ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 15-07-2021
ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 96/2021, ಕಲಂ. 392 ಐಪಿಸಿ :-
ದಿನಾಂಕ 14-07-2021 ರಂದು 1745 ಗಂಟೆಯ ಸುಮಾರಿಗೆ ಫಿರ್ಯಾದಿ ಸವೀತಾ ಗಂಡ ಕಲ್ಲಪ್ಪಾ ಚಲ್ವಾ ವಯ: 30 ವರ್ಷ, ಜಾತಿ: ಲಿಂಗಾಯತ, ಸಾ: ಔರಾದ(ಬಿ) ರವರು ಮತ್ತು ಸುಭದ್ರಾ ಗಂಡ ರಘುನಾಥ ಪಾಂಚಾಳ ಇಬ್ಬರೂ ಹಾಗೂ ಫಿರ್ಯಾದಿಯವರ ಎರಡು ಮಕ್ಕಳು ದಿನನಿತ್ಯದಂತೆ ವಾಯು ವಿಹಾರ ಕುರಿತು ಮನೆಯಿಂದ ಔರಾದ(ಬಿ) ಪಟ್ಟಣದ ಐ.ಬಿ ರಿಂಗ ರೋಡ ಕಡಗೆ ಹೋಗುವಾಗ ಮಲ್ಲಪ್ಪಾ ಕುರುಬರ ರವರ ಹೊಲದ ಹತ್ತಿರ ರೋಡಿನ ಮೇಲೆ ಐ.ಬಿ ಕಡೆಯಿಂದ 1800 ಗಂಟೆಯ ಸುಮಾರಿಗೆ ಒಂದು ಮೊಟಾರ ಸೈಕಲ ಮೇಲೆ ಒಬ್ಬ ವ್ಯಕ್ತಿಯು ಫಿರ್ಯಾದಿಯವರ ಹತ್ತಿರ ನಿಧಾನವಾಗಿ ಬಂದು ಫಿರ್ಯಾದಿಯವರ ಕೊರಳಲ್ಲಿ ಕೈ ಹಾಕಿ ಕೊರಳಲ್ಲಿದ್ದ ಮಂಗಳಸೂತ್ರವನ್ನು ಕಸಿದುಕೊಳ್ಳುವಾಗ ಫಿರ್ಯಾದಿಯು ಚಿರಾಡುತ್ತ ಅವರು ಸಹ ತನ್ನ ಮಂಗಳಸೂತ್ರಕ್ಕೆ ಕೈ ಹಿಡಿದಿದ್ದು, ಸದರಿ ಮಂಗಳಸೂತ್ರವು ನಾಲ್ಕು ಪದರ ಕರಿಮಣಿ ಹಾಗೂ ಬಂಗಾರದ ಗುಂಡಗಳÄ ಎರಡು ಮಂಗಳ ಸೂತ್ರ ಇದ್ದು, ಮೂರು ಪದರ ಕರಿಮಣಿ ಬಂಗಾರದ ಗುಂಡು ಎರಡು ಮಂಗಳಸೂತ್ರ ಅವನ ಕೈಯಲ್ಲಿ ಒಂದು ಪದರು ಫಿರ್ಯಾದಿಯವರ ಕೈಯಲ್ಲಿ ಉಳಿದಿರುತ್ತದೆ, ನಂತರ ಅವನು ಫಿರ್ಯಾದಿಯವರ ಕೊರಳಿನಿಂದ ಕಡಿದುಕೊಂಡು ತನ್ನ ಮೋಟಾರ ಸೈಕಲ ಮೇಲೆ ಕಂಡಿಕೇರಿ–ಎಕಂಬಾ ರಸ್ತೆ ಕಡೆಗೆ ಓಡಿ ಹೋಗಿರುತ್ತಾನೆ, ಆಗ ಫಿರ್ಯಾದಿ ಮತ್ತು ಮಕ್ಕಳು ಹಾಗೂ ಸುಭದ್ರಾ ಎಲ್ಲರೂ ಚಿರಾಡಿದ್ದು, ಆತನ ವಯಸ್ಸು 25-30 ವರ್ಷದವನಿದ್ದು, ಕಪ್ಪು ಬಣ್ಣದವನಿದ್ದು, ಮುಖಕ್ಕೆ ಕಪ್ಪು ಬಣ್ಣದ ಬಟ್ಟೆ ಕಟ್ಟಿದ್ದು, ನಿಲಿ ಕಡ್ಡಿವುಳ್ಳಿ ಅಂಗಿ ಮತ್ತು ಪ್ಯಾಂಟ ಧರಿಸಿದ್ದು, ತಲೆಯ ಹಿಂದೆ ಕೂದಲು ಕಟ್ ಮಾಡಿದ್ದು, ತಲೆಯ ಮೇಲೆ ಕೂದಲು ಇರುತ್ತವೆ, ಮೋಟಾರ ಸೈಕಲ ನಂಬರ ನೋಡಿರುವುದಿಲ್ಲ, ಕಾರಣ ಫಿರ್ಯಾದಿಯವರ ಕೋರಳಲ್ಲಿ ಎರಡು ಮಂಗಳ ಸೂತ್ರ 4 ಗ್ರಾಂ ಅ.ಕಿ 16,000/- ರೂ., ಸಣ್ಣ ಗುಂಡಗಳು 6 ಗ್ರಾಂ ಅ.ಕಿ 25,000/- ಹೀಗೆ ಒಟ್ಟು 1 ತೊಲಿ ಬಂಗಾರ ಅ.ಕಿ 41,000/- ರೂ. ಆಗಬಹುದು ಅದನ್ನು ದೊಚಿಕೊಂಡು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 99/2021, ಕಲಂ. 454, 457, 380 ಐಪಿಸಿ :-
ದಿನಾಂಕ 10-07-2021 ರಂದು 1400 ಗಂಟೆಯಿಂದ ದಿನಾಂಕ 14-07-2021 ರಂದು 0600 ಗಂಟೆಯ ಅವಧಿಯಲ್ಲಿ ಫಿರ್ಯಾದಿ ಸುಭಾಶ ತಂದೆ ರಾಮಣ್ಣಾ ಗುರ್ಲಾ ವಯ: 67 ವರ್ಷ, ಜಾತಿ: ಮುನ್ನು ರೇಡ್ಡಿ, ಸಾ: ಮನೆ ನಂ. 16-01-400/ಎ4 ಅಲ್ಲಂಪ್ರಭು ನಗರ ಗುಂಪಾ, ಬೀದರ ರವರ ಮನೆಯ ಬೀಗವನ್ನು ಯಾರೋ ಅಪರಿಚಿತ ಕಳ್ಳರು ಮುರಿದು ಒಳಗೆ ಪ್ರವೇಶಿಸಿ ಮನೆಯಲ್ಲಿದ್ದ ಅಲಮಾರಾ ಲಾಕರ ಬೀಗ ಮುರಿದು ಅಲಮಾರಾದಲ್ಲಿರುವ 1) 10 ಗ್ರಾಮ ಬಂಗಾರದ ಉಂಗುರ ಎರqÀÄ, 2) 05 ಗ್ರಾಮ ಬಂಗಾರದ ಉಂಗುರ ಎರಡು, 3) ಬಂಗಾರದ ಕೈಕಡಗಾ ಎರಡು 20 ಗ್ರಾಮ ಹೀಗೆ ಒಟ್ಟು 50 ಗ್ರಾಂ ಬಂಗಾರದ ಆಭರಣಗಳು ಅ.ಕಿ 2,00,000/- ರೂ., 4) ಬೆಳ್ಳಿಯ ಕಾಲು ಚೈನು 10 ಜೋತೆ ಮತ್ತು ಬೆಳ್ಳಿಯ ಬಿಸ್ಕೀಟಗಳು ಎರಡು ಹೀಗೆ ಒಟ್ಟು ಅ.ಕಿ 32,000/- ಹೀಗೆ ಒಟ್ಟು 2,32,000/- ರೂ. ಬೆಲೆ ಬಾಳವು ಬಂಗಾರ, ಬೆಳ್ಳಿಯ ಆಭರಣಗಳು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಜನವಾಡಾ ಪೊಲಿಸ್ ಠಾಣೆ ಅಪರಾಧ ಸಂ. 44/2021, ಕಲಂ. 279, 337, 338 ಐಪಿಸಿ :-
ದಿನಾಂಕ 14-07-2021 ರಂದು ಫಿರ್ಯಾದಿ ದೀಪಕ ತಂದೆ ಬಾಲಾಜಿ ಗೌಳಿ ಸಾ: ಲಾಲಬಾಗ ಗ್ರಾಮ ರವರು ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ. ಕೆಎ-38/ಎಕ್ಸ್–3474 ನೇದರ ಮೇಲೆ ಹಾಗೂ ತಮ್ಮೂರ ಸಂಬಂಧಿಯಾದ ಜೀತೇಂದ್ರ ತಂದೆ ಗುಂಡಪ್ಪಾ ಗೌಳಿ ಮತ್ತು ಸಿದ್ದೋಜಿ ತಂದೆ ನರಸಿಂಗರಾವ ಗೌಳಿ ಇವರಿಬ್ಬರು ಅವರ ಮೋಟಾರ್ ಸೈಕಲ್ ಮೇಲೆ ಲಾಲಬಾಗದಿಂದ ಮೈಲಾರ ಮೈಲಣ್ಣ ದೇವರ ದರ್ಶನಕ್ಕಾಗಿ ಹೋಗಿ ದೇವರ ದರ್ಶನ ಮಾಡಿಕೊಂಡು ಮರಳಿ ಲಾಲಬಾಗ ಗ್ರಾಮಕ್ಕೆ ಬರುವಾಗ ಭಾಲ್ಕಿ ಬೀದರ ರೋಡಿನ ಡಾ|| ಸುಭಾಷರಾವ ರವರ ಹೊಲದ ಹತ್ತಿರ ಫಿರ್ಯಾದಿಯ ಎದುರುಗಡೆಯಿಂದ ಬೀದರ ಕಡೆಯಿಂದ ಕಾರ ನಂ. ಕೆಎ-38/ಎಮ್-3373 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ್ ಸೈಕಲಗೆ ಎದುರಿನಿಂದ ಡಿಕ್ಕಿ ಮಾಡಿ ತನ್ನ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೊಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಬಲಗಾಲಿನ ತೊಡೆಗೆ ಹಾಗೂ ಮೋಣಕಾಲು ಡಬ್ಬಿಯ ಕೆಳಗಡೆ ಭಾರಿ ರಕ್ತಗಾಯ & ಗುಪ್ತಗಾಯ, ಬಲಗೈಗೆ ಭಾರಿ ರಕ್ತಗಾಯ & ಗುಪ್ತಗಾಯ ಹಾಗೂ ಬಾಯಿಗೆ ರಕ್ತಗಾಯಗಳಾಗಿರುತ್ತದೆ ಹಾಗೂ ಸದರಿ ಘಟನೆಯನ್ನು ಜಿತೇಂದ್ರ ಗೌಳಿ ಮತ್ತು ಸಿದ್ದೋಜಿ ಗೌಳಿ ರವರು ಕಣ್ಣಾರೆ ನೋಡಿ 108 ಅಂಬುಲೇನ್ಸ ವಾಹನಕ್ಕೆ ಕರೆಯಿಸಿ ಅದರಲ್ಲಿ ಗಾಯಗೊಂಡ ಫಿರ್ಯಾದಿಗೆ ಚಿಕಿತ್ಸೆ ಕುರಿತು ಬೀದರ ವಾಸು ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 50/2021, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 14-07-2021 ರಂದು ಫಿರ್ಯಾದಿ ಪ್ರವೀಣಕುಮಾರ ತಂದೆ ಶಂಕರ ಜಾಧವ ವಯ: 26 ವರ್ಷ, ಜಾತಿ: ಲಮಾಣಿ, ಸಾ: ಥಾವರು ನಾಯಕ ತಾಂಡಾ, ಹಸ್ಸಿಕೇರಾ ರವರ ಮತ್ತು ತನ್ನ ಚಿಕ್ಕಪ್ಪನ ಮಗನಾದ ಪ್ರಶಾಂತ ತಂದೆ ರಾಮರಾವ ಜಾಧವ ಇಬ್ಬರು ಕೂಡಿಕೊಂಡು ತನ್ನ ಹೊಂಡಾ ಶೈನ್ ಮೋಟಾರ ಸೈಕಲ್ ನಂ. ಎಂ.ಹೆಚ್-26/ಬಿ.ಪಿ- 6656 ನೇದರ ಮೇಲೆ ತಮ್ಮ ಖಾಸಗಿ ಕೆಲಸ ಕುರಿತು ತಮ್ಮ ತಾಂಡಾದಿಂದ ತೋರಣಾ ಗ್ರಾಮಕ್ಕೆ ಹೋಗುತ್ತಿರುವಾಗ ಮುಧೋಳ(ಬಿ) ಗ್ರಾಮದ ಎಸ್.ಬಿ.ಐ ಬ್ಯಾಂಕ್ ಹತ್ತಿರ ಹೋದಾಗ ಎದುರಿನಿಂದ ಕಾರ್ ನಂ. ಕೆಎ-53/ಎಮ್.ಎ-7438 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತೀ ವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಬಲಗಡೆ ಕಣ್ಣಿನ ಹುಬ್ಬಿನ ಮೇಲೆ ರಕ್ತಗಾಯ, ಬಲಗೈ ಭುಜಕ್ಕೆ, ಬಲಗೈ ಮತ್ತು ಎಡಗೈ ಮೊಣಕೈಗೆ ತರಚಿದ ಗಾಯ, ಸೊಂಟಕ್ಕೆ ಗುಪ್ತಗಾಯ, ಬಲಗಾಲಿನ ಮೊಣಕಾಲಿನ ಕೆಳಗೆ, ಎಡಗಾಲಿನ ಪಾದದ ಮೇಲೆ ತರಚಿದ ಗಾಯವಾಗಿರುತ್ತದೆ ಮತ್ತು ಪ್ರಶಾಂತನಿಗೆ ಬಲಗಾಲಿನ ಮೊಣಕಾಲಿನ ಕೆಳಗೆ ಪಿಂಡರಿ ಹತ್ತಿರ ಭಾರಿ ಗುಪ್ತಗಾಯವಾಗಿರುತ್ತದ, ಅಪಘಾತ ಪಡಿಸಿದ ನಂತರ ಆರೋಪಿಯು ತನ್ನ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ನಂತರ ಗಾಯಗೊಂಡ ಇಬ್ಬರಿಗೂ ಬಾಲಾಜಿ ತಂದೆ ಪಂಡರಿ ಪಾಟೀಲ ಇವರು ಖಾಸಗಿ ವಾಹನದಲ್ಲಿ ಔರಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿರುತ್ತಾರೆ, ನಂತರ ಪ್ರಶಾಂತನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಗುರುನಾನಕ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 66/2021, ಕಲಂ. 279, 338 ಐಪಿಸಿ :-
ದಿನಾಂಕ 14-07-2021 ರಂದು ಫಿರ್ಯಾದಿ ಮಲ್ಲಪ್ಪಾ ತಂದೆ ಸಿದ್ದಪ್ಪಾ ಗಣಗೊಂಡ ವಯ: 56 ವರ್ಷ, ಜಾತಿ: ಎಸ್.ಟಿ ಗೊಂಡಾ, ಸಾ: ಮನ್ನಾಏಖೇಳ್ಳಿ, ತಾ: ಚಿಟಗುಪ್ಪಾ, ಜಿ: ಬೀದರ ರವರು ತನ್ನ ಮಗನಾದ ಗಣಪತಿ ಹಾಗೂ ಮನೆಯ ಪಕ್ಕದ ವಿಜಯಕುಮಾರ ಹಾಗೂ ರಾಜಕುಮಾರ ರವರೆಲ್ಲರೂ ಸೇರಿ ಫಿರ್ಯಾದಿಯವರ ಹೊಲಕ್ಕೆ ಹೋಗಿ ಮರಳಿ ಮನೆಗೆ ಬರುತ್ತಿರುವಾಗ ಮೊಟರ ಸೈಕಲ್ ನಂ. ಕೆಎ-39/ಆರ್-6583 ನೇದರ ಮೇಲೆ ಗಣಪತಿ ವÄತ್ತು ವಿಜಯಕುಮಾರ ಬರುತ್ತಿದ್ದು, ಸದರಿ ವಾಹನವನ್ನು ವಿಜಯಕುಮಾರ ತಂದೆ ವಿಠಲ ಉಪ್ಪಾರ ವಯ: 26 ವರ್ಷ, ಜಾತಿ: ಉಪ್ಪಾರ, ಸಾ: ಮನ್ನಾಏಖೇಳ್ಳಿ ಇತನು ಚಲಾಯಿಸುತ್ತಿದ್ದನು ಅವನ ಹಿಂದೆ ಗಣಪತಿ ಕುಳಿತ್ತಿದ್ದು, ಇನ್ನೊಂದು ಮೊಟರ ಸೈಕಲ್ ಮೇಲೆ ಫಿರ್ಯಾದಿ ಮತ್ತು ರಾಜಕುಮಾರ ಇಬ್ಬರು ಬರುತ್ತಿರುವಾಗ ರಾ.ಹೆ ನಂ. 65 ನೇದರ ಮೇಲೆ ತಾಳಮಡಗಿ-ಮಂಗಲಗಿ ಮಧ್ಯದಲ್ಲಿರುವ ಬ್ರೀಡ್ಜ್ ಹತ್ತಿರ ವಿಜಯಕುಮಾರ ಇತನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸುತ್ತಾ ಕಂಟ್ರೋಲ್ ಮಾಡದೇ ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಮೊಟರ ಸೈಕಲ್ ಸ್ಕೀಡಾಗಿ ಇಬ್ಬರೂ ರೋಡಿನ ಮೇಲೆ ಬಿದ್ದರು, ಸದರಿ ಅಪಘಾತದಿಂದ ರೋಡಿನ ಮೇಲೆ ಬಿದ್ದ ಫಿರ್ಯಾದಿಯವರ ಮಗ ಗಣಪತಿ ಇತನಿಗೆ ತಲೆಯ ಮೇಲೆ ಹಿಂದೆ ರಕ್ತಗಾಯ, ಎಡಗಾಲಿನ ಪಾದಕ್ಕೆ ಮತ್ತು ಎರಡು ಬೆಳರುಗಳಿಗೆ ಭಾರಿ ರಕ್ತಗಾಯ ಹಾಗೂ ಎಡಗೈ ಮೊಣಕೈ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ, ಮೊಟರ ಸೈಕಲ್ ಚಲಾಯಿಸುತ್ತಿದ್ದ ವಿಜಯಕುಮಾರ ಇತನಿಗೆ ಯಾವುದೇ ಗಾಯಗಳಾಗಿರುವುದಿಲ್ಲಾ, ನಂತರ ಗಾಯಗೊಂಡ ಮಗನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಮನ್ನಾಏಖೇಳ್ಳಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment