ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 11-08-2021
ಬಗದಲ ಪೊಲೀಸ್ ಠಾಣೆ ಅಪರಾಧ ಸಂ. 48/2021, ಕಲಂ. 279, 338, 304 (ಎ) ಐ.ಪಿ.ಸಿ ಜೊತೆ 187 ಐಎಮವಿ ಕಾಯ್ದೆ :-
ದಿನಾಂಕ 10-08-2021 ರಂದು ಮರಕುಂದಾದಲ್ಲಿ ಪರಿಚಯಸ್ಥರ ಕಾರ್ಯಕ್ರಮ ಇರುವುದರಿಂದ ಫಿರ್ಯಾದಿ ಇಸಾಕ ಅಹ್ಮದ ತಂದೆ ಖಲಿಲಮಿಯ್ಯಾ ಸಂಗೋಳಗಿವಾಲೆ ವಯ: 32 ವರ್ಷ, ಸಾ: ಕಮಠಾಣಾ ರವರು ದಾವುದ ಇಬ್ರಾಹಿಂ ತಂದೆ ಅಬ್ದುಲ ಹಮೀದ ಲಮಾಣೀವಾಲೆ, ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ಕಮಠಾಣ ಇಬ್ಬರೂ ಕೂಡಿ ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ಮೋಟಾರ ಸೈಕಲ ನಂ. ಕೆಎ-39/ಜೆ-7556 ನೇದರ ಮೇಲೆ ಕಮಠಾಣಾದಿಂದ ಮರಕುಂದಾ ಕಡೆಗೆ ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುವಾಗ ಬಗದಲ ಬ್ರಿಡ್ಜ ಹತ್ತಿರ ಎದುರುಗಡೆಯಿಂದ ಅಂದರೆ ಮೀನಾಕೇರಾ ಕ್ರಾಸ್ ಕಡೆಯಿಂದ ಬೀದರ ಕಡಗೆ ಕಾರ ನಂ. ಎಪಿ-09/ಎಡಿ-0007 ನೇದರ ಚಾಲಕನಾದ ಆರೋಪಿ ಎಂ.ಡಿ ಸಮೀರ ತಂದೆ ಎಂಡಿ ಮಕ್ಸೂದ ಅಲಿ ವಯ: 23 ವರ್ಷ, ಸಾ: ಸಂಗೋಳಗಿ ಇತನು ತನ್ನ ಕಾರನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಕುಳಿತ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಬಲಗಾಲ ಮೊಣಕಾಲ ಮೇಲೆ ಭಾರಿ ಗುಪ್ತಗಾಯ, ಬಲಗೈ ಮುಂಗೈ ಮೇಲೆ ರಕ್ತಗಾಯ, ಎಡಭುಜಕ್ಕೆ ರಕ್ತಗಾಯ, ಸೊಂಟಕ್ಕೆ ಗುಪ್ತಗಾಯವಾಗಿರುತ್ತದೆ ಮತ್ತು ಮೋಟಾರ ಸೈಕಲ ಚಲಾಯಿಸುತ್ತಿದ್ದ ದಾವುದ ಇಬ್ರಾಹಿಂ ಇವನಿಗೆ ತಲೆಯಲ್ಲಿ ಭಾರಿ ರಕ್ತಗಾಯವಾಗಿ ಮೂಗಿನಿಂದ ಮತ್ತು ಎರಡು ಕಿವಿಯಿಂದ ರಕ್ತ ಬಂದಿರುತ್ತದೆ ಮತ್ತು ತುಟಿಗೆ ಭಾರಿ ರಕ್ತಗಾಯ, ಬಲಗಾಲ ಮೊಣಕಾಲ ಮೇಲೆ ಭಾರಿ ಗುಪ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ, ಆಗ ಅಲ್ಲಿಂದಲೆ ಹೊಗುತ್ತಿದ್ದ ಪರಿಚಯಸ್ಥರಾದ ಶೇಖ ರಫಿಕ ತಂದೆ ಮಹ್ಮದ ಮಾಜೀದ ಸಾ: ಬಗದಲ ಮತ್ತು ಅಬ್ದುಲ ಹಮೀದ ತಂದೆ ಅಬ್ದುಲ ಮಾಜೀದ ಸಾ: ಮರಕುಂದಾ ರವರು ನೋಡಿ ಫಿರ್ಯಾದಿಗೆ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 74/2021, ಕಲಂ. 279, 304(ಎ) ಐಪಿಸಿ :-
ದಿನಾಂಕ 10-08-2021 ರಂದು ಫಿರ್ಯಾದಿ ಕಲ್ಪನಾ ಗಂಡ ಚಂದ್ರಕಾಂತ ಗಬಾಳೆ ವಯ: 50 ವರ್ಷ, ಜಾತಿ: ಕೋಮಟಿ, ಸಾ: ವಿದ್ಯಾನಗರ ಕಾಲೋನಿ ಬೀದರ ರವರ ಗಂಡನಾದ ಚಂದ್ರಕಾಂತ ತಂದೆ ಪಾಂಡುರಂಗ ಗಬಾಳೆ ವಯ: 52 ವರ್ಷ, ರವರು ತನ್ನ ಮೋಟಾರ ಸೈಕಲ ನಂ. ಕೆಎ-32/ಇ.ಎಲ್-0215 ನೇದರ ಮೇಲೆ ಭಾಲ್ಕಿಯಿಂದ ಬೀದರಗೆ ಬರುವಾಗ ವಸಂತಾ ಕಾಲೇಜ ಹತ್ತಿರ ತನ್ನ ಮೋಟಾರ್ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ವೇಗ ಹತೋಟಿಯಲ್ಲಿಟ್ಟುಕೊಳ್ಳದೇ ಸ್ಕೀಡ ಮಾಡಿಕೊಂಡು ಬಿದ್ದಿರುತ್ತಾರೆ, ಪರಿಣಾಮ ಅವರ ತಲೆಗೆ ಭಾರಿ ರಕ್ತಗಾಯವಾಗಿ ಎರಡು ಕಿವಿಯಿಂದ, ಮೂಗಿನಿಂದ ರಕ್ತ ಬಂದ ಕಾರಣ ಅವರಿಗೆ ಚಿಕಿತ್ಸೆ ಕುರಿತು ಭಾಲ್ಕೆ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಭಾಲ್ಕೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 10/2021, ಕಲಂ. 379 ಐಪಿಸಿ :-
ಫಿರ್ಯಾದಿ ಮಥುರಾಬಾಯಿ ಗಂಡ ನಿವರ್ತಿ ಭೂಸಲೆ ವಯ:
62
ವರ್ಷ,
ಜಾತಿ: ಎಸ್. ಸಿ ಮಾದಿಗ, ಸಾ: ಹಂದಿಕೇರಾ ರವರ ಸೂಸೆ ತಮ್ಮ ಗ್ರಾಮದ ಸ್ವಸಹಯ ಸಂಘದ
ಮಹಿಳೆಯಾಗಿದ್ದು, ಹೀಗಿರುವಾಗ ದಿನಾಂಕ 09-08-2021 ರಂದು ಫಿರ್ಯಾದಿಯು ತನ್ನ ಸೂಸೆ ಪೂಜಾ
ಜೊತೆಯಲ್ಲಿ ತಮ್ಮೂರಿನಿಂದ ಔರಾದಗೆ ಬಂದು ಔರಾದ (ಬಿ) ಕ್ರಾಸ ಹತ್ತಿರ ಇರುವ ಪಿನಕೇರ ಮೂಲ
ಫೈನಾನ್ಸ ಬ್ಯಾಂಕದಿಂದ 38,000/- ರೂ. ಸಾಲ ಪೂಜಾ ಇಕೆಯು ತನ್ನ
ಹೆಸರಿನಿಂದ ಪಡೆದು ಸದರಿ ಹಣವನ್ನು ಪರ್ಸನಲ್ಲಿಟ್ಟು ಫಿರ್ಯಾದಿಗೆ ಕೊಟ್ಟಿದ್ದು ಇರುತ್ತದೆ, ನಂತರ
ಇಬ್ಬರು ಔರಾದಿಂದ ತಮ್ಮೂರಿಗೆ ಹೊಗುವ ಬಸ ನಂ. ಕೆಎ-38/ಎಫ್-1178 ನೇದರಲ್ಲಿ
ಇಬ್ಬರು ಕುಳಿತು ಹಣದ ಪರ್ಸ ಫಿರ್ಯಾದಿಯವರ ಹತ್ತಿರ ಇತ್ತು, ನಂತರ ಬಸ್ಸಿನಲ್ಲಿ 1800 ಗಂಟೆಯ
ಸುಮಾರಿಗೆ ಫಿರ್ಯಾದಿಯು ಬಸ್ಸಿನಲ್ಲಿ ತನ್ನ ಪರ್ಸನಲ್ಲಿ ನೋಡಲು ಸದರಿ ಹಣ ಇರಲಿಲ್ಲ, ಆಗ ಸದರಿ
ವಿಷಯವನ್ನು ತನ್ನ ಸೊಸೆಗೆ ತಿಳಿಸಿ ಇಬ್ಬರು ಹಣದ ಬಗ್ಗೆ ಬಸ್ಸಿನಲ್ಲಿರುವ ಜನರಿಗೆ ವಿಚಾರಿಸಿದಾಗ ಹಣ
ಸಿಗಲಿಲ್ಲ, ಔರಾದ ಬಸ ನಿಲ್ದಾಣದಲ್ಲಿ ನಿಂತ ಬಸ್ಸಿನಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯವರ ಹತ್ತಿರ
ಇರುವ ಪರ್ಸನಲ್ಲಿನ ಹಣ ಕಳವು ಮಾಡಿಕೂಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ
ಸಾರಾಂಶದ ಮೇರೆಗೆ ದಿನಾಂಕ 10-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment