ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 20-07-2021
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 02/2021, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಇಮಾಮ ಶಾ ತಂದೆ ರಹೇಮಾನ ಶಾ ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ: ಮೀನಕೆರಾ ಗ್ರಾಮ, ತಾ: ಚಿಟಗುಪ್ಪಾ, ಜಿ: ಬೀದರ ರವರ ಹಿರಿಯ ಅಣ್ಣನಾದ ಖದೀರ ಶಾ ಇತನಿಗೆ ಸುಮಾರು 18 ವರ್ಷಗಳ ಹಿಂದೆ ಶಮೀನಾ ಬೇಗಂ ಎಂಬುವವಳೊಂದಿಗೆ ಮದುವೆಯಾಗಿದ್ದು, ಅವರಿಗೆ 4 ಜನ ಮಕ್ಕಳಿದ್ದು, ಈಗ ಸುಮಾರು 3 ತಿಂಗಳ ಹಿಂದೆ ಅಣ್ಣನಾದ ಖದೀರ ಇತನ ಹೆಂಡತಿ ಶಮೀನಾ ಬೇಗಂ ಇವಳು ಅನಾರೋಗ್ಯದಿಂದ ಬಳಲಿ ಮೃತಪಟ್ಟಿದ್ದು ಇರುತ್ತದೆ, ತನ್ನ ಹೆಂಡತಿ ಮೃತಪಟ್ಟಾಗಿನಿಂದ ಅಣ್ಣನು ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 19-07-2021 ರಂದು ಅಣ್ಣನು ತಾನು ಕೆಲಸ ಮಾಡುವ ಟೆಂಟ್ ಹೌಸ ಅಂಗಡಿಯಲ್ಲಿ ಆರ್.ಸಿ.ಸಿಯ ಛತ್ತಿಗೆ ಇದ್ದ ಕಬ್ಬಿಣದ ಕೊಂಡಿಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ತನ್ನ ಅಣ್ಣನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 78/2021, ಕಲಂ. 379 ಐಪಿಸಿ :-
ದಿನಾಂಕ 22-06-2021 ರಂದು 2200 ಗಂಟೆಯಿ0ದ ದಿನಾಂಕ 23-06-2021 ರಂದು 0530 ಗಂಟೆಯ ಅವಧಿಯಲ್ಲಿ ನೌಬಾದನಲ್ಲಿರುವ ಫೋರ್ಡ ಷೋರೂಮಿನ ಹಿಂದುಗಡೆ ಫಿರ್ಯಾದಿ ರಾಮ ತಂದೆ ಬಾಲಾಜಿರಾವ ವಾಘಮಾರೆ ಸಾ: ವಳಂಡಿ, ತಾ: ದೇವಣಿ, ಸದ್ಯ: ಶಿವನಗರ(ದ) ಬೀದರ ರವರು ಈ ಮೊದಲು ಬಾಡಿಗೆಯಿಂದ ಇದ್ದ ಮನೆಯ ಮುಂದೆ ನಿಲ್ಲಿಸಿದ ತನ್ನ ಹೊಂಡಾ ಶೈನ ಮೊಟರ ಸೈಕಲ ನಂ. MH-24/BC-4601 ನೇದರ, ಚಾಸಿಸ್ ನಂ. ME4JC65BHJ7097305, ಇಂಜಿನ್ ನಂ. JC65E72280893, ಮಾಡಲ್: 2018, ಬಣ್ಣ: ಕಪ್ಪು ಬಣ್ಣ, ಹಾಗೂ ಅ.ಕಿ 40,000/- ರೂ. ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 83/2021, ಕಲಂ. 379 ಐಪಿಸಿ :-
ದಿನಾಂಕ 18-07-2021 ರಂದು 1730 ಗಂಟೆಯ ಸುಮಾರಿಗೆ ಲಖನಗಾಂವ ಗ್ರಾಮದ ಶಿವಾರದಲ್ಲಿ ಫಿರ್ಯಾದಿ ಮಾಧವ ತಂದೆ ನೀಳಕಂಠರಾವ ಭೊಸಲೆ ವಯ: 46 ವರ್ಷ, ಜಾತಿ: ಮರಾಠಾ, ಸಾ: ಲಾಸೂನಾ, ತಾ: ದೇವಣಿ ರವರ ಸಂಬಂಧಿ ಬಾಳು ಬೋಬಡೆ ರವರ ಹೋಲದ ಹತ್ತಿರ ನಿಲ್ಲಿಸಿದ ತನ್ನ ಮೋಟಾರ ಸೈಕಲ್ ನಂ. ಎಂ.ಎಚ್-24/ಬಿ.ಜೆ-3618, ಅ.ಕಿ 50,000/- ರೂ ನೇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 19-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 84/2021, ಕಲಂ. 379 ಐಪಿಸಿ :-
ದಿನಾಂಕ 18-07-2021 ರಂದು 1830 ಗಂಟೆಯ ಸುಮಾರಿಗೆ ಲಖನಗಾಂವ ಗ್ರಾಮದಲ್ಲಿ ಫಿರ್ಯಾದಿ ಮಹೇಶ ತಂದೆ ಸೂರ್ಯಕಾಂತ ಗೌಂಡಗಾವೆ ಸಾ: ಲಖನಗಾಂವ ರವರು ಮನೆಯ ಮುಂದೆ ನಿಲ್ಲಿಸಿದ ತನ್ನ ಮೋಟಾರ ಸೈಕಲ್ ನಂ. ಎಂ.ಎಚ್-14/ಇ.ಕೆ-3270, ಅ.ಕಿ 40,000/- ರೂ. ನೇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 100/2021, ಕಲಂ. 379 ಐಪಿಸಿ :-
ದಿನಾಂಕ 15-07-2021 ರಂದು ಬೀದರ ಕೆ.ಇ.ಬಿ. ಫಂಕ್ಷನ ಹಾಲ ನಲ್ಲಿ ಫಿರ್ಯಾದಿ ದಿಲೀಪ ಕುಮಾರ ತಂದೆ ನಿವರ್ತಿರಾವ ವಯ: 33 ವರ್ಷ, ಜಾತಿ: ಗೊಂಡ, ಸಾ: ಚಾಂದೋರಿ ಗ್ರಾಮ, ತಾ: ಕಮಲನಗರ ರವರು ತಮ್ಮ ಸಂಬಂಧಿಕರ ಮದುವೆ ಇದ್ದ ಕಾರಣ ಫಿರ್ಯಾದಿಯು ಬೀದರಗೆ ತಮ್ಮ ಭಾವ ನವರ ಫ್ಯಾಶನ್ ಪ್ರೋ ಮೋಟಾರ ಸೈಕಲ ನಂ. MH-24/S-7476 ನೇದರ ಮೇಲೆ ಬಂದು ಸದರಿ ಮೋಟಾರ್ ಸೈಕಲನ್ನು ಬೀದರ ಕೆ.ಇ.ಬಿ ಫಂಕ್ಷನ ಹಾಲ ಎದುರಗಡೆ ನಿಲ್ಲಿಸಿ ಮದುವೆ ಕಾರ್ಯಕ್ರಮಕ್ಕೆ ಹಾಜರಾಗಲು ಫಂಕ್ಷನ ಹಾಲ್ ಒಳಗಡೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ಬಂದು ನೊಡಲಾಗಿ ತನ್ನ ವಾಹನ ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ, ಗಾಬರಿಗೊಂಡು ಅಕ್ಕಪಕ್ಕದ ಜನರಿಗೆ ವಿಚಾರಿಸಲಾಗಿ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ, ಫಿರ್ಯಾದಿಯವರ 1) MH-24/S-7476, Chessis No. MBLHA10ER9GE09589, Engine No. HA10EED9GE20641, Model-2009, Color: Blue/Black, ಅ.ಕಿ 30,000/- ರೂ. ನೇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 101/2021, ಕಲಂ. 454, 457, 380 ಐಪಿಸಿ :-
ದಿನಾಂಕ 05-07-2021 ರಂದು 2200 ಗಂಟೆಯಿಂದ ದಿನಾಂಕ 06-07-2021 ರಂದು 1130 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಶಿವಲಿಂಗಯ್ಯಾ ತಂದೆ ಸಂಗಯ್ಯಾ ಸ್ವಾಮಿ ವಯ: 40 ವರ್ಷ, ಜಾತಿ: ಸ್ವಾಮಿ, ಸಾ: 11 ನೇ ಕ್ರಾಸ್, ಭವಾನಿ ಮಂದಿರದ ಹಿಂದುಗಡೆ ವಿದ್ಯಾನಗರ ಬೀದರ ರವರ ಮನೆಗೆ ಹಾಕಿದ ಬೀಗಗಳನ್ನು ಮುರಿದು ಮನೆಯಲ್ಲಿ ಪ್ರವೇಶ ಮಾಡಿ ಮನೆಯಲ್ಲಿದ್ದ ಅಲಮಾರಾದ ಬೀಗವನ್ನು ಮುರಿದು ಅಲಮಾರಾದಲ್ಲಿದ್ದ 1) 5 ಗ್ರಾಂ ಬಂಗಾರದ ಎರಡು ಉಂಗುರಗಳು ಅ.ಕಿ 40,000/- ರೂ., 2) ಬೆಳ್ಳಿಯ ಕಾಲು ಚೈನ್ಗಳು, ಬೆಳ್ಳಿಯ ಹಾಲಗಡಗ, ಬೆಳ್ಳಿಯ ನಾಣ್ಯಗಳು ಹೀಗೆ ಒಟ್ಟು 250 ಗ್ರಾಂ. ಬೆಳ್ಳಿಯ ಆಭರಣಗಳು ಅ.ಕಿ 15,000/- ರೂ ಮತ್ತು 3) ನಗದು ಹಣ 20,000/- ರೂ. ಹೀಗೆ ಒಟ್ಟು 75,000/- ರೂ. ಬೆಲೆವುಳ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 19-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 44/2021, ಕಲಂ. 20 (ಬಿ) ಎನ್.ಡಿ.ಪಿ.ಎಸ್ ಕಾಯ್ದೆ :-
ದಿನಾಂಕ 19-07-2021 ರಂದು ಬೀದರ ಮಾರ್ಕೆಟ ಪೊಲೀಸ್ ಠಾಣಾ ವ್ಯಾಪ್ತಿಯಾದ ಕನನ ಕಾಲೋನಿಯಲ್ಲಿ ಕೆಲವು ಜನರು ಅನಧಿಕೃತವಾಗಿ ಗಾಂಜಾ ಸಾಗಿಸುತ್ತಿದ್ದಾರೆಂದು ಪಾಲಾಕ್ಷಯ್ಯ ಸಿಪಿಐ ನಗರ ವೃತ್ತ ಬೀದರ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ, ದಾಳಿ ಮಾಡುವ ಕುರಿತು ಇಬ್ಬರು ಪಂಚರು, ಪತ್ರಾಂಕಿಂತ ಅಧಿಕಾರಿ ಮತ್ತು ತೂಕ ಮಾಡುವ ವ್ಯಕ್ತಿ ಇವರಿಗೆ ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಸ್ಥಳಕ್ಕೆ ತಲುಪಿ ಮರೆಯಾಗಿ ನಿಂತು ನೋಡಲಾಗಿ, ಒಂದು ಮನೆಯ ಮುಂದೆ ಖುಲ್ಲಾ ಜಾಗೆಯಲ್ಲಿ 1) ಒಂದು ಸ್ಕಾರ್ಪಿಯೊ ಕಾರ, 2) ಒಂದು ಫೋಡರ್ ಕಾರ್ ಹಾಗೂ 3) ಒಂದು ಆಟೋ ನಿಂತಿದ್ದು ಅವುಗಳಲ್ಲಿ 4-5 ಜನ ಕುಳಿತ್ತಿದ್ದು ನೋಡಿ ಖಚಿತ ಪಡಿಸಿಕೊಂಡು ಸದರಿ ಜನರ ಮೇಲೆ ದಾಳಿ ಮಾಡಿದಾಗ ಕಾರಿನಲ್ಲಿ ಕುಳಿತ ಇಬ್ಬರು ಹಾಗೂ ಆಟೋದಲ್ಲಿ ಕುಳಿತ ಇಬ್ಬರು ವ್ಯಕ್ತಿಗಳು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ತಪಿ್ಪಸಿಕೊಂಡು ಓಡಿ ಹೋಗಿದ್ದು, ನಂತರ ಸ್ಕಾರ್ಪಿಯೊದಲ್ಲಿ ಕುಳಿತ ಒಬ್ಬ ವ್ಯಕ್ತಿಗೆ ಹಿಡಿದುಕೊಂಡು ಹೆಸರು ವಿಚಾರಿಸಲಾಗಿ ಅವನು ತನ್ನ ಹೆಸರು ಮಹ್ಮದ ಅರೀಫ ತಂzೆ ಮಹ್ಮದ ಖಾಸೀಮ ಶೇಕ ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ಕನನ ಕಾಲೋನಿ ಬೀದರ ಅಂತಾ ತಿಳಿಸಿರುತ್ತಾನೆ, ನಂತರ ಓಡಿ ಹೋದವರ ಹೆಸರು ವಿಚಾರಿಸಲಾಗಿ 1) ಸಮೀgÀ ತಂದೆ ಮಹ್ಮದ ಖಾಸೀಮ ವಯ: 20 ವರ್ಷ, ಜಾತಿ: ಮುಸ್ಲಿಂ, ಸಾ: ಕನನ ಕಾಲೋನಿ ಬೀದರ, 2) ಮಹ್ಮದ ಖಾಸೀಮ ತಂದೆ ಅಮೀನೋದ್ದಿನ ವಯ: 50 ವರ್ಷ, ಜಾತಿ: ಮುಸ್ಲಿಂ, ಸಾ: ಕನನ ಕಾಲೋನಿ ಬೀದರ, 3) ಅಸದ ತಂದೆ ಇಸ್ಮಾಯಿಲ್ ಗಾಡಿವಾಲೆ ವಯ: 30 ವರ್ಷ, ಜಾತಿ: ಮುಸ್ಲಿಂ, ಸಾ: ಔದಪುರ ಗ್ರಾಮ ನಾಗಲಗಿದ್ದಿ ಪೊಲೀಸ್ ಠಾಣೆ ವ್ಯಾಪ್ತಿ, 4) ಪ್ರೇಮಸಿಂಗ್ ಸಾ: ಜಮಗಿ ತಾಂಡಾ, ಮೇಗಾ ತಾಂಡಾ, ತಾ: ಔರಾದ ಇವರು ಇರುತ್ತಾರೆಂದು ಹೇಳಿ, ನಾವು ಎಲ್ಲರೂ ಕೂಡಿ ಗಾಂಜಾವನ್ನು ಅನಧಿಕೃತವಾಗಿ ಸಂಗ್ರಹಿಸಿ ಮಾರಾಟ ಮಾಡುವ ಉದ್ದೇಶದಿಂದ ಈ ವಾಹನದಲ್ಲಿಟ್ಟಿರುತ್ತೇವೆಂದು ತಿಳಿಸಿರುತ್ತಾನೆ, ನಂತರ ಪತ್ರಾಂಕಿತ ಅಧಿಕಾರಿ ರವರು ಪಂಚರ ಸಮಕ್ಷಮ ಸದರಿ ವ್ಯಕ್ತಿಯ ಅಂಗ ಶೋಧನೆ ಮಾಡಲಾಗಿ, ಆತನ ಪ್ಯಾಂಟಿನ ಜೇಬಿನಲ್ಲಿದ್ದ 600/- ರೂ ನಗದು ಹಣ ಹಾಗೂ ಸ್ಕಾರ್ಪಿಯೊ ಕಾರಿನಲ್ಲಿದ್ದ ತನ್ನ ಒಂದು ರಿಯಲ್ ಮೀ ಮೊಬೈಲ್ ಅ.ಕಿ 2000/- ರೂ. ನೇದವುಗಳನ್ನು ತಾಬೆಗೆ ತೆಗೆದುಕೊಂಡು ಸದರಿ ವ್ಯಕ್ತಿಗೆ ಸ್ಕಾರ್ಪಿಂiೆÆ ಕಾರಿನಲ್ಲಿ ಏನಿದೆ ಎಂದು ವಿಚಾರಿಸಲಾಗಿ ಅವನು ಇದರಲ್ಲಿ ಗಾಂಜಾ ಇರುವ ಬಗ್ಗೆ ತಿಳಿಸಿದ ಮೇರೆಗೆ ಸ್ಕಾರ್ಪಿಯೋ ವಾಹನದಲ್ಲಿರುವ ಚೀಲಗಳನ್ನು ನೋಡಲಾಗಿ ನಾಲ್ಕು ಪ್ಲಾಸ್ಟಿಕ ಚೀಲಗಳು ಅದರಲ್ಲಿ ಒಟ್ಟು 72 ಪ್ಲಾಸ್ಟಿಕ ಟೇಪದಿಂದ ಸುತ್ತಿದ್ದ ಪಾಕೇಟಗಳಿದ್ದು ಅವುಗಳನ್ನು ತೂಕ ಮಾಡಿ ನೋಡಲಾಗಿ 1) 22 ಗ್ರಾಂ ತೂಕವುಳ್ಳ 56 ಗಾಂಜಾ ತುಂಬಿzÀ ಪಾಕೇಟಗಳು, 1 ಕ್ವಿಂಟಲ್ 23 ಕೆ.ಜಿ 200 ಗ್ರಾಂ ಗಾಂಜಾ, 2) 22.50 ಗ್ರಾಂ ತೂಕವುಳ್ಳ 10 ಗಾಂಜಾ ತುಂಬಿದ ಪಾಕೇಟಗಳು, 22 ಕೆ.ಜಿ 500 ಗ್ರಾಂ ಗಾಂಜಾ, 3) 21.50 ಗ್ರಾಂ ತೂಕವುಳ್ಳ 5 ಗಾಂಜಾ ತುಂಬಿದ ಪಾಕೇಟಗಳು, 10 ಕೆ.ಜಿ 750 ಗ್ರಾಂ ಗಾಂಜಾ ಹಾಗೂ 4) 2400 ಗ್ರಾಂ ತೂಕವುಳ್ಳ 1 ಗಾಂಜಾ ತುಂಬಿದ ಪಾಕೇಟ, ಹೀಗೆ ಒಟ್ಟು 1 ಕ್ವಿಂಟಲ್ 58 ಕೆ.ಜಿ 850 ಗ್ರಾಂ ಗಾಂಜಾ ಇದ್ದು 1 ಕೆ.ಜಿ. ಗಾಂಜಾ ಅ.ಕಿ 2000/- ರೂಪಾಯಿಯಂತೆ ಒಟ್ಟು ಗಾಂಜಾದ ಅ.ಕಿ 3,17,700/- ರೂ ಆಗುತ್ತದೆ, ಸದರಿ ಗಾಂಜಾವನ್ನು ವಶಕ್ಕೆ ತೆಗೆದುಕೊಂಡು ನಂತರ ಸ್ಕಾರ್ಪಿಯೊ ಕಾರನ್ನು ಪರಿಶೀಲಿಸಲಾಗಿ ಅದು ಒಂದು ಕಪ್ಪು ಬಣ್ಣದ್ದು ನಂ. ಎಪಿ-21/ಎಲ್-0003 ಅ.ಕಿ 3,00,000/- ರೂ ಹಾಗೂ ಅಲ್ಲೆ ನಿಂತ ಇನ್ನೊಂದು ಕಾರ ಫೋರ್ಡ ನಂ. ಎಪಿ-15/ಎಇ-1414 ಅ.ಕಿ 2,00,000/- ರೂ ಇರುತ್ತದೆ ಹಾಗೂ ಆಟೋ ನಂ. ಕೆ.ಎ-38/5725 ಅ.ಕಿ 75,000/- ರೂ ಇರÄತ್ತದೆ, ಸದರಿ ಮೂರು ವಾಹನಗಳನ್ನು ತಾಬೆಗೆ ತೆಗೆದುಕೊಂಡು, ಆರೋಪಿಗೆ ವಶಕ್ಕೆ ತೆಗೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 45/2021, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 19-07-2021 ರಂದು ಗದಲೇಗಾಂವ ಬಿ ಗ್ರಾಮದ ಗಣೇಶ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಎಂಬ ನಸೀಬಿನ ನಂಬರಗಳು ಬರೆದುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 90/- ರೂಪಾಯಿ ಕೊಡುವುದಾಗಿ ಹೇಳಿ ಮಟಕಾ ಬರೆದುಕೊಳ್ಳುತ್ತಿದ್ದಾನೆಂದು ಬಸಲಿಂಗಪ್ಪ ಪಿಎಸ್ಐ ಮುಡಬಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಗದಲೇಗಾಂವ ಬಿ ಗ್ರಾಮದಲ್ಲಿನ ಗಣೇಶ ಚೌಕ ಹತ್ತಿರ ಹೋಗಿ ಪಂಡಿತರಾಯ ಪೊಲೀಸ ಪಾಟೀಲ ಇವರ ಮನೆಯ ಹತ್ತಿರ ಮರೆಯಾಗಿ ನಿಂತು ನೋಡಲು ಸುಂಠಾಣ ಸಿಸಿ ರೋಡಿನ ಮೇಲೆ ಆರೋಪಿ ಬಾಲಾಜಿ ತಂದೆ ಬಾಬುರೆಡ್ಡಿ ಬಾಕಾರೆ ವಯ: 40 ವರ್ಷ, ಜಾತಿ: ರೆಡ್ಡಿ, ಸಾ: ಗದಲೇಗಾಂವ ಬಿ, ತಾ: ಬಸವಕಲ್ಯಾಣ ಇತನು ಸಾರ್ವಜನಿಕರಿಗೆ ಕೂಗುತ್ತಾ ಮಟಕಾ ನಂಬರಗಳು ಬರೆಯಿಸಿರಿ 01/- ರೂಪಯಿಗೆ 90/- ರೂಪಾಯಿ ಪಡೆಯಿರಿ ಅಂತ ಕೂಗಾಡುತ್ತಿದ್ದು ಕಂಡು ಪಿಎಸ್ಐ ರವರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಆತನ ಅಂಗ ಜಡ್ತಿ ಮಾಡಲು ಅವನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದ 1) 2850/- ರೂಪಾಯಿ ನಗದು ಹಣ, 2) ಒಂದು ಬಾಲ್ ಪೆನ್ನು ಹಾಗೂ 3) ಎರಡು ಚೀಟಿಗಳು ಸಿಕ್ಕಿದ್ದು, ನೇದವುಗಳನ್ನು ವಶಪಡಿಸಿಕೊಂಡು, ಸರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 122/2021, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 19-07-2021 ರಂದು
ಬಸವನಗರ ಕಲವಾಡಿ ಗ್ರಾಮದ ಅಮೀತ ತಂದೆ ಆನಂದರಾವ ಪರಶಣ್ಣೆ ಇವನು ತನ್ನ ಆಯುಷ ಹೋಟೆಲದಲ್ಲಿ ಅಕ್ರಮವಾಗಿ
ಮಧ್ಯ ಸಂಗ್ರಹಿಸಿಟ್ಟು ಮಾರಾಟ ಮಾಡುತ್ತಿದ್ದಾನೆಂದು ಟಿ.ಆರ್ ರಾಘವೆಂದ್ರ ಪಿ.ಐ ಭಾಲ್ಕಿ ನಗರ
ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು,
ತಮ್ಮ ಸಿಬ್ಬಂದಿಯವರೊಡನೆ ಬಸವ ನಗರ ಕಲವಾಡಿ ಗ್ರಾಮಕ್ಕೆ ಹೋಗಿ ಅಮೀತ ತಂದೆ ಆನಂದರಾವ ಪರಶಣ್ಣೆ
ಇವನ ಹೋಟೆಲದಿಂದ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಅಂಗಡಿಯಲ್ಲಿ ಮಧ್ಯ ಮಾರಾಟ ಮಾಡುವದನ್ನು
ನೋಡಿ ಪಂಚರ ಸಮಕ್ಷಮ ಸಮೂಚಿತ ಶೋದನಾ ಪತ್ರವನ್ನು ತಯಾರಿಸಿ ಆರೋಪಿ ಅಮೀತ ತಂದೆ ಆನಂದರಾವ ಪರಶಣ್ಣೆ
ವಯ: 28
ವರ್ಷ, ಜಾತಿ:
ಲಿಂಗಾಯತ, ಸಾ: ಬಸವ ನಗರ ಕಲವಾಡಿ ಇತನ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ವಶದಲ್ಲಿರುವ
ಕಾಟನಗಳನ್ನು ಪರಿಶೀಲಿಸಿ ನೋಡಲು ಅದರಲ್ಲಿ 1) ಯು.ಎಸ್
ವಿಸ್ಕಿ 90
ಎಮ.ಎಲ್
ವುಳ್ಳ 16
ಪೇಟ್
ಬಾಟಲಗಳು ಅ.ಕಿ 562.08 ರೂ., 2) ಒರಿಜಿನಲ್ ಚಾಯ್ಸ 90 ಎಂ.ಎಲ್ ವುಳ್ಳ 10 ಪೌಚಗಳು
ಅ.ಕಿ 351.03 ರೂ., 3) ಇಂಪೀರಿಯಲ್ ಬ್ಲು ಗ್ರೇನ ವಿಸ್ಕಿ 180 ಎಂ.ಎಲ್
ವುಳ್ಳ ಒಂದು ಬಾಟಲ ಅ.ಕಿ 198.25 ರೂ., 4) ಮೇಕಡೊಲ್ಸ ವಿಸ್ಕಿ 180 ಎಂ.ಎಲ ವುಳ್ಳ ಒಂದು ಬಾಟಲ ಅ.ಕಿ 198.23 ರೂ., 5) ಓಲ್ಡ ಟಾವರಿನ ವಿಸ್ಕಿ 180 ಎಂ.ಎಲ ವುಳ್ಳ 2 ಪೌಚಗಳು ಅ.ಕಿ
173.50 ರೂ., 6) ಆಪೀಸರ್ ಚಾಯ್ಸ 180 ಎಂ.ಎಲ್ ವುಳ್ಳ 3 ಅ.ಕಿ 318.69 ರೂ., 7) ಬ್ಯಾಗ ಪೇಪರ ಡೀಲಕ್ಸ ವಿಸ್ಕಿ 180 ಎಂ.ಎಲ
ವುಳ್ಳ 3
ಅ.ಕಿ 318.69 ರೂ., 8) ನಗದು ಹಣ
300/- ರೂಪಾಯಿ
ಮತ್ತು ಎಲ್ಲ ಮದ್ಯದ ಒಟ್ಟು ಬೇಲೆ 2120.74 ರೂಪಾಯಿ
ಬೆಲೆವುಳ್ಳ ಬಾಟಲಗಳನ್ನು ಮತ್ತು ಪೌಚಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ
ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment