Police Bhavan Kalaburagi

Police Bhavan Kalaburagi

Friday, July 23, 2021

BIDAR DISTRICT DAILY CRIME UPDATE 23-07-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 23-07-2021

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 12/2021, ಕಲಂ. 174 ಸಿ.ಆರ್.ಪಿ.ಸಿ :-

ಬಸವಕಲ್ಯಾಣ ನಗರದ ಸದಾನಂದ ಮಠದ ಮುಖ್ಯ ದ್ವಾರದಲ್ಲಿ ಸುಮಾರು 6 ತಿಂಗಳಿಂದ ಒಬ್ಬ ಅಪರಿಚಿತ  ವ್ಯಕ್ತಿ ಬಸವಕಲ್ಯಾಣದಲ್ಲಿ ಬಿಕ್ಷೆ ಬೇಡುತ್ತಾ ರಾತ್ರಿ ಹೋತ್ತಿನಲ್ಲಿ ಸದಾನಂದ ಮಠದಲ್ಲಿ ಬಂದು ಮಲಗುತ್ತಿದ್ದನು, ಹೀಗಿರುವಾಗ ದಿನಾಂಕ 22-07-2021 ರಂದು 0600 ಗಂಟೆಯಿಂದ 0700 ಗಂಟೆಯ ಮದ್ಯದ ಅವಧಿಯಲ್ಲಿ ಸದರಿ ವ್ಯಕ್ತಿ ಮಳೆಯಲ್ಲಿ ನೇನೆದು ಮೃತಪಟ್ಟಿರುತ್ತಾನೆ, ಅವನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಅಂತ ಫಿರ್ಯಾದಿ ರಾಜಶೇಖರ ತಂದೆ ಮೋಹನರಾವ ಕ್ಷಿರಾಸಾಗರ ವಯ: 46 ವರ್ಷ, ಜಾತಿ: ಮರಾಠಾ, ಸಾ: ಹಳ್ಳದಕೇರಿ ಬೀದರ, ಸದ್ಯ: ತಹಸೀಲ್ ಕಛೇರಿ ಬಸವಕಲ್ಯಾಣ ರವರು ನೀಡಿದ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 102/2021, ಕಲಂ. 379 ಐಪಿಸಿ :-

ದಿನಾಂಕ 09-07-2021 ರಂದು ಫಿರ್ಯಾದಿ ಮಾರುತಿ ತಂದೆ ಶಂಕರರಾವ ವಯ: 35 ವರ್ಷ, ಜಾತಿ: ಮುನ್ನು ರೆಡ್ಡಿ, ಸಾ: ಚಿಟ್ಟಾ ಗ್ರಾಮ, ತಾ: & ಜಿ: ಬೀದರ ರವರು ತನ್ನ ದಿನನಿತ್ಯದ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಮೋಟಾರ ಸೈ ನಂ. TS-09/FJ-7553, Engine No. Chassis No. MD2A11CY2KCG50763, ಮಾದರಿ 2019, ಬಣ್ಣ: ಕೆಂಪು/ಕಪ್ಪು ಬಣ್ಣದು ಹಾಗೂ ಅ.ಕಿ 75,000/- ರೂ. ನೇದನ್ನು ಚಿಟ್ಟಾ ಗ್ರಾಮದ ನ್ನ ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಹೊಗಿ ಊಟ ಮಾಡಿ ಮಲಗಿ ಮರುದಿವಸ ದಿನಾಂಕ 10-07-2021 ರಂದು 0500 ಗಂಟೆಗೆ ಮನೆ ಹೊರಗಡೆ ಬಂದು ನೊಡಲಾಗಿ ವಾಹನ ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ, ಗಾಬರಿಗೊಂಡು ಅಕ್ಕಪಕ್ಕದ ಜನರಿಗೆ ಹಾಗು ಚಿಟ್ಟಾ ಗ್ರಾಮದ ಪರಿಚಿತ ಜನರಿಗೆ ವಿಚಾರಿಸಲು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ, ಸದರಿ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 22-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 124/2021, ಕಲಂ. 366(ಎ) ಐಪಿಸಿ :-

ದಿನಾಂಕ 21-07-2021 ರಂದು 1500 ಗಂಟೆಗೆ ಫಿರ್ಯಾದಿ ಸಂಜಯ ಲಾಲಾ ತಂದೆ ಬಾಬು ಲಾಲಾ ವಯ: 45 ವರ್ಷ, ಜಾತಿ: ರಾಜಪುತ, ಸಾ: ಮುಗನೂರ, ಸದ್ಯ: ಮಾಣಿಕನಗರ, ತಾ: ಹುಮನಾಬಾದ ರವರು ಮನೆಯಲ್ಲಿರುವಾ  ಮಗಳಾದ ಶ್ರಧ್ದಾ ವಯ 16 ವರ್ಷ, ಇವಳು ಶೌಚಾಲಯಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು 1900 ಗಂಟೆಯದಾದರೂ ಮನೆಗೆ ಬರದೇ ಇದ್ದಾಗ ಫಿರ್ಯಾದಿಯು ಗಾಬರಿಯಾಗಿ ಊರಲ್ಲಿ ಶ್ರಧ್ಧಾ ಇವಳ ಗೆಳತಿಯರಿಗೆ ಹಾಗೂ ಮ್ಮ ಸಂಬಂಧಿಕರಿಗೆ ವಿಚಾರಿಸಲು ಶ್ರಧಾ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ಮಗಳು ಶ್ರಧ್ಧಾ ಇವಳಿಗೆ ಮಾಣಿಕನಗರ ಗ್ರಾಮದ ಪ್ರಶಾಂತ ತಂದೆ ಬಾಬುರಾವ ಗುತ್ತೆದಾರ ಇವನು ಅಪಹರಿಸಿಕೊಂಡು ಹೋಗಿರಬಹುದೆಂದು ಅಂತಾ ಸಂಶಯ ಇರುತ್ತದೆ, ಶ್ರಧ್ದಾ ಇವಳ ಚಹರೆ ಪಟ್ಟಿ 1) ದುಂಡು ಮುಖ, ಗೋಧಿ ಬಿಳಪು ಮೈ ಬಣ್ಣ, ಎತ್ತರ: 5 ಅಡಿ ಎತ್ತರ, ಮಾತಾಡುವ ಭಾಷೆ: ಕನ್ನಡ, ಹಿಂದಿ, ಧರಿಸಿರುವ ಉಡಪು: ಹಸಿರು ಬಣ್ಣದ ಟಾಪ ಒಳಗಡೆ ಗುಲಾಬಿ ಬಣ್ಣದ ಡಿಜೈನ ಇರುತ್ತದೆ, ಹಸಿರು ಬಣ್ಣದ ಪ್ಯಾಂಟ ಧರಿಸಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 22-07-2021 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 89/2021, ಕಲಂ. 279, 338 ಐಪಿಸಿ :-

ದಿನಾಂಕ 22-07-2021 ರಂದು ಫಿರ್ಯಾದಿ ಸಂದೀಪ @ ರಾಜು ತಂದೆ ಗೋವಿಂದ ಕಿವಂಡೆ ಸಾ: ಡೋಣಗಾಪೂರ, ತಾ: ಭಾಲ್ಕಿ ರವರು ತಮ್ಮ ಸಂಬಂಧಿ ಮೀಲಿಂದ ತಂದೆ ವೈಜಿನಾಥ ಕಿವಂಡೆ ಗ್ರಾಮ ಡೋಣಗಾಪೂರ ಇಬ್ಬರು ಮೋಟಾರ ಸೈಕಲ್ ನಂ. ಕೆಎ-39/ಕೆ-6928 ನೇದರ ಮೇಲೆ ಡೋಣಗಾಪೂರದಿಂದ ಭಾಲ್ಕಿಗೆ ಸೆಟ್ರಿಂಗ ಕೆಲಸ ಮಾಡಲು ಹೋಗುತ್ತಿರುವಾಗ ಭಾಲ್ಕಿ-ಡೊಣಗಾಪೂರ ರೋಡಿನ ಮೇಲೆ ಹುಗಾರ ರವರ ಹೊಲದ ಹತ್ತಿರ ಎದುರುಗಡೆಯಿಂದ ಅಂದರೆ ಭಾಲ್ಕಿ ಕಡೆಯಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಂ. ಕೆಎ-38/ಎಫ್-1054 ನೇದರ ಚಾಲಕನಾದ ಆರೋಪಿ ಅಂಬರೀಷ ಭಾತಂಬ್ರಾ ಇತನು ಸದರಿ ಬಸ್ಸನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಅಪಘಾತ ಪಡಿಸಿದ್ದರಿಂದ ಫಿರ್ಯಾದಿಯ ಬಲಗಾಲ ತೊಡೆಗೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ, ಬಲಗೈ ತೋರ ಬೆರಳಿಗೆ ಮತ್ತು ಉಂಗುರ ಬೆರಳಿಗೆ ರಕ್ತಗಾಯ, ಬಲಗಾಲ ಮೋಳಕಾಲ ಕೆಳಗೆ ರಕ್ತಗಾಯ, ಎಡಗಣ್ಣಿನ ಮೇಲೆ ರಕ್ತಗಾಯವಾಗಿರುತ್ತದೆ ಮತ್ತು ಮೀಲಿಂದ ಇವರ ಎಡಗಣ್ಣಿನ ಮೇಲೆ ರಕ್ತಗಾಯ, ತಲೆಯಲ್ಲಿ ಗುಪ್ತಗಾಯ, ಬಲಗಾಲ ಮೋಳಕಾಲ ಕೆಳಗೆ ಎರಡು ಭಾಗದಲ್ಲಿ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ, ಬಲಗಾಲ ತೋಡೆಗೆ ಭಾರಿ ಗುಪ್ತಗಾಯ, ಬಲಗೈ ಮೋಳಕೈಗೆ ಭಾರಿ ರಕ್ತಗಾಯವಾಗಿರುತ್ತದೆ, ಅದೇ ವೇಳೆಗೆ ಸಲೀಮ ತಂದೆ ಮಕ್ಸುದ್ದಿನ, ತಾತೇರಾವ ತಂದೆ ಶಾಮರಾವ ಕಾಂಬಳೆ, ಶಿವಕಾಂತ ತಂದೆ ಮಾರುತಿ ದಂಡೆ ರವರು ಬಂದು ಗಾಯಗೋಂಡ ಇಬ್ಬರಿಗೂ ನೋಡಿ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಭಾಲ್ಕಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ  ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: