ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 11-06-2021
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 06/2021, ಕಲಂ. 174(ಸಿ) ಸಿ.ಆರ್.ಪಿ.ಸಿ :-
ದಿನಾಂಕ 09-06-2021 ರಂದು ಫಿರ್ಯಾದಿ ಮಸ್ತಾನಸಾಬ ತಂದೆ ಚಾಂದಸಾಬ ತೇಲಗಾಂವ ವಯ: 53 ವರ್ಷ, ಜಾತಿ: ಮುಸ್ಲಿಂ, ಸಾ: ಶಿವಪೂರ, ತಾ: ಬಸವಕಲ್ಯಾಣ ರವರ ಮಗನಾದ ಶಮಶೋದ್ದಿನ್ ಇತನಿಗೆ ಭಾವನ ಮಗನಾದ ಬಬ್ಲು @ ವಲಿಯೋದ್ದಿನ್ ತಂದೆ ಅಲ್ಲಾಯೋದ್ದಿನ್ ಮಸುಂದರ ಇತನು ಕರೆದುಕೊಂಡು ಹೋಗಿರುತ್ತಾನೆ, ನಂತರ ದಿನಾಂಕ 10-06-2021 ರಂದು ಬಬ್ಲು @ವಲಿಯೋದ್ದಿನ್ ಇತನು ಕರೆ ಮಾಡಿ ಶಮಶೋದ್ದಿನ್ ಇತನಿಗೆ ನಾರಾಯಣಪೂರ ಗ್ರಾಮದಲ್ಲಿ ಬಲಗಾಲಿಗೆ ಹಿಮ್ಮಡಿ ಹತ್ತಿರ ಹಾವು ಕಚ್ಚಿದೆ ಎಂದು ತಿಳಿಸಿದ್ದರಿಂದ ಫಿರ್ಯಾದಿಯು ಮೋಟರ ಸೈಕಲ್ ಮೇಲೆ ನಾರಾಯಣಪೂರ ಗ್ರಾಮಕ್ಕೆ ಹೋಗಿ ನೋಡಲು ಅಲ್ಲಿ ಇರಲಿಲ್ಲ, ನಂತರ ಬಬ್ಲು @ ವಲಿಯೋದ್ದಿನ್ ಇತನಿಗೆ ಕರೆ ಮಾಡಿ ವಿಚಾರಿಸಿದಾಗ ನವೋದಯ ಶಾಲೆ ಹತ್ತಿರ ಓಂಟಿ ಗಾಲಿನ ಹನುಮಾನ ಮಂದಿರ ಹತ್ತಿರ ಗಿಡಮೂಲಿಕೆ ಔಷಧಿ ತೆಗದುಕೊಳ್ಳಲು ಬಂದಿರುತ್ತೆವೆಂದು ತಿಳಿಸಿದಾಗ ಫಿರ್ಯಾದಿಯು ನವೋದಯ ಶಾಲೆ ಕಡೆಗೆ ಹೋಗುವಾಗ ಎದುರಿನಿಂದ ಬಬ್ಲು @ವಲಿಯೋದ್ದಿನ್ ಇತನು ಮೋಟರ ಸೈಕಲ್ ಚಲಾಯಿಸುತಿದ್ದು ಮದ್ಯದಲ್ಲಿ ಶಮಶೋದ್ದಿನ ಇತನು ಕುಳಿತಿದ್ದು ಹಿಂದೆ ಸಂತೋಷ ಕೋಳಿ ಇತನು ಶಮಶೋದ್ದಿನ ಇತನಿಗೆ ಹಿಡಿದುಕೊಂಡು ಕುಳಿತ್ತಿದ್ದು ಇರುತ್ತದೆ, ಅದನ್ನು ನೋಡಿ ನೇರವಾಗಿ ಬಸವಕಲ್ಯಾಣ ನಗರದಲ್ಲಿರುವ ರಿಫಾ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ತೆಗೆದುಕೊಂಡು ಹೋದಾಗ ಅಲ್ಲಿ ವೈದ್ಯರು ಶಮಶೋದ್ದಿನ್ ಇತನಿಗೆ ಪರಿಕ್ಷೀಸಿ ಮೃತಪಟ್ಟಿರುತ್ತಾನೆಂದು ತಿಳಿಸಿರುತ್ತಾರೆ, ಕಾರಣ ಫಿರ್ಯಾದಿಯವರ ಮಗ ಶಮಶೋದ್ದಿನ್ ವಯ: 24 ವರ್ಷ ಇತನಿಗೆ ನೋಡಲು ಆತನ ಬಲಗಾಲಿನ ಹಿಮ್ಮಡಿ ಕೀಲು ಹತ್ತಿರ ರಕ್ತ ಬಂದಿರುತ್ತದೆ ಆದರೆ ಹವು ಕಚ್ಚಿದ ಬಗ್ಗೆ ಗಾಯಗಳು ಸ್ಪಷ್ಟ ಕಂಡು ಬರುತ್ತಿಲ್ಲ, ಆದ್ದರಿಂದ ತನ್ನ ಮಗನ ಸಾವಿನ ಬಗ್ಗೆ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 34/2021, ಕಲಂ. 379 ಐಪಿಸಿ :-
ದಿನಾಂಕ 09-06-2021 ರಂದು
2200 ಗಂಟೆಯಿಂದ 10-06-2021 ರಂದು 1230 ಗಂಟೆಯ ಮಧ್ಯಾವಧಿಯಲ್ಲಿ ಬೀದರ ಜಿಲ್ಲಾಧಿಕಾರಿಗಳ ಕಛೇರಿಯ ಹಿಂದೆ ಆವರಣದಲ್ಲಿರುವ ಕ್ರಿಲೋಸ್ಕರ್ ಕಂಪನಿಯ 2 ಜನರೇಟರಗಳ ಪೈಕಿ ಒಂದು ಜನರೇಟರಿನ ಕ್ರಮ ಸಂ. ಡಿ8.1608.92/0800444 ನೇದರ ಒಂದು ಟಾಟಾ ಗ್ರೀನ್ ಬ್ಯಾಟರಿ ಅ.ಕಿ 5000/-ರೂಪಾಯಿಯ ಒಂದು ಬ್ಯಾಟರಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ಪ್ರವೀಣ ದೇಶಪಾಂಡೆ ತಂದೆ ಜನಾರ್ಧನ ದೇಶಪಾಂಡೆ ವಯ: 33 ವರ್ಷ, ಜಾತಿ: ಬ್ರಾಹ್ಮಣ, ಉ: ಬೀದರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕೆಸ್ವಾನ ಕಂಟೊ್ರೕಲ್ ರೋಮನಲ್ಲಿ ನೋಡಲ ಅಧಿಕಾರಿ, ಸಾ: ಮನೆ ನಂ. 11-366/286/ಎ
ಪ್ರೀತಿ ನಿವಾಸ ನ್ಯೂ ರಾಘವೇಂದ್ರ ಕಾಲೋನಿ ಕಲಬುರ್ಗಿ, ಸದ್ಯ: 11 ನೇ ಕ್ರಾಸ್ ವಿದ್ಯಾನಗರ ಕಾಲೋನಿ ಬೀದರ ರವರು ನೀಡಿದ ದೂರಿನ ಮೇರೆಗೆ ದಿನಾಂಕ 10-06-2021 ರಂದು
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment