Police Bhavan Kalaburagi

Police Bhavan Kalaburagi

Wednesday, June 9, 2021

BIDAR DISTRICT DAILY CRIME UPDATE 09-06-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 09-06-2021

 

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ಸಂ. 06/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 08-06-2021 ರಂದು ಫಿರ್ಯಾದಿ ನಿರ್ಮಲಾ ಗಂಡ ಮಾರುತಿ ಮಡಿವಾಳ, ವಯ: 50 ವರ್ಷ, ಜಾತಿ: ಮಡಿವಾಳ, ಸಾ: ಉಡಬಾಳ ರವರ ಗಂಡನಾದ ಮಾರುತಿ ತಂದೆ ಮಡೆಪ್ಪಾ ಮಡಿವಾಳ ವಯ: 56 ವರ್ಷ ರವರು ಕಳೆದ ವರ್ಷ ಮಳೆ ಹೆಚ್ಚಾಗಿದ್ದರಿಂದಮ್ಮ ಹೊಲದಲ್ಲಿನ ಬೆಳೆ ಹಾಳಾಗಿದ್ದು, ಬ್ಯಾಂಕಿನಲ್ಲಿ ಮಾಡಿದ ಸಾಲ ಹೇಗೆ ತಿರಿಸುವುದು ಅಂತಾ ಚಿಂತೆ ಮಾಡಿ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತಮ್ಮ ಮನೆ ಎದುರಿನ ಪಾರಮ್ಮಾ ಬೋಮರಡ್ಡಿ ರವರ ಹೊಸ ಮನೆ ಹೊರಬಾಗಿನ ಚೌಕಟ್ಟಿಗೆ ವೈರಿನ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ತನ್ನ ಗಂಡನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ಸಂ. 07/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 08-06-2021 ರಂದು ಫಿರ್ಯಾದಿ ಪುತಳಾಬಾಯಿ ಗಂಡ ಮೋಹನ ಚೌವ್ಹಾಣ, ವಯ: 45 ವರ್ಷ, ಜಾತಿ: ಲಂಬಾಣಿ, ಸಾ: ಬಾದ್ಲಾಪೂರ, ತಾ: ಚಿಟಗುಪ್ಪಾ ರವರ ಗಂಡ ಮೋಹನ ತಂದೆ ವಿಠು ಚೌವ್ಹಾಣ, ವಯ: 50 ವರ್ಷ ರವರು ಕಳೆದ ವರ್ಷ ಮಳೆ ಹೆಚ್ಚಾಗಿದ್ದರಿಂದಮ್ಮ ಹೊಲದಲ್ಲಿನ ಬೆಳೆ ಹಾಳಾಗಿದ್ದು ಹಾಗೂ ಬ್ಯಾಂಕಿನಲ್ಲಿ ಮಾಡಿದ ಸಾಲ ಹೇಗೆ ತಿರಿಸುವುದು ಅಂತಾ ಚಿಂತೆ ಮಾಡಿ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡುಮ್ಮೂರ ಬಲರಾಮ ರಾಠೋಡ ರವರ ಹೋಲದಲ್ಲಿನ ಬಾವಿಯ ನೀರಿನಲ್ಲಿ ಬಿದ್ದು ಮೃತಪಟ್ಟಿರುತ್ತಾರೆ, ತನ್ನ ಗಂಡನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 113/2021, ಕಲಂ. 498(ಎ), 306 ಐಪಿಸಿ :-

ಫಿರ್ಯಾದಿ ಅಂಜನಬಾಯಿ ಗಂಡ ಶರಣಪ್ಪಾ ನಿರಗುಡಿ, ವಯ: 50 ವರ್ಷ, ಜಾತಿ: ಕಬ್ಬಲಿಗ, ಸಾ: ಕಲ್ಲೂರ, ತಾ: ಹುಮನಾಬಾದ ರವರ ಮಗಳಾದ ಅನುರಾಧ ವಯ: 28 ವರ್ಷ ಇವಳಿಗೆ 08 ವರ್ಷಗಳ ಹಿಂದೆ 2013 ರಲ್ಲಿ ರಾಮಪೂರ ಗ್ರಾಮದ ರಮೇಶ ತಂದೆ ಖಂಡಪ್ಪಾ ಬೆನಕಿಪಳ್ಳಿ ವಯ: 35 ವರ್ಷ ರವರೊಂದಿಗೆ ಮದುವೆ ಮಾಡಿ ಕೊಟ್ಟಿದ್ದು, ಅವಳಿಗೆ 3 ಜನ ಮಕ್ಕಳಿದ್ದು, ಅಳಿಯ ರಮೇಶ ಹಾಗು ಅವರಣ್ಣ ವಿಠಲ ರವರು ಸುಮಾರು 04 ವರ್ಷಗಳ ಹಿಂದೆ ಬೇರೆಯಾಗಿರುತ್ತಾರೆ, ಬೀಗತಿ ಮಲ್ಲಮ್ಮಾ ರವರ ಗಂಡ ಮೃತಪಟ್ಟಿದ್ದು, ಮಲ್ಲಮ್ಮಾ ರವರು ವಿಠಲ ರವರ ಹತ್ತಿರ ಉಳಿದುಕೊಂಡಿರುತ್ತಾರೆ, ಅಳಿಯನು ಬೇರೆ ಹೆಣ್ಣುಮಕ್ಕಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಸರಾಯಿ ಕುಡಿಯುವ ಚಟದವನಾಗಿದ್ದು, ಆಗಾಗ ಮಗಳೊಂದಿಗೆ ಜಗಳ ಮಾಡಿ ಹೊಡೆ-ಬಡೆ ಮಾಡಿ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡುತ್ತಾ ಬಂದಿರುತ್ತಾನೆ, ಹೀಗಿರುವಾಗ ದಿನಾಂಕ 08-06-2021 ರಂದು ಅಳಿಯನಾದ ರಮೇಶನು ಫಿರ್ಯಾದಿಯವರ ಮಗಳಿಗೆ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡಿ ಜಗಳ ಮಾಡಿ ಹೊಡೆಬಡೆ ಮಾಡಿದ್ದರಿಂದ ಅವಳು ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತಮ್ಮ ಮನೆಯ ಕೊಣೆಯ ತಗಡದ ಕೆಳಗಿರುವ ಕಬ್ಬಿಣದ ಪೈಪಿಗೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಗದಲ್ ಪೊಲೀಸ್ ಠಾಣೆ ಅಪರಾಧ ಸಂ. 33/2021, ಕಲಂ. 279, 338 ಐಪಿಸಿ :-

ದಿನಾಂಕ 08-06-2021 ರಂದು ಚಳಕಾಪೂರವಾಡಿಯಿಂದ ಶ್ರೀನಿವಾಸ ತಂದೆ ಶೇಷರಾವ ಒತಾಡೆ, ವಯ: 40 ವರ್ಷ, ಸಾ: ಚಳಕಾಪೂರ ಇತನು ತನ್ನ ಮೋಟಾರ ಸೈಕಲ ನಂ. ಕೆಎ-23/ಇಡಿ-3882 ನೇದರ ಮೇಲೆ ಫಿರ್ಯಾದಿ ಜಗದೀಶ ತಂದೆ ಗುರುನಾಥ ಜಾಧವ ವಯ: 35 ವರ್ಷ ಸಾ: ಚಳಕಾಪೂರ ವಾಡಿ ರವರ ರವರ ತಾಯಿ ಲತಾಬಾಯಿ ರವರಿಗೆ ಕೂಡಿಸಿಕೊಂಡು ಚಳಕಾಪೂರ ವಾಡಿಯಿಂದ ಹಳ್ಳಿಖೇಡ(ಬಿ) ಮಾರ್ಗವಾಗಿ ರಂಜೋಳಖೇಣಿಯಿಂದ ಮನ್ನಾಏಖೇಳಿಗೆ ಹೋಗುತ್ತಿರುವಾಗ ರಂಜೋಳಖೇಣಿ ಗ್ರಾಮದ ಬ್ರಿಡ್ಜ ಹತ್ತಿರ ಶ್ರೀನಿವಾಸ ಇತನು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ವೇಗ ಹತೋಟಿಯಲ್ಲಿಟ್ಟುಕೊಳ್ಳದೇ ಮೋಟಾರ ಸೈಕಲನ್ನು ಸ್ಕಿಡ ಮಾಡಿ ಮೋಟಾರ ಸೈಕಲ ಸಮೇತ ಬಿದ್ದಿರುತ್ತಾನೆ, ಪರಿಣಾಮ ಹಿಂದೆ ಕುಳಿತ ಫಿರ್ಯಾದಿಯವರ ತಾಯಿಯವರಿಗೆ ತಲೆಯಲ್ಲಿ ಭಾರಿ ರಕ್ತಗಾಯ ಮತ್ತು ಅಲ್ಲಿಲ್ಲಿ ತರಚಿದ ರಕ್ತಗಾಯಗಳಾಗಿರುತ್ತವೆ, ಆಗ ಅಲ್ಲಿಂದಲೆ ಬರುತ್ತಿದ್ದ ಫಿರ್ಯಾದಿಯವರ ಸೋದರ ಮಾವನಾದ ನಾಗನಾಥ ತಂದೆ ಶೇಷರಾವ ಒತಾಡೆ, ವಯ: 40 ವರ್ಷ, ಜಾತಿ: ಮರಾಠಾ, ಸಾ: ಚಳಕಾಪೂರ ವಾಡಿ ರವರು ಮತ್ತು ಮೋಹನ ತಂದೆ ಕಾಶಿನಾಥ ಮೇತ್ರೆ ವಯ: 30 ವರ್ಷ, ಸಾ: ಚಳಕಾಪೂರ ವಾಡಿ ಇಬ್ಬರೂ ನೋಡಿ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬೀದರ ಗುದಗೆ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 52/2021, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 08-06-2021 ರಂದು ಫಿರ್ಯಾದಿ ವಿಷ್ಣು ತಂದೆ ಶ್ಯಾಮರಾವ ಮಡಿವಾಳ ವಯ: 22 ವರ್ಷ, ಜಾತಿ: ಮಡಿವಾಳ, ಸಾ: ಉಡದಳ್ಳಿ ಗ್ರಾಮ, ತಾ: ಚಿಂಚೋಳಿ, ಜಿ: ಕಲಬುರಗಿ ರವರು ತಮ್ಮ ತಂದೆ ಶ್ಯಾಮರಾವ ಇಬ್ಬರು ಬೀದರದಿಂದ ಮ್ಮ ಸ್ಟಾರ್ ಸೀಟಿ ಮೋಟಾರ ಸೈಕಲ್ ನಂ. ಕೆಎ-38/ಎಸ್-4092 ನೇದರ ಮೇಲೆ ಉಡದಳ್ಳಿ ಗ್ರಾಮಕ್ಕೆ ಹೋಗಿ ಹೊಲದ ಕೆಲಸ ಮುಗಿಸಿಕೊಂಡು ಮರಳಿ ಬರುತ್ತಿರುವಾಗ ಚಾಂಗಲೇರಾಗೆ ಹೋಗುವ ರೋಡಿನ ಬ್ರೀಜ ಹತ್ತಿರ ದುರಿನಿಂದ ಅಂದರೆ ಚಾಂಗಲೇರಾ ಕಡೆಯಿಂದ ಟಾಟಾ ಸೊಮೋ ನಂ. ಎಮ್.ಹೆಚ್-14/ಎಕ್ಸ್-0241 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸುತ್ತಾ ಬಂದು ಎದುರಿನಿಂದ ಫಿರ್ಯದಿಯವರ ಮೋಟಾರ ಸೈಕಲಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದಿಯ ಎರಡು ಮೊಳಕಾಲು ಕೆಳಗೆ ರಚಿದ ರಕ್ತಗಾಯ, ಎದೆಗೆ ಗುಪ್ತಗಾಯ, ಬಲ ಹಣೆಗೆ ರಕ್ತಗಾಯ, ನಾಲಿಗೆ ಕೆಳಗೆ ರಕ್ತಗಾಯವಾಗಿರುತ್ತದೆ ಹಾಗೂ ತಂದೆ ಶ್ಯಾಮರಾವ ಇವರಿಗೆ ಮೂಗಿನ ಮೇಲೆ ರಕ್ತಗಾಯ, ಬಲ ತೊಡೆಗೆ ಗುಪ್ತಗಾಯ, ಬಲ ರೊಂಡಿಗೆ ಭಾರಿ ಗುಪ್ತಗಾಯವಾಗಿರುತ್ತದೆ ಹಾಗೂ ಡಿಕ್ಕಿ ಮಾಡಿದ ಆರೋಪಿಯು ತನ್ನ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ನಂತರ ಗಾಯಗೊಂಡ ಇಬ್ಬರಿಗೂ ನಿರ್ಣಾ ಕಡೆಯಿಂದ ಬಂದ ಧನರಾಜ ತಂದೆ ಮಾರುತಿ ಮಡಿವಾಳ ಸಾ: ರಾಜೋಳಿ ರವÀರು 108 ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಮನ್ನಾಎಖೇಳ್ಳಿ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಅಪರಾಧ ಸಂ. 63/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 08-06-2021 ರಂದು ಮದರಗಾಂವ ಗ್ರಾಮದ ಮಲ್ಲಿಕಾರ್ಜುನ ಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಬಸವರಾಜ ತಂದೆ ವೈಜಿನಾಥ ನೀಲಶೆಟ್ಟಿ ಸಾ: ಮದರಗಾಂವ ಇತನು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ನಿಂಗಪ್ಪಾ ಮಣ್ಣೂರ ಪಿ.ಎಸ್.(ಕಾಸು) ಹಳ್ಳಿಖೇಡ(ಬಿ) ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮದರಗಾಂವ ಗ್ರಾಮದ ಮಲ್ಲಿಕಾರ್ಜುನ ಮಂದಿರದ ಹತ್ತಿರ ಸ್ವಲ್ಪ ದೂರದಲ್ಲಿ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ಬಸವರಾಜ ತಂದೆ ವೈಜಿನಾಥ ನೀಲಶೆಟ್ಟಿ ವಯ: 42 ವರ್ಷ, ಜಾತಿ: ಲಿಂಗಾಯತ, ಸಾ: ಮದರಗಾಂವ ಇತನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ನೋಡಿ ಖಚಿತಪಡಿಸಿಕೊಂಡು ಪಿ.ಎಸ್. ರವರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಲು ಮಟಕಾ ಚೀಟಿ ಬರೆಯಿಸಿಕೊಳ್ಳುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ನಂತರ ಆರೋಪಿಗೆ ಹಿಡಿದು ಅವನ ಅಂಗ ಜಡ್ತಿ ಮಾಡಲಾಗಿ ಆತನ ಹತ್ತಿರ 750/- ರೂ. ನಗದು ಹಣ, 1 ಮಟಕಾ ಚೀಟಿ ಮತ್ತು 1 ಪೆನ್ ಸಿಕ್ಕಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 86/2021, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 08-06-2021 ರಂದು ಕುಂಬಾರವಾಡಾದಲ್ಲಿ ಒಬ್ಬ ವ್ಯಕ್ತಿ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಬಗ್ಗೆ ಜಗದೀಶ ನಾಯ್ಕ ಪಿ.ಎಸ್.(ಕಾಸು-1) ಗಾಂಧಿಗಂಜ ಪೊಲಿಸ ಠಾಣೆ ಬೀದರ ರವರಿಗೆ ಖಚೀತ ಮಾಹಿತಿ ಬಂದ ಮೇರೆಗೆ ಪಿಎಸ್ ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕುಂಬಾರವಾಡಾಕ್ಕೆ ಹೋಗಿ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಆರೋಪಿ ಸಾಗರ ತಂದೆ ಶಿವಯ್ಯಾ ಸ್ವಾಮಿ ವಯ: 24 ವರ್ಷ, ಸಾ: ಕುಂಬಾರವಾಡಾ ಬೀದರ ಈತನ ಮೇಲೆ ದಾಳಿ ಮಾಡಿ ಆತನ ವಶದಲ್ಲಿದ್ದ 1) 180 ಎಮ್.ಎಲ್ ವುಳ್ಳ ಮ್ಯಾಗಡಾಲ್ ನಂ. 1 ವಿಸ್ಕಿ 07 ಬಾಟಲಗಳು .ಕಿ 1380/- ರೂ., 2) 180 ಎಮ.ಎಲ್ ವುಳ್ಳ ಮ್ಯಾಗಡಾಲ್ ನಂ. 01 ಸೇಲಬರೇಷನ್ಮ್ 11 ಪ್ಯಾಕೇಟಗಳು .ಕಿ 1160/- ರೂ., 3) ಆಫಿರ್ ಚಾಯಿಸ್ಸ್ ವಿಸ್ಕಿ 180 ಎಮ್.ಎನ್ 03 ಪ್ಯಾಕೇಟಗಳು .ಕಿ 318/- ರೂ. ಹಾಗೂ 4) ನಗದು ಹಣ 400/- ರೂಪಾಯಿ ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 52/2021, ಕಲಂ. 379 ಐಪಿಸಿ :-

ಫಿರ್ಯಾದಿ ಸಮೀರ ತಂದೆ ಮೈನೋದ್ದಿನ ಪಟೇಲ ವಯ: 27 ವರ್ಷ, ಜಾತಿ: ಮುಸ್ಲಿಂ, ಸಾ: ಬಟಗೇರಾ, ತಾ: ಬಸವಕಲ್ಯಾಣ ತನ್ನ ಮನೆಯ ಮುಂದೆ ನಿಲ್ಲಿಸಿದ ತನ್ನ ಬುಲೇಟ್ ರಾಯಲ್ ಎನ್ಫಿಲ್ಡ್ಮೋಟಾರ ಸೈಕಲ ನಂ. ಎಮ್.ಹೆಚ್-14/ಎಚ್.ವೈ-8866 .ಕಿ 1,50,000/- ರೂ. ನೇದನ್ನು ದಿನಾಂಕ 07-06-2021 ರಂದು ರಾತ್ರಿ 0100 ಗಂಟೆಯಿಂದ 0400 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರÄತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 08-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 95/2021, ಕಲಂ. 379 ಐಪಿಸಿ :-

ಫಿರ್ಯಾದಿ ಸತೀಶ ತಂದೆ ಬಾಬುರಾವ ವಯ: 42 ವರ್ಷ, ಜಾತಿ: ಮರಾಠಾ, ಸಾ: ಜೇರಪೆಟ ಹುಮನಾಬಾದ ರವರು ತನ್ನ ಹೀರೋ ಪ್ಯಾಶನ ಪ್ರೋ ಮೋಟಾರ ಸೈಕಲ ನಂ. ಕೆ.ಎ-39/ಕ್ಯೂ-6767 ಅ.ಕಿ 35,220/- ನೇದನ್ನು ತನ್ನ ಗೆಳೆಯನಾದ ರೇವಣಸಿದ್ದಪ್ಪಾ ತಂದೆ ಶಂಕ್ರಪ್ಪಾ ಶಿವಪೂಜೆ, ವಯ: 43 ವರ್ಷ, ಜಾತಿ: ಲಿಂಗಾಯತ, ಸಾ: ಜೇರಪೆಟ ಹುಮನಾಬಾದ ರವರಿಗೆ ಕೊಟ್ಟಿದ್ದು, ಅವರು ಸದರಿ ವಾಹನವನ್ನು ತನ್ನ ಮನೆಯ ಮುಂದೆ ನಿಲ್ಲಿಸಿರುವುದನ್ನು ದಿನಾಂಕ 06-06-2021 ರಂದು 2200 ಗಂಟೆಯಿಂದ ದಿನಾಂಕ 07-06-2021 ರಂದು 0600 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 08-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 104/2021,. ಕಲಂ. 379 ಐಪಿಸಿ :-

ದಿನಾಂಕ 02-06-2021 ರಂದು 1130 ಗಂಟೆಯಿಂದ ದಿನಾಂಕ 03-06-2021 ರಂದು 1300 ಗಂಟೆಯ ಮಧ್ಯಾವಧಿಯಲ್ಲಿ ಫಿರ್ಯಾದಿ ಅನ್ಸರ ತಂದೆ ಸೈಯದ ಅಕ್ಬರ ವಯ: 61 ವರ್ಷ, ಜಾತಿ: ಮುಸ್ಲಿಂ, ಸಾ: ರೇಣಾ ಗಲ್ಲಿ ಬಸವಕಲ್ಯಾಣ ರವರ ಮಾಲಿಕರಾದ ಅನೀಲ ತಂದೆ ವೈಜಿನಾಥಪ್ಪಾ ರಗಟೆ ಸಾ: ವಿದ್ಯಾಶ್ರೀ ಕಾಲೋನಿ ಬಸವಕಲ್ಯಾಣ ರವರು ತನ್ನ ಟ್ಯಾಂಕರ್ ನಂ. ಎಮ್.ಹೆಚ್-04/ಡಿಡಿ-3707, ಚಾಸಿಸ್ ನ. ಖಿಐಇ472061, ಇಂಜಿನ್ ನಂ. ಖಿಐಇ350518, ಮಾಡಲ್ 2001 ಹಾಗೂ ಅ.ಕಿ 4 ಲಕ್ಷ ರೂಪಾಯಿ ನೇದನ್ನು ಸಸ್ತಾಪೂರ ಬಂಗ್ಲಾ ಆಟೋ ನಗರ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಫಾರೂಕ ಬಾಡಿ ಬಿಲ್ಡರ್ ವರ್ಕಶಾಪ್ ಹಿಂದೆ ನಿಲ್ಲಿಸಿರುವುದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 08-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 40/2021, ಕಲಂ. 457, 380 ಐಪಿಸಿ :-

ದಿನಾಂಕ 07-06-2021 ರಂದು 2300 ಗಂಟೆಯಿಂದ ದಿನಾಂಕ 08-06-2021 ರಂದು 0500 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಅಶೋಕ ತಂದೆ ಶಂಕರ ಇಂಗಳವಾಡೆ ವಯ: ವರ್ಷ, ಸಾ: ಹಸ್ಸಿಕೇರಾ ಗ್ರಾಮ ರವರ ಮನೆಯ ಕೀಲಿ ಹಾಗೂ ಅಲಮಾರದ ಕೀಲಿ ಮುರಿದು ಅಲಮಾರದಲ್ಲಿದ್ದ 1) ನಗದು ಹಣ 30,000/- ರೂ., 2) 3 ಗ್ರಾಂ ಬಂಗಾರದ ಕಿವಿಯೊಲೆ ಅ.ಕಿ 9000/- ರೂ, ಹಾಗೂ 3) 4 ಗ್ರಾಂ. ಬಂಗಾರದ ಝುಮಕಾ ಅ.ಕಿ 12,000/- ರೂ. ನೇದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 41/2021, ಕಲಂ. 457, 380 ಐಪಿಸಿ :-

ದಿನಾಂಕ 07-06-2021 ರಂದು 2300 ಗಂಟೆಯಿಂದ ದಿನಾಂಕ 08-06-2021 ರಂದು 0600 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಫಿರ್ಯಾದಿ ವಿಲಾಸ ತಂದೆ ದೇವಿದಾಸ ಬಿರಾದಾರ ವಯ: 55 ವರ್ಷ, ಸಾ: ಹಸ್ಸಿಕೆರಾ ಗ್ರಾಮ ರವರ ಮನೆಯ ಹಿಂದಿನ ಕಿಟಕಿ ಮುರಿದು ಅಲಮಾರದಲ್ಲಿದ್ದ 1) ನಗದು ಹಣ 25000/- ರೂ., 2) 2 ಗ್ರಾಂ ಬಂಗಾರದ ಕಿವಿಯೊಲೆ ಅ.ಕಿ 6000/- ರೂ., 3) 2 ಗ್ರಾಂ. ಬಂಗಾರದ ಝುಮಕಾ ಅ.ಕಿ 6000/- ರೂ., 4) ಒಂದು ಗ್ರಾಂ ತೂಕದ ಬಂಗಾರದ ಉಂಗುರ ಅ.ಕಿ 3000/- ರೂ. ಹಾಗೂ 5) ಒಂದು ಗ್ರಾಂ. ಬಂಗಾರದ ಕಡ್ಡಿ ಅ.ಕಿ 3000/- ರೂ. ನೇದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 64/2021, ಕಲಂ. 451, 380 ಐಪಿಸಿ :-

ದಿನಾಂಕ 03-06-2021  ರಂದು 0800 ಗಂಟೆಯಿಂದ ದಿನಾಂಕ 07-06-2021 ರಂದು 1000 ಗಂಟೆಯ ಅವದಿüಯಲ್ಲಿ  ಬೀದರ  ಬ್ರಿಮ್ಸ್  ಸ್ಪತ್ರೆಯ ಕೋವಿಡ ವಾರ್ಡನಲ್ಲಿರುವ ಎರಡು ಡ್ರ್ಯಾಗರÀ ವೆಂಟಿಲೇಟರ್ ಸಂ. ASND0127 ಮತ್ತು ASND0173 ಅ.ಕಿ 15 ಲಕ್ಷ ರೂಪಾಯಿ ನೇದವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ಡಾ|| ಶಿವಕುಮಾರ ತಂದೆ ಗಂಗಾಧರ ಸಾ: ನಂದಿ ಕಾಲೋನಿ, ವೈದ್ಯಕೀಯ ಅಧೀಕ್ಷಕರು ಬ್ರಿಮ್ಸ್ಆಸ್ಪತ್ರೆ ಬೀದರ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: