Police Bhavan Kalaburagi

Police Bhavan Kalaburagi

Friday, July 2, 2021

BIDAR DISTRICT DAILY CRIME UPDATE 02-07-2021

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 02-07-2021

 

ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 25/2021, ಕಲಂ. 498(), 323, 324, 504, 506 ಐಪಿಸಿ :-

ಫಿರ್ಯಾದಿ ಮಂಜುಳಾ ಗಂಡ ಅಂಬಾದಾಸ ದೇವನಾಳ ವಯ: 28 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಧನಗರ ಗಲ್ಲಿ ಭಾಲ್ಕಿ, ಸದ್ಯ: ಇಡಗೇರಿ ಬೀದರ ರವರ ಮದುವೆಯು ಸುಮಾರು 6 ವರ್ಷಗಳ ಹಿಂದೆ ಭಾಲ್ಕಿಯ ಅಂಬಾದಾಸ ದೇವನಾ¼À ಇತನ ಜೊತೆಯಲ್ಲಿ ಆಗಿರುತ್ತದೆ, ಮದುವೆಯಾದ ನಂತರ ಗಂಡ ಫಿರ್ಯಾದಿಗೆ ಸುಮಾರು 4 ವರ್ಷಗಳ ಕಾಲ ಚೆನ್ನಾಗಿ ನೋಡಿಕೊಂಡಿರುತ್ತಾನೆ, ಈಗ 5 ವರ್ಷದ ಒಬ್ಬ ಗಂಡು ಮಗು ಇರುತ್ತಾನೆ, ಗಂಡ ಸರಾಯಿ ಕುಡಿಯುವ ಚಟದವನಾಗಿದ್ದು, ಈಗ ಸುಮಾರು ಒಂದು ವರ್ಷದಿಂದ ಗಂಡ ಮನೆಗೆ ಏನು ತರದೆ, ಮನೆಯಲ್ಲಿನ ಸಾಮಾನುಗಳನ್ನು ಮಾರಿ ಸಾರಾಯಿ ಕುಡಿದು ಬಂದು ದಿನಾಲು ಜಗಳ ತೆಗೆದು ಕೈಯಿಂದ ಹೊಡೆ ಬಡೆ ಮಾಡುವದು, ಕೂದಲು ಹಿಡಿದು ಎಳೆಯುವದು ಮಾಡುತ್ತಾ ಬಂದಿರುತ್ತಾನೆ, ಅಲ್ಲದೇ ನೀನು ಆವಾರಾ ಇದ್ದಿ ನಿನಗೆ ಯಾವನು ಇದ್ದಾನೆ ಹೇಳು ಅಂತ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾನೆ, ಗಂಡನಾದ ಅಂಬಾದಾಸ ಇತನು ತೊಂದರೆ ಕೊಡುವ ಬಗ್ಗೆ ನ್ನ ತಾಯಿ ಕಮಳಮ್ಮಾ, ಅಣ್ಣ ಸಂತೋಷ, ಮನೆಯ ಮಾಲಿಕರಾದ ಅಖೀಲ ತಂದೆ ಮಹ್ಮದ ಮುಲ್ತಾನಿ ಮತ್ತು ಪರಿಚಯ ಇರುವ ಪ್ರಮೋದ ತಂದೆ ಶಿರೋಮಣಿ ರವರಿಗೆ ತಿಳಿಸಿದಾಗ ಅವರು ಅನೇಕ ಸಲ ಗಂಡನಿಗೆ ತಿಳುವಳಿಕೆ ಹೇಳಿದರು ಸಹ ಗಂಡ ಫಿರ್ಯಾದಿಗೆ ತೊಂದರೆ ಕೊಡುವುದು ಬಿಟ್ಟಿರುವುದಿಲ್ಲ, ಈಗ ಫಿರ್ಯಾದಿಯು 5 ತಿಂಗಳ ಗರ್ಭಿಣಿ ಇದ್ದು, ಈಗ ಸುಮಾರು ಎಂಟು ದಿವಸಗಳ ಹಿಂದೆ ಗಂಡ ಫಿರ್ಯಾದಿಯ ಜೊತೆಯಲ್ಲಿ ಮಾಡಿ ಭಾಲ್ಕಿಗೆ ಹೋಗಿರುತ್ತಾನೆ, ಹೀಗಿರುವಾಗ ದಿನಾಂಕ 01-07-2021 ರಂದು ಫಿರ್ಯಾದಿಯು ತನ್ನ ತಾಯಿ ಕಮಳಮ್ಮಾ ಇಬ್ಬರು ಕೂಡಿ ನ್ನ ಮಗನೊಂದಿಗೆ ರಮೇಶ ಫೂಲೇಕರ್ ರವರ ಹೊಲದಲ್ಲಿ ಹೂ ಕಡಿಯಲು ಹೋಗಿ ಮರಳಿ ಮನೆಗೆ ಬರುತ್ತಿರುವಾಗ, ಇಡಗೇರಿಯ ಮನೆಯ ಹತ್ತಿರ ರೋಡಿನ ಮೇಲೆ ಗಂಡ ಬಂದು ತಾಯಿಗೆ ಇಲ್ಲಿಯವರೆಗೆ ತಪ್ಪಾಗಿದೆ, ಅವಳ ಜೊತೆ ಉಳಿದುಕೊಂಡು ಅವಳಿಗೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂತ ಹೇಳಿದಾಗ, ಫಿರ್ಯಾದಿಯು ತಮ್ಮ ತಾಯಿಗೆ ಅವನು ತನ್ನ ಗುಣ ಬಿಡುವುದಿಲ್ಲ, ನೀನು ಕಡೆ ಬಾ ಅಂತ ಅಂದಾಗ ಗಂಡ ಸಿಟ್ಟಿಗೆ ಬಂದು ಬ್ಲೆಡದಿಂದ ಫಿರ್ಯಾದಿಯ ಕುತ್ತಿಗೆಯ ಹಿಂಭಾಗದಲ್ಲಿ ಕೆಳಗಡೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಮತ್ತು ಬಲಡೆ ಕಾಳಿಗೆ ಹೊಡೆzÀÄ ತರಚಿದ ಗಾಯ ಪಡಿಸಿರುತ್ತಾನೆ, ಆಗ ತಾಯಿ ಬಿಡಿಸಿಕೊಳ್ಳಲು ಬಂದಾಗ ತಾಯಿಯ ಎಡಭಾಗದ ಕೈಗೆ ಬ್ಲೆಡದಿಂದ ಹೊಡೆದು ಅವಳಿಗೂ ಸಹ ರಕ್ತಗಾಯ ಪಡಿಸಿ ನಿಮ್ಮ ಮನೆಂiÀÄವರಿಗೆ ಯಾರಿಗೂ ಜೀವಂತ ಇಡುವುದಿಲ್ಲ ಅಂತ ಜೀವದ ಬೆದರಿಕೆ ಹಾಕಿರುತ್ತಾನೆ, ಆಗ ಫಿರ್ಯಾದಿಯು ಚೀರಾಡುವ ಶಬ್ದ ಕೇಳಿ ಮನೆಯ ಮಾಲಿಕರಾದ ಅಖೀಲ, ಖೈಸರ್, ಜಬೀನ್ ರವರು ಬಂದಾಗ ಅವರಿಗೆ ನೋಡಿ ಗಂಡ ಬ್ಲೆಡನ್ನು ಅಲ್ಲಿಯೇ ಬಿಸಾಡಿ ಅಲ್ಲಿಂಓಡಿ ಹೋಗಿರುತ್ತಾನೆ, ನಂತರ ಸದರಿ ವಿಷಯವನ್ನು ನ್ನ ಅಣ್ಣನಾದ ಸಂತೋಷ ಇತನಿಗೆ ತಿಳಿಸಿದಾಗ ಆತನು ಬಂದು ಇಬ್ಬರಿಗೂ ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 01-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ.65/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 01-07-2021 ರಂದು ಕೋಹಿನೂರ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಾಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆಂದು ಕರೆ ಮುಖಾಂತರ ಕು: ಜೈಶ್ರೀ ಪಿ.ಎಸ್. ಮಂಠಾಳ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ, ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಕೊಹಿನೂರ ಗ್ರಾಮಕ್ಕೆ ಹೋಗಿ ಕೋಹಿನೂರ ಗ್ರಾಮದ ವಾಲ್ಮಿಕ ಚೌಕ ಹತ್ತಿರ ರೋಡಿನ ಪಕ್ಕದಲ್ಲಿ ಹೋಗಿ ರೋಡಿನ ಪಕ್ಕದಲ್ಲಿರುವ ಅಂಗಡಿಗಳ ಮರೆಯಾಗಿ ನಿಂತು ನೋಡಲು ಅಲ್ಲಿ ಕೊಹಿನೂರ ಗ್ರಾಮದಲ್ಲಿರುವ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಸೋಮಶೇಖರ ತಂದೆ ದೇವಿಂದ್ರಪ್ಪಾ ಕಲೋಜಿ ವಯ: 40 ವರ್ಷ, ಜಾತಿ: ಲಿಂಗಾಯತ, ಸಾ: ಕೊಹಿನೂರ ಗ್ರಾಮ ಇತನು ಮಟಕಾ ಎಂಬ ಜೂಜಾಟದ ನಂಬರ ಬರೆಯಿಸಿ 01/- ರೂಪಾಯಿಗೆ 80/- ರೂಪಾಯಿ ಪಡೆಯಿರಿ ಅಂತಾ ಚಿರಾಡುತ್ತಾ ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮದಲ್ಲಿ ಸಿಬ್ಬಂದಿವಯವರ ಸಹಾಯದಿಂದ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಅವನಿಗೆ ಹಿಡಿದುಕೊಂಡಾಗ ಹಣ ಕೊಟ್ಟು ಮಟಕಾ ನಂಬರ್ ಬರೆಯಿಸುತ್ತಿದ್ದ ಸಾರ್ವಜನಿಕರು ಓಡಿ ಹೋಗಿರುತ್ತಾರೆ, ನಂತರ ಆತನಿಗೆ ಇಲ್ಲಿ ನೀನು ಏನು ಬರೆದುಕೊಳ್ಳುತಿರುವೆ ಅಂತಾ ವಿಚಾರಿಸಿಸಲು ಆತನು ತಿಳಿಸಿದ್ದೆನೆಂದರೆ ನಾನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಎಂಬ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದೇನೆ ಅಂತಾ ಹೇಳಿದನು, ನಂತರ ಪಂಚರ ಸಮಕ್ಷಮದಲ್ಲಿ ಅವನ ಅಂಗ ಜಡ್ತಿ ಮಾಡಿದಾಗ ಅವನ ಹತ್ತಿರ ಗುನ್ನೆಗೆ ಸಂಬಂಧಿಸಿದ 1) ನಗದು ಹಣ 520/- ರೂ., 2) 2 ಮಟಕಾ ಚೀಟಿಗಳು ಮತ್ತು 3) ಒಂದು ಬಾಲ್ ಪೆನ್ನ ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: