ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 02-08-2021
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 13/2021, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 01-08-2021 ರಂದು ಫಿರ್ಯಾದಿ ಸರೋಜಾ ಗಂಡ ಕಿಶನರಾವ ಬಿರಾದಾರ ವಯ: 55 ವರ್ಷ, ಜಾತಿ: ಮರಾಠಾ, ಸಾ: ಪರತಾಪೂರ, ತಾ: ಬಸವಕಲ್ಯಾಣ ರವರ ಮಗ ನ್ಯಾನೇಶ್ವರ ಬಿರಾದಾರ ಇತನು ಖಾಸಗಿ ಸಾಲ ಅಗಿದ್ದರಿಂದ ತಿರುಸಲು ಆಗದೇ ಇರುವುದರಿಂದ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನೆಯ ಪಡಸಾಲಿಯಲ್ಲಿ ಮನೆಯ ಮೇಲೆ ಇದ್ದ ಕಟ್ಟಿಗೆ ಛಾವಣಿಗೆ ಇರುವ ಒಂದು ಕಬ್ಬಿಣದ ಕೊಂಡಿಗೆ ಹಗ್ಗದಿಂದ ಕಟ್ಟಿ ತನ್ನ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ, ತನ್ನ ಮಗನ ಸಾವಿನ ಬಗ್ಗೆ ನನಗೆ ಯಾರ ಮೇಲೆ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಲಸೂರ ಪೊಲೀಸ ಠಾಣೆ ಅಪರಾಧ ಸಂ. 48/2021, ಕಲಂ. 454, 380 ಐಪಿಸಿ :-
ದಿನಾಂಕ 01-08-2021 ರಂದು 1100 ಗಂಟೆಯಿಂದ 1900 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಚಂದ್ರಮ್ಮಾ ಗಂಡ ಸಂಗಶೇಟ್ಟಿ ಹರಗೆ ವಯ: 55 ವರ್ಷ, ಜಾತಿ: ಲಿಂಗಾಯತ, ಸಾ: ಬೇಲೂರ ರವರ ಮನೆಯ ಬಾಗಿಲುಗಳ ಕೀಲಿಗಳು ಡೆದು ಸಂದುಕಿನಲ್ಲಿದ್ದ ನಗದು ಹಣ 9000/- ರೂಪಾಯಿಗಳು ಹಾಗು ಅಲಮಾರಿಯಲ್ಲಿದ್ದ ಅ.ಕಿ 40,000/- ಬೆಲೆ ಬಾಳುವ ಒಂದು ತೋಲೆಯ ಬಂಗಾರದ ನೆಕಲೆಸ್ ಕಳ್ಳತ£À ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 88/2021, ಕಲಂ. 457, 380 ಐಪಿಸಿ :-
ದಿನಾಂಕ 31-07-2021 ರಂದು 2015 ಗಂಟೆಯಿಂದ 2105 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಬೀದರ ನಗರದ ಎಸ್.ಬಿ.ಎಚ್ ಕಾಲೋನಿಯಲ್ಲಿರುವ ಫಿರ್ಯಾದಿ ರೊಹನ ತಂದೆ ಪ್ರಭಾಕರರಾವ ಬಿರಾದಾರ, ಸಾ: ಎಸ.ಬಿ.ಹೆಚ್ ಬ್ಯಾಂಕ ಕಾಲೋನಿ ಬೀದರ ರವರ ಮನೆಯ ಬಾಗಿಲು ಮುರಿದು, ಮನೆಯಲ್ಲಿ ಪ್ರವೇಶಿಸಿ ಮನೆಯಲ್ಲಿ ವಿವಿಧ ಕಡೆಗೆ ಇಟ್ಟ 1) 55 ಗ್ರಾಂ. ತೂಕದ ಬಂಗಾರದ ಚಂದ್ರಹಾರ ಅ.ಕಿ 2,20,000/- ರೂ., 2) 10 ಗ್ರಾಂ ತೂಕದ ಬಂಗಾರದ ಕಿವಿಯಲ್ಲಿಯ ಝುಮಕಾ ಅ.ಕಿ 40,000/- ರೂ., 3) ಬಂಗಾರದ ಕಿವಿಯಲ್ಲಿಯ ಗುಂಡಿ, ಕಿವಿಯಲ್ಲಿಯ ಬಾಲಿ ಸೇರಿ 10 ಗ್ರಾಂ. ತೂಕದ್ದು ಅ.ಕಿ 40,000/- ರೂ., 4) 50 ಗ್ರಾಂ ತೂಕದ ಕತ್ತರಿಸಿದ ಬಂಗಾರದ ಬಿಸಕಿಟ ಅ.ಕಿ 2,00,000/- ರೂ., 5) 20 ಗ್ರಾಂ. ತೂಕದ ಬಂಗಾರದ ಎರಡು ಬೆರಳಲ್ಲಿಯ ಉಂಗುರಗಳು ಅ.ಕಿ 80,000/- ರೂ., 6) 5 ಗ್ರಾಂ ತೂಕದ ಬಂಗಾರದ ತಾಳಿ ಅ.ಕಿ 20,000/-ರೂ. 7) 7,20,000/- ರೂ. ಲಕ್ಷ ನಗದು ಹಣ, 8) ಒಂದು ಲಿನೊವೊ ಕಂಪನಿಯ ಲ್ಯಾಪಟಾಪ ಅ.ಕಿ 25,000/- ರೂ. ಬೆಲೆಬಾಳುವ ಬಂಗಾರದ ಆಭರಣಗಳು, ನಗದು ಹಣ, ಲ್ಯಾಪಟಾಪ ಹಾಗೂ ಫಿರ್ಯಾದಿವರ ಶಾಲೆಯ ಅಂಕಪಟ್ಟಿ, ಗೊಲ್ಡ ಮೆಡಲ ಹಾಗು ಐಸಿಐಸಿ ಬ್ಯಾಂಕಿನ ಚೆಕ ಬುಕ ಒಟ್ಟು ಸೇರಿ 13,45,000/- ರೂ. ಬೆಲೆವುಳ್ಳದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 01-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 124/2021, ಕಲಂ. 420, 379 ಐಪಿಸಿ:-
ದಿನಾಂಕ 30-07-2021 ರಂದು 1900 ಗಂಟೆಯಿಂದ 1930 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿ ಉಲ್ಲಾಸ ತಂದೆ ಅಶೋಕರಾವ ಕುಲಕರ್ಣಿ ವಯ: 35 ವರ್ಷ, ಜಾತಿ: ಬ್ರಾಹ್ಮಣ, ಸಾ: ಪ್ರತಾಪೂರ, ಸದ್ಯ: ಸರ್ವೋದಯ ಕಾಲೋನಿ ಬಸವಕಲ್ಯಾಣ ರವರ ಬಂಗಾರದ ಅಂಗಡಿಯಲ್ಲಿ ಅಪರಿಚಿತ ಕಳ್ಳರು ಮೋಸ ಮಾಡಿ ಅಂಗಡಿಯ ಟಿಜೋರಿಯಲ್ಲಿದ್ದ ಜರ್ಮನ್ ಡಬ್ಬಿಯಲ್ಲಿದ್ದ 1) 2 ವರೆ ತೊಲೆಯ ಬಂಗಾರದ ಲಾಕೇಟ್ ಅ.ಕಿ 1,12,500/- ರೂ., 2) ಒಂದು ತೊಲೆಯ ಬಂಗಾರದ ಉಂಗುರು ಅ.ಕಿ 45,000/- ರೂಪಾಯಿ, 3) 3 ತೊಲೆಯ ಅಷ್ಟಪಿಲ್ಲು ಬಂಗಾರದ ಮಣಿಗಳು ಅ.ಕಿ 1,35,000/- ರೂ., 4) 2 ತೊಲೆಯ ಬಂಗಾರದ 7 ಜೋಡ ತಾಳಿಗಳು ಅ.ಕಿ 90,000/- ರೂ., 5) ಒಂದು ವರೆ ತೊಲೆಯ ಬಂಗಾರದ ಲಾಕೇಟ್ ಅ.ಕಿ 67,500/- ರೂ., 6) ಅರ್ಧ ತೊಲೆಯ ಬಂಗಾರದ ಎಲೆಗಳು ಅ.ಕಿ 22,500/- ರೂಪಾಯಿ ಹೀಗೆ ಒಟ್ಟು 10 ವರೆ ತೊಲೆ ಬಂಗಾರದ ಆಭರಣಗಳು ಅ.ಕಿ 4,72,500/- ರೂಪಾಯಿಯ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 01-08-2021 ರಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 134/2021, ಕಲಂ. 457, 380 ಐಪಿಸಿ :-
ದಿನಾಂಕ 31-07-2021 ರಂದು 2330 ಗಂಟೆಯಿಂದ ದಿನಾಂಕ 01-08-2021 ರಂದು 0630 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಶಿವಾನಂದ ತಂದೆ ಘಾಳೆಪ್ಪಾ ಮಲಶೇಟ್ಟಿ ವಯ: 56 ವರ್ಷ, ಜಾತಿ: ಲಿಂಗಾಯತ, ಸಾ: ಹುಡುಗಿ ರವರ ಮನೆಯ ಮಾಳಿಗೆಯ ಸಿಡಿಗಳಿಂದ ಇಳಿದು ಮನೆಯ ಒಳಗೆ ಪ್ರವೇಶ ಮಾಡಿ ಮನೆಯಲ್ಲಿ ಅಲಮಾರಿಯಲ್ಲಿಟ್ಟಿದ್ದ ಬೇಳ್ಳಿಯ ಆಭರಣಗಳಾದ 1) ಚೌಕ 2, 2) ಕಾಲುಂಗುರು 4, 3) ನಾಣ್ಯ 5 ಹೀಗೆ ಒಟ್ಟು ಅಂದಾಜು 10 ತೊಲೆ ಬೆಳ್ಳಿ ಅ.ಕಿ 5000/- ರೂ. ಹಾಗೂ ಮನೆಯಲ್ಲಿನ ಕಬ್ಬಿಣದ ಸಂದುಕನ್ನು ಹೊಲದಲ್ಲಿ ತೆಗೆದುಕೊಂಡು ಹೋಗಿ ಅದರಲ್ಲಿನ 1) ನಗದು ಹಣ 40,000/- ರೂ., 2) 4 ತೊಲೆ ಬಂಗಾರದ 2 ಪಾಟಲಿಗಳು ಅ.ಕಿ 70,000/- ರೂ., 3) 4 ತೊಲೆ ಬಂಗಾರದ ಗಂಟನ ಅ.ಕಿ 80,000/- ರೂ., 4) 3 ಸುತ್ತುಂಗರು 9 ಗ್ರಾಂ, 1 ಕಿವಿಯಲ್ಲಿನ ಮಕ್ಕಳ ಮುರುಗು 1 ಗ್ರಾಂ, 2 ಕಿವಿಯಲ್ಲಿಯ ಮಾಟಿ 3 ಗ್ರಾಂ. ಒಟ್ಟು 13 ಗ್ರಾಂ. ಬಂಗಾರದ ಆಭರಣಗಳು ಅ.ಕಿ 30,000/- ರೂ. ಬೆಲೆ ಬಾಳುವುದು ಮತ್ತು ಮನೆಯ ಹತ್ತಿರ ಹೊರಗಡೆ ನಿಲ್ಲಿಸಿದ ಹೀರೊ ಹೊಂಡಾ ಸೂಪರ ಸ್ಪ್ಲೆಂಡರ ಮೋಟಾರ್ ಸೈಕಲ್ ನಂ. ಕೆಎ-39/ಜೆ-1647, ಚಾಸಿಸ್ ನಂ. MBLJAD5EE99F00533, ಇಂಜಿನ್ ನಂ. JA05EA99F00322, ಮಾದರಿ 2009, ಬಣ್ಣ: ಕಪ್ಪು ಬಣ್ಣ ಹಾಗೂ ಅ.ಕಿ 20,000/- ರೂ. ಹೀಗೆ ಬಂಗಾರ ಹಾಗು ಬೆಳ್ಳಿ ಸಾಮಾನುಗಳು ಮತ್ತು ಮೋಟಾರ ಸೈಕಲ ನೇದವುಗಳ ಒಟ್ಟು 2,45,000/- ರೂ ಬೆಲೆಬಾಳುವ ಸಾಮಾನುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 01-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಲಸೂರ ಪೊಲೀಸ ಠಾಣೆ ಅಪರಾಧ ಸಂ. 47/2021, ಕಲಂ. 279, 338 ಐಪಿಸಿ :-
ದಿನಾಂಕ 01-08-2021 ರಂದು ಫಿರ್ಯಾದಿ ರಾಜಕುಮಾರ ತಂದೆ ಗುರಣ್ಣಾ ಹೊನ್ನಾಡೆ ವಯ: 36 ವರ್ಷ, ಜಾತಿ: ಲಿಂಗಾಯತ, ಸಾ: ಹುಲಸೂರ, ರವರು ತಮ್ಮೂರ ಸಚಿನ್À ತಂದೆ ಬಸವರಾಜ ಕೌಟೆ ವಯ: 25 ವರ್ಷ, ಜಾತಿ: ಲಿಂಗಾಯತ ಮತ್ತು ಸೌರಭ ತಂದೆ ಸೋಮನಾಥ ನಂದಗೆ ವಯ: 22 ವರ್ಷ, ಜಾತಿ: ಜಾಡರ ಎಲ್ಲರೂ ಕೂಡಿಕೊಂಡು ವಾಕಿಂಗ ಮಾಡಲು ಹುಲಸೂರ ಬಸವಕಲ್ಯಾಣ ರಸ್ತೆಯ ಡಿಗ್ರಿ ಕಾಲೇಜ ಕಡೆಗೆ ಹೋಗುವಾಗ ಕೆ.ಇ.ಬಿ ಆಫೀಸ್ ಹತ್ತಿರ ರಸ್ತೆಯ ಮೇಲೆ ಬಸವಕಲ್ಯಾಣ ಕಡೆಯಿಂದ ಹೊಂಡಾ ಶೈನ ಮೋಟಾರ ಸೈಕಲ್ ನಂ. ಕೆಎ-39/ಎಸ್- 4179 ನೇದರ ಚಾಲಕನಾದ ಆರೋಪಿ ಗಣಪತಿ ತಂದೆ ಮಾಣಿಕ ಶೇರಿಕಾರ ವಯ: 40 ವರ್ಷ, ಜಾತಿ: ಮರಾಠಾ, ಸಾ: ಕರಡ್ಯಾಳ, ತಾ: ಭಾಲ್ಕಿ ಇತನು ಹೆಲ್ಮೆಟ ಧರಿಸಿಕೊಂಡು ತಾನು ಚಲಾಯಿಸುತ್ತಿರುವ ಮೊಟಾರ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲ್ ಕಂಟ್ರೋಲ್ ಆಗದೇ ಸ್ಕೀಡಾಗಿ ಮೋಟಾರ ಸೈಕಲ್ ಸಮೇತ ಕೆಳಗೆ ಬಿದ್ದಿರುತ್ತಾನೆ, ಆಗ ಫಿರ್ಯಾದಿಯವರೆಲ್ಲರೂ ಹೋಗಿ ನೋಡಲು ಗಣಪತಿ ಇವರು ಧರಿಸಿದ ಹೆಲ್ಮೆಟ ಒಡೆದಿದ್ದು ಕೆಳಗಿನ ತುಟಿಗೆ, ಮುಖಕ್ಕೆ ಕೈಗಳಿಗೆ ರಕ್ತಗಾಯವಾಗಿರುತ್ತದೆ, ಎರಡು ಮೊಳಕಾಲುಗಳಿಗೆ ಭಾರಿ ರಕ್ತಗಾಯವಾಗಿರುತ್ತದೆ ಹಾಗೂ ದೇಹದ ಇತರೆ ಕಡೆಗೆ ತರಚಿದ ರಕ್ತಗಾಯ ಮತ್ತು ಭಾರಿ ಗುಪ್ತಗಾಯಗಳಾಗಿರುತ್ತವೆ, ನಂತರ ಎಲ್ಲರೂ ಕೂಡಿಕೊಂಡು ಗಣಪತಿ ರವರಿಗೆ ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಹುಲಸೂರಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಭಾಲ್ಕಿಗೆ ಕಳುಹಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 68/2021, ಕಲಂ. 279, 337, 338 ಐಪಿಸಿ :-
ದಿನಾಂಕ 01-08-2021 ರಂದು ಫಿರ್ಯಾದಿ ಮಹಾನಂದಾ ಗಂಡ ಘಾಳೆಪ್ಪಾ ವಯ: 28 ವರ್ಷ, ಜಾತಿ: ಉಪ್ಪಾರ, ಸಾ: ಬೇಮಳಖೇಡಾ, ತಾ: ಚಿಟಗುಪ್ಪಾ ರವರ ಗಂಡನಾದ ಘಾಳೆಪ್ಪಾ ತಂದೆ ಕಾಶಿನಾಥ ಮಾದಕ, ವಯ: 33 ವರ್ಷ ರವರು ಹಿರೋ ಹೊಂಡಾ ಸ್ಪ್ಲೆಂಡರ್ ಮೋಟಾರ ಸೈಕಲ್ ಸಂ. ಕೆಎ-39/ಎಲ್-6029 ನೇದರ ಮೇಲೆ ಮಗನಾದ ಜಗನಾಥ ತಂದೆ ಘಾಳೆಪ್ಪಾ ವಯ: 10 ವರ್ಷ ಹಾಗೂ ಫಿರ್ಯಾದಿಗೆ ಕೂಡಿಸಿಕೊಂಡು ಬೇಮಳಖೇಡಾದಿಂದ ಹಣಮಂತವಾಡಿಗೆ ಫಿರ್ಯಾದಿಯ ತಾಯಿ ಮನೆಗೆ ರಾಷ್ಟೀಯ ಹೆದ್ದಾರಿ ನಂ. 65 ನೇದರ ಮೇಲೆ ಮನ್ನಾಎಖೇಳ್ಳಿ ಮಾರ್ಗವಾಗಿ ಹೋಗುವಾಗ ಚಿಟಗುಪ್ಪಾ ಕ್ರಾಸ ಹತ್ತಿರ ಮೋಟರ ಸೈಕಲ ನಂ. ಕೆಎ-39/ಜೆ-8032 ನೇದರ ಚಾಲಕನಾದ ಆರೋಪಿ ಮಹಮ್ಮದ ಮಕಬೂಲ ತಂದೆ ಮಹಮ್ಮದ ಮೈನೊದ್ದಿನ ವಯ: 42 ವರ್ಷ, ಜಾತಿ: ಮುಸ್ಲಿಂ, ಸಾ: ಮುಸ್ತರಿ, ತಾ: ಚಿಟಗುಪ್ಪಾ ಇತನು ತನ್ನ ಹಿಂಬದಿ ಅರಬಾಜ ತಂದೆ ಎಕ್ಬಾಲ ವಯ: 14 ವರ್ಷ, ಸಾ: ಮುಸ್ತರಿ ಇತನಿಗೆ ಕೂಡಿಸಿಕೊಂಡು ಹುಡುಗಿ ಕಡೆಯಿಂದ ಅತಿವೇಗ ಮತ್ತು ಅಜಾಗರುಕತೆಯಿಂದ ಯಾವುದೇ ತರಹ ಕೈ ಸನ್ನೆ ಮಾಡದೇ ಮತ್ತು ಇಂಡಿಕೇಟರ ಹಾಕದೇ ಒಮ್ಮೆಲೆ ತನ್ನ ಮೋಟರ ಸೈಕಲನ್ನು ಚಿಟಗುಪ್ಪಾ ಕಡೆ ಹೊಗುವ ರಸ್ತೆ ಕಡೆಗೆ ತಿರುಗಿಸಿ ಫಿರ್ಯಾದಿಯು ಕುಳಿತ ಮೋಟರ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಅಪಘಾತದಲ್ಲಿ ಫಿರ್ಯಾದಿಯ ಬಲಗಾಲಿನ ಮೊಣಕಾಲಿನ ಮೇಲೆ ತೀವ್ರ ರಕ್ತ ಗಾಯವಾಗಿರುತ್ತದೆ, ಗಂಡನಾದ ಘಾಳೆಪ್ಪಾ ರವರ ಬಲಗಣ್ಣಿನ ಹುಬ್ಬಿನ ಮೇಲೆ ಮತ್ತು ತುಟಿಗೆ ರಕ್ತ ಗಾಯವಾಗಿರುತ್ತದೆ, ಮಗನಿಗೆ ಬಲಗಣ್ಣಿನ ಕೆಳಗೆ ತರಚಿದ ಗಾಯವಾಗಿರುತ್ತದೆ ಹಾಗು ಆರೋಪಿಗೆ ಯಾವುದೇ ತರಹದ ಗಾಯವಾಗಿರುವುದಿಲ್ಲ ಮತ್ತು ಅರಬಾಜನಿಗೆ ಎಡಗಡೆ ಹಣೆಯ ಮೇಲೆ ಗುಪ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಗೆ ಗಂಡನು 108 ಆಂಬುಲೆನ್ಸನಲ್ಲಿ ಸರ್ಕಾರಿ ಆಸ್ಪತ್ರೆ ಹುಮನಾಬಾದಗೆ ತಂದು ದಾಖಲು ಮಾಡಿರುತ್ತಾರೆ ಮತ್ತು ಮಕಬೂಲನು ಅರಬಾಜನಿಗೆ ಒಂದು ಆಟೋದಲ್ಲಿ ಹುಮನಾಬಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಮೌಖಿಕವಾಗಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment