ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 19-08-2021
ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 76/2021, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 18-08-2021 ರಂದು ಭೋಸಗಾ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಾಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆಂದು ಕು: ಜೈಶ್ರೀ ಪಿ.ಎಸ್.ಐ (ಕಾಸು,ಸಂಚಾರಿ) ಮಂಠಾಳ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಭೋಸಗಾ ಗ್ರಾಮಕ್ಕೆ ಹೋಗಿ ಅಲ್ಲಿ ಜೋಗೆವಾಡಿ ಕ್ರಾಸ್ ಹತ್ತಿರ ರೋಡಿನ ಪಕ್ಕದಲ್ಲಿರುವ ಮನೆಗಳ ಮರೆಯಾಗಿ ನಿಂತು ನೋಡಲು ಅಲ್ಲಿ ಭೋಸಗಾ ಗ್ರಾಮದಲ್ಲಿರುವ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ರಾಜಕುಮಾರ ತಂದೆ ವಿಶ್ವನಾಥ ಸೋನಾರ ವಯ: 42 ವರ್ಷ, ಜಾತಿ: ಸೋನಾರ, ಸಾ: ಭೋಸಗಾ ಗ್ರಾಮ ಇತನು ಮಟಕಾ ಎಂಬ ಜೂಜಾಟದ ನಂಬರ ಬರೆಯಿಸಿ 01/- ರೂಪಾಯಿಗೆ 80/- ರೂಪಾಯಿ ಪಡೆಯಿರಿ ಅಂತಾ ಚಿರಾಡುತ್ತಾ ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮದಲ್ಲಿ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಅವನಿಗೆ ಹಿಡಿದುಕೊಂಡಾಗ ಹಣ ಕೊಟ್ಟು ಮಟಕಾ ನಂಬರ್ ಬರೆಯಿಸುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ನಂತರ ಆರೋಪೊಗೆ ಇಲ್ಲಿ ನೀನು ಏನು? ಬರೆದುಕೊಳ್ಳುತಿರುವೆ ಅಂತಾ ವಿಚಾರಿಸಿದಾಗ ಅವನು ತಿಳಿಸಿದ್ದೇನೆಂದರೆ ನಾನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಎಂಬ ಜೂಜಾಟದ ನಂಬರ ಬರೆದುಕೊಂಡು ಈ ಹಣವನ್ನು ನಮ್ಮೂರ ಅಂಗದ ತಂದೆ ಹರಿನಾಥ ಕಾಂಬಳೆ ವಯ: 35 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಭೋಸಗಾ ಇವನಿಗೆ ಕೋಡುತ್ತೇನೆ ಅವನು ನನಗೆ ಕಮಿಷನ್ ಹಣ ನೀಡುತ್ತಾನೆ ಅಂತಾ ಹೇಳಿದನು, ನಂತರ ಪಂಚರ ಸಮಕ್ಷಮದಲ್ಲಿ ಆರೋಪಿಯ ಅಂಗ ಜಡ್ತಿ ಮಾಡಿದಾಗ ಅವನ ಹತ್ತಿರ ಗುನ್ನೆಗೆ ಸಂಬಂಧಿಸಿದ 1) ನಗದು ಹಣ 2670/- ರೂ., 2) 2 ಮಟಕಾ ಚೀಟಿಗಳು ಮತ್ತು 3) ಒಂದು ಬಾಲ್ ಪೆನ್ನ ಸಿಕ್ಕಿದ್ದು, ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 90/2021, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 18-08-2021 ರಂದು ರಾಜೇಶ್ವರ ಗ್ರಾಮದ ಸತ್ಯಶ್ರೀ ಪ್ರೌಢ ಶಾಲೆ ಹತ್ತಿರ ಕೆಲವು ಜನರು ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಪರೇಲ ಎಂಬ ನಸಿಬಿನ ಇಸ್ಟಿಟ್ ಜೂಜಾಟ ಆಡುತ್ತಿದ್ದಾರೆಂದು ಕೀರಣ ಪಿ.ಎಸ್.ಐ (ಕಾ.ಸು) ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ರಾಜೇಶ್ವರ ಗ್ರಾಮದ ಸತ್ಯಶ್ರೀ ಪ್ರೌಢ ಶಾಲೆಯ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಶಾಲೆಯ ಹತ್ತಿರ ಆರೋಪಿತರಾದ 1) ತೀಲವಂತ ತಂದೆ ಲಾಲಪ್ಪಾ ಪೋಸ್ತಾರೆ ವಯ: 50 ವರ್ಷ, ಜಾತಿ:ಎಸ್.ಸಿ ಹೊಲಿಯಾ, ಸಾ: ಜೆ.ಪಿ ಕಾಲೋನಿ ರಾಜೇಶ್ವರ, 2) ಶ್ರೀನಿವಾಸ ತಂದೆ ಮಲ್ಲಪ್ಪಾ ಜಾನ್ವೆ ವಯ: 51 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಜೆ.ಪಿ ಕಾಲೋನಿ ರಾಜೇಶ್ವರ, 3) ಪ್ರಭು ತಂದೆ ಶಿವಪ್ಪಾ ಮೂಲಗೆ ವಯ: 60 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಹಿಮ್ಮತ ನಗರ ರಾಜೇಶ್ವರ, 4) ರವಿ ತಂದೆ ಲಕ್ಷ್ಮಣ ದಾಂಡೆ ವಯ: 46 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಜೆ.ಪಿ ಕಾಲೋನಿ ರಾಜೇಶ್ವರ, 5) ವಿಶ್ವನಾಥ ತಂದೆ ಕಾಶೇಪ್ಪಾ ರಂಜೇರಿ ವಯ: 52 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಹಿಮ್ಮತ ನಗರ ರಾಜೇಶ್ವರ ಹಾಗೂ 6) ಜಗನ್ನಾಥ ತಂದೆ ಭೀಮಣ್ಣಾ ಗೌತಮಕರ ವಯ: 37 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಮದರಗಾಂವ ಇವರೆಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಪರೇಲ ಎಂಬ ನಸಿಬಿನ ಇಸ್ಪಿಟ್ ಜೂಜಾಟ ಆಡುತ್ತಿರುವದನ್ನು ಖಾತರಿ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 2620/- ರೂ ಹಾಗು 52 ಇಸ್ಟಿಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 128/2021, ಕಲಂ. 279, 338 ಐಪಿಸಿ :-
ದಿನಾಂಕ 18-08-2021 ರಂದು ಫಿರ್ಯಾದಿ ಸೂರಜ ತಂದೆ ಪುನಂಚಂದ್ರ ವರ್ಮಾ ವಯ: 36 ವರ್ಷ, ಜಾತಿ: ಮಾರವಾಡಿ, ಸಾ: ಮಾಲೆಗಾಂವ, ತಾ: ಮಾಲೆಗಾಂವ, ಜಿಲ್ಲಾ: ನಾಸೀಕ (ಎಂ.ಎಸ್) ರವರ ಗೆಳೆಯನಾದ ವಿವೇಕ ಅಗರವಾಲ್ ರವರ ಕಾರ ನಂ. ಎಮ್.ಎಚ್-02/ಬಿಟಿ-3225 ನೇದರರಲ್ಲಿ ಇನ್ನೊಬ್ಬ ಗೇಳೆಯನಾದ ನಿತೇಶ ಜೈನ್ ಮೂವರು ಕಾರಿನಲ್ಲಿ ಬಟ್ಟೆಗಳನ್ನು ಹಾಕಿಕೊಂಡು ಬಟ್ಟೆ ಮಾರಾಟ ಮಾಡುತ್ತಾ ಉದಗೀರದಿಂದ ಹುಲಸೂರ ರಸ್ತೆ ಮಾರ್ಗವಾಗಿ ಬಸವಕಲ್ಯಾಣಕ್ಕೆ ಬರುವಾಗ ಬಸವಕಲ್ಯಾಣ ಶಿವಾರದಲ್ಲಿ ಸದರಿ ಕಾರ ಚಾಲಕನಾದ ಆರೋಪಿ 1) ವಿವೇಕ ತಂದೆ
ಗಿರಿದಾರಿಲಾಲ ಅಗರವಾಲ ವಯ: 44 ವರ್ಷ, ಜಾತಿ: ಮಾರವಾಡಿ, ಸಾ: ಅಂದೇರಿ ಇಸ್ಟ್ ಮುಂಬೈ ಇತನು ತನ್ನ ಕಾರನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸುತ್ತಾ ಹೊಗುತ್ತಿರುವಾಗ ಎದುರಿನಿಂದ ಅಂದರೆ ಬಸವಕಲ್ಯಾಣದಿಂದ ಮೋಟಾರ್ ಸೈಕಲ್ ನಂ. ಎಪಿ-29/ಬಿ.ವನ್-5858 ನೇದರ
ಚಾಲಕನಾದ ಆರೋಪಿ 2) ಪ್ರಶಾಂತ
ತಂದೆ ರಾಜಪ್ಪಾ ಕೋರೆ ವಯ: 20 ವರ್ಷ, ಜಾತಿ: ಪಂಚಾಳ, ಸಾ: ಗಡಿಗೌಡಗಾಂವ ಇತನು ತನ್ನ ಮೋಟಾರ ಸೈಕಲ್ ಅತಿವೇಗ ಹಾಗು ನಿಸ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಬಸವಕಲ್ಯಾಣ-ಹುಲಸೂರ ರಸ್ತೆಯ ಮೇಲೆ ಝಂಗಿರ ಅಲಿ ಪೇಟ್ರೋಲ್ ಪಂಪ ಹತ್ತಿರ ಕಾರ ಚಾಲಕ ಮತ್ತು ಮೊಟಾರ ಸೈಕಲ್ ಚಾಲಕ ಪರಸ್ಪರ ಡಿಕ್ಕಿ ಮಾಡಿರುತ್ತಾರೆ, ಸದರಿ ಡಿಕ್ಕಿಯ ಪರಿಣಾಮ ಪ್ರಶಾಂತ ಇತನಿಗೆ ನೋಡಲು ಆತನ ಬಾಯಿಗೆ ರಕ್ತಗಾಯ, ಬಲಗಾಲು ಮೊಳಕಾಲ
ಕೆಳಗೆ ಮುರಿದಂತೆ ಭಾರಿ ಗಾಯ, ಎಡಗಾಲು ಕೆಳಗೆ
ಗಾಯ, ಬಲ ಭಾಗದ ತಲೆಗೆ ಗಾಯಗಳಾಗಿ ಮಾತಾಡುವ ಸ್ಧಿತಿಯಲ್ಲಿ ಇರಲಿಲ್ಲ, ಆಗ ಅಲ್ಲಿಯೇ ಇದ್ದ ಸಾರ್ವಜನಿಕರೋಬ್ಬರು 108 ಅಂಬುಲೇನ್ಸಗೆ ಕರೆ ಮಾಡಿದ್ದು 108 ಅಂಬುಲೇನ್ಸ ನಲ್ಲಿ ಪ್ರಶಾಂತ ಇತನಿಗೆ ಹಾಕಿಕೊಂಡು ನಿತೇಶ ಜೈನ್ ರವರು ಕುಳಿತುಕೊಂಡು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ಹೋಗಿ
ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ
ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment