Police Bhavan Kalaburagi

Police Bhavan Kalaburagi

Monday, June 7, 2021

BIDAR DISTRICT DAILY CRIME UPDATE 07-06-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 07-06-2021

 

ಹಳ್ಳಿಖೇಡ(ಬಿ) ಪೊಲೀಸ್ ಠಾಣೆ ಯು.ಡಿ.ಆರ್ ಸಂ. 06/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಗೌರಮ್ಮಾ ಗಂಡ ಕಮಲಕರ ಪಾರ್ದಿ ಸಾ: ದುಬಲಗುಂಡಿ ರವರ ಮೊಮ್ಮಗಳಾದ ಲಕ್ಷ್ಮೀ ವಯ: 15 ವರ್ಷ ಇವಳಿಗೆ ಈಗ ಸ್ವಲ್ಪ ದಿವಸಗಳಿಂದ ಹೊಟ್ಟೆ ಬೆನೆಯಿದ್ದು ಮತ್ತು ಮಾನಸಿಕವಾಗಿ ಸ್ವಲ್ಪ ಅಸ್ವಸ್ಥಳಾಗಿದ್ದು, ಹೀಗಾಗಿ ವಳು ಆವಾಗಾವಾಗ ತನ್ನಿಂದ ತಾನೆ ಕೆವರಿಕೊಳ್ಳುವುದು, ಕೂದಲು ಹಿಡಿದುಕೊಂಡು ಹುಚ್ಚರಂತೆ ವರ್ತಿಸುವುದ ಮಾಡುತ್ತಿದ್ದು, ಈಗ 3-4 ದಿವಸಗಳ ಹಿಂದೆ ತನ್ನ ಎಡಗೈ ಮೋಳಕೈ ಕೆಳಗೆ ಯಾವುದೋ ವಸ್ತುವಿನಿಂದ ತರಚಿಕೊಂಡಿರುತ್ತಾಳೆ, ಹೀಗಿರುವಾಗ ದಿನಾಂಕ 06-06-2021 ರಂದು ಲಕ್ಷ್ಮೀ ಇವಳು ತನ್ನ ಹೊಟ್ಟೆ ಬೆನೆ ತಾಳಲಾರದೇ ತಮ್ಮ ಮನೆಯಲ್ಲಿರುವ ತಗಡದ ದಂಟೆಗೆ ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ, ಅವಳ ಸಾವಿನ ಬಗ್ಗೆ ನಮಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 23/2021, ಕಲಂ. 457, 380 ಐಪಿಸಿ :-

ದಿನಾಂಕ 05-06-2021 ರಂದು ಫಿರ್ಯಾದಿ ದತ್ರಾತ್ರೆಯ ತಂದೆ ಸಂಗಯ್ಯಾ ರಾಸೂರೆ ವಯ: 38 ವರ್ಷ, ಜಾತಿ: ಕೊಮಟಿ, ಸಾ: ಮನ್ನಾಎಖೇಳ್ಳಿ ರವರ ವಿಠಲಪೂರ ಶಿವಾರದಲ್ಲಿರುವ ಮ್ಮ ಹೋಲ ಸರ್ವೆ ನಂ. 494 ನೇದರಲ್ಲಿನ ಮಾವಿನ ತೋಟದ ರೂಮಿಗೆ ಮತ್ತು ಪೋಲಟ್ರಿ ಫಾರ್ಮಗೆ ಅಳವಡಿಸಿದ 1) ಸಿಸಿ ಕ್ಯಾಮರಾದ ಸಿಪಿ ಪಲ್ಸ ಕಂಪನಿಯ 64 ಚಾನಲ್ ಎನ್.ವಿ.ಆರ್ ಅ.ಕಿ 32,000/- ರೂ., 2) ಸಿಗೆಟ್ ಕಂಪನಿಯ 10 ಟಿ.ಬಿ ವುಳ್ಳ 4 ಹಾರ್ಡ ಡಿಸ್ಕಗಳು ಅ.ಕಿ 75,000/- ರೂ., 3)ಸ್ಮಾರ್ಟವ್ಯೂ ಕಂಪನಿಯ 50 ಇಂಚಿನ ಎಲ್/.ಇ.ಡಿ ಟಿ.ವ್ಹಿ ಅ.ಕಿ 20,000/- ರೂ., 4) ಸಾಮಸಂಗ್ ಕಂಪನಿಯ 32 ಇಂಚಿನ ಎಲ್.ಇ.ಡಿ ಟಿವ್ಹಿ ಅ.ಕಿ 5,000/- ರೂ. ಹೀಗೆ ಎಲ್ಲಾ ಒಟ್ಟು ಅ.ಕಿ 1,32,000/- ರೂ. ಬೆಲೆ ಬಾಳುವ ಸಾಮಾನುಗಳನ್ನು ಯಾರೋ ಅಪರಿಚಿತ ಕಳ್ಳರು ತೋಟದ ರೂಮಿನ ಬಾಗಿಲಿನ ಕೀಲಿ ಮುರಿದು ಕಳವು ಮಾಡಿಕೊಂಡು ಹೋಗಿರತ್ತಾರಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 06-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 85/2021, ಕಲಂ. 379 ಐಪಿಸಿ :-

ದಿನಾಂಕ 04-06-2021 ರಂದು 2230 ಗಂಟೆಯಿಂದ ದಿನಾಂಕ 05-06-2021 ರಂದು 0600 ಗಂಟೆಯ ಧ್ಯಾವಧಿಯಲ್ಲಿ ಫಿರ್ಯಾದಿ ನಾಗರಾಜ ತಂದೆ ಸಿದ್ದಪ್ಪಾ ಭೀಮಳ್ಳಿ ವಯ: 27 ವರ್ಷ, ಜಾತಿ: ಲಿಂಗಾಯತ, ಸಾ: ಲಾಡಗೇರಿ ಬೀದರ ರವರು ತನ್ನ ಹಿರೊ ಸ್ಪ್ಲೇಂಡರ ಪ್ರೋ ಮೋಟಾರ ಸೈಕಲ ಸಂ. ಕೆ.-32/ಇಇ-5314, Chassis No. MBLHA10ASDHJ73831, Engine No. HA10ELDHJ50769, ಮಾದರಿ 2013, ಬಣ್ಣ: ಸಿಲ್ವರ ಬಣ್ಣ ಹಾಗೂ ಅ.ಕಿ 25,000/- ರೂ. ನೇದನ್ನು ತನ್ನ ಮನೆಯ ಮುಂದೆ ನಿಲ್ಲಿಸಿರುವುದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡಿ ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 06-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹೊಕ್ರಾಣಾ ಪೊಲೀಸ್ ಠಾಣೆ ಅಪರಾಧ ಸಂ. 24/2021, ಕಲಂ. 498(), 323, 324, 504, 109 ಜೊತೆ 34 ಐಪಿಸಿ :-

ಫಿರ್ಯಾದಿ ವಿದ್ಯಾ ಗಂಡ ಭಜರಂಗ ಪವಾರ ವಯ: 24 ವರ್ಷ, ಜಾತಿ: ಎಸ್.ಸಿ ಲಮಾಣಿ, ಸಾ: ಸಾವರಗಾಂವ ರವರಿಗೆ 2014 ನೇ ಸಾಲಿನಲ್ಲಿ ಸಾವರಗಾಂವ ಗ್ರಾಮದ ಭಜರಂಗ ತಂದೆ ಭೀಮರಾವ ಪವಾರ ಇವರೊಂದಿಗೆ ವಿಧಿ ವಿಧಾನದಂತೆ ಲಗ್ನ ಮಾಡಿಕೊಟ್ಟಿರುತ್ತಾರೆ, ಫಿರ್ಯಾದಿಗೆ ಎರಡು ಹೆಣ್ಣು ಮಕ್ಕಳಿರುತ್ತಾರೆ, ಮದುವೆಯಾದ ನಂತರ ಗಂಡ ಮೂರು ತಿಂಗಳವರೆಗೆ ಚೆನ್ನಾಗಿ ನೊಡಿಕೊಂಡಿರುತ್ತಾರೆ, ನಂತರ ಗಂಡ ಭಜರಂಗ ಇವರು ದಿನಾಲು ಸರಾಯಿ ಕುಡಿದು ಬಂದು ನೀನು ನೊಡಲು ಸರಿಯಾಗಿಲ್ಲ, ನೀನಗೆ ಮನೆ-ಹೊಲ ಕೆಲಸ ಮಾಡಲು ಬರುವುದಿಲ್ಲಾ, ನೀನು ನಮ್ಮ ಮನೆಯಲ್ಲಿ ಇರಬೇಡ ಅಂತ ಜಗಳ ತಕರಾರು ಮಾಡುತ್ತಾ ಮಾನಸೀಕ ಹಾಗೂ ದೈಹಿಕ ಕಿರುಕುಳ ನೀಡುತ್ತಾ ಬಂದಿರುತ್ತಾರೆ, ಹೀಗಿರುವಲ್ಲಿ ದಿನಾಂಕ 05-06-2021 ರಂದು ಗಂಡ ಭಜರಂಗ ಇವರು ಮನೆಗೆ ಬಂದು ನೀನು ಮನೆಯಲ್ಲಿ ಯಾಕೆ ಉಳಿದಿರುವೆ, ನೀನಗೆ ಮನೆ ಕೆಲಸ ಹೊಲ ಕೆಲಸ ಬರುವುದಿಲ್ಲಾ ಮತ್ತು ನೀನು ನೊಡಲು ಸರಿಯಾಗಿ ಇಲ್ಲಾ, ನಾನು ಹೊರಗಡೆ ಹೊದರೆ ನೀನು ಎಲ್ಲಿಗೆ ಹೊಗುತ್ತಿ  ಅಂತ ಅವಾಚ್ಯವಾಗಿ ಬೈಯುತ್ತಿರುವಾಗ ಯಾಕೆ ಬೈಯುತ್ತಿದ್ದಿರಿ ಅಂತ ಕೇಳಿದಾಗ ಗಂಡ ಅಡುಗೆ ಮನೆಯಲ್ಲಿದ್ದ ಕಬ್ಬಿಣದ ಫುಕಣಿ ತೆಗೆದುಕೊಂಡು ಎರಡು ಮೊಳಕಾಲ ಕೆಳಗಡೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಮತ್ತು ಫುಕಣಿಯಿಂದ ಬೆನ್ನಲ್ಲಿ, ಎಡಗಾಲ ತೊಡೆಯ ಮೇಲೆ ಹೊಡೆದು ಕಂದು ಗಟ್ಟಿದ ಗಾಯ ಪಡಿಸಿರುತ್ತಾರೆ, ನಂತರ ಅತ್ತೆ ಅನುಶಯ ಗಂಡ ಭೀಮರಾವ ಪವಾರ ಇವರು ಕೂಡ ನೀನಗೆ ಎರಡು ಹೆಣ್ಣು ಮಕ್ಕಳು ಹುಟ್ಟಿವೆ, ಗಂಡು ಮಕ್ಕಳು ಹುಟ್ಟಿಲ್ಲಾ ನಾನು ನನ್ನ ಮಗನಿಗೆ ಬೇರೆ ಮದುವೆ ಮಾಡುತ್ತೆನೆ, ನೀನು ಮನೆಯಿಂದ ಹೋಗು ಅಂತ ಫಿರ್ಯಾದಿಯ ಕುತ್ತಿಗೆ ಹಿಡಿದು ನೂಕಿ ಕೊಟ್ಟಿರುತ್ತಾರೆ, ಇದರಿಂದ ಫಿರ್ಯಾದಿಗೆ ನೋವಾಗಿ ಚೀರುತ್ತಿರುವಾಗ ಓಣಿಯ ಗಂಗಾಬಾಯಿ ಗಂಡ ಮಾರುತಿ ಪವಾರ ಹಾಗು ಶೋಭಾ ಗಂಡ ಉಧವ ಪವಾರ ಇಬ್ಬರೂ ಬಂದು ಜಗಳ ನೋಡಿ ಬಿಡಿಸಿಕೊಂಡಿರುತ್ತಾರೆ, ಮತ್ತು ಮಾವ ಭೀಮರಾವ ತಂದೆ ಸೋಮಲಾ ಪವಾರ ಇವರಿಗೆ ಖಂದಾರ ತಾಲೂಕಿನಲ್ಲಿ ನೌಕರಿ ಇದ್ದು ಅವರು ಆವಾಗವಾಗ ಸಾವರಗಾಂವ ಗ್ರಾಮಕ್ಕೆ ಬಂದಾಗ ಗಂಡ & ಅತ್ತೆ ಇವರಿಗೆ ಫಿರ್ಯಾದಿಗೆ ಹೊಡೆಯಲು ಪ್ರಚೋದನೆ ನೀಡುತ್ತಿದ್ದರು, ನಂತರ ದಿನಾಂಕ 06-06-2021 ರಂದು ಫಿರ್ಯಾದಿಯು ತನ್ನ ತಮ್ಮನಾದ ನಾಗಪಾಲ ಇತನಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ತಮ್ಮ ನಾಗಪಾಲ, ತಂದೆ-ತಾಯಿ ಎಲ್ಲರೂ ಸಾವರಗಾಂವ ಗ್ರಾಮಕ್ಕೆ ಬಂದು ಫಿರ್ಯಾದಿಗೆ ಚಿಕಿತ್ಸೆ ಕುರಿತು ಔರಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 79/2021, ಕಲಂ. 279, 337, 338 ಐಪಿಸಿ :-

ದಿನಾಂಕ 06-06-2021 ರಂದು ಫಿರ್ಯಾದಿ ಕು. ಸುಪ್ರೀಯ ತಂದೆ ಹಣಮಂತರಡ್ಡಿ ವಯ: 18 ವರ್ಷ, ಜಾತಿ: ರಡ್ಡಿ, ಸಾ: ಕುಡ್ಲಿ, ತಾ: ದೇಗಲೂರ, ಜಿ: ನಾಂದೇಡ, ರಾಜ್ಯ: ಮಹಾರಾಷ್ಟ್ರ ರವರು ಮಮದಾಪುರದಿಂದ ಕುಡ್ಲಿಗೆ ಹೊಗುವ ಸಲುವಾಗಿ ಮ್ಮ ದೊಡ್ಡಮ್ಮನ ಮಗನಾದ ದೀಗಂಬರ ತಂದೆ ರಾಮರಡ್ಡಿ ರವರ ಜೋತೆಯಲ್ಲಿ ಮೋಟರ ಸೈಕಲ ನಂ. ಎಂ.ಹೆಚ್-02/ಡಿಬಿ-1874 ನೇದರ ಮೇಲೆ ಹೋಗುವಾಗ ಔರಾದ(ಬಿ) ಸಾಯಿ ಮಂದಿರ ಹತ್ತಿರ ಶೋಕ ರಡ್ಡಿ ರವರ ಮನೆಯ ಕಡೆಯಿಂದ ಮೋಟರ ಸೈಕಲ ನಂ. ಕೆಎ-38/ಕ್ಯೂ-1421 ನೇದರ ಚಾಲಕನಾದ ಆರೋಪಿ ಸಿದ್ರಾಮಪ್ಪಾ ತಂದೆ ಶಂಕರೆಪ್ಪಾ ನಡೋದೆ ವಯ: 64 ವರ್ಷ, ಜಾತಿ: ಲಿಂಗಾಯತ, ಸಾ: ಟೀಚರ ಕಾಲೋನಿ ಔರಾದ(ಬಿ) ಇತನು ತನ್ನ ಮೋಟರ ಸೈಕಲನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿ ದಾರಿಯ ಅಕ್ಕ ಪಕ್ಕ ನೊಡದೇ ಒಮ್ಮೇಲೆ ರಸ್ತೆಯ ಮೇಲೆ ಬಂದು ಫಿರ್ಯಾದಿಯವರು ಕುಳಿತು ಹೋಗುತ್ತಿದ್ದ ಮೋಟರ ಸೈಕಲಿಗೆ ಎದುರಿನಿಂದ ಡಿಕ್ಕಿ ಪಡಿಸಿದನು, ಸದರಿ ಡಿಕ್ಕಿಯಿಂದ ಫಿರ್ಯಾದಿಯವರ ಎಡಗಡೆ ತಲೆಗೆ ಭಾರಿ ಗುಪ್ತಗಾಯವಾಗಿ ರಕ್ತ ಬಂದಿರುತ್ದೆ, ಎಡಭೂಜಕ್ಕೆ ರಕ್ತಗಾಯ, ಎಡ ಮೋಣಕೈಗೆ ತರಚೀದ ರಕ್ತಗಾಯ, ಸೊಂಟದ ಹತ್ತಿರ ತರಚಿದ ರಕ್ತಗಾಯ, ಎರಡು ಮೋಣಕಾಲಿಗೆ ತರಚೀದ ರಕ್ತಗಾಯವಾಗಿರುತ್ತದೆ ಮತ್ತು ಮೋಟಾರ್ ಸೈಕಲ್ ಚಲಾಯಿಸುತ್ತಿದ್ದ ದೀಗಂಬರ ಇತನ ಎಡಗಡೆ ಭುಜಕ್ಕೆ ಗುಪ್ತಗಾಯ ಮತ್ತು ರಕ್ತಗಾಯ, ಎಡಗಡೆ ತಲೆಗೆ ಭಾರಿ ರಕ್ತಗಾಯ, ಎಡಗಾಲಿನ ಪಾದದ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ ಮತ್ತು ಫಿರ್ಯಾದಿಯವರ ಎಡ ಭುಜಕ್ಕೆ ಗುಪ್ತಗಾಯ, ಬಲಗಾಲಿನ ಪಾದದ ಹತ್ತಿರ ತರಚೀದ ರಕ್ತಗಾಯ ಮತ್ತು ಗುಪ್ತಗಾಯ, ಎಡಗಡೆ ತಲೆಗೆ ತರಚೀದ ಗಾಯವಾಗಿರುತ್ತದೆ, ನಂತರ ಅಪಘಾತವಿಷಯ ತಿಳಿದು ಗೊಪಾಲ ತಂದೆ ನಸರಾರಡ್ಡಿ ಇಟಿ, ಸಂಗಾರಡ್ಡಿ ತಂದೆ ಹಣವರಡ್ಡಿ ದೀಲೀಪ ತಂದೆ ರಾಮರಡ್ಡಿ ರವರು ಬಂದು ಎಲ್ಲರಿಗೂ ಚಿಕಿತ್ಸೆ ಕುರಿತು ಔರಾದ(ಬಿ) ಸರಕಾರಿ ಆಸ್ಪತ್ರೆಗೆ ತಂದು ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: