತನ್ನ ಟೆಂಪೋವನ್ನು ಅತೀವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ಟೆಂಪೋ ನಿಲ್ಲಿಸದೇ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಎಡಗಡೆ ಭುಜಕ್ಕೆ ಗುಪ್ತಗಾಯ, ಎಡಗಡೆ ಕಣ್ಣಿನ ಮೇಲೆ ರಕ್ತಗಾಯ, ಬಲಗೈ ಕಿರುಬೆರಳಿಗೆ ರಕ್ತಗಾಯ, ಎರಡು ಕಡೆ ಕಪಾಳಕ್ಕೆ ಗುಪ್ತಗಾಯ ಮತ್ತು ರಮೇಶ ಇತನಿಗೆ ಎಡಗಣ್ಣಿನ ಮೇಲೆ, ಕೆಳಗಡೆ ತುಟಿಗೆ ರಕ್ತಗಾಯ, ಎಡಗಡೆ ರೊಂಡಿಯಲ್ಲಿ ಭಾರಿ ಗುಪ್ತಗಾಯವಾಗಿ, ತಲೆಯ ಹಿಂಭಾಗದಲ್ಲಿ ಭಾರಿ ರಕ್ತಗಾಯವಾಗಿ ಮಾತಾಡುತ್ತಿಲ್ಲ, ಆವಾಗ ಹಿಂದೆ ಬರುತ್ತಿದ್ದ ರಮೇಶ ಬುದರೋರ ಮತ್ತು ಘಾಳೆಪ್ಪಾ ಸೋಲಪೂರೆ ರವರು ಸದರಿ ಘಟನೆ ನೋಡಿ ಅಂಬುಲೆನ್ಸ ಕರೆಯಿಸಿ ಅದರಲ್ಲಿ ಗಾಯಗೊಂಡ ಇಬ್ಬರಿಗೂ ಹಾಕಿಕೊಂಡು ಭಾಲ್ಕೆ ವೈದೇಹಿ ಆಸ್ಪತ್ರೆ ಬೀದರಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ.64/2021, ಕಲಂ. 306 ಐಪಿಸಿ ಜೊತೆ 3(2),(5) ಎಸ್.ಸಿ/ಎಸ್.ಟಿ ಕಾಯ್ದೆ 1989 :-
ದಿನಾಂಕ 27-05-2021 ರಂದು ಫಿರ್ಯಾದಿ ಶಿಲ್ಪಾ ಗಂಡ ಶರದ ಸೂರ್ಯವಂಶಿ ಸಾ: ಭಾಟಸಾಂಗವಿ, ತಾ: ಭಾಲ್ಕಿ ರವರ ಗಂಡ ಭಾಟಸಾಂಗವಿ ಕೇನಲ ಹತ್ತಿರ ಟ್ರ್ಯಾಕ್ಟರ ತೊಳೆಯುವಾಗ ಗಂಡನ ಜೊತೆ ಕೆಲಸ ಮಾಡುವ ಶಿವಕುಮಾರ ತಂದೆ ಲಕ್ಷ್ಮಣ ಇರುವಾಗ ಆರೋಪಿತರಾದ 1) ಶಾಮರಾವ ತಂದೆ ರಾಮರಾವ ಬಿರಾದಾರ ಮತ್ತು 2) ರಾಮರಾವ ತಂದೆ ಯೇಶವಂತರಾವ ಬಿರಾದಾರ ಇವರಿಬ್ಬರು ನೀವು ಹೊಲಿಯಾ ಮಾದಿಗರು ನಿಮಗೆ ಜಾಸ್ತಿಯಾಗಿದೆ ನೀವು ಬಹಳ ಮಾಡುತ್ತಿದ್ದಿರಿ ಎಂದು ರಸ್ತೆಯ ಮೇಲೆ ಹೋಗಲು ಅವಕಾಶ ಕೊಟ್ಟಿಲ್ಲವೆಂದು ಇಬ್ಬರನ್ನು ಚಪ್ಪಲಿಯಿಂದ ಹೊಡೆದಿರುತ್ತಾನೆ, ನಂತರ ಫಿರ್ಯಾದಿಯವರ ಮನೆಗೆ ನುಗ್ಗಿ ಮನಬಂದಂತೆ ಗಂಡನಿಗೆ ಹೊಡೆದಿರುತ್ತಾರೆ, ಭಾಟಸಾಂಗವಿ ಊರಿನಲ್ಲಿ ರಸ್ತೆ ಮೇಲೆ ಹೊರಗೆ ಹೋದರು ಕೂಡ ಜೀವ ಬೆದರಿಕೆ ಹಾಕಿ ಪದೆ ಪದೆ ಥಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 03-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಂತಾಕಿ ಪೊಲೀಸ್ ಠಾಣೆ ಅಪರಾಧ ಸಂ. 15/2021, ಕಲಂ. 379 ಐಪಿಸಿ :-
ದಿನಾಂಕ 03-06-2021 ರಂದು 1000 ಗಂಟೆ ಸುಮಾರಿಗೆ ಫಿರ್ಯಾದಿ ಬಾಲಾಜಿ ತಂದೆ ಮಾಣಿಕ ಕೊಳ್ಳಿ ಸಾ: ಬೇಲ್ದಾಳ ಗ್ರಾಮ, ತಾ: ಔರಾದ (ಬಿ) ರವರು ತಮ್ಮ ಹೋಲದಲ್ಲಿ ಕೆಲಸ ಮಾಡಿ ಊಟ ಮಾಡಲು ಮನೆಗೆ ಬಂದು ಊಟ ಮಾಡಿಕೊಂಡು 1500 ಗಂಟೆಗೆ ತಮ್ಮ ಹೋಲದಲ್ಲಿ ಮೋಟಾರ ಚಾಲು ಮಾಡುವ ಸಲುವಾಗಿ ಹೋಲದಲ್ಲಿದ್ದ ಬಾವಿಯ ಹತ್ತಿರ ಯಾರೋ ಇಬ್ಬರು ವ್ಯಕ್ತಿಗಳು ಬಾವಿಗೆ ಅಳವಡಿಸಿದ ಮೋಟಾರ ಹತ್ತಿರ ಕಂಡಿದ್ದು, ಫಿರ್ಯಾದಿಯು ಅವರ ಸಮೀಪ ಹೋಗುವಷ್ಟರಲ್ಲಿ ಅವರಿಬ್ಬರು ಒಂದು ಪ್ಲಾಸ್ಟಿಕ ಚೀಲದಲ್ಲಿ ಬಾವಿಗೆ ಹಾಕಿದ ಕೇಬಲನ್ನು ಕಳವು ಮಾಡಿಕೊಂಡು ಮೋಟಾರ ಸೈಕಲ ನಂ. ಟಿಎಸ್-15/ಇಟಿ-3828 ನೇದರ ಮೇಲೆ ತೆಗೆದುಕೊಂಡು ಓಡಿ ಹೋಗುತ್ತಿದ್ದರು, ಫಿರ್ಯಾದಿಯು ಅವರಿಗೆ ಬೆನ್ನತ್ತಿ ಹಿಡಿದು ಅವರ ಹತ್ತಿರ ಇದ್ದ ಚೀಲದಲ್ಲಿ ನೋಡಲು ಬಾವಿಯ ಮೋಟಾರಗೆ ಅಳವಿಡಿಸಿದ ಕೇಬಲನ್ನು ಯಾವುದೋ ವಸ್ತುವಿನಿಂದ ಕತ್ತರಿಸಿ ಚೀಲದಲ್ಲಿ ಹಾಕಿಕೊಂಡು ಕಳವು ಮಾಡಿಕೊಂಡು ಹೋಗುತ್ತಿದ್ದರು, ಸದರಿ ಕೇಬಲ್ ಒಂದು ಕೆಜಿಗೆ 800/- ರೂಪಾಯಿಂದ 900/- ರೂಪಾಯಿ ಇದ್ದು ಒಟ್ಟು 15 ಕೆಜಿ ಇರುತ್ತದೆ ಅ.ಕಿ 140,00/- ರೂ., ನಂತರ ಫಿರ್ಯಾದಿಯು ಅವರಿಗೆ ವಿಚಾರಿಸಲು ಅವರು ತಮ್ಮ ಹೆಸರು 1) ಅನೀಲ ತಂದೆ ಸಾಯಲು ಮರ್ಕುರಿ ಸಾ: ಸುಕಲತಿರ್ಥ, ಸದ್ಯ: ಕಂಗಟಿ ಹಾಗೂ ಇನ್ನೊಬ್ಬ 2) ಪ್ರವೀಣ ತಂದೆ ಸಿದ್ರಾಮ ಮೀಸುಲವಾರಿ ಸಾ: ಸೋಪೂರ ಅಂತ ತಿಳಿಸಿದರು, ಅವರಿಬ್ಬರು ಹೊಲದಲ್ಲಿ ಹಾಕಿದ ಕೇಬಲನ್ನು ಕಳವು ಮಾಡಿಕೊಂಡು ಹೋಗುತ್ತಿದ್ದಾರೆಂದು ತಮ್ಮೂರ ಶಿವಾರೆಡ್ಡಿ ಮತ್ತು ಕಾಶಿನಾಥ ಮಾಟೂರೆ ರವರಿಗೆ ಸದರಿ ನಡೆದ ಘಟನೆ ಹೇಳಲು ಅವರಿಬ್ಬರು ತಮ್ಮ ಮೋಟಾರ ಸೈಕಲ ಮೇಲೆ ಬಂದರು ಅವರಿಬ್ಬರಿಗೆ ಎಲ್ಲರು ಹಿಡಿದುಕೊಂಡು ಪೊಲೀಸ್ ಠಾಣೆಗೆ ತಂದು ಹಾಜರು ಪಡಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment