ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 27-07-2021
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 82/2021, ಕಲಂ. 394 ಐಪಿಸಿ :-
ಫಿರ್ಯಾದಿ ರಾಕೇಶಕುಮಾರ ತಂದೆ ಶ್ರೀಮೊಹನ ಚೌಧರಿ ವಯ: 49 ವರ್ಷ, ಜಾತಿ: ಚೌಧರಿ, ಸಾ: ಮುಜಫ್ಫರಪುರ ಬಿಹಾರ, ಸಧ್ಯ: ಆರ.ಟಿ.ಓ ಕಛೇರಿಯ ಹತ್ತಿರ ನ್ಯೂ ಕೆ.ಎಚ.ಬಿ. ಕಾಲೋನಿ ಮಾಧವನಗರ ಬೀದರ ರವರು ಸುಮಾರು 4 ವರ್ಷಗಳಿಂದ ಕೊಳಾರ ಕೈಗಾರಿಕಾ ಪ್ರದೇಶದಲ್ಲಿದ್ದ ಬಾಲಾಜಿ ಸೇಲ್ಸ್ ಕಾರ್ಪೊರೆಶನದÀಲ್ಲಿ ಕ್ಯಾಶಿಯರ ಅಂತ ಕೆಲಸ ಮಾಡಿಕೊಂಡಿದ್ದು, ಬಾಲಾಜಿ ಸೇಲ್ಸ್ ಕಾರ್ಪೊರೆಶನದಲ್ಲಿ ಅಂಬರ ಖೈನಿ ಹೆಸರಿನ ಖೈನಿಯನ್ನು ಅಹ್ಮದಾಬಾದದಿಂದ ತರಿಸಿಕೊಂಡು ಅದನ್ನು ಬೀದರ ನಗರದಲ್ಲಿ ಮಾರಾಟ ಮಾಡಿದ ಅಂಗಡಿಗಳಿಂದ ದಿನಾಲು ಹಣ ವಸೂಲಿ ಮಾಡಿಕೊಂಡು ಕಂಪನಿಗೆ ಬಂದು ಸದರಿ ಹಣವನ್ನು ನೋಟುಗಳನ್ನು ಬೇರೆ ಬೇರೆಯಾಗಿ ಮಾಡಿ ಮರು ದಿವಸ ಐಡಿಬಿಐ ಬ್ಯಾಂಕ ಬೀದರನಲ್ಲಿ ಕಂಪನಿಯ ಖಾತೆಯಲ್ಲಿ ಜಮಾ ಮಾಡುತ್ತಿರುತ್ತಾರೆ, ಹೀಗಿರುವಾಗ ದಿನಾಂಕ 26-07-2021 ರಂದು ಫಿರ್ಯಾದಿ ಸದರಿ ಕಂಪನಿಯಲ್ಲಿ ಕೆಲಸ ಮಾಡುವ ಗೋಪಾಲ ಇಬ್ಬರೂ ಸೇರಿಕೊಂಡು 1130 ಗಂಟೆಗೆ ಐಡಿಬಿಐ ಬ್ಯಾಂಕಿಗೆ ಬಂದು ಬ್ಯಾಂಕಿನಲ್ಲಿ ಹಣ ಜಮಾ ಮಾಡಿ, ನಂತರ ಬೀದರ ನಗರದ ಪವನ ಛಾಲಿಯಾ ಗುಂಪಾ ಇವರಿಂದ 2,30,204/- ರೂ., ಸಾಯಿ ಛಾಲಿಯಾ ಬಿ.ವಿ.ಬಿ. ಕಾಲೇಜ ರೋಡ ಇವರಿಂದ 4,20,950/- ರೂಪಾಯಿಗಳು, ರಾಯಲ ಛಾಲಿಯಾ ಸ್ಟೋರ ಚೌಬಾರಾ ರಸ್ತೆ ಇವರ ಅಂಗಡಿಯಿಂದ 50,515/- ರೂ. ಮತ್ತು ನ್ಯೂ ಅಮರ ಛಾಲಿಯಾ ಸ್ಟೋರ ಖಾದಿ ಭಂಡಾರ ಸರಕಾರಿ ಆಸ್ಪತ್ರೆಯ ಹತ್ತಿರ ಬೀದರ ಇವರಿಂದ 7,16,648/- ರೂ. ಹೀಗೆ ಒಟ್ಟು ಅಂದಾಜು 14,18,000/- ರೂಪಾಯಿಗಳನ್ನು ಪಡೆದು ಒಂದು ಹಳದಿ ಬಣ್ಣದ ವಿಮಲ ಪಾನ ಮಸಾಲಾ ಹೆಸರಿನ ಕೈಚೀಲದಲ್ಲಿ ಹಾಕಿಕೊಂಡು ಕಂಪನಿಗೆ ಮರಳಿ ಹೊಂಡಾ ಎಕ್ಟೀವಾ ಮೋಟಾರ್ ಸೈಕಲ ಮೇಲೆ ಹೋಗುವಾಗ ಮೊಟರ ಸೈಕಲನ್ನು ಫಿರ್ಯಾದಿ ಚಲಾಯಿಸುತ್ತಿದ್ದು, ಹಿಂದೆ ಗೋಪಾಲ ಇವನು ಕುಳಿತುಕೊಂಡು ಹಣ ಇದ್ದ ಬ್ಯಾಗನ್ನು ಮೋಟಾರ್ ಸೈಕಲಿನ ಮುಂದೆ ಇಟ್ಟುಕೊಂಡು ಕಂಪನಿಯ ಕಡೆಗೆ ಹೋಗುವಾಗ 1530 ಗಂಟೆಯ ಸುಮಾರಿಗೆ ಕೊಳಾರ ಕೈಗಾರಿಕಾ ಪ್ರದೇಶದ ಬಸವೇಶ್ವರ ದಾಲ ಮಿಲ ದಾಟಿ ಸ್ವಲ್ಪ ಮುಂದೆ ರಸ್ತೆ ಬಲಗಡೆ ತಿರುಗುವಾಗ ರೋಡಿನ ಮೇಲೆ ಹಿಂದಿನಿಂದ ಒಂದು ಮೊಟರ ಸೈಕಲ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ಫಿರ್ಯಾದಿಯು ಚಲಿಸುವ ಮೋಟರ ಸೈಕಲಿಗೆ ಅಡ್ಡಗಟ್ಟಿ ನಿಲ್ಲಿಸಿ, ಅವರಲ್ಲಿಯೇ ಒಬ್ಬನು ಫಿರ್ಯಾದಿಯ ವಾಹಾನದ ಬೀಗ ತೆಗೆದು ಬಿಸಾಕಿದ್ದು, ಇನ್ನೊಬ್ಬ ವ್ಯಕ್ತಿ ಹೆದರಿಸಿ ಫಿರ್ಯಾದಿಯ ಹತ್ತಿರವಿದ್ದ ಕೈಚೀಲವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದು, ಅದೇ ಸಮಯದಲ್ಲಿ ಮೊದಲಿನ ವ್ಯಕ್ತಿ ಒಂದು ಚಾಕು ತೆಗೆದು ಹೊಡೆಯುತ್ತಿರುವಾಗ ಚಾಕುಗೆ ಕೈಯಿಂದ ಹಿಡಿದಾಗ ಕೈಗೆ ಚಾಕು ಹತ್ತಿ ರಕ್ತಗಾಯವಾಗಿರುತ್ತದೆ, ಜೊತೆಗಿದ್ದ ಗೋಪಾಲ ಇವನು ಹೆದರಿ ದೂರ ಹೋಗಿ ನಿಂತಿದ್ದು, ಆ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳು ಫಿರ್ಯಾದಿಯ ಹತ್ತಿರವಿದ್ದ ಹಣದ ಬ್ಯಾಗನ್ನು ಕಸಿದುಕೊಂಡು ಹೋಗಿದ್ದು ಇರುತ್ತದೆ, ಸದರಿ ಇಬ್ಬರ ಅಪರಿಚಿತ ವ್ಯಕ್ತಿUÀಳಿಗೆ ನೋಡಿದರೆ ಗುರುತಿಸುತೇನೆ, ನಂತರ ಅಲ್ಲಿಂದ ಇಬ್ಬರು ನೇರವಾಗಿ ಜಿಲ್ಲಾ ಆಸ್ಪತ್ರೆಗೆ ಹೋಗಿ ಉಪಚಾರ ಪಡೆದುಕೊಂಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 128/2021, ಕಲಂ. 336 ಜೊತೆ 34 ಐಪಿಸಿ :-
ದಿನಾಂಕ 26-07-2021 ರಂದು ರವಿಕುಮಾರ ಪಿಎಸ್ಐ (ಕಾಸು) ಹುಮನಾಬಾದ ಪೊಲೀಸ ಠಾಣೆ ರವರು ಪೆಟ್ರೋಲಿಂಗ್ ಮಾಡುತ್ತಾ ಹುಮನಾಬಾದ ಹಳೆ ಆರ.ಟಿ.ಓ ಕಚೇರಿ ಹತ್ತಿರ ಹೋದಾಗ ಅಲ್ಲಿ ಒಂದು ಲಾರಿಗೆ ಒಬ್ಬ ವ್ಯಕ್ತಿ ಡಿಸೇಲ ಹಾಕುತ್ತಿರುವದನ್ನು ನೋಡಿ ಸಂಶಯ ಬಂದು ಲಾರಿ ಹತ್ತಿರ ಹೋಗುವಷ್ಟರಲ್ಲಿ ಲಾರಿಯವನು ಓಡಿ ಹೋದನು ಮತ್ತು ಡಿಸೇಲ ಹಾಕುತ್ತಿದ್ದವನ ಹತ್ತಿರ ಒಟ್ಟು 4 ಡಬ್ಬಿಗಳು ಅದರಲ್ಲಿ ಡಿಸೇಲ ಇರುವದನ್ನು ನೋಡಿ ಪರಿಶೀಲಿಸಲು 3 ಡಬ್ಬಿಗಳಲ್ಲಿ 50-50 ಲೀಟರ ಬೈಯೋ ಡಿಸೀಲ ಇದ್ದು ಒಂದು ಡಬ್ಬಿಯಲ್ಲಿ 25 ಲೀಟರ ಬೈಯೋ ಡಿಸೇಲ ಇರುವದನ್ನು ನೋಡಿ ಡಿಸೇಲ ಹಾಕುತ್ತಿರುವನಿಗೆ ಹಿಡಿದು ಅವನ ಹತ್ತಿರ ಇರುವ ಎಲ್ಲ 4 ಡಬ್ಬಿಗಳು ಒಂದು ಅಟೋದಲ್ಲಿ ತೆಗೆದುಕೊಂಡು ಠಾಣೆಗೆ ಬಂದು ಇಬ್ಬರು ಪಂಚರನ್ನು ಕರೆಯಿಸಿಕೊಂಡು ಆರೋಪಿಗೆ ಹೆಸರು ವಿಚಾರಿಸಲು ಮಹ್ಮದ ಫೈಸಲಖಾನ ತಂದೆ ಮಹ್ಮದ ಫಿರೋಜ ಖಾನ, ವಯ: 20 ವರ್ಷ, ಜಾತಿ: ಮುಸ್ಲಿಂ, ಸಾ: ನೂರಖಾನ ಆಖಾಡ ಅಂತಾ ತಿಳಿಸಿದ್ದು, ಈ ಡಿಸೇಲ ಎಲ್ಲಿಂದ ತಂದಿರುವೆ ಅಂತಾ ವಿಚಾರಿಸಲು ಮಹ್ಮದ ಖಾಜಾ ಶಾ ತಂದೆ ಅಬ್ದುಲ ಲತೀಫ್ ಶಾ, ವಯ: 45 ವರ್ಷ, ಜಾತಿ: ಮುಸ್ಲಿಂ, ಸಾ: ಸಾಯಿಚಿತ್ರ ಮಂದಿರ ಹತ್ತಿರ ಹುಮನಾಬಾದ ಇವರು ಕಂಪನಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಬಯೋ ಡಿಸೇಲ ಇಟ್ಟಿದ್ದು ನಾನು ಅವರು ಹೇಳಿದಂತೆ ಒಂದು ಲಾರಿಗೆ ಹಾಕಿರುತ್ತೇನೆ ಅಂತಾ ತಿಳಿಸಿದನು, ನಂತರ ಸದರಿ ಆರೋಇಗೆ ಬಯೋ ಡಿಸೇಲ ಮಾರಾಟ ಮಾಡಲು ಏನಾದರೂ ಪರವಾನಿಗೆ ಇದೆಯಾ ಅಂತಾ ವಿಚಾರಿಲಸು ಇಲ್ಲವಾಗಿ ತಿಳಿಸಿದನು ಅಲ್ಲದೆ ಇದರ ಸುರಕ್ಷತೆಯ ಬಗ್ಗೆ ನೀವು ಏನು ಮುಂಜಾಗ್ರತೆ ಕೈಗೊಂಡಿದ್ದಿರಿ ಅಂತಾ ವಿಚಾರಿಸಲು ಯಾವುದೇ ಮುಂಜಾಗ್ರತೆ ಕ್ರಮ ಕೈಕೊಂಡಿಲ್ಲ ಅಂತಾ ತಿಳಿಸಿದನು, ನಂತರ ಒಟ್ಟು 175 ಲೀಟರ ಬೈಯೋ ಡಿಸೇಲ ಅ.ಕಿ 12,250/- ರೂಪಾಯಿ ಬೆಲೆವುಳ್ಳದ್ದು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 127/2021, ಕಲಂ. ಮಹಿಳಾ ಕಾಣೆ :-
ಫಿರ್ಯಾದಿ ರೇಖಾ ಗಂಡ ಶರಣಪ್ಪಾ ಬಳತೆ ವಯ: 45 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಕನಕಟ್ಟಾ, ತಾ: ಹುಮನಾಬಾದ ರವರ ಮಗಳಾದ ಪವಿತ್ರಾ ಇವಳಿಗೆ 2015 ನೇ ಸಾಲಿನಲ್ಲಿ ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ ಗ್ರಾಮದ ಅನಿಲಕುಮಾರ ಲಕ್ಷೆ ಇವನಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ನಂತರ ಅಳಿಯ ಪವಿತ್ರಾ ಇವಳಿಗೆ 2016 ನೇ ಸಾಲಿನಲ್ಲಿ ಬಾಂಬೆಗೆ ಕರೆದುಕೊಂಡು ಹೋಗಿರುತ್ತಾರೆ, ಇಲ್ಲಿಯವರೆಗೆ ಮಗಳಿಗೆ ಮಕ್ಕಳಾಗಿರುವದಿಲ್ಲಾ, ಒಂದು ತಿಂಗಳ ಹಿಂದೆ ಪವಿತ್ರಾ ಇವಳು ಕರೆ ಮಾಡಿ ನನ್ನ ಬಿ.ಎ ಫೈನಲ್ ಇಯರ್ ಪರೀಕ್ಷೆ ಇರುತ್ತವೆ ನಾನು ಊರಿಗೆ ಬರುತ್ತೇನೆ ಅಂತಾ ತಿಳಿಸಿದ್ದರಿಂದ ಸುಮಾರು 15 ದಿವಸಗಳ ಹಿಂದೆ ಗಂಡ ಬಾಂಬೆಗೆ ಹೋಗಿ ತನ್ನ ಮಗಳಿಗೆ ಕರೆದುಕೊಂಡು ಬಂದಿರುತ್ತಾರೆ, ಈಗ 5 ದಿವಸಗಳ ಹಿಂದೆ ಅಳಿಯ ಅನಿಲಕುಮಾರ ಇವರು ಕನಕಟ್ಟಾಗೆ ಬಂದಿರುತ್ತಾರೆ, ಹೀಗಿರುವಾಗ ದಿನಾಂಕ 24-07-2021 ರಂದು 2100 ಗಂಟೆಗೆ ಫಿರ್ಯಾದಿಯು ತನ್ನ ಗಂಡ, ಮಗಳು ಅಳಿಯ ಎಲ್ಲರು ಊಟ ಮಾಡಿ ಮಲಗಿಕೊಂಡಾಗ 2300 ಗಂಟೆ ಸುಮಾರಿಗೆ ಮಗಳು ಪವಿತ್ರಾ ಇವಳು ಫಿರ್ಯಾದಿಗೆ ಎಬ್ಬಿಸಿ ನಾನು ಬೈಲು ಕಡೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿರುತ್ತಾಳೆ, ನಂತರ ಸುಮಾರು ಒಂದು ತಾಸಾದರು ಮಗಳು ಪವಿತ್ರಾ ಇವಳು ಮನೆಗೆ ಬರದೆ ಇರುವ ಕಾರಣ ಫಿರ್ಯಾದಿಯು ತನ್ನ ಗಂಡ, ಅಳಿಯ ಇವರಿಗೆ ಎಬ್ಬಿಸಿ ಒಂದು ತಾಸಾದರೂ ಮಗಳು ಪವಿತ್ರಾ ಇವಳು ಬೈಲ ಕಡೆ ಹೋಗಿದ್ದು ಅಂತಾ ತಿಳಿಸಿದಾಗ, ಎಲ್ಲರೂ ಕೂಡಿ ಮನೆಯಿಂದ ಹೊರಗಡೆ ಹೋಗಿ ಮನೆ ಸುತ್ತಲೂ ಹುಡುಕಾಡಲು ಪವಿತ್ರಾ ಇವಳು ಎಲ್ಲಿಯು ಕಾಣಲಿಲ್ಲ, ನಂತರ ಅಳಿಯ ಅವಳ ಹತ್ತಿರ ಇದ್ದ ಮೋಬೈಲ್ ನಂ. 9653472634, 7026132242 ನೇದಕ್ಕೆ ಕರೆ ಮಾಡಲು ಅದು ಸ್ವಿಚ್ಡ್ ಆಪ್ ಅಂತ ಬಂದಿರುತ್ತದೆ, ಬೆಳಗಾದ ನಂತರ ಮಗಳು ಕಾಣೆಯಾದ ಬಗ್ಗೆ ತಮ್ಮ ಸಂಬಂದಿಕರಿಗೆ ವಿಚಾರಣೆ ಮಾಡಲು ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲ, ಇಲ್ಲಿಯವರೆಗೆ ಮಗಳು ಕಾಣೆಯಾದ ಬಗ್ಗೆ ಫಿರ್ಯಾದಿಯು ತನ್ನ ಗಂಡ, ಅಳಿಯ ಮತ್ತು ಪಕ್ಕದ ಮನೆಯ ವಿನೋದ ಸಾಗರ ಎಲ್ಲರೂ ಕೂಡಿ ಹುಡುಕಾಡಿದರು ಮಗಳು ಇಲ್ಲಿಯವರೆಗೆ ಪತ್ತೆಯಾಗಿರುದಿಲ್ಲಾ, ಕಾಣೆಯಾದ ಮಗಳ 1) ಪವಿತ್ರಾ ತಂದೆ ಅನಿಲಕುಮಾರ, ವಯ: 22 ವರ್ಷ, ಜಾತಿ: ಎಸ್.ಟಿ ಗೊಂಡ, 2) ಭಾಷೆ : ಕನ್ನಡ , ಹಿಂದಿ ಮಾತನಾಡುತ್ತಾಳೆ, 3) ಚಹರೆ ಪಟ್ಟಿ: ಉದ್ದನೆ ದುಂಡು ಮುಖ ಸಾಧಾರಣ ಮೈಕಟ್ಟು ಅಂದಾಜು 5-5 ಫೀಟ ಎತ್ತರ, 4) ಧರಿಸಿದ ಬಟ್ಟೆ: ಕಂಪು ಬ್ರೌನ ಚುಕ್ಕೆಯುಳ್ಳ ಟಾಪ್ ಗೋಲ್ಡನ್ ಬಣ್ಣದ ಲೇಗಿನ್ಸ ಮತ್ತು ಕಪ್ಪು ಬಣ್ಣದ ಓಡಣಿ ಧರಿಸಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 26-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಂತಾಕಿ ಪೊಲೀಸ್ ಠಾಣೆ ಅಪರಾಧ ಸಂ.22/2021, ಕಲಂ. ಮನುಷ್ಯ ಕಾಣೆ :-
ಫಿರ್ಯಾದಿ ಮಲ್ಲಾರೆಡ್ಡಿ ತಂದೆ ಪೀರೆಡ್ಡಿ ದೋಂಗಾಲೆ ಸಾ: ಉಜನಿ ರವರ ಕಿರಿಯ ಮಗನಾದ ದತ್ತು ರೆಡ್ಡಿ ಇವನು ಸುಮಾರು 15 ವರ್ಷದಿಂದ ಹೈದ್ರಬಾದನ ಬಾಲನಿಂಗನಪಲ್ಲಿ ಏರಿಯಾದಲ್ಲಿ ಪಾನಿಪೂರಿ ಕೆಲಸ ಮಾಡಿಕೊಂಡಿದ್ದು, ಅವನಿಗೆ ಸುಮಾರು 10 ವರ್ಷದ ಹಿಂದೆ ಬೆಮ್ರಾ ಗ್ರಾಮದ ಜ್ಯೋತಿ ಇಲಕೆಯೊಂದಿಗೆ ಮದುವೆ ಮಾಡಿದ್ದು, 2 ಜನ ಹೆಣ್ಣು ಮಕ್ಕಳು ಇರುತ್ತಾರೆ, ಸದ್ಯ ಸೋಸೆ ಹಾಗೂ ಮೋಮ್ಮಕ್ಕಳು ಅವಳ ತವರು ಮನೆಯಾದ ಬೆಮ್ರಾದಲ್ಲಿ ವಾಸವಿರುತ್ತಾರೆ, ನಂತರ ಸುಮಾರು ನಾಲ್ಕು ವರೆ ವರ್ಷದ ಹಿಂದೆ ಅಂದರೆ 2017 ನೇ ಸಾಲಿನ ಜನೆವರಿ ತಿಂಗಳಲ್ಲಿ ದತ್ತು ರೆಡ್ಡಿ ಇವನು ಕೆಲಸಕ್ಕೆ ಹೋಗಿ ಬರುತ್ತೆನೆ ಅಂತ ಹೇಳಿ ಮನೆಯಿಂದ ಹೋದವನು ಸುಮಾರು ದಿವಸಗಳಾದರು ಮನೆಗೆ ಬರದೇ, ಕರೆ ಕೂಡ ಮಾಡದೇ ಇದ್ದಾಗ ಎಲ್ಲರು ಅವನು ಕೆಲಸ ಮಾಡುತ್ತಿದ್ದ ಏರಿಯಾದಲ್ಲಿ ಹೋಗಿ ಪರಿಚಯಸ್ಥರಿಗೆ ವಿಚಾರಣೆ ಮಾಡಲು ಅವನ ವಿಳಾಸದ ಬಗ್ಗೆ ಯಾರಿಗೂ ಗೋತ್ತಿರುವುದಿಲ್ಲಾ ಮತ್ತು ಅವನಿಗೆ ಎಲ್ಲರು ತಮ್ಮ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರು ಅವನ ಇರುವಿಕೆ ಬಗ್ಗೆ ಗೋತ್ತಾಗಿರುವುದಿಲ್ಲಾ ಮತ್ತು ಈಗ ಜೂನ 30 ನೇ ತಾರಿಖಿಗೆ 2232 ಗಂಟೆಗೆ ದತ್ತುರೆಡ್ಡಿ ಇವನ ಫೇಸ್ ಬುಕ್ ಐಡಿಯಿಂದ ಹಿರಿಯ ಮಗನಾದ ಗುಂಡಾರೆಡ್ಡಿ ಇವನ ಫೇಸಬುಕನಲ್ಲಿ ಅವನ ಫೋಟು ಅಪಲೋಡ್ ಮಾಡಿದ್ದು ಇರುತ್ತದೆ, ನಂತರ ಪುನಃ ಎಲ್ಲರು ಹೈದ್ರಾಬಾದ ಹಾಗೂ ಇತರೆ ಕಡೆಗಳಲ್ಲಿ ಹುಡುಕಾಡಿದರೂ ಸಿಕ್ಕಿವುದಿಲ್ಲ, ದತ್ತುರೆಡ್ಡಿ ಇವನಿಗೆ ಹಿಂದಿ, ತೆಲಗು ಮತ್ತು ಕನ್ನಡ ಮಾತಾಡುತ್ತಾನೆ ಮತ್ತು ಅವನ ಮುಖ ದುಂಡಾಗಿದ್ದು, ಗೋಧಿ ಬಣ್ಣ, ಅವನು ಸೂಮಾರು 5 ಅಡಿ 4 ಇಂಚು ಎತ್ತರ ಇರುತ್ತಾನೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-07-2021 ರಂದು ಕೊಟ್ಟ ಲಿಖಿತ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 99/2021, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 26-07-2021 ರಂದು ಫಿರ್ಯಾದಿ
ಸಂಗ್ರಾಮ ತಂದೆ ರಾಮಪ್ಪಾ ವರನೆ ವಯ: 65 ವರ್ಷ, ಜಾತಿ: ಮಾದಿಗ, ಸಾ: ಬರದಾಪೂರ ರವರು ತಮ್ಮೂರಿನಿಂದ
ಸಂತೆ ಮಾಡಲು ಒಂದು ಖಾಸಗಿ ಜೀಪಿನಲ್ಲಿ ಕುಳಿತು ಔರಾದಗೆ ಬಂದು ಜೀಪಿನಿಂದ ಇಳಿದು ನಡೆದುಕೊಂಡು ಕಿರಾಣಿ
ಅಂಗಡಿಗೆ ಹೋಗುವಾಗ ಔರಾದ(ಬಿ) ಬಸ್ ನಿಲ್ದಾಣದ ಬಲಗಡೆ ದಿಕ್ಕಿನಲ್ಲಿ ಪಿ.ಎಲ್.ಡಿ ಬ್ಯಾಂಕ
ಕಡೆಯಿಂದ ಒಂದು ಕ್ರೋಜರ ಜೀಪ ನಂ. ಕೆಎ-36/4011 ನೇದರ ಚಾಲಕನಾದ ಆರೋಒಪಿಯು
ತನ್ನ ಜೀಪನ್ನು ಒಮ್ಮೆಲೆ ಅತೀವೇಗದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಎಡಗಡೆ ಸೈಡಿಗೆ ಡಿಕ್ಕಿ
ಪಡಿಸಿದ್ದರಿಂದ ಫಿರ್ಯಾದಿಯ ನಡು ಹಣೆಯಲ್ಲಿ ರಕ್ತಗಾಯ, ಮೂಗಿನ ಕೆಳಗೆ ರಕ್ತಗಾಯ, ಬಲಗಣ್ಣಿನ ಕೆಳಗೆ
ತರಚಿದ ಗಾಯ, ಬಲಗೈ ಮೋಳಕೈ ಹತ್ತಿರ, ಭೂಜಕ್ಕೆ ಭಾರಿ ಗುಪ್ತಗಾಯವಾಗಿದ್ದು, ನಂತರ ಯಾರೋ 108 ಎಂಬುಲೆನ್ಸನಲ್ಲಿ
ಹಾಕಿಕೊಂಡು ಬಂದು ಔರಾದ(ಬಿ) ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು
ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
No comments:
Post a Comment